Explained: ಅತೀ ಅಸಮಾನತೆ ಇರುವ ವಿಶ್ವದ ರಾಷ್ಟ್ರಗಳಲ್ಲಿ ಭಾರತವೂ ಒಂದು
ವಿಶ್ವದ ಅತೀ ಹೆಚ್ಚು ಅಸಮಾನತೆ ಹೊಂದಿರುವ ರಾಷ್ಟ್ರಗಳು 2022 ರ ವರದಿಯ ಪ್ರಕಾರ ಭಾರತವು ವಿಶ್ವದ ಅತೀ ಹೆಚ್ಚು ಅಸಮಾನತೆ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತವು ಒಂದು ರಾಷ್ಟ್ರವಾಗಿದೆ. ಭಾರತದಲ್ಲಿ ಈ ಅಸಮಾನತೆಯಿಂದಾಗಿ ಬಡತನ ಹಾಗೂ ಅತೀ ಶ್ರೀಮಂತಿಕೆ ಪ್ರಮಾಣ ಒಂದೇ ಸಮನೆ ಅಧಿಕವಾಗುತ್ತಿದೆ ಎಂದು ಕೂಡಾ ಈ ವರದಿಯು ಉಲ್ಲೇಖ ಮಾಡಿದೆ.
ಭಾರತದಲ್ಲಿ ಶೇಕಡ 10 ರಷ್ಟು ಮಂದಿ ಶೇಕಡ 57 ರಷ್ಟು ರಾಷ್ಟ್ರೀಯ ಆದಾಯವನ್ನು ಹೊಂದಿದ್ದರೆ, ಇದೇ ವೇಳೆ ಶೇಕಡ 1 ರಷ್ಟು ಮಂದಿ ಶೇಕಡ 22 ರಷ್ಟು ರಾಷ್ಟ್ರೀಯ ಆದಾಯವನ್ನು ಹೊಂದಿದ್ದಾರೆ. ಇನ್ನುಳಿದವರ ಕೈಯಲ್ಲಿ ಬರೀ ಶೇಕಡ 13 ರಷ್ಟು ರಾಷ್ಟ್ರೀಯ ಆದಾಯವು ಇದೆ. ಈ ವರದಿಯನ್ನು ಲ್ಯೂಕಾಸ್ ಚಾನ್ಸೆಲ್ ಬರೆದಿದ್ದು, ಹೆಸರಾಂತ ಅರ್ಥಶಾಸ್ತ್ರಜ್ಞರಾದ ಥಾಮಸ್ ಪಿಕೆಟ್ಟಿ, ಇಮ್ಯಾನುಯೆಲ್ ಸಾಯೆಜ್ ಮತ್ತು ಗೇಬ್ರಿಯಲ್ ಜುಕ್‌ಮನ್ ಸಂಯೋಜನೆ ಮಾಡಿದ್ದಾರೆ. ಭಾರತೀಯ ವಯಸ್ಕ ಜನಸಂಖ್ಯೆಯ ಸರಾಸರಿ ರಾಷ್ಟ್ರೀಯ ಆದಾಯ 2,04,200 ರೂಪಾಯಿ ಆಗಿದೆ. ಕೆಳವರ್ಗದ ಶೇಕಡ 50 ರಷ್ಟು ಜನರು ರೂಪಾಯಿ 53,610 ಗಳಿಸುತ್ತಾರೆ. ಆದರೆ ಅಗ್ರ ಶೇಕಡ 10 ರಷ್ಟು ಜನರು 11,66,520 ಗಳಿಸುತ್ತಾರೆ. ಅಂದರೆ ಶೇಕಡ ಹತ್ತರಷ್ಟು ಜನರು ಇಪ್ಪತ್ತು ಪಟ್ಟು ಅಧಿಕ ಆದಾಯವನ್ನು ಗಳಿಸುತ್ತಿದ್ದಾರೆ.
