ಉಗ್ರಗಾಮಿಗಳೊಂದಿಗೆ ಸಂಪರ್ಕ: ಮೂವರು ಜಮ್ಮು ಮತ್ತು ಕಾಶ್ಮೀರ ಸರ್ಕಾರಿ ನೌಕರರ ವಜಾ

ಶ್ರೀನಗರ, ಜುಲೈ 17: ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕಾಶ್ಮೀರ ವಿಶ್ವವಿದ್ಯಾನಿಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ, ಪೊಲೀಸ್ ಪೇದೆ ಮತ್ತು ಕಂದಾಯ ಇಲಾಖೆ ಅಧಿಕಾರಿಯನ್ನು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳೊಂದಿಗೆ ಕೆಲಸ ಮಾಡಿದ ಆರೋಪದ ಮೇಲೆ ವಜಾಗೊಳಿಸಿದೆ.

ಈ ಮೂವರು ಸರ್ಕಾರಿ ನೌಕರರು ಉಗ್ರಗಾಮಿ ಸಂಘಟನೆಗಳಿಗೆ ಹಣಕಾಸು ಸಂಗ್ರಹಿಸಿರುವುದಲ್ಲದೆ ಅವರ ಸಿದ್ಧಾಂತವನ್ನು ಪ್ರಚಾರ ಮಾಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

Links with militants: Three Jammu and Kashmir government employees sacked

ವಜಾಗೊಂಡಿರುವ ಈ ಮೂವರು ಉದ್ಯೋಗಿಗಳನ್ನು ಕಾಶ್ಮೀರ ವಿಶ್ವವಿದ್ಯಾಲಯದ ಪಿಆರ್‌ಒ ಫಹೀಮ್ ಅಸ್ಲಾಂ, ಕಂದಾಯ ಇಲಾಖೆ ಅಧಿಕಾರಿ ಮುರಾವತ್ ಹುಸೇನ್ ಮಿರ್ ಮತ್ತು ಜೆ-ಕೆ ಪೊಲೀಸ್ ಕಾನ್ಸ್‌ಟೇಬಲ್ ಅರ್ಷಿದ್ ಅಹ್ಮದ್ ಥೋಕರ್ ಎಂದು ಗುರುತಿಸಲಾಗಿದೆ.

ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳೊಂದಿಗೆ ಕೆಲಸ ಮಾಡುವುದು, ಉಗ್ರಗಾಮಿಗಳಿಗೆ ಲಾಜಿಸ್ಟಿಕ್ಸ್ ಒದಗಿಸುವುದು, ಉಗ್ರಗಾಮಿ ಸಿದ್ಧಾಂತವನ್ನು ಪ್ರಚಾರ ಮಾಡುವುದು, ಉಗ್ರಗಾಮಿತ್ವಕ್ಕೆ ಹಣಕಾಸು ಸಂಗ್ರಹಿಸುವುದು ಮತ್ತು ಪ್ರತ್ಯೇಕತಾವಾದಿ ಕಾರ್ಯಸೂಚಿಯನ್ನು ಹೆಚ್ಚಿಸುವುದು ಸೇರಿದಂತೆ ಹಲವು ಆರೋಪಗಳ ಕಾರಣ ಅವರನ್ನು ಸರ್ಕಾರಿ ಸೇವೆಗಳಿಂದ ವಜಾ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೂವರು ನೌಕರರು ಪಾಕಿಸ್ತಾನದ ಐಎಸ್‌ಐ ಮತ್ತು ಭಯೋತ್ಪಾದಕ ಸಂಘಟನೆಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತನಿಖೆಯ ನಂತರ ದೃಢಪಡಿಸಿದ ನಂತರ ಮೂವರು ಸರ್ಕಾರಿ ನೌಕರರನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಸಂವಿಧಾನದ 311 (2) (ಸಿ) ಅನ್ನು ಅನ್ವಯ ವಜಾಗೊಳಿಸಿದೆ ಎಂದು ತಿಳಿಸಲಾಗಿದೆ.

ಕಾಶ್ಮೀರ ವಿಶ್ವವಿದ್ಯಾಲಯದ ಪಿಆರ್‌ಒ ಫಹೀಮ್ ಅಸ್ಲಾಂ ಒಬ್ಬ ಕಟುವಾದ ಪ್ರತ್ಯೇಕತಾವಾದಿಯಾಗಿದ್ದು, ಆತ ಪ್ರತ್ಯೇಕತಾವಾದಿ ಸಿದ್ಧಾಂತಕ್ಕೆ ಮಾರು ಹೋಗಿ ಅದನ್ನು ಜನರ ಬಳಿ ಪ್ರಚಾರವನ್ನೂ ಮಾಡುತ್ತಿದ್ದನು. ಈ ಮೂಲಕ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಪ್ರಮುಖ ಪ್ರಚಾರಕರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫಹೀಮ್ ಅಸ್ಲಾಂನ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ದೇಶದ ಬಗ್ಗೆ ಹಾಗೂ ಭದ್ರತಾ ಪಡೆಗಳನ್ನು ಭಾರತೀಯ ಔದ್ಯೋಗಿಕ ಪಡೆಗಳ ಬಗ್ಗೆ ದ್ವೇಷವನ್ನು ಸೂಚಿಸಿವೆ ಎಂದು ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಫಹೀಮ್‌ ಅಸ್ಲಾಂ ಅವರು ಸೇವೆಗಳಿಂದ ವಜಾಗೊಳಿಸಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

2022 ಮೇ ತಿಂಗಳಲ್ಲೂ ಕೂಡ ಭಯೋತ್ಪಾದನೆಗೆ ಸಕ್ರಿಯವಾಗಿ ಬೆಂಬಲ ನೀಡುತ್ತಿದ್ದುದು ಕಂಡು ಬಂದ ಹಿನ್ನೆಲೆಯಲ್ಲಿ ಮೂವರು ಸರಕಾರಿ ಉದ್ಯೋಗಿಗಳನ್ನು ಜಮ್ಮು ಮತ್ತು ಕಾಶ್ಮೀರದ ಆಡಳಿತದ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ವಜಾಗೊಂಡವರಲ್ಲಿ ಇಬ್ಬರು ಶಿಕ್ಷಕ ವೃತ್ತಿಯಲ್ಲಿದ್ದರೆ, ಒಬ್ಬರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದನು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+