ಮಂದಸೌರ್ ಕ್ಷೇತ್ರ ಪರಿಚಯ : ರೈತರ ಹಿತ ಕಾಪಾಡಿದವನೇ ಇಲ್ಲಿ ಒಡೆಯ!

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಕ್ಷೇತ್ರ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತಲೆನೋವಾಗಿ ಪರಿಣಮಿಸಿದ ಕ್ಷೇತ್ರ ಮಂದಸೌರ್ ಬಗ್ಗೆ ಸಚಿತ್ರವರದಿ ಇಲ್ಲಿದೆ.

1957ರಿಂದ ಇಲ್ಲಿ ತನಕದ 13 ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 6 ಬಾರಿ, ಬಿಜೆಪಿ 5 ಹಾಗೂ ಇತರೆ ಪಕ್ಷಗಳು 2 ಬಾರಿ ಗೆಲುವು ಸಾಧಿಸಿವೆ. ಶೇ78ರಷ್ಟು ಹಿಂದುಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಶೇ 17ರಷ್ಟು ಮುಸ್ಲಿಮರಿದ್ದಾರೆ. ಸಾಕ್ಷರತಾ ಪ್ರಮಾಣ ಶೇ 78ರಷ್ಟಿದೆ.

35 ರಿಂದ 60 ವಯೋಮಿತಿ ಅವರು ಶೇ 47.68ರಷ್ಟಿದ್ದಾರೆ. 2,44,757 ಮತದಾರರು ನೀಡುವ ಫಲಿತಾಂಶ ಡಿಸೆಂಬರ್ 11ರಂದು ತಿಳಿಯಲಿದೆ. ಮಧ್ಯಪ್ರದೇಶ ಬಿಜೆಪಿ ನಾಯಕ ಯಶಪಾಲ್ ಎಸ್ ಸಿಸೋಡಿಯಾ ಅವರು ಹಾಲಿ ಶಾಸಕರಾಗಿದ್ದಾರೆ. ಇವರ ವಿರುದ್ಧ ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ನರೇದ್ರ ನಹತಾ ಅವರು ಸ್ಪರ್ಧಿಸಿದ್ದಾರೆ.

2003ರಲ್ಲಿ ಯಶಪಾಲ್ ಸಿಸೋಡಿಯಾ ಅವರು ಶೇ 49.4ರಷ್ಟು 84975 ಮತಗಳನ್ನು ಗಳಿಸಿ ಕಾಂಗ್ರೆಸ್ಸಿನ ಮಹೇಂದ್ರ ಎಸ್ ಗುರ್ಜಾರ್ 60680ಮತಗಳನ್ನು ಗಳಿಸಿದ್ದರು.

ಮಂದಸೌರ್ ರೈತರ ಸಂಘರ್ಷದ ಕೇಂದ್ರ ಸ್ಥಾನವಾಗಿದೆ. 2017ರ ಜೂನ್ ತಿಂಗಳಿನಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. 6 ಮಂದಿ ಪ್ರತಿಭಟನಾಕಾರರನ್ನು ಬಲಿ ಪಡೆದ ಸರ್ಕಾರದ ವಿರುದ್ಧ ಮತ ಹಾಕುವಂತೆ ಕಾಂಗ್ರೆಸ್ ಪ್ರಚಾರ ನಡೆಸಿದೆ. ಈ ಪ್ರತಿಭಟನೆಯ ಒಂದು ವರ್ಷದ ಕಹಿನೆನಪಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಭಾಗಿಯಾಗಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದರು.

Madhya Pradesh election 2018 : Know Your Constituency Mandsaur
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+