ಇನ್ನು ಈ ವರದಿಯು ಕಳೆದ ಮೂರು ವರ್ಷದಲ್ಲಿ ದೇಶದಲ್ಲಿ ಇರುವ ಅಸಮಾನತೆಯನ್ನು ಎತ್ತಿ ತೋರಿಸುತ್ತಿದೆ. ಇನ್ನು ಭಾರತ ಸರ್ಕಾರ ಬಿಡುಗಡೆ ಮಾಡಿದ ಕಳೆದ ಮೂರು ವರ್ಷಗಳ ಅಸಮಾನತೆಯ ದತ್ತಾಂಶದ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಈ ಹೆಸರಾಂತ ಅರ್ಥಶಾಸ್ತ್ರಜ್ಞರನ್ನು ಒಳಗೊಂಡ ವರದಿಯು, "ಭಾರತ ಸರ್ಕಾರವು ಬಿಡುಗಡೆ ಮಾಡಿದ ಅಸಮಾನತೆಯ ದತ್ತಾಂಶದ ಗುಟ್ಟಮಟ್ಟವು ತೀರಾ ಹದಗೆಟ್ಟಿದೆ," ಎಂದು ಹೇಳಿದೆ. ಈ ಡೇಟಾ ಮುಖಾಂತರ ನಾವು ಇತ್ತೀಚಿನ ಅಸಮಾನತೆಯ ಬದಲಾವಣೆಯನ್ನು ನಿರ್ಣಯ ಮಾಡುವುದು ಕಷ್ಟಕರವಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಹಾಗಾದರೆ ಭಾರತದ ಅಸಮಾನತೆಯನ್ನು ಈ ವರದಿಯಲ್ಲಿ ಯಾವ ರೀತಿಯಾಗಿ ಉಲ್ಲೇಖ ಮಾಡಲಾಗಿದೆ ಎಂಬುವುದನ್ನು ನಾವು ತಿಳಿಯೋಣ ಬನ್ನಿ, ಮುಂದೆ ಓದಿ..

ದೇಶದಲ್ಲಿ ಸಾರ್ವಜನಿಕ ಸಂಪತ್ತೆಲ್ಲವೂ ಖಾಸಗೀಕರಣ
ದಶಕಗಳಿಂದ ದೇಶದಲ್ಲಿ ಸಾರ್ವಜನಿಕ ಸಂಪತ್ತಿನ ಪಾಲು ಇಳಿಮುಖವಾಗಿದೆ ಎಂಬುವುದನ್ನು ಈ ವರದಿಯು ಪ್ರಮುಖವಾಗಿ ಉಲ್ಲೇಖ ಮಾಡಿದೆ. ಪ್ರಮುಖವಾಗಿ ಸಾರ್ವಜನಿಕ ಕಟ್ಟಡಗಳ ವಸತಿ ಆಡಳಿತಗಳು, ಶಾಲೆಗಳು, ವಿಶ್ವವಿದ್ಯಾಲಯಗಳು, ಸಾರ್ವಜನಿಕ ಆಸ್ಪತ್ರೆಗಳು ಮತ್ತು ಇತರ ಸಾರ್ವಜನಿಕ ಸೇವೆಗಳು ದೇಶದಲ್ಲಿ ಕಡಿಮೆ ಆಗಿದೆ. ಅಂದರೆ ಈ ವರದಿಯ ಪ್ರಕಾರ ದೇಶದಲ್ಲಿ ಖಾಸಗೀಕರಣವು ತೀವ್ರವಾಗಿ ಅಧಿಕವಾಗುತ್ತಿದೆ. ಇದು ಕೂಡಾ ಅಸಮಾನತೆಗೆ ಪ್ರಮುಖ ಕಾರಣ. ಇನ್ನು "ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ಜಾತ್ಯಾತೀತವಾಗಿ ದೇಶದ ಸಾರ್ವಜನಿಕ ಸಂಪತ್ತು ಅವನತಿ ಹೊಂದಿದೆ. ಖಾಸಗೀ ಸಂಪತ್ತು ಏರಿಕೆ ಆಗಿದೆ," ಎಂಬುವುದನ್ನು ವರದಿಯು ಪ್ರಮುಖವಾಗಿ ಉಲ್ಲೇಖಿಸಿದೆ. ಭಾರತ ಮತ್ತು ಚೀನಾದಂತಹ ಉದಯೋನ್ಮುಖ ಆರ್ಥಿಕತೆಗಳು ಈ ದೇಶಗಳಲ್ಲಿ ಆರ್ಥಿಕ ನೀತಿಯನ್ನು ಸಡಿಲಿಕೆ ಮಾಡಿದ ಬಳಿಕ, ಶ್ರೀಮಂತ ರಾಷ್ಟ್ರಗಳಿಗಿಂತ ಅಧಿಕವಾಗಿ ಖಾಸಗೀ ಸಂಪತ್ತನ್ನು ಹೊಂದಿದೆ. ಈ ದೇಶಗಳಲ್ಲಿ ಖಾಸಗೀ ಸಂಪತ್ತು ಏಕಾಏಕಿ ಅಧಿಕವಾಗಿದೆ ಎಂದು ವರದಿಯು ಹೇಳಿದೆ. . ಭಾರತದಲ್ಲಿ, ವಿಶೇಷವಾಗಿ, ಖಾಸಗಿ ಸಂಪತ್ತು 1980 ರಲ್ಲಿ ಶೇಕಡ 290 ಇದ್ದು 2020 ರಲ್ಲಿ ಶೇಕಡ 560 ಕ್ಕೆ ಏರಿಕೆ ಕಂಡಿದೆ.

