ಉತ್ತರಾಖಂಡ್ ಫಲಿತಾಂಶ: ಬಿಜೆಪಿ, ಕಾಂಗ್ರೆಸ್ ಶೇಕಡಾವಾರು ಮತ ಗಳಿಕೆ

ಹರಿದ್ವಾರ, ಮಾರ್ಚ್ 10: ಉತ್ತರಾಖಂಡದ 70 ವಿಧಾನಸಭಾ ಕ್ಷೇತ್ರಗಳ ಚುನಾವಣೆಯು ಫೆಬ್ರವರಿ 14 ರಂದು ಮತದಾನ ನಡೆಸಲಾಯಿತು. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈಗ ಮತ್ತೊಮ್ಮೆ ಅಧಿಕಾರ ಗದ್ದುಗೆ ಹಿಡಿಯಲು ಮುಂದಾಗಿದೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3, 7 ರಂದು ಚುನಾವಣೆ ನಡೆದಿದೆ. ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆದಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಸಲಾಗಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರ ಬರಲಿದೆ.

ಉತ್ತರಾಖಂಡ ಚುನಾವಣೆಯಲ್ಲಿ ಅಂತಿಮ ಮತದಾನದ ಶೇಕಡಾ 62.51 ರಷ್ಟಿದೆ.ಹರಿದ್ವಾರದಲ್ಲಿ ಅತಿ ಹೆಚ್ಚು ಅಂದರೆ ಶೇ.68.37 ಮತ್ತು ಕಡಿಮೆ ಅಲ್ಮೋರಾ ಜಿಲ್ಲೆಯಲ್ಲಿ ಶೇ.50.65 ಅತೀ ಕಡಿಮೆ ಮತದಾನ ದಾಖಲಾಗಿದೆ. ರಾಜ್ಯದಲ್ಲಿ 2017ರ ವಿಧಾನಸಭಾ ಚುನಾವಣೆಯಲ್ಲಿ ಶೇ.65.56ರಷ್ಟು ಮತದಾನವಾಗಿತ್ತು.

Vote Percentage of Parties in Uttarakhand 2022: BJP, Congress, BSP and Others

ಸಮಯ 17:18 ರಂತೆ

ಸದ್ಯದ ಟ್ರೆಂಡ್‌ನಂತೆ 70 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಮಾತ್ರ ಫಲಿತಾಂಶ ಹೊರ ಬಂದಿದೆ ಬಿಜೆಪಿ 32 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 15 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಕಾಂಗ್ರೆಸ್ 15 ರಲ್ಲಿ ಮುನ್ನಡೆ ಹಾಗೂ 4 ಸ್ಥಾನ ಪಡೆದುಕೊಂಡಿದೆ. ಬಹುಜನ ಸಮಾಜವಾದಿ ಪಕ್ಷ 2 ಸ್ಥಾನದಲ್ಲಿ ಹಾಗೂ ಇತರೆ 2 ರಲ್ಲಿ ಮುನ್ನಡೆ ಪಡೆದಿವೆ.

ಚುನಾವಣಾ ಆಯೋಗ ವೆಬ್ ತಾಣದ ಅಧಿಕೃತ ಮಾಹಿತಿಯಂತೆ ಸಮಯ 17:11ಕ್ಕೆ ಶೇಕಡಾವಾರು ಮತ ಗಳಿಕೆ ವಿವರ ಹೀಗಿದೆ:
ಬಿಜೆಪಿ ಶೇ 44.29
ಎಎಪಿ: ಶೇ 3.32
ಕಾಂಗ್ರೆಸ್ ಶೇ 37.97
ಬಿಎಸ್ಪಿ: ಶೇ 4.86
ನೋಟಾ: ಶೇ 0.87
ಇತರೆ ಶೇ 8.25

2017ರಲ್ಲಿ ಶೇಕಡಾವಾರು ಮತ ಗಳಿಕೆ
ಬಿಜೆಪಿ ಶೇ 46.5
ಕಾಂಗ್ರೆಸ್ ಶೇ 33.5
ಬಿಎಸ್ಪಿ: ಶೇ 7
ಇತರೆ ಶೇ 3
ಸ್ವತಂತ್ರ/ಪಕ್ಷೇತರ: ಶೇ 10

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+