Infographics: ಕರ್ನಾಟಕದಲ್ಲಿ ಕೊವಿಡ್ 19 ಸಾವು-ನೋವು, ಯಾವ ಜಿಲ್ಲೆ ಡೇಂಜರ್
ಬೆಂಗಳೂರು, ಜುಲೈ 30: ಕರ್ನಾಟಕದಲ್ಲಿ ದಿನವೊಂದಕ್ಕೆ 10 ಲಕ್ಷಕ್ಕೂ ಅಧಿಕ ಪರೀಕ್ಷೆಗಳ ಗುರಿಯನ್ನು ಬೆಂಗಳೂರಿನ ಎಲ್ಲಾ ವಲಯಗಳಲ್ಲಿ ಸಾಧಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ತಪ್ಪು ವಿಳಾಸ ನೀಡುವವರನ್ನು ನಿಯಂತ್ರಿಸಲು ಕೊವಿಡ್ 19 ಪರೀಕ್ಷೆ ಸಂದರ್ಭದಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಬೆಂಗಳೂರು ಸೇರಿದಂತೆ ಬಳ್ಳಾರಿ, ದಕ್ಷಿಣ ಕನ್ನಡ, ಕಲಬುರಗಿ, ಬಳ್ಳಾರಿ, ಉಡುಪಿ, ಧಾರವಾಡ ಡೇಂಜರ್ ಜೋನ್ ನಲ್ಲೇ ಮುಂದುವರೆದಿವೆ.
Recommended Video
ಕರ್ನಾಟಕದಲ್ಲಿ ಒಂದೇ ದಿನ 6128 ಮಂದಿಗೆ ಕೊರೊನಾ ವೈರಸ್ ಸೋಂಕು ಕಂಡು ಬಂದಿದೆ. ಇಂದು ರಾಜ್ಯದಲ್ಲಿ ಒಟ್ಟು 83 ಜನರು ಕೊವಿಡ್‌ಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು 2233 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಜುಲೈ 30ರ ಸಂಜೆ ವೇಳೆಗೆ 1,12, 504 ಪ್ರಕರಣಗಳಿದ್ದು, 2,147 ಮಂದಿ ಮೃತಪಟ್ಟಿದ್ದು, 42,901 ಮಂದಿ ಚೇತರಿಸಿಕೊಂಡಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆಗಳ ಪೈಕಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, 51ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಹೊಂದಿದ್ದರೆ, ಬಳ್ಳಾರಿ ಎರಡನೇ ಸ್ಥಾನಕ್ಕೆ ಜಿಗಿದಿದ್ದು 5720 ಪ್ರಕರಣ ಹೊಂದಿದೆ. ದಕ್ಷಿಣ ಕನ್ನಡ 5306 ಟಾಪ್ 3ಸ್ಥಾನದಲ್ಲಿದ್ದರೆ, ಕಲಬುರಗಿ 4946 ಕೇಸ್ ಹೊಂದಿದೆ. ಚಾಮರಾಜನಗರ 593, ಚಿತ್ರದುರ್ಗ 570,ಕೊಡಗು 362 ಕೇಸ್ ಹೊಂದಿದ್ದು ಕೊನೆ ಮೂರು ಸ್ಥಾನದಲ್ಲಿವೆ.
ವಿವಿಧ ಜಿಲ್ಲೆಗಳಲ್ಲಿನ ಕೊರೊನಾವೈರಸ್ ಪ್ರಕರಣಗಳು, ಸಕ್ರಿಯ ಕೇಸ್, ಗುಣಮುಖರಾದವರು, ಮೃತರ ಸಂಖ್ಯೆಗಳ ಇನ್ಫೋಗ್ರಾಫಿಕ್ಸ್ ಇಲ್ಲಿದೆ: ವಿನ್ಯಾಸ: ಭರತ್ ಎಚ್. ಸಿ













Click it and Unblock the Notifications