ಭಾರತದಲ್ಲಿ ಅಸಮಾನತೆ ಸೃಷ್ಟಿಗೆ ಉದಾರೀಕರಣದ ನಾಂದಿ
ಬ್ರಿಟಿಷ್ ಕಾಲನಿಯಲ್ ನೀತಿ (1858-1947) ಪ್ರಕಾರವಾಗಿ ದೇಶದಲ್ಲಿ ಆದಾಯ ಅಸಮಾನತೆಯು ತೀರಾ ಅಧಿಕವಾಗಿದೆ ಎಂದು ವರದಿಯು ಹೇಳುತ್ತದೆ. ಶೇಕಡ 10 ರಷ್ಟು ಮಂದಿಯ ಕೈಯಲ್ಲೇ ದೇಶದ ಶೇಕಡ 50 ರಷ್ಟ ಆದಾಯವು ಇದೆ. ಭಾರತದಲ್ಲಿ ಸ್ವಾತಂತ್ರ್ಯ ಬಳಿಕ ಸಮಾಜವಾದಿ-ಪ್ರೇರಿತ ಪಂಚವಾರ್ಷಿಕ ಯೋಜನೆಗಳಿಂದಾಗಿ ದೇಶದಲ್ಲಿ ರಾಷ್ಟ್ರೀಯ ಆದಾಯವು ಶೇಕಡ 35-40 ರಂತೆ ಹಂಚಿಕೆ ಆಗಿತ್ತು. ಸ್ವಾತಂತ್ರ್ಯದ ನಂತರದ ದೇಶದಲ್ಲಿ ಆರ್ಥಿಕ ಸ್ಥಿತಿಯು ಹದಗೆಟ್ಟಿದ್ದ ಕಾರಣದಿಂದಾಗಿ ಅನಿಯಂತ್ರಣವು ಇತ್ತು, ಈ ಸಂದರ್ಭದಲ್ಲಿ ಭಾರತವು ಉದಾರೀಕರಣ ನೀತಿಯ ರೂಪದಲ್ಲಿ ಆರ್ಥಿಕತೆ ನಿಯಂತ್ರಣ ಮಾಡುವ ಯತ್ನವನ್ನು ಮಾಡಿತ್ತು. ಈ ಉದಾರೀಕರಣ ನೀತಿಯೇ ದೇಶದಲ್ಲಿ ಆದಾಯ ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗಲು ಹಾಗೂ ದೇಶದಲ್ಲಿ ಅಸಮಾನತೆ ಸೃಷ್ಟಿಯಾಗಲು ಕಾರಣ ಎಂಬುವುದನ್ನು ವರದಿಯು ಪ್ರತಿಪಾದಿಸಿದೆ. ಈ ಆರ್ಥಿಕ ಸುಧಾರಣೆಯಿಂದಾಗಿ ಕೇವಲ ಶೇಕಡ ಒಂದರಷ್ಟು ಜನರ ಆದಾಯವು ಹೆಚ್ಚಳ ಆಗಿದೆ. ಇದೇ ಸಂದರ್ಭದಲ್ಲಿ ನಿಧಾನವಾಗಿ ಮಧ್ಯಮ ವರ್ಗ ಹಾಗೂ ಬಡ ವರ್ಗವು ಸೃಷ್ಟಿಯಾಗಿದೆ. ವರ್ಗ ಭೇದವು ಸೃಷ್ಟಿಯಾಗಿದೆ. ಬಡತನವು ಮುಂದುವರಿಯುತ್ತಾ ಹೋಗಿದೆ ಎಂಬುವುದನ್ನು ಈ ಆರ್ಥಿಕ ತಜ್ಞರ ವರದಿಯು ಪ್ರಮುಖವಾಗಿ ಉಲ್ಲೇಖಿಸಿದೆ.

