• search
  • Live TV
keyboard_backspace

'ನಾನು ಯಾರನ್ನೂ ನಂಬಲ್ಲ': ಮಾತು ತಪ್ಪಿದ ತಾಲಿಬಾನ್‌ ಬಗ್ಗೆ ಬೈಡನ್‌

Google Oneindia Kannada News

ವಾಷಿಂಗ್ಟನ್‌, ಆಗಸ್ಟ್‌ 23: "ತಾಲಿಬಾನ್‌ ಕಾನೂನು ಬದ್ಧೆತೆಯನ್ನು ಬಯಸುತ್ತಿದೆ. ಹಾಗೆಯೇ ಭರವಸೆಗಳನ್ನೂ ನೀಡಿದೆ. ಆದರೆ ವಾಷಿಂಗ್ಟನ್‌ ತಾಲಿಬಾನಿಗರ ಈ ಭರವಸೆಯು ಹೌದೇ ಅಲ್ಲವೇ ಎಂದು ನೋಡಬೇಕು," ಎಂದು ಹೇಳಿದ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಈ ಸಂದರ್ಭದಲ್ಲೇ, "ನಾನು ಯಾರನ್ನೂ ನಂಬುವುದಿಲ್ಲ," ಎಂದು ಹೇಳಿದ್ದಾರೆ.

ವೈಟ್‌ ಹೌಸ್‌ನಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭ "ತಾಲಿಬಾನಿಗರನ್ನು ನಂಬುವಿರೇ, ಇಲ್ಲವೇ" ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಯುಎಸ್‌ ಅಧ್ಯಕ್ಷ ಜೋ ಬೈಡನ್‌, "ನಾನು ಯಾರನ್ನೂ ನಂಬುವುದಿಲ್ಲ," ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆಯೇ ಈ ವೇಳೆಯೇ, "ತಾಲಿಬಾನ್‌ ಅಫ್ಘಾನಿಸ್ತಾನ ಜನರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಮುಂದಾಗುವುದಾದರೆ, ತಾಲಿಬಾನಿಗರಿಗೆ ಹೆಚ್ಚಿನ ಸಹಾಯ ನೆರೆಯ ದೇಶಗಳಿಂದ ಬೇಕಾಗುತ್ತದೆ. ಅದು ಆರ್ಥಿಕ ಸಹಕಾರ, ವ್ಯವಹಾರಕ್ಕೆ ಸಂಬಂಧಿಸಿದ ಸಹಕಾರ ಹಾಗೂ ಇನ್ನು ಕೆಲವು ವಿಷಯದಲ್ಲಿ ತಾಲಿಬಾನ್‌ಗೆ ಸಹಕಾರ ಬೇಕಾಗುತ್ತದೆ," ಎಂದು ತಿಳಿಸಿದ್ದಾರೆ.

ಬೈಡನ್ ವಿರುದ್ಧ ರೊಚ್ಚಿಗೆದ್ದ ಟ್ರಂಪ್..! ಮತ್ತೊಮ್ಮೆ ಟ್ರಂಪ್‌ಗೆ ಅಧ್ಯಕ್ಷ ಪಟ್ಟ ಸಿಗುತ್ತಾ..?ಬೈಡನ್ ವಿರುದ್ಧ ರೊಚ್ಚಿಗೆದ್ದ ಟ್ರಂಪ್..! ಮತ್ತೊಮ್ಮೆ ಟ್ರಂಪ್‌ಗೆ ಅಧ್ಯಕ್ಷ ಪಟ್ಟ ಸಿಗುತ್ತಾ..?

