ಇನ್ಫೋಗ್ರಾಫಿಕ್ಸ್‌: ಗೌರಿ ಹತ್ಯೆ ತನಿಖೆ ನಡೆದು ಬಂದ ಹಾದಿ

ಬೆಂಗಳೂರು, ಸೆಪ್ಟೆಂಬರ್ 05: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಇಂದಿಗೆ ಬರೋಬ್ಬರಿ ಒಂದು ವರ್ಷವಾಯಿತು. ಸಶಕ್ತವಾಗಿ ತನಿಖೆ ನಡೆಸಿದ ಎಸ್‌ಐಟಿ ಪೊಲೀಸರು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತಂದಿದ್ದಾರೆ.

ಸತತವಾಗಿ ಒಂದು ವರ್ಷಗಳ ಕಾಲ ತನಿಖೆ ನಡೆಸಿದ್ದರೂ ಇನ್ನೂ ದಣಿವರಿಯದ ಎಸ್‌ಐಟಿ ಪೊಲೀಸರ ತಂಡ ಗೌರಿ ಹಂತಕರನ್ನು ಮಾತ್ರವಲ್ಲ ವಿಚಾರವಾದಿಗಳನ್ನು ಆಯ್ದು ಕೊಲ್ಲುವ ಮನಸ್ಥಿತಿಯ ಎಲ್ಲರನ್ನೂ ಹೆಡೆಮುರಿ ಕಟ್ಟಲು ಟೊಂಕಕಟ್ಟಿದಂತಿದೆ.

ಸತತವಾಗಿ ಒಂದು ವರ್ಷ ತನಿಖೆ ನಡೆಸಿದರೂ ಸಹ ತನಿಖೆ ತನ್ನ ತೀವ್ರತೆ ಕಳೆದುಕೊಂಡಿಲ್ಲ. ಗೌರಿ ಹತ್ಯೆಯ ಬೆನ್ನು ಬಿದ್ದು ಈಗ ವಿಚಾರವಾದಿಗಳಾದ ಕಲ್ಬುರ್ಗಿ, ಪಾನ್ಸರೆ, ದಾಬೋಲ್ಕರ್ ಅವರ ಹತ್ಯೆಕೋರರನ್ನೂ ಹಿಡಿಯುವಲ್ಲಿಯೂ ಎಸ್‌ಐಟಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳಿಗೆ ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸಲೇ ಬೇಕೆಂದು ಹಠ ತೊಟ್ಟಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಈವರೆಗೆ 12 ಜನರನ್ನು ಬಂಧಿಸಿದೆ. ಪ್ರತಿಯೊಬ್ಬ ಆರೋಪಿಯನ್ನೂ ಬಂಧಿಸಿದ ದಿನಾಂಕದ ಜೊತೆಗೆ ಸಂಪೂರ್ಣ ವಿವರ ಇನ್ಫೋಗ್ರಾಕ್ಸ್‌ನಲ್ಲಿ ಇದೆ ಕಣ್ಣಾಡಿಸಿ.

Gauri Lankesh murder investigation detail in infographics

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+