Infographics:ಕೊವಿಡ್ 19 ಸಾವು-ನೋವು, ಯಾವ ಜಿಲ್ಲೆ ಸೇಫ್, ಯಾವ್ದು ಡೇಂಜರ್!
ಬೆಂಗಳೂರು, ಜುಲೈ 28: ಕರ್ನಾಟಕದಲ್ಲಿ ದಿನವೊಂದಕ್ಕೆ 10 ಲಕ್ಷಕ್ಕೂ ಅಧಿಕ ಪರೀಕ್ಷೆಗಳ ಗುರಿಯನ್ನು ಸಾಧಿಸಲಾಗುತ್ತಿದೆ. ತಪ್ಪು ವಿಳಾಸ ನೀಡುವವರನ್ನು ನಿಯಂತ್ರಿಸಲು ಕೊವಿಡ್ 19 ಪರೀಕ್ಷೆ ಸಂದರ್ಭದಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗುತ್ತಿದೆ. ಆದರೆ, ವೈರಸ್ ಸೋಂಕು ನಿಯಂತ್ರಣಕ್ಕೆ ಯಾವುದೇ ಕ್ರಮ ಫಲ ನೀಡುತ್ತಿಲ್ಲ. ಬೆಂಗಳೂರು ಸೇರಿದಂತೆ ಬಳ್ಳಾರಿ, ದಕ್ಷಿಣ ಕನ್ನಡ, ಕಲಬುರಗಿ, ಬಳ್ಳಾರಿ, ಉಡುಪಿ, ಧಾರವಾಡ ಡೇಂಜರ್ ಜೋನ್ ನಲ್ಲೇ ಮುಂದುವರೆದಿವೆ.
Recommended Video
ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಒಂದೇ ದಿನ 5324 ಹೊಸ ಪ್ರಕರಣಗಳು ದಾಖಲಾಗಿ 1 ಲಕ್ಷಕ್ಕೇರಿಕೆಯಾಗಿದೆ. ಜುಲೈ 27ರ ಸಂಜೆ ವೇಳೆಗೆ 1,01,465 ಪ್ರಕರಣಗಳಿದ್ದು, 61,819 ಸಕ್ರಿಯ ಕೇಸ್ ಗಳಿವೆ. 37,685 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು ಮೃತರ ಸಂಖ್ಯೆ 1,953ಕ್ಕೆ ಏರಿಕೆಯಾಗಿದೆ. ಸೋಮವಾರ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದವರು 1,847ಜನ. ಒಟ್ಟಾರೆ 71, 268 Rapid antigen ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳ ಪೈಕಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, 46, 923 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಹೊಂದಿದ್ದರೆ, ಬಳ್ಳಾರಿ ಎರಡನೇ ಸ್ಥಾನಕ್ಕೆ ಜಿಗಿದಿದ್ದು, 4930 ಪ್ರಕರಣ ಹೊಂದಿದೆ. ದಕ್ಷಿಣ ಕನ್ನಡ 4925 ಟಾಪ್ 3ಸ್ಥಾನದಲ್ಲಿದ್ದರೆ, ಕಲಬುರಗಿ 4495 ಕೇಸ್ ಹೊಂದಿದೆ. ಚಾಮರಾಜನಗರ 521, ಕೊಡಗು 352 ಕೇಸ್,ಚಿತ್ರದುರ್ಗ 452 ಕೇಸ್ ಹೊಂದಿದ್ದು ಕೊನೆ ಮೂರು ಸ್ಥಾನದಲ್ಲಿವೆ.
ವಿವಿಧ ಜಿಲ್ಲೆಗಳಲ್ಲಿನ ಕೊರೊನಾವೈರಸ್ ಪ್ರಕರಣಗಳು, ಸಕ್ರಿಯ ಕೇಸ್, ಗುಣಮುಖರಾದವರು, ಮೃತರ ಸಂಖ್ಯೆಗಳ ಇನ್ಫೋಗ್ರಾಫಿಕ್ಸ್ ಇಲ್ಲಿದೆ: ವಿನ್ಯಾಸ: ಭರತ್ ಎಚ್. ಸಿ













Click it and Unblock the Notifications