ಸುಮಾರು ಎರಡು ದಶಕಗಳಿಂದ ಅಫ್ಘಾನಿಸ್ತಾನದಲ್ಲಿ ನಿಯೋಜನೆ ಮಾಡಿದ್ದ ತನ್ನ ಸೇನೆಯನ್ನು ಅಮೆರಿಕ ಹಿಂದೆಗೆದುಕೊಳ್ಳುವ ನಿರ್ಧಾರವನ್ನು ಮಾಡಿತ್ತು. ಈ ನಿರ್ಧಾರದ ಘೋಷಣೆಯನ್ನು ಜೋ ಬೈಡನ್‌ ಮಾಡಿದ್ದರು. ಆದರೆ ಈ ನಿರ್ಧಾರಕ್ಕೆ ಮೊದಲು ನಾಂದಿ ಹಾಡಿದ್ದು ಈ ಹಿಂದಿನ ಅಮೆರಿಕ ಅ‌ಧ್ಯಕ್ಷ ಡೊನಾಲ್ಡ್‌ ಟ್ರಂಪ್‌. ಈ ಹಿಂದೆ ಡೊನಾಲ್ಡ್‌ ಟ್ರಂಪ್‌ ತಾಲಿಬಾನ್‌ ಜೊತೆ ಒಪ್ಪಂದವೊಂದನ್ನು ಮಾಡಿದ್ದು, ಈ ಒಪ್ಪಂದದಲ್ಲಿ ತಾಲಿಬಾನ್‌ ಅಫ್ಘಾನಿಸ್ತಾನಕ್ಕೆ ಯಾವುದೇ ಭಯೋತ್ಪಾದನೆ ದಾಳಿ ನಡೆಸಲಾಗುವುದಿಲ್ಲ, ಶಾಂತಿ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು. ಈ ಭರವಸೆಯ ಹಿನ್ನೆಲೆ ಅಫ್ಘಾನಿಸ್ತಾನದಿಂದ ಯುಎಸ್‌ ತನ್ನ ಸೇನೆಯನ್ನು ಹಿಂಪಡೆದಿದ್ದು, ಆದರೆ ತಾಲಿಬಾನ್‌ ದಾಳಿ ನಡೆಸಿ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

 ನಾನು ಯಾರನ್ನೂ ನಂಬಲ್ಲ ಎಂದ ಬೈಡನ್‌

ನಾನು ಯಾರನ್ನೂ ನಂಬಲ್ಲ ಎಂದ ಬೈಡನ್‌

"ನಾನು ಯಾರನ್ನೂ ನಂಬುವುದಿಲ್ಲ. ತಾಲಿಬಾನ್‌ ಮೂಲಭೂತವಾದ ನಿರ್ಧಾರವನ್ನು ಕೈಗೊಂಡಿದೆ. ತಾಲಿಬಾನ್‌ ಏಕತೆಯಿಂದ ಇರಲು ಹಾಗೂ ಅಫ್ಘಾನಿಸ್ತಾನದ ಜನರನ್ನು ಸಮತೋಲನ ಜೀವನ ನಡೆಸಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುವ ಯತ್ನವನ್ನು ಮಾಡಲಿದೆಯೇ? ಯಾವುದೇ ಒಂದು ಗುಂಪು ಅಫ್ಘಾನಿಸ್ತಾನದಲ್ಲಿ ಕಳೆದ 100 ವರ್ಷದಲ್ಲಿ ಮಾಡದ ಕಾರ್ಯವನ್ನು ತಾಲಿಬಾನ್‌ ಮಾಡಲಿದಿಯೇ?," ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಪ್ರಶ್ನಿಸಿದರು. "ತಾಲಿಬಾನ್‌ ಹಾಗೆ ಮಾಡುವುದಾದರೆ ಅದಕ್ಕೆ ಹಲವಾರು ಸಹಾಯಗಳು ಬೇಕಾಗುತ್ತದೆ. ಆರ್ಥಿಕ ಸಹಾಯ, ವ್ಯಾಪಾರದ ಮೂಲಕ ಸಹಾಯ ಹಾಗೂ ಹಲವಾರು ರೀತಿಯ ಸಹಾಯ ತಾಲಿಬಾನ್‌ಗೆ ಬೇಕಾಗುತ್ತದೆ," ಎಂದು ಕೂಡಾ ಬೈಡೆನ್‌ ನೀವು ತಾಲಿಬಾನ್‌ ಅನ್ನು ನಂಬುತ್ತೀರಿಯೇ ಎಂದು ಮಾಧ್ಯಮ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಉಲ್ಲೇಖ ಮಾಡಿದರು.

 ತಾಲಿಬಾನ್‌ ಭರವಸೆ ನಿಜವೇ?

ತಾಲಿಬಾನ್‌ ಭರವಸೆ ನಿಜವೇ?

