Infographics: ಅ.9ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ

ಬೆಂಗಳೂರು, ಅಕ್ಟೋಬರ್ 09:ರಾಜ್ಯದಲ್ಲಿ ಮತ್ತೆ ಮಳೆ ಮುಂದುವರೆದಿದೆ. ಅಕ್ಟೋಬರ್ 13ರವರೆಗೂ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಜತೆಗೆ ರಾಜ್ಯದ ಪ್ರಮುಖ ಜಲಾಶಯಗಳೆಲ್ಲವೂ ತುಂಬಿವೆ.ರಾಜ್ಯದಲ್ಲಿ ಮುಂದಿನ ಐದು ದಿನ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆಂಧ್ರಪ್ರದೇಶದ ಕರಾವಳಿ ಭಾಗದಿಂದ ಮೇಲ್ಮೈ ಸುಳಿಗಾಳಿ ಆರಂಭ ಆಗಿ ರಾಜ್ಯದ ಹಲವೆಡೆ ಮಳೆಯಾಗಲಿದೆ. ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ನಾಡು ಜಿಲ್ಲೆಗಳಲ್ಲಿ ಜಾಸ್ತಿ ಆಗಬಹುದು ಎಂದು ನೈಸರ್ಗಿಕ ಮತ್ತು ಪ್ರಾಕೃತಿಕ ವಿಕೋಪ ಇಲಾಖೆ ಹವಾಮಾನ ತಜ್ಞ ಸದಾನಂದ ಮಾಹಿತಿ ನೀಡಿದ್ದಾರೆ.

ಮೋಡ ಕವಿದ ವಾತಾವರಣ ಇದ್ದು, ತುಂತುರು ಮಳೆ ಆಗಲಿದೆ. ಉತ್ತರ ಅಂಡಮಾನ್ ಸಮುದ್ರದಲ್ಲಿ ವಾಯಯಭಾರ ಕುಸಿತ ಕಾಣಿಸಿಕೊಳ್ಳಲಿದೆ. ಅಕ್ಟೋಬರ್ 10 ರಂದು ಉತ್ತರ ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ ಕಾಣಿಸಿಕೊಳ್ಳಲಿದೆ. ಹೀಗಾಗಿ ಮುಂದಿನ ಐದು ದಿನ ಮಳೆ ಆಗಲಿದೆ.

ಅಕ್ಟೋಬರ್ 13 ರವರೆಗೂ ಬೆಂಗಳೂರಲ್ಲಿ ಮಳೆಯಾಗಲಿದೆ. ಬೆಳಗ್ಗೆಯಿಂದ ಬೆಂಗಳೂರಿನಲ್ಲಿ 8.4 ಮಿ.ಮಿ ಮಳೆ ದಾಖಲಾಗಿದೆ. ನಾಳೆ ಹಾಗೂ ನಾಡಿದ್ದು ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ಹೆಚ್ಚಿನ ಮಳೆ ಸಾಧ್ಯತೆ ಇದೆ. ಬೆಂಗಳೂರು ನಗರ ಭಾಗದಲ್ಲಿ ನಾಳೆ ನಾಡಿದ್ದು, ಇದೇ ವಾತಾವರಣ ಮುಂದಿವರೆಯಲಿದೆ. 12 ಹಾಗೂ 13 ರಂದು ಹೆಚ್ಚಿನ ಮಳೆಯಾಗಲಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮತ್ತು ಕೊಪ್ಪಳದಲ್ಲಿ ತಲಾ 9 ಸೆಂ.ಮೀ, ತುಮಕೂರಿನ ಚಿಕ್ಕನಹಳ್ಳಿ ಮತ್ತು ಶಿರಾದಲ್ಲಿ ತಲಾ 8 ಸೆಂ.ಮೀ, ಪಾವಗಡದಲ್ಲಿ 7 ಸೆಂ.ಮೀ. ಮಳೆ ದಾಖಲಾಗಿದ್ದು, ಉಳಿದೆಡೆ ಸಾಧಾರಣ ಮಳೆ ಆಗಿದೆ.

ನಂತರ ಅ.12ರಂದು ಮತ್ತೆ ಚುರುಕಾಗಲಿರುವ ಮುಂಗಾರು ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮೈಸೂರು, ಚಾಮರಾಜ ನಗರ, ರಾಯಚೂರು, ಬೀದರ್‌, ಯಾದಗಿರಿ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಧಾರಕಾರವಾಗಿ ಸುರಿಯುವ ಸಾಧ್ಯತೆಯಿದೆ. ಅಂದು ಕಲಬುರಗಿಗೆ 'ಆರೆಂಜ್‌ ಅಲರ್ಟ್‌' ಹಾಗೂ ಇತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಅ.9ರಂದು ರಾಜ್ಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆ ಆಗಲಿದ್ದು, 30 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. . ಶನಿವಾರ ಕಲಬುರಗಿಯಲ್ಲಿ ಮಾತ್ರ ಅತ್ಯಧಿಕ ಮಳೆ ಬೀಳಲಿದ್ದು, ಈ ಒಂದು ಜಿಲ್ಲೆಗೆ 'ಆರೆಂಜ್‌ ಅಲರ್ಟ್‌' ಘೋಷಿಸಲಾಗಿದೆ.

