ಆಗಸ್ಟ್ 20: ಕರ್ನಾಟಕದ ವಿವಿಧೆಡೆ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?
ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಡೀಸೆಲ್ ದರವನ್ನು ಸತತ ಮೂರನೇ ದಿನವೂ ಇಳಿಕೆ ಮಾಡಿವೆ. ಬೆಂಗಳೂರಿನಲ್ಲಿ ಡೀಸೆಲ್ ದರ 21 ಪೈಸೆಯಷ್ಟು ಇಳಿಕೆ ಕಂಡಿದೆ. ಶುಕ್ರವಾರ ಬೆಂಗಳೂರಿನಲ್ಲಿ ಡೀಸೆಲ್ ದರ 94.65 ರೂ. ಇದೆ.
ಪೆಟ್ರೋಲ್ ದರಗಳು ಜುಲೈ 17 ರಂದು ಕೊನೆಯ ಬಾರಿಗೆ ಪ್ರತಿ ಲೀಟರ್‌ಗೆ 30 ಪೈಸೆ ಹೆಚ್ಚಾದ ಬಳಿಕ ಯಾವುದೇ ಬೆಲೆ ಪರಿಷ್ಕರಣೆಗೊಂಡಿಲ್ಲ. ಆದರೆ ಡೀಸೆಲ್ ದರವು ಆಗಸ್ಟ್ 18 ರಿಂದ ಕುಸಿತಗೊಳ್ಳುತ್ತಿದೆ.
ಮೊನ್ನೆ ಆಗಸ್ಟ್ 18ರಂದು ಕೂಡ ಡೀಸೆಲ್ ದರ 21 ಪೈಸೆ ಇಳಿಕೆ ಕಂಡಿತ್ತು. ನಿನ್ನೆ 19 ಪೈಸೆ ತಗ್ಗಿತ್ತು. ಆಗಸ್ಟ್ 12ರಂದು 6 ಪೈಸೆ ಬೆಲೆ ಹೆಚ್ಚಳ ಕಂಡಿದ್ದ ಡೀಸೆಲ್ ಅದಾದ ಬಳಿಕ ಏರಿಕೆ ಕಂಡಿಲ್ಲ. ಇದೇ ವೇಳೆ, ಪೆಟ್ರೋಲ್ ದರ ಯಥಾಸ್ಥಿತಿ ಮುಂದುವರಿದಿದೆ. ಆಗಸ್ಟ್ 10 ಮತ್ತು 11ರಂದು ಏರುಪೇರು ಆಗಿದ್ದು ಬಿಟ್ಟರೆ ಉಳಿದಂತೆ ಕಳೆದ ಮೂವತ್ತಕ್ಕೂ ಹೆಚ್ಚು ದಿನಗಳಿಂದ ಪೆಟ್ರೋಲ್ ದರ ವ್ಯತ್ಯಾಸ ಕಂಡಿಲ್ಲ
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಡಬ್ಲ್ಯೂಟಿಐ ಫ್ಯೂಚರ್ಸ್ 2.7% ರಷ್ಟು ಕುಸಿದಿದೆ ಮತ್ತು ಪ್ರತಿ ಬ್ಯಾರೆಲ್‌ಗೆ $ 63.69 ಕ್ಕೆ ಮುಕ್ತಾಯವಾಗಿದೆ. ಈ ಮೂಲಕ ಕಚ್ಚಾ ತೈಲವು ಸತತ ಆರನೇ ದಿನ ನಷ್ಟವನ್ನು ಕಂಡಿದ್ದು, ಇದು ಫೆಬ್ರವರಿ 2020 ರ ನಂತರದ ದೀರ್ಘಾವಧಿಯಾಗಿದೆ. ಹೆಚ್ಚುತ್ತಿರುವ ಡೆಲ್ಟಾ ವೇರಿಯಂಟ್ ಪ್ರಕರಣಗಳ ಕಾಳಜಿಯು ಕಚ್ಚಾ ತೈಲ ದರ ಇಳಿಕೆಗೆ ಪ್ರಮುಖ ಕಾರಣವಾಗಿದ್ದು, ಡಬ್ಲ್ಯುಟಿಐ ಕಚ್ಚಾ ಭವಿಷ್ಯವು ಪ್ರತಿ ಬ್ಯಾರೆಲ್‌ಗೆ $ 63.52 ರಂತೆ 0.03% ರಷ್ಟು ಹೆಚ್ಚಾಗಿದೆ.
ಶುಕ್ರವಾರ (ಆಗಸ್ಟ್ 20) ದೆಹಲಿಯಲ್ಲಿ ಡೀಸೆಲ್ ದರವು ಪ್ರತಿ ಲೀಟರ್‌ಗೆ 20ಪೈಸೆ ಇಳಿಕೆಗೊಂಡು 89.27 ರೂಪಾಯಿಗೆ ತಲುಪಿದೆ. ಬೆಂಗಳೂರಿನಲ್ಲೂ ಕೂಡ ಸತತ ಮೂರು ದಿನ ಇಳಿಕೆಯಾಗಿದೆ.
