ಕೇಸರಿಯ ಮಾತು! ವಿಶ್ವವಿಖ್ಯಾತ ಕುಂಭಮೇಳಕ್ಕೆ ಕ್ಷಣಗಣನೆ!
ವಿಶ್ವ ಪ್ರಸಿದ್ಧ ಕುಂಬಮೇಳಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಪ್ರತಿ ಆರು ವರ್ಷಕ್ಕೊಮ್ಮೆ ನಡೆಯುವ ಅರ್ಧ ಕುಂಭಮೇಳಕ್ಕೆ ಉತ್ತರ ಪ್ರದೇಶದ ಪ್ರಯಾಗರಾಜ್ ಈಗಾಗಲೇ ಸಿದ್ಧಗೊಂಡಿದೆ. ಜನವರಿ 15 ರಿಂದ ಮಾರ್ಚ್ 04 ರವರೆಗೆ ನಡೆಯಲಿರುವ ಈ ಕುಂಬಮೇಳಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಹರಿದುಬರುತ್ತಿದ್ದಾರೆ.
"ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು"
ಎನ್ನುತ್ತ ಸಪ್ತ ತರಂಗಿಣಿಯರನ್ನು ನೆನಪಿಸಿಕೊಂಡು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಇದರಿಂದ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡಿದ ಎಲ್ಲಾ ಪಾಪಗಳೂ ನಾಶವಾಗುತ್ತವೆ ಎಂಬ ನಂಬಿಕೆ ಜನರದ್ದು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಮೇಲೆ ನಡೆಯುತ್ತಿರುವ ಮೊದಲ ಕುಂಭಮೇಳ ಇದಾಗಿರುವುದರಿಂದ ಯೋಗಿಯವರೇ ವಿಶೇಷ ಆಸ್ಥೆ ತೋರಿಸುತ್ತಿದ್ದಾರೆ. ಈ ಬಾರಿಯ ಕುಂಭಮೇಳ ಇದುವರೆಗಿನ ಅತ್ಯಂತ ಅದ್ಧೂರಿ, ಯಶಸ್ವೀ ಕುಂಭಮೇಳವಾಗಬಹುದು ಎಂಬ ನಿರೀಕ್ಷೆ ಹೆಚ್ಚಿದೆ.













Click it and Unblock the Notifications