ಎಪಿಕೆ ಫೈಲ್ ಲಿಂಕ್ ನಿಂದ ಆನ್‌ಲೈನ್ ಸಾಲ ಪಡೆದವರ ಕಥೆ ಗೋವಿಂದ !

ಬೆಂಗಳೂರು, ಜನವರಿ 11: ಆನ್‌ಲೈನ್ ಲೋನ್ ಆಪ್ ಗಳ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ ಪೊಲೀಸರಿಗೂ ಅರಿವಿಲ್ಲದೇ ಭಯಾನಕ ದುರಂತ ನಡೆದು ಹೋಗಿದೆ. ಯಾರ್ಯಾರು "ಎಪಿಕೆ ಫೈಲ್' ಲಿಂಕ್ ಮೂಲಕ ಆನ್‌ಲೈನ್ ಲೋನ್ ಆಪ್‌ ಡೌನ್‌ಲೋಡ್ ಮಾಡಿಕೊಂಡು ಸಾಲ ಪಡೆದವರು ಸೈಬಲ್ ಜಗತ್ತಿನ ಮೂಂದೆ ಪೂರ್ಣ ಬೆತ್ತಲಾಗಲಿದ್ದಾರೆ. ಇದನ್ನು ತಡೆಯಲಿಕ್ಕೆ ನಮ್ಮ ದೇಶದಲ್ಲಿ ಪೊಲೀಸರಿಂದಲೂ ಸಾಧ್ಯವಾಗಲ್ಲ. ಎಪಿಕೆ ಫೈಲ್ ಅಷ್ಟು ಅಪಾಯಕಾರಿಯಾಗಿದ್ದು, ಈ ಮೂಲಕವೇ ನೂರಾರು ಆಪ್‌ಗಳು ಕಾರ್ಯಾಚರಣೆ ನಡೆಸಿವೆ. ಈ ಎಪಿಕೆ ಫೈಲ್ ನಿಂದ ಆಪ್‌ ಡೌನ್‌ ಲೋಡ್ ಮಾಡಿಕೊಂಡವರ ಸ್ಥಿತಿ ಕರಾಳವಾಗಲಿದೆ !

ತೆಲಂಗಾಣದ ಸೈಬರಾಬಾದ್ ಪೊಲೀಸರು ಈವರೆಗೂ 27 ಅನ್‌ಲೈನ್ ಆಪ್‌ ಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ. ಸುಮಾರು 116 ಅನ್‌ಲೈನ್ ಲೋನ್ ಆಪ್‌ ಗಳನ್ನು ಬಂದ್ ಮಾಡುವಂತೆ ಸೈಬರಾಬಾದ್ ಪೊಲೀಸರು ಗೂಗಲ್ ಸಂಸ್ಥೆಗೆ ಮನವಿ ಮಾಡಿದ್ದಾರೆ. ಉಳಿದ ಸುಮಾರು 280 ಕ್ಕೂ ಹೆಚ್ಚು ಎಪಿಕೆ ಫೈಲ್ ನಿಂದ ಡೌನ್‌ಲೋಡ್ ಮಾಡಿಕೊಂಡಿರುವ ಆಪ್‌ಗಳು. ಇವುಗಳಿಂದ ಲೋನ್ ಪಡೆದವರು ಭವಿಷ್ಯದಲ್ಲಿ ಎಲ್ಲವನ್ನೂ ಕಳೆದುಕೊಂಡು ಬೆತ್ತಲಾಗುವ ಅಪಾಯವಿದೆ.

