COVID-19: ರಷ್ಯಾ ಮೀರಿ ಬೆಳೆದ ಭಾರತ, ಯಾವ ದೇಶದಲ್ಲಿ ಎಷ್ಟು ಸೋಂಕಿತರು?
ಬೆಂಗಳೂರು, ಜುಲೈ 6: ಜಾಗತಿಕ ಮಹಾಮಾರಿ ಕೊವಿಡ್19 ಸೋಂಕಿನಿಂದ ಸಾವು ನೋವು ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ರಷ್ಯಾವನ್ನು ಮೀರಿ ಬೆಳೆದಿರುವ ಭಾರತ ಇದೀಗ 7 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದುವತ್ತ ದಾಪುಗಾಲಿಟ್ಟಿದೆ.
ಇನ್ನೊಂದೆಡೆ ರಷ್ಯಾದಲ್ಲಿ ಸತತವಾಗಿ ಎರಡು ದಿನದಿದ ಸರಾಸರಿ6 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ಕಂಡು ಬಂದಿದೆ. ಜೊತೆಗೆ ರಷ್ಯಾದಲ್ಲಿ ಮರಣ ಪ್ರಮಾಣವೂ ಏರಿಕೆಯಾಗುವ ಲಕ್ಷಣಗಳಿವೆ. ಸದ್ಯ 10 ಸಾವಿರಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ. ಭಾರತದಲ್ಲಿ ಸಾವಿನ ಸಂಖ್ಯೆ ಪ್ರಮಾಣದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ ಜುಲೈ 6ಕ್ಕೆ ಸಾವು ನೋವಿನ ಅಂಕಿ ಅಂಶ ಇಲ್ಲಿದೆ..
ಜುಲೈ 6ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 11,579,773 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ537,173ಕ್ಕೇರಿದೆ. ಒಟ್ಟಾರೆ, 6,547,767 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 4,494,833 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 58,655 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.
ಮೆಕ್ಸಿಕೋದಲ್ಲಿ ಒಂದೇ ದಿನ 4683 ಪ್ರಕರಣ ಕಾಣಿಸಿಕೊಂಡು ಟಾಪ್ 10 ಪಟ್ಟಿಯೊಳಗೆ ಮತ್ತೆ ಸೇರಿದೆ. ಟಾಪ್ 11ಕ್ಕೆ ಇಟಲಿ ಕುಸಿದಿದ್ದು, ನಂತರ ಸ್ಥಾನದಲ್ಲಿ ಇರಾನ್, ಪಾಕಿಸ್ತಾನ, ಸೌದಿ ಅರೇಬಿಯಾದ ಇದ್ದು, ನಂತರದ ಸ್ಥಾನದಲ್ಲಿರುವ ಟರ್ಕಿ 2 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿವೆ.
ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5 ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ರಷ್ಯಾ (10,296), ಬೆಲ್ಜಿಯಂ ( 9,771), ಜರ್ಮನಿ (9,086), ಕೆನಡಾ (8,684), ನೆದರ್ಲೆಂಡ್ಸ್(6,127), ಚಿಲಿ (6,308), ಸ್ವೀಡನ್ (5,420), ಟರ್ಕಿ(5,225) ಕಾಣಿಸಿಕೊಂಡಿವೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...














Click it and Unblock the Notifications