Infographics:ಶೇಕಡವಾರು ಮತ ಗಳಿಕೆ, ಅತಿ ಹೆಚ್ಚು ಸ್ಥಾನ RJD ಟಾಪ್
ಕೊವಿಡ್ 19 ಸಂಕಷ್ಟದ ನಡುವೆ ಸಕಲ ಸುರಕ್ಷತಾ ನಿಯಮಗಳನ್ನು ಅನುಸರಿಸಿ ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿಗಾಗಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ನವೆಂಬರ್ 11ರಂದು ಸುರ್ಯೋದಯಕ್ಕೂ ಮುನ್ನ ಅಂತಿಮ ಫಲಿತಾಂಶ ಹೊರಬಂದಿದೆ.
ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಶೇಕಡವಾರು ಮತ ಗಳಿಕೆ, ಅತಿ ಹೆಚ್ಚು ಸ್ಥಾನ ಪಡೆದ ಪಕ್ಷವಾಗಿ ಹೊರ ಹೊಮ್ಮಿದೆ. ಇನ್ನೊಂದೆಡೆ ಆಡಳಿತಾರೂಢ ಜೆಡಿಯುಗಿಂತ ಬಿಜೆಪಿ ಅಧಿಕ ಸ್ಥಾನ ಗಳಿಸಿರುವುದು ವಿಶೇಷ. ಎಐಎಂಐಎಂ ಈ ಬಾರಿ 5 ಸ್ಥಾನ ಗಳಿಸಿ ಭರ್ಜರಿ ಪ್ರದರ್ಶನ ನೀಡಿದೆ.
ಬಿಹಾರದ 38 ಜಿಲ್ಲೆಗಳಲ್ಲಿ 55 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ತಡರಾತ್ರಿ ನಡೆದು 3755 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿದೆ.
ಆರ್ ಜೆಡಿ 75 ಸ್ಥಾನ ಗಳಿಸಿದರೆ ಬಿಜೆಪಿ 74 ಸ್ಥಾನ ಗಳಿಸಿದೆ. ಎನ್ಡಿಎ ಮಿತ್ರಪಕ್ಷಗಳಾದ ಎಚ್ಎಎಂ ಹಾಗೂ ವಿಐಪಿ ತಲಾ 4 ಸ್ಥಾನ ಗಳಿಸಿವೆ. ಎಲ್ ಜೆಪಿ 1 ಸ್ಥಾನಕ್ಕೆ ತೃಪ್ತಿ ಪಟ್ಟಿದೆ.
2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ ಗಳಿಸಿದ್ದವು. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.
ಬಿಹಾರ ವಿಧಾನಸಭೆ ಚುನಾವಣೆ ಜೊತೆಗೆ ದೇಶದ 11 ರಾಜ್ಯಗಳಲ್ಲಿನ 59 ವಿಧಾನಸಭಾ ಕ್ಷೇತ್ರಗಳಿಗೆ ನಡೆಸಲಾದ ಚುನಾವಣೆಯ ಫಲಿತಾಂಶವೂ ನವೆಂಬರ್ 10ರಂದು ಪ್ರಕಟವಾಗಿದೆ. ಬಿಹಾರದಲ್ಲಿ ಮಿತ್ರಪಕ್ಷ ಜೆಡಿಯುವನ್ನು ಹಿಂದಿಕ್ಕಿ ಭಾರತೀಯ ಜನತಾ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ ಸಾಧನೆ ಮಾಡಿದೆ. ಇದೇ ರೀತಿ ಉಪ ಚುನಾವಣೆ ರಿಪೋರ್ಟ್ ಕಾರ್ಡ್ ನೋಡಿದರೆ 59 ಕ್ಷೇತ್ರಗಳಲ್ಲಿ 41 ಬಿಜೆಪಿ ಪಾಲಾಗಿದ್ದು, ಭರ್ಜರಿ ಫಲಿತಾಂಶ ನೀಡಿದೆ.
ಬಿಹಾರದ ಪಕ್ಷವಾರು ಫಲಿತಾಂಶ, ಶೇಕಡಾವಾರು ಮತಗಳಿಕೆ, 11 ರಾಜ್ಯಗಳ ಉಪ ಚುನಾವಣೆ ಫಲಿತಾಂಶ ವಿವರ ಯಾವ ಪಕ್ಷಕ್ಕೆ ಲಾಭ, ಯಾವುದಕ್ಕೆ ನಷ್ಟ ವಿವರ ಇಲ್ಲಿದೆ..


Recommended Video













Click it and Unblock the Notifications