ಎಪಿಕೆ ಆಪ್‌ ಮತ್ತು ಪ್ಲೇ ಸ್ಟೋರ್ ಲೋನ್ ಆಪ್‌

ಎಪಿಕೆ ಆಪ್‌ ಮತ್ತು ಪ್ಲೇ ಸ್ಟೋರ್ ಲೋನ್ ಆಪ್‌

ಯಾವುದೇ ಆಪ್‌ ಗೂಗಲ್ ಪ್ಲೇ ಸ್ಟೋರ್ ಅಥವಾ ಐಪೋನ್ ಐಒಎಸ್ ನಲ್ಲಿ ಬರುವ ಮುನ್ನ ಅವುಗಳಲ್ಲಿ ಗ್ರಾಹಕರ ಹಿತರಕ್ಷಣೆ, ಸೈಬರ್ ಸೆಕ್ಯುರಿಟಿ ಬಗ್ಗೆ ಸೈಬರ್ ಅಡಿಟ್ ಮಾಡಲಾಗುತ್ತದೆ. ಹೀಗಾಗಿ ಕನಿಷ್ಠ ಪಕ್ಷ ಅವುಗಳ ವಿರುದ್ಧ ಮನಸು ಮಾಡಿದರೆ ಪೊಲೀಸರು ಕ್ರಮ ಜರುಗಿಸಬಹುದು. ಇಲ್ಲವೇ ಗೂಗಲ್ ಸಂಸ್ಥೆ ಅವನ್ನು ಹೊರ ಹಾಕಲು ಅವಕಾಶವಿದೆ. ಹೀಗಾಗಿ ಆಪ್‌ ಡೌನ್‌ ಲೋಡ್ ಮಾಡಿಕೊಂಡವರ ಮಾಹಿತಿ ಸೋರಿಕೆ ಬಗ್ಗೆ ತನಿಖೆ ಮಾಡಲು ಅವಕಾಶವಿದೆ. ಇದಕ್ಕೆ ತದ್ವಿರುದ್ಧ ಎಪಿಕೆ ಫೈಲ್ ಆಪ್‌ಗಳು.

ಒಂದು ವೆಬ್ ತಾಣದ ಮೂಲಕ ಎಪಿಕೆ ಪೈಲ್ ಲಿಂಕ್ ತಯಾರಿಸಲಾಗುತ್ತದೆ. ಅದು ಒಬ್ಬರಿಂದ ಇನ್ನೊಬ್ಬರಿಗೆ ರವಾನಿಸಿದಾಗ ಡೌನ್‌ ಲೋಡ್ ಮಾಡುವಾಗ ಅದರಲ್ಲಿ ಮೊಬೈಲ್ ನ ಸಮಗ್ರ ಮಾಹಿತಿ ಪಡೆಯುವ ಅವಕಾಶಕ್ಕೆ ಅನುಮತಿಸಿದರೆ ಮಾತ್ರ ಆ ಆಪ್‌ ಡೌನ್‌ಲೋಡ್ ಆಗುತ್ತದೆ. ಸಾಲ ಪಡೆಯುವ ಬರದಲ್ಲಿ ಯಾರೂ ಸಹ ಅದಕ್ಕೆ ಗಮನ ಕೊಡದೇ ಎಲ್ಲದಕ್ಕೂ ಅನುಮತಿಸಿ ಡೌನ್‌ಲೋನ್ ಮಾಡಿಕೊಂಡಿದ್ದಾರೆ. ಹೀಗೆ ಡೌನ್‌ ಲೋಡ್ ಆದ ಕ್ಷಣದಿಂದ ನಿಮ್ಮ ಮೊಬೈಲ್ ಅವರ ಕೈ ಸೇರಿದಂತಾಗುತ್ತದೆ. ಎಪಿಕೆ ಮೂಲಕ ಆಪ್‌ ಡೌನ್‌ಲೋನ್ ಮಾಡಿದವರ ಪ್ರತಿ ಮಾಹಿತಿಯೂ ಅವರು ಯಾವಾಗ ಬೇಕಾದರೂ ನೋಡಬಹುದು!

ಸೈಬರ್ ವಾರ್

ಸೈಬರ್ ವಾರ್

ಎಪಿಕೆ ಫೈಲ್ ಗಳನ್ನು ಯಾರೂ ಕೂಡ ಸೈಬರ್ ಅಡಿಟ್ ಮಾಡಿರುವುದಿಲ್ಲ. ಉದ್ದೇಶ ಪೂರ್ವಕವಾಗಿಯೇ ಆನ್‌ಲೈನ್ ಲೋನ್ ಆಪ್‌ಗಳು ಗ್ರಾಹಕರ ಮೊಬೈಲ್ ಕರೆ, ಬ್ಯಾಂಕ್ ಖಾತೆ ವಿವರ, ಮೊಬೈಲ್ ಬರುವ ಒಟಿಪಿ ನಂಬರ್, ಪಾಸ್‌ ವರ್ಡ್ , ಮೊಬೈಲ್ ನಲ್ಲಿ ನೀವು ಏನು ಒತ್ತಿತ್ತೀರೋ ಅದೆಲ್ಲವೂ ಆಪ್‌ ನ ಮಾಲೀಕರ ಕೈಯಲ್ಲಿರುತ್ತದೆ. ಮನಸು ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯ ಪಾಸ್‌ ವರ್ಡ್ ಬದಲಿಸಬಹುದು. ನೀವು ಬದಲಿಸಿದರೂ ಅವರಿಗೆ ಆ ಮಾಹಿತಿ ರವಾನೆಯಾಗಿರುತ್ತದೆ. ಇನ್ನು ಆಧಾರ್ ಪಾನ್ ಕಾರ್ಡ್ ಏನೇ ಮಾಹಿತಿ ನಿಮ್ಮ ಮೊಬೈಲ್ ನಲ್ಲಿದ್ದರೆ, ಕ್ಷಣ ಮಾತ್ರದಲ್ಲಿ ಅವರು ತೆಗೆದುಕೊಳ್ಳಬಹುದು.