"ತಾಲಿಬಾನ್‌ ಈಗ ಶಾಂತಿ ಕಾಪಾಡುವ, ರಾಷ್ಟ್ರ ಮುನ್ನಡೆಸುವ ಬಗ್ಗೆ ಭರವಸೆಯನ್ನು ನೀಡುತ್ತಿದೆ. ಆದರೆ ಅವರು ನಿಜವಾಗಿಯೂ ಮಾಡುತ್ತಾರೆಯೇ ಇಲ್ಲವೇ ಗೊತ್ತಿಲ್ಲ. ಬೇರೆ ದೇಶಗಳಿಂದ ತಾಲಿಬಾನಿಗರನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಕಾನೂನು ಸಮ್ಮತಿಯನ್ನು ಪಡೆಯಲು ತಾಲಿಬಾನಿಗರು ಬಯಸುತ್ತಿದ್ದಾರೆ. ನಮಗೆ ಹಾಗೂ ಇತರ ದೇಶಗಳು ಅಫ್ಘಾನಿಸ್ತಾನದಿಂದ ತಮ್ಮ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳದಂತೆ ಹಾಗೂ ನಾವು ಸೇರಿದಂತೆ ಬೇರೆ ದೇಶಗಳು ತಮ್ಮ ರಾಜತಾಂತ್ರಿಕತ್ವವನ್ನು ಅಫ್ಘಾನಿಸ್ತಾನದಿಂದ ಹಿಂಪಡೆಯುವುದನ್ನು ನಾವು ಬಯಸಲ್ಲ ಎಂದು ತಾಲಿಬಾನಿಗರು ಹೇಳಿದ್ದಾರೆ. ಈವರೆಗೆ ತಾಲಿಬಾನ್‌ ಯುಎಸ್‌ ಸೈನ್ಯದ ವಿರುದ್ದ ಕ್ರಮಗೊಂಡಿಲ್ಲ ಎಂಬ ಮಾತುಗಳು ಈಗ ಬರುತ್ತಿದೆ," ಎಂದು ಕೂಡಾ ಬೈಡನ್‌ ಹೇಳಿದ್ದಾರೆ.

ಅಫ್ಘಾನಿಸ್ತಾನ ತಾಲಿಬಾನ್ ಹಿಡಿತದಲ್ಲಿದ್ದರೂ ಅಮೆರಿಕಕ್ಕೆ ಬೆದರಿಕೆ: ಬೈಡನ್ಅಫ್ಘಾನಿಸ್ತಾನ ತಾಲಿಬಾನ್ ಹಿಡಿತದಲ್ಲಿದ್ದರೂ ಅಮೆರಿಕಕ್ಕೆ ಬೆದರಿಕೆ: ಬೈಡನ್

 ಯುಎಸ್‌ ಸೈನದ ಸಹಾಯದಿಂದ ರಕ್ಷಣೆ ಕಾರ್ಯ

ಯುಎಸ್‌ ಸೈನದ ಸಹಾಯದಿಂದ ರಕ್ಷಣೆ ಕಾರ್ಯ

ಕಾಬೂಲ್‌ ವಿಮಾನ ನಿಲ್ದಾಣದಿಂದ ಯುಎಸ್‌ ಪಡೆಯ ಸುರಕ್ಷತೆಯ ಮೂಲಕ ರಾಷ್ಟ್ರಗಳು ತಮ್ಮ ಜನರನ್ನು ವಾಪಾಸ್‌ ಕರೆಸಿಕೊಳ್ಳುತ್ತಿರುವ ವಿಚಾರದಲ್ಲಿ ಈ ಮಾತುಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆಡಿದ್ದಾರೆ. ಅಶ್ರಫ್‌ ಘನಿ ದೇಶ ಬಿಟ್ಟು ಪಲಾಯನವಾದ ಹಿನ್ನೆಲೆ ಅಫ್ಘಾನ್‌ ಸರ್ಕಾರ ಕುಸಿದ ಬೆನ್ನಲ್ಲೇ ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದುಕೊಂಡಿದ್ದು ಈ ನಂತರ ಹಲವಾರು ರಾಷ್ಟ್ರಗಳು ಅಫ್ಘಾನಿಸ್ತಾನದಿಂದ ತಮ್ಮ ರಾಯಭಾರಿ ಸೇರಿದಂತೆ ಹಲವಾರು ಮಂದಿಯನ್ನು ವಾಪಾಸ್‌ ಕರೆಸಿಕೊಳ್ಳುತ್ತಿದೆ. ಹಾಗೆಯೇ ಅಫ್ಘಾನಿಸ್ತಾನದಲ್ಲಿರುವ ಜನರು ಕೂಡಾ ಬೇರೆ ದೇಶಗಳಿಗೆ ತೆರಳುತ್ತಿದ್ದಾರೆ. ಆಗಸ್ಟ್‌ 14 ರಿಂದ ಯುಎಸ್‌ ಮಿಲಿಟರಿಯು ಸುಮಾರು 25,100 ಜನರನ್ನು ಅಫ್ಘಾನಿಸ್ತಾನದಿಂದ ಕರೆ ತಂದಿದೆ. ಹಾಗೆಯೇ ಜುಲೈ ಅಂತ್ಯದಿಂದ ಈವರೆಗೆ ಸುಮಾರು 30,000 ಜನರನ್ನು ಯುಎಸ್‌ ಮಿಲಿಟರಿಯು ವಾಪಾಸ್‌ ಕರೆಸಿಕೊಂಡಿದೆ. ಆಗಸ್ಟ್‌ 31 ರ ವರೆಗೆ ವಾಪಾಸ್‌ ಕರೆಸಿಕೊಳ್ಳುವ ಕಾರ್ಯ ನಡೆಯಲಿದೆ. ಇನ್ನು ಶುಕ್ರವಾರ ಈ ವಾಪಾಸ್‌ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ "ಇತಿಹಾಸದಲ್ಲೇ ಅತ್ಯಂತ ಕಷ್ಟದ ಕಾರ್ಯ," ಎಂದು ಹೇಳಿದ್ದರು. ಹಾಗೆಯೇ ಅಫ್ಘಾನಿಸ್ತಾನದಿಂದ ಎಲ್ಲಾ ಅಮೆರಿಕಕರನ್ನು ಹಾಗೂ ಮಿತ್ರ ದೇಶಗಳ ಜನರನ್ನು ವಾಪಾಸ್‌ ಕರೆದು ತರಲಾಗುವುದು ಎಂದು ಭರವಸೆಯನ್ನೂ ನೀಡಿದ್ದರು.