ಈ ಮಧ್ಯೆ ಅ.10 ಹಾಗೂ 11ರಂದು ಮಳೆ ಆರ್ಭಟ ತುಸು ಕ್ಷೀಣಿಸಲಿದೆ. ಅಂದು ಕರಾವಳಿ 3 ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ , ಕೋಲಾರ ಮತ್ತು ಚಿಕ್ಕಬಳ್ಳಾಪುರಗಳಿಗೆ 'ಯೆಲ್ಲೋ ಅಲರ್ಟ್‌' ನೀಡಲಾಗಿದೆ.

 ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ

ಲಿಂಗನಮಕ್ಕಿಯಲ್ಲಿ ಪೂರ್ಣಮಟ್ಟ 554.44 ಮೀಟರ್ ಇದ್ದು, ಇಂದು 553.52 ಮೀಟರ್ ಇದೆ. ಹಾರಂಗಿಯಲ್ಲಿ ಪೂರ್ಣಮಟ್ಟ 871.38 ಮೀಟರ್ ಇದ್ದು, ಇಂದು 871.15ರಷ್ಟಿದೆ. ಇನ್ನು ಹೇಮಾವತಿಯಲ್ಲಿ ನೀರಿನ ಮಟ್ಟ 890.58 ಮೀಟರ್ ಇದ್ದು ಇಂದು 887.67ಮೀಟರ್‌ನಷ್ಟಿದೆ.

 ಕಬಿನಿ ಜಲಾಶಯದ ಮಟ್ಟ

ಕಬಿನಿ ಜಲಾಶಯದ ಮಟ್ಟ

ಕಬಿನಿಯಲ್ಲಿ ಪೂರ್ಣ ಮಟ್ಟ 696.13 ಮೀಟರ್‌ನಷ್ಟಿದ್ದು, ಇಂದು 694.63ರಷ್ಟಿದೆ, ಕೆಆರ್‌ಎಸ್‌ನಲ್ಲಿ 38.04 ಸಾಮರ್ಥ್ಯವಿದ್ದು ನೀರಿನ ಮಟ್ಟ 35.23 ಮೀಟರ್‌ನಷ್ಟಿದೆ, ಭದ್ರಾದಲ್ಲಿ ನೀರಿನ ಸಾಮರ್ಥ್ಯ 657.73ರಷ್ಟಿದ್ದು, ಇಂದಿನ ಮಟ್ಟ 657.73ರಷ್ಟಿದೆ.

 ತುಂಗಭದ್ರಾ ಜಲಾಶಯ

ತುಂಗಭದ್ರಾ ಜಲಾಶಯ

ತುಂಗಭದ್ರದಲ್ಲಿ 497.71 ಮೀಟರ್ ಸಾಮರ್ಥ್ಯವಿದ್ದು, ಇಂದು 497.71 ಮೀಟರ್‌ನಷ್ಟು ನೀರಿದೆ, ಆಲಮಟ್ಟಿಯಲ್ಲಿ ಸಾಮರ್ಥ್ಯ 519.60ರಷ್ಟಿದ್ದರೂ ಇಂದು 519.57ಮೀಟರ್‌ನಷ್ಟಿದೆ. ಇನ್ನು ನಾರಾಯಣಪುರದಲ್ಲಿ 492.25ಮೀಟರ್‌ನಷ್ಟು ನೀರಿನ ಸಾಮರ್ಥ್ಯವಿದ್ದರೂ 492.20ಮೀಟರ್‌ನಷ್ಟು ನೀರಿದೆ.

 ಸೂಪಾ ಜಲಾಶಯದ ನೀರಿನ ಮಟ್ಟ

ಸೂಪಾ ಜಲಾಶಯದ ನೀರಿನ ಮಟ್ಟ

ಸೂಪಾ ಜಲಾಶಯದಲ್ಲಿ 564.00 ನೀರಿನ ಸಾಮರ್ಥ್ಯ ಹೊಂದಿದೆ, 557.02ರಷ್ಟು ನೀರು ಸಂಗ್ರಹವಾಗಿದೆ. ಘಟಪ್ರಭಾದಲ್ಲಿ 556.58ಮೀಟರ್‌ನಷ್ಟು ನೀರಿನ ಸಾಮರ್ಥ್ಯವಿದ್ದು, 662.91ರಷ್ಟು ನೀರಿದೆ, ಮಲಪ್ರಭಾದಲ್ಲಿ 633.80 ಮೀಟರ್‌ ನೀರಿನ ಸಾಮರ್ಥ್ಯವಿದ್ದು, 633.75ನೀರು ಸಂಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+