ಭಾರತದಲ್ಲಿ ಆರ್ಥಿಕ ಅಸಮಾನತೆ
ಭಾರತದಲ್ಲಿನ ಮನೆಗಳ ಸರಾಸರಿ ಆದಾಯವು ಸುಮಾರು 9,83,010 ರೂಪಾಯಿ ಆಗಿದೆ. ಈ ಪೈಕಿ 66,280 ರೂ. ಅಥವಾ ಒಟ್ಟು ಪೈ (ಪೈ ಲೆಕ್ಕಾಂಶ) ಶೇಕಡ ಆರರಷ್ಟು ಸರಾಸರಿ ಸಂಪತ್ತನ್ನು ಹೊಂದಿರುವವರು ರಾಷ್ಟ್ರದ ಕೆಳಗಿನ ಶೇಕಡ 50 ಮಂದಿಯಲ್ಲಿ ಬಹುತೇಕವಾಗಿ ಏನೂ ಇಲ್ಲ ಎಂದೇ ಹೇಳಬಹುದು. ತುಲನಾತ್ಮಕವಾಗಿ ನೋಡುವುದಾದರೆ ಮಧ್ಯಮ ವರ್ಗದ ಜನರು ಎಂದು ಕರೆಯಲ್ಪಡುವವರು ಬಡವರಾಗಿದ್ದಾರೆ. ಇವರ ಸರಾಸರಿ ಆದಾಯವು ರೂ 7,23,930 ಅಥವಾ ಒಟ್ಟು ಶೇಕಡ 29.5 ಆಗಿದೆ. ಉಳಿದಂತೆ ಶೇಕಡ ಹತ್ತರಷ್ಟು ಜನರಲ್ಲಿ ದೇಶದ ಒಟ್ಟು ಸಂಪತ್ತಿನ 65 ಅನ್ನು ಹೊಂದಿದ್ದಾರೆ ಅಂದರೆ ಸರಾಸರಿ 63,54,070 ಹೊಂದಿದ್ದಾರೆ. ಇನ್ನು ಅಗ್ರ ಒಂದು ಶೇಕಡ ಜನರಲ್ಲಿ ಶೇಕಡ 33 ರಷ್ಟು ಆದಾಯವು ಇದೆ. ಸರಾಸರಿಯಾಗಿ ರೂ 3,24,49,360 ಆದಾಯ ಈ ಶೇಕಡ ಒಂದರಷ್ಟು ಜನರಲ್ಲಿ ಇದೆ ಎಂಬುವುದನ್ನು ಉಲ್ಲೇಖ ಮಾಡಿರುವ ಈ ವರದಿಯು ದೇಶದಲ್ಲಿ ಹೇಗೆ ಆರ್ಥಿಕ ಅಸಮಾನತೆಯು ಇದೆ ಎಂಬುವುದನ್ನು ವಿವರಿಸಿದೆ. 2021 ರಲ್ಲಿ, ಜನಸಂಖ್ಯೆಯ ಶೇಕಡ ಹತ್ತರಷ್ಟು ಶ್ರೀಮಂತರು ಭಾರತದಲ್ಲಿ ಒಟ್ಟು ಮನೆಗಳ ಸಂಪತ್ತಿನ ಶೇಕಡ 65 ರಷ್ಟನ್ನು ಹೊಂದಿದ್ದಾರೆ ಎಂದಿದೆ.