ಕೇಂದ್ರ ಸರ್ಕಾರ ಪ್ರತೀ ಲೀಟರ್ ಪೆಟ್ರೋಲ್ಗೆ ವಿಧಿಸುವ ಅಬಕಾರಿ ಸುಂಕದ ಮೊತ್ತ 32.90 ರೂ ಇರುತ್ತದೆ. ಹಾಗೆಯೇ, ಡೀಸೆಲ್ ಬೆಲೆಯಲ್ಲಿ ಶೇ. 54ರಷ್ಟು ತೆರಿಗೆ ಇದೆ. ಇದರಲ್ಲಿ ಅಬಕಾರಿ ಸುಂಕದ ಮೊತ್ತ 31.80 ರೂ ಇದೆ.
ಬೆಂಗಳೂರಿನಲ್ಲಿ ಸದ್ಯ ಪೆಟ್ರೋಲ್ ದರ ಲೀಟರ್‌ಗೆ 105.25 ಇದೆ. ಚೆನ್ನೈನಲ್ಲಿ ತೆರಿಗೆ ಇಳಿಕೆಯಂದಾಗಿ ಅಲ್ಲಿ ಪೆಟ್ರೋಲ್ ದರ ನೂರು ರೂಗಿಂತ ಕೆಳಗೆ ಇದೆ.
ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ವ್ಯಾಟ್ ತೆರಿಗೆ ಇರುವುದರಿಂದ ವಿವಿಧ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.
ರಾಜಸ್ಥಾನ, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಅತಿ ಹೆಚ್ಚು ವ್ಯಾಟ್ ತೆರಿಗೆ ಇದೆ. ಇತ್ತೀಚೆಗಷ್ಟೇ ತಮಿಳುನಾಡು ಸರ್ಕಾರ ಆಗಸ್ಟ್ 14ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನ 3 ರೂಪಾಯಿಯಷ್ಟು ಕಡಿತಗೊಳಿಸಿತ್ತು. ಪರಿಣಾಮವಾಗಿ ಚೆನ್ನೈ ಹಾಗೂ ಇತರ ತಮಿಳುನಾಡು ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ತಗ್ಗಿದೆ.
ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಮಾರುಕಟ್ಟೆ ನಿಯಂತ್ರಿತವಾಗಿವೆ ಎಂದು ಸರ್ಕಾರ ಹೇಳುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯಲ್ಲಾಗುವ ಬದಲಾವಣೆಯು ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತೆರಿಗೆ ಹಾಕುತ್ತವೆ. ಪೆಟ್ರೋಲ್ ಬೆಲೆಯಲ್ಲಿ ಶೇ. 60 ರಷ್ಟು ಭಾಗ ತೆರಿಗೆಯೇ ಆಗಿರುತ್ತದೆ ಎಂಬುದು ಗಮನಾರ್ಹ.
ಬೆಂಗಳೂರಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 105.25ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 94.65 ರೂಪಾಯಿಗೆ ಮುಟ್ಟಿದೆ. ಬಳ್ಳಾರಿ ಜಿಲ್ಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ಕ್ರಮವಾಗಿ 106.84 ರು ಇದ್ದು, ರಾಜ್ಯದಲ್ಲೇ ಅತ್ಯಧಿಕವಾಗಿದೆ. ಚಿತ್ರದುರ್ಗ, ದಾವಣಗೆರೆ, ಗದಗ, ಕೊಡಗು, ಕೊಪ್ಪಳ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಲೆ 106 ಪ್ಲಸ್ ಇದೆ ಎಂದು ಗುಡ್‌ರಿಟರ್ನ್ಸ್.ಇನ್ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಸತತ 3ನೇ ದಿನ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಸರಾಸರಿ 20-21ಪೈಸೆಯಷ್ಟು ಇಳಿಕೆಯಾಗಿದ್ದು, ಆಗಸ್ಟ್ 20ರಂದು ಡೀಸೆಲ್ ದರವು ಪ್ರತಿ ಲೀಟರ್‌ಗೆ 94.65 ರೂಪಾಯಿಗೆ ಮುಟ್ಟಿದೆ.
ಉಳಿದಂತೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಮಂಡ್ಯ, ಮೈಸೂರು ಹಾಗೂ ಉಡುಪಿಯಲ್ಲಿ ಪ್ರತಿ ಲೀಟರ್ 94 ರಿಂದ 95 ರು ಆಸುಪಾಸಿನಲ್ಲಿದೆ. ಮಿಕ್ಕ ಜಿಲ್ಲೆಯಲ್ಲಿ 95 ರಿಂದ 96 ರು ನಷ್ಟಿದೆ.














Click it and Unblock the Notifications