'ತಾಲಿಬಾನ್‌ ವಿರುದ್ದ ತಾಯ್ನಾಡಿಗಾಗಿ ಹೋರಾಡಿ': ಅಫ್ಘಾನ್‌ ನಾಯಕರಲ್ಲಿ ಬೈಡನ್‌ ಒತ್ತಾಯ'ತಾಲಿಬಾನ್‌ ವಿರುದ್ದ ತಾಯ್ನಾಡಿಗಾಗಿ ಹೋರಾಡಿ': ಅಫ್ಘಾನ್‌ ನಾಯಕರಲ್ಲಿ ಬೈಡನ್‌ ಒತ್ತಾಯ

 ತಾಲಿಬಾನ್‌ ಜೊತೆ ಟ್ರಂಪ್‌ ಒಪ್ಪಂದಕ್ಕೆ ಅಫ್ಘಾನ್‌ ಜನರು ಬಲಿ

ತಾಲಿಬಾನ್‌ ಜೊತೆ ಟ್ರಂಪ್‌ ಒಪ್ಪಂದಕ್ಕೆ ಅಫ್ಘಾನ್‌ ಜನರು ಬಲಿ

ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಅಮೆರಿಕ ಹಾಲಿ ಅಧ್ಯಕ್ಷ ಜೋ ಬೈಡನ್‌ ಈ ಬಗ್ಗೆ ಒಪ್ಪಂದವನ್ನು ಮಾಡಿಕೊಂಡಿದ್ದು ಈ ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ನಾನು ಅದನ್ನು ಮುಂದುವರಿಸಬೇಕಾದ ಪರಿಸ್ಥಿತಿ ಬಂದೊದಗಿತು ಎಂದು ಹೇಳಿಕೊಂಡಿದ್ದಾರೆ. ಟ್ರಂಪ್‌ ತನ್ನ ಅಧಿಕರಾವಧಿ ಪ್ರಾರಂಭ ಮಾಡಿದ್ದ ಆರಂಭದಲ್ಲೇ ಅಫ್ಘಾನಿಸ್ತಾನದಲ್ಲಿ ಎರಡು ದಶಕಗಳಿಂದ ನಿಯೋಜಿಸಲಾಗಿರುವ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿರ್ಧಾರದ ಬಗ್ಗೆ ಬಹಳ ಪಾರದರ್ಶಕವಾಗಿದ್ದರು. ಈ 20 ವರ್ಷಗಳ ಯುದ್ಧದ ಇತಿಹಾಸದ ಬಗ್ಗೆ ಉಲ್ಲೇಖ ಮಾಡಿದ ಬಗ್ಗೆ ಜಾರ್ಜ್ಟೌನ್ ಪ್ರಾಧ್ಯಾಪಕ ಪಾಲ್ ಮಿಲ್ಲರ್‌, "ಈ ಯುದ್ಧದ ಬಗ್ಗೆ ಟ್ರಂಪ್‌ಗೆ ಯಾವುದೇ ಒಂದು ಸರಿಯಾದ ವಿಷಯವೇ ತಿಳಿದಿಲ್ಲ ಮತ್ತು ಅಫ್ಘಾನಿಸ್ತಾನದಲ್ಲಿ ಯುಎಸ್‌ ಸೇನೆ ಯಾಕೆ ಉಳಿಯಬೇಕು ಎಂಬ ಬಗ್ಗೆ ನಿಖರ ಮಾಹಿತಿ ಟ್ರಂಪ್‌ಗೆ ಇರಲಿಲ್ಲ. ಹೀಗಾಗಿ ಈ ಹಿಂದೆ ಯಾರೂ ಕೈಗೊಂಡಿರದ ನಿರ್ಧಾರವನ್ನು ಟ್ರಂಪ್‌ ಕೈಗೊಂಡಿದ್ದಾರೆ," ಎಂದು ಟ್ರಂಪ್‌ ಅನ್ನು ಟೀಕೆ ಮಾಡುತ್ತಾರೆ.