ಭಾರತದಲ್ಲಿ ಲಿಂಗದ ಆಧಾರದಲ್ಲಿಯೂ ಇದೆ ಆರ್ಥಿಕ ಅಸಮಾನತೆ
ಭಾರತದಲ್ಲಿ ಆರ್ಥಿಕ ಅಸಮಾನತೆಯ ಜೊತೆಯಲ್ಲೇ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಲಿಂಗ ತಾರತಮ್ಯ ಅಥವಾ ಲಿಂಗ ಅಸಮಾನತೆ ಆಗಿದೆ. ಭಾರತದಲ್ಲಿ ಲಿಂಗ ಅಸಮಾನತೆಯೂ ಗಣನೀಯವಾಗಿ ಹೆಚ್ಚಾಗಿದೆ. ಭಾರತದಲ್ಲಿ ಮಹಿಳೆಯರ ಆದಾಯದ ಪಾಲು ಬರೀ ಶೇಕಡ 18 ಆಗಿದೆ. ಇದು ಏಷ್ಯಾದಲ್ಲಿ ಮಹಿಳೆಯರ ಆದಾಯಕ್ಕಿಂತ ಭಾರೀ ಕಡಿಮೆ ಆಗಿದೆ. ಚೀನಾದಲ್ಲಿ ಮಹಿಳೆಯರ ಆದಾಯವು ಶೇಕಡ 21 ಆಗಿದೆ. ವಿಶ್ವದಲ್ಲೇ ಮಹಿಳೆಯರು ಅತೀ ಕಡಿಮೆ ಆದಾಯವನ್ನು ಹೊಂದಿರುವ ರಾಷ್ಟ್ರ ಭಾರತವಾಗಿದೆ. ಈ ಹಿಂದೆ ಭಾರತದಲ್ಲಿ ಮಹಿಳೆಯರ ಆದಾಯವು ಶೇಕಡ 15 ಆಗಿತ್ತು. ಅದಕ್ಕೆ ಹೋಲಿಕೆ ಮಾಡಿದಾಗ ಪ್ರಸ್ತುತ ಮಹಿಳೆಯರ ಆದಾಯವು ಶೇಕಡ 21 ಕ್ಕೆ ಏರಿಕೆ ಆಗಿದೆ, ಆದರೆ ಈ ಸಂದರ್ಭದಲ್ಲೇ ಏಷ್ಯಾದಲ್ಲಿ ಮಹಿಳೆಯರು ಅತೀ ಕಡಿಮೆ ಆದಾಯ ಹೊಂದಿರುವ ರಾಷ್ಟ್ರ ಭಾರತ ಎಂಬುವುದನ್ನು ಮರೆಯುವಂತಿಲ್ಲ.

ಶ್ರೀಮಂತ ದೇಶದಲ್ಲಿ ಬಡ ಸರ್ಕಾರ
ಪ್ರಪಂಚದಾದ್ಯಂತದ ದೇಶಗಳು ಕಳೆದ 40 ವರ್ಷಗಳಲ್ಲಿ ಶ್ರೀಮಂತವಾಗಿವೆ. ಆದರೆ ಇದೇ ಸಂದರ್ಭದಲ್ಲಿ ಆ ದೇಶಗಳ ಸರ್ಕಾರಗಳು ಬಡವಾಗಿದೆ ಎಂಬುವುದು ಗಮನಾರ್ಹವಾಗಿದೆ. ಈ ಶ್ರೀಮಂತ ದೇಶದಲ್ಲಿ ಸಾರ್ವಜನಿಕ ಸಂಪತ್ತು ತೀರಾ ಕಡಿಮೆ, ಶೂನ್ಯವೇ ಎಂದು ಹೇಳಬಹುದು. ಇದು ಸರ್ಕಾರಕ್ಕೆ ಕೊಡಲಿ ಏಟು ನೀಡಿದೆ. ಸಾರ್ವಜನಿಕ ಸಂಪತ್ತು ಇಲ್ಲದೆ ಸರ್ಕಾರವು ಬಡವಾಗಿದೆ. ಇದು ದೇಶದ ಮೇಲೆ ನೆಗೆಟಿವ್ (ಋಣಾತ್ಮಕ) ಪರಿಣಾಮವನ್ನು ಬೀರುತ್ತಿದೆ ಎಂದು ವರದಿಯು ಹೇಳಿದೆ. ಅಂದರೆ ಈ ದೇಶಗಳಲ್ಲಿ ಸಂಪತ್ತು ಎಲ್ಲವೂ ಖಾಸಗಿ ವಲಯದ ಕೈಯಲ್ಲಿ ಇದೆ. ಇನ್ನು ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ಸರ್ಕಾರಗಳು ಜಿಡಿಪಿಯ ಶೇಕಡ 10-20 ಸಮಾನವಾದ ಸಾಲವನ್ನು ಮೂಲಭೂತವಾಗಿ ಖಾಸಗಿ ವಲಯದಿಂದ ಪಡೆದಿದೆ. ಸರ್ಕಾರಗಳ ತುಲನಾತ್ಮಕವಾಗಿ ಕಡಿಮೆ ಸಂಪತ್ತು ಇರುವ ಕಾರಣದಿಂದಾಗಿ ಭವಿಷ್ಯದಲ್ಲಿ ಈ ಅಸಮಾನತೆಯನ್ನು ನಿಯಂತ್ರಣ ಮಾಡುವುದು ಸಾಧ್ಯವಾಗದಂಥಹ ಸ್ಥಿತಿ ನಿರ್ಮಾಣ ಮಾಡಲಿದೆ ಎಂದು ವರದಿಯು ಆತಂಕ ವ್ಯಕ್ತಪಡಿಸಿದೆ.
-
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ












Click it and Unblock the Notifications