ಇದೆಲ್ಲವೂ ಗೊತ್ತಿದ್ದೇ ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ಆಪ್‌ ಗಳು ಎಪಿಕೆ ಫೈಲ್ ಮೂಲಕವೇ ಲಿಂಕ್ ರವಾನಿಸಿ ಸಾಲ ನೀಡಿವೆ. ಇದು ಗ್ರಾಹಕರ ಪಾಲಿಗೆ ಕಂಟಕಪ್ರಾಯವಾಗಲಿದೆ. ಎಲ್ಲೋ ಇದ್ದು ನಿಮ್ಮ ಬ್ಯಾಂಕ್ ಖಾತೆ ಅವರು ನಿರ್ವಹಿಸಬಹುದು. ನೀವು ಎಲ್ಲಿದ್ದೀರ ಅಲ್ಲಿಂದಲೇ ನಿಮ್ಮ ಮೊಬೈಲ್ ನ ಕ್ಯಾಮರಾ ಆನ್‌ ಮಾಡಬಹುದು. ನಿಮ್ಮ ಮೊಬೈಲ್ ನಲ್ಲಿರುವ ರಹಸ್ಯ ದಾಖಲೆಗಳನ್ನು ಅವರು ಪಡೆದು ಸಾಲ ಕಟ್ಟಿ ಇಲ್ಲದಿದ್ದರೆ ಈ ದಾಖಲೆ ಬಹಿರಂಗಗೊಳಿಸಬಹುದು ಎಂದು ಬ್ಲಾಕ್ ಮೇಲ್ ಮಾಡಬಹುದು. ಆನ್‌ಲೈನ್ ಲೋನ್ ಆಪ್‌ಗಳಿಂದ ಸಾಲ ಪಡೆದವರು ಇಂತಹ ಅಪಾಯದಲ್ಲಿಸಿಲುಕಿರುವ ಆಘಾತಕಾರಿ ಸಂಗತಿ ಹೊರ ಬಿದ್ದಿದೆ.

ಸಾಲ ಪಡೆದವರು ಏನು ಮಾಡಬೇಕು ?

ಸಾಲ ಪಡೆದವರು ಏನು ಮಾಡಬೇಕು ?