ಇನ್ನು ತಾಲಿಬಾನ್‌ ಜೊತೆ ಟ್ರಂಪ್‌ 18 ತಿಂಗಳಿನಲ್ಲಿ 9 ಹಂತಗಳ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ. 9/11 ಘಟನೆಯ ವರ್ಷದ ಮುನ್ನಾದಿನದಂದು ಟ್ರಂಪ್‌ ರಹಸ್ಯವಾಗಿ ತಾಲಿಬಾನ್‌ ಅನ್ನು ಆಹ್ವಾನಿಸಿದ್ದರು ಎಂಬ ಮಾತುಗಳು ಕೂಡಾ ಇದೆ. ಆದರೆ ಈ ಎಲ್ಲಾ ವಿಚಾರವನ್ನು ಟ್ರಂಪ್‌ ಆ ಸಂದರ್ಭದಲ್ಲಿ ಮುಚ್ಚಿ ಹಾಕಿದರು. ಆ ಬಳಿಕ ಅಫ್ಘಾನಿಸ್ತಾನದಲ್ಲಿ ತನ್ನ ದೇಶದ ಸೈನಿಕರನ್ನು ಹತ್ಯೆ ಮಾಡಲಾಗುತ್ತಿದೆ ಎಂಬ ಕಾರಣ ನೀಡಿ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿರ್ಧಾರವನ್ನು ಟ್ರಂಪ್‌ ಮಾಡಿದರು. ಇದರಂತೆ ತಾಲಿಬಾನ್‌ ಜೊತೆಯಲ್ಲಿ ಒಪ್ಪಂದವನ್ನು ಕೂಡಾ ಟ್ರಂಪ್‌ ಮಾಡಿಕೊಂಡರು. ಈ ಒಪ್ಪಂದದಲ್ಲಿ ತಾಲಿಬಾನ್‌ ಅಫ್ಘಾನಿಸ್ತಾನದ ಮೇಲೆ ಭಯೋತ್ಪಾದಕ ದಾಳಿ ನಡೆಸಲಾರೆವು ಎಂದು ಭರವಸೆ ನೀಡಿದೆ. ಹಾಗೆಯೇ ಅಫ್ಘಾನಿಸ್ತಾನ ಸರ್ಕಾರದೊಂದಿಗೆ ಶಾಂತಿಯುತ ಮಾತುಕತೆ ನಡೆಸುವುದಾಗಿಯೂ ತಾಲಿಬಾನ್ ಹೇಳಿದೆ. ಆದರೆ ಈ ಎಲ್ಲಾ ಒಪ್ಪಂದ ಮುರಿದು ಅಫ್ಘಾನಿಸ್ತಾನದಿಂದ ಯುಎಸ್‌ ತನ್ನ ಸೇನೆ ಹಿಂಪಡೆಯುತ್ತಿದ್ದಂತೆಯೇ ತಾಲಿಬಾನ್‌ ಅಫ್ಘಾನಿಸ್ತಾನಕ್ಕೆ ದಾಳಿ ನಡೆಸಿ ತನ್ನ ವಶಕ್ಕೆ ಪಡೆದುಕೊಂಡಿದೆ.

(ಒನ್‌ ಇಂಡಿಯಾ ಸುದ್ದಿ)

English summary
US President Joe Biden, said that "I don't trust anybody" when asked whether he believes the Taliban or not.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X