ಈ ಕುರಿತು ಸೈಬರ್ ತಜ್ಞ ನಾ. ವಿಜಯ್ ಶಂಕರ್ 'ಒನ್ ಇಂಡಿಯಾ ಕನ್ನಡ 'ಜತೆ ಮಾತನಾಡಿ ಹಲವು ಸಲಹೆ ನೀಡಿದ್ದಾರೆ. ಗೂಗಲ್ ಪ್ಲೇ ಸ್ಟೋರ್ ಅಥವಾ ಐಓಎಸ್ ನಲ್ಲಿ ಆಪ್‌ ಗಳಿದ್ದರೆ ಕನಿಷ್ಠ ಪಕ್ಷ ಅವುಗಳ ಭದ್ರತೆ, ಮಾಹಿತಿ ಕದ್ದಿರುವ ಬಗ್ಗೆ ಸೈಬರ್ ತಜ್ಞರಿಂದ ತನಿಖೆ ಮಾಡಲು ಅವಕಾಶವಿದೆ.ಆದರೆ ಎಪಿಕೆ ಫೈಲ್ ಲಿಂಕ್ ನಿಂದ ಆಪ್‌ ಡೌನ್‌ಲೋನ್ ಮಾಡಿಕೊಂಡಿದ್ದರೆ, ಇಡೀ ಮೊಬೈಲ್ ಅವರ ಕೈಯಲ್ಲಿದ್ದಂತೆ. ನೀವು ಮೊಬೈಲ್ ನಂಬರ್ ಬದಲಿಸಿದರು ಅವರಿಗೆ ಗೊತ್ತಾಗುತ್ತದೆ. ಇದು ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಎಪಿಕೆ ಫೈಲ್ ಮೂಲಕ ಆಪ್‌ ಡೌನ್‌ಲೋಡ್ ಮಾಡಿಕೊಂಡು ಸಾಲ ಪಡೆದವರು ಈ ಕೂಡಲೇ ಬ್ಯಾಂಕ್ ಖಾತೆ ಬದಲಿಸಬೇಕು. ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬದಲಿಸಬೇಕು. ಕನಿಷ್ಠ ಪಕ್ಷ ಒಟಿಪಿ ನಂಬರ್ ಪಡೆಯಲಾಗದಂತಹ ಭದ್ರತಾ ಕ್ರಮಗಳನ್ನು ಗ್ರಾಹಕರೇ ಮಾಡಬೇಕು. ಇಲ್ಲದಿದ್ದರೆ ಗ್ರಾಹಕರ ಬ್ಯಾಂಕ್ ಖಾತೆಯನ್ನು ಎಲ್ಲೋ ಕೂತು ನಿರ್ವಹಣೆ ಮಾಡಬಹುದು. ದೇಶದಲ್ಲಿ ಪಬ್ ಜೀ ಗೇಬ್ ಬ್ಯಾನ್ ಮಾಡಿದ ಕೂಡಲೇ ಎಪಿಕೆ ಫೈಲ್ ಮೂಲಕ ಲಿಂಕ್ ಕಳಿಸಿದರು. ಈಗಲೂ ಲಕ್ಷಾಂತಗರ ಮಂದಿ ಪಬ್ ಜಿ ಆಡುತ್ತಿದ್ದಾರೆ. ಇದೇ ರೀತಿ ಆನ್‌ಲೈನ್ ಲೋನ್ ಆಪ್‌ ಗಳನ್ನು ಎಪಿಕೆ ಫೈಲ್ ನಿಂದ ಡೌನ್‌ಲೋಡ್ ಮಾಡಿಕೊಂಡಿದ್ದರೆ ಮೊದಲು ನಂಬರ್ ಹಾಗೂ ಮೊಬೈಲ್ ಬದಲಿಸಿ ಬ್ಯಾಂಕ್‌ ನಲ್ಲಿಪಾಸ್ ವರ್ಡ್ ಎಲ್ಲವನ್ನೂ ಬದಲಿಸುವುದು ಸೂಕ್ತ ಎಂದು ಸಲಹೆ ಮಾಡಿದ್ದಾರೆ.

ದೇಶದಲ್ಲಿ ಸದ್ಯದ ಮಟ್ಟಿಗೆ ಐಟಿ ಕಾಯ್ದೆ ಅಸ್ತಿತ್ವದಲ್ಲಿದೆ. ಇನ್ನೂ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆಕ್ಟ್ ಜಾರಿಗೆ ತಂದಿಲ್ಲ. ಆ ಕಾಯ್ದೆ ಬಂದ ನಂತರ ಇಂತಹ ಎಪಿಕೆ ಫೈಲ್ ರವಾನಿಸಿ ಅಕ್ರಮ ಎಸಗುವರ ವಿರುದ್ಧ ಕ್ರಮ ಜರುಗಿಸಲು ಅವಕಾಶವಿದೆ. ಇನ್ನೂ ಆನ್‌ಲೈನ್ ನಲ್ಲಿ ಎಪಿಕೆ ಫೈಲ್ ಮೂಲಕ ಲಿಂಕ್ ಕಳಿಸಿ ಆಪ್‌ ಡೌನ್‌ಲೋಡ್ ಮಾಡಿಕೊಂಡಿದ್ದರೆ ಅಂತಹ ಲಿಂಕ್ ಗಳನ್ನು ಸೈಬರ್ ತಜ್ಞರು ಪರಿಶೀಲಿಸಬೇಕು. ಯಾವುದೋ ದೇಶದಲ್ಲಿ ಇದ್ದು ಲಿಂಕ್ ಕಳಿಸಿರುತ್ತಾರೆ. ಅವನ್ನು ಪತ್ತೆ ಮಾಡಿ ಕ್ರಮ ಜರುಗಿಸಬೇಕು. ಇನ್ನು ಲೋನ್ ಆಪ್‌ ಗಳು ಜನರ ಮಾಹಿತಿ ಕದಿಯುವ ಬಗ್ಗೆ ಸೈಬರ್ ಅಡಿಟ್ ಮಾಡಿಸಬೇಕು ಎಂದು ನಾ. ವಿಜಯ ಶಂಕರ್ ಸಲಹೆ ಮಾಡಿದ್ದಾರೆ.

ಲೋನ್ ರೀಕವರಿಯಿಂದ ನಿರಾಳ

ಲೋನ್ ರೀಕವರಿಯಿಂದ ನಿರಾಳ

ಇನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು 27 ಆನ್‌ಲೈನ್ ಆಪ್‌ಗಳ ವಿರುದ್ಧ ಕೇಸು ದಾಖಲಿಸಿದ್ದಾರೆ. ಸೈಬರಾಬಾದ್ ಪೊಲೀಸರು ಸಹ 27 ಲೋನ್ ಆಪ್‌ಗಳ ವಿರುದ್ಧ ಕ್ರಿಮಿನಲ್ ದಾವೆ ಹೂಡಿದ್ದಾರೆ. ಇವುಗಳ ವಿರುದ್ಧದ ಪ್ರಕರಣ ಇತ್ಯರ್ಥ ಆಗುವ ವರೆಗೂ ಸಾಲ ಪಡೆದವರು ನೆಮ್ಮದಿಯಾಗಿರಬಹುದು. ಸಾಲ ಕೊಡದಿದ್ದರೆ ಅಂತವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸುವ ದಾರಿಗಳು ಕೂಡ ಆಪ್‌ಗಳಿಗೆ ಬಂದ್‌ ಆಗಿವೆ. ಹೀಗಾಗಿ ಗೂಗಲ್ ಪ್ಲೇ ಸ್ಟೋರ್, ಐಓಎಸ್ ನಿಂದ ಆಪ್‌ ಡೌನ್‌ಲೋನ್ ಮಾಡಿಕೊಂಡು ಸಾಲ ಪಡೆದವರು ನಿಟ್ಟುಸಿರು ಬಿಡುವಂತಾಗಿದೆ. ಕ್ರಿಮಿನಲ್ ದಾವೆ ಎದುರಿಸುತ್ತಿರುವ ಲೋನ್ ಆಪ್‌ಗಳು ಸದ್ಯದ ಮಟ್ಟಿಗೆ ಗ್ರಾಹಕರಿಂದ ಸಾಲ ವಸೂಲಿ ಮಾಡುವ ಪ್ರಕ್ರಿಯೆ ಸ್ಥಗಿತಗೊಳಿಸಿವೆ. ಆದರೆ, ಎಪಿಕೆ ಫೈಲ್ ಮೂಲಕ ಡೌನ್‌ಲೋಡ್ ಆಗಿರುವ ಆಪ್ ಗಳಿಂದ ಸಾಲ ಪಡೆದವರ ಬಗ್ಗೆ ಆಲೋಚನೆ ಮಾಡಲಾಗದಂತಹ ಸ್ಥಿತಿ ಎದುರಾಗಿದೆ.

ಈಗಲೂ ದೂರು ಕೊಡಿ

ಈಗಲೂ ದೂರು ಕೊಡಿ

ಆನ್‌ಲೈನ್ ನಲ್ಲಿ ತುರ್ತು ಸಾಲ ಪಡೆದು ಕಿರುಕುಳಕ್ಕೆ ಒಳಗಾಗಿದ್ದರೆ ಕೂಡಲೇ ಪೊಲೀಸರಿಗೆ ದೂರು ನೀಡಿ. ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುದು. ಇದರಲ್ಲಿ ಭಯ ಪಡುವ ಅಗತ್ಯವಿಲ್ಲ. ಲೋನ್ ಕೊಟ್ಟು ಕಿರುಕುಳ ನೀಡಿದ ಆರೋಪದ ಮೇಲೆ ಸುಮಾರು 27 ಕ್ರಿಮಿನಲ್ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಎಪಿಕೆ ಫೈಲ್ ಮೂಲಕ ಸಾಲ ನೀಡಿದ ಆಪ್‌ ಗಳ ಮೂಲ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಸೈಬರಾಬಾದ್ ಪೊಲೀಸ್ ಕಮೀಷನರ್ ವಿ.ಸಿ. ಸಜ್ಜನ್ ರ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+