• search
  • Live TV
keyboard_backspace

ಇಂದಿನಿಂದ (ಅ.28) ಹತ್ತು ದಿನಗಳ ಕಾಲ ಹಾಸನಾಂಬ ದೇವಾಲಯ ಬಾಗಿಲು ಓಪನ್

By ಹಾಸನ ಪ್ರತಿನಿಧಿ
Google Oneindia Kannada News

ಹಾಸನ , ಅಕ್ಟೋಬರ್ 28: ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಹಾಸನಾಂಬ ದೇವಿ ದೇವಾಲಯದ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದ್ದು, ಎರಡು ವರ್ಷದ ಬಳಿಕ ಸಾರ್ವಜನಿಕರಿಗೆ ದರ್ಶನ ಭಾಗ್ಯ ಸಿಗಲಿದೆ.

ವರ್ಷದಿಂದ ದೀಪ ಬೆಳಗುತ್ತಲೇ ಇರುವುದು ಹಾಸನಾಂಬೆ ದೇವಿಯ ಪವಾಡವಾಗಿದೆ. ಆಶ್ವೀಜ ಮಾಸದ ಮೊದಲ ಗುರುವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ ಬಾಗಿಲು ತೆರೆಯಲಿದ್ದು, ಶಕ್ತಿದೇವತೆ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

ವರ್ಷಕೊಮ್ಮೆ ಮಾತ್ರ ಭಕ್ತರಿಗೆ ಈ ದೇವಿ ದರ್ಶನ ಭಾಗ್ಯ ನೀಡಲಿದ್ದು, ಈ ಬಾರಿ 10 ದಿನಗಳ ಕಾಲ ದೇವಾಲಯದ ಬಾಗಿಲು ತೆರಯಲಿದ್ದು, ಎಂಟು ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಸನ ಜಿಲ್ಲಾಡಳಿತ ಜಾತ್ರಾ ಮಹೋತ್ಸವ ನಡೆಸಲು ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

 ಗುರುವಾರ 12 ಗಂಟೆಗೆ ವಿದ್ಯುಕ್ತವಾಗಿ ಚಾಲನೆ

ಗುರುವಾರ 12 ಗಂಟೆಗೆ ವಿದ್ಯುಕ್ತವಾಗಿ ಚಾಲನೆ

ನಾಡಿನ ಶಕ್ತಿ ದೇವತೆಗಳ ದೇವಾಲಯಗಳಲ್ಲಿ ಒಂದಾಗಿರುವ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲು ಗುರುವಾರ 12 ಗಂಟೆಗೆ ವಿದ್ಯುಕ್ತವಾಗಿ ಚಾಲನೆ ಸಿಗಲಿದೆ. ಕಳೆದ ಬಾರಿ ಕೋವಿಡ್ ಹಿನ್ನಲೆ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ಹೇರಿದ್ದ ಹಾಸನ ಜಿಲ್ಲಾಡಳಿತ ಈ ಬಾರಿಯೂ ಅದೇ ನಿಯಮವನ್ನು ಪಾಲಿಸಲು ಯೋಜಿಸಿತ್ತು.

ಆದರೆ ಸ್ಥಳೀಯರು ಮತ್ತು ವಿವಿಧ ಸಂಘಟನೆಗಳ ಒತ್ತಾಯಕ್ಕೆ ಮಣಿದು ಷರತ್ತುಬದ್ಧ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ದೇವಾಲಯದ ಆವರಣವನ್ನು ಫಲ, ಪುಷ್ಪಗಳಿಂದ ಭರ್ಜರಿಯಾಗಿ ಸಿಂಗರಿಸಲಾಗಿದೆ. ದೇವಾಲಯದ ಮುಂಭಾಗ, ಸುತ್ತಮುತ್ತ ಮತ್ತು ನಗರದ ತುಂಬೆಲ್ಲಾ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.

 ಶೀಘ್ರ ದರ್ಶನಕ್ಕಾಗಿ 300 ರೂ. ಮತ್ತು 1000 ರೂ.ಗಳ ಟಿಕೆಟ್

ಶೀಘ್ರ ದರ್ಶನಕ್ಕಾಗಿ 300 ರೂ. ಮತ್ತು 1000 ರೂ.ಗಳ ಟಿಕೆಟ್

ಸಾರ್ವಜನಿಕ ದರ್ಶನಕ್ಕೆ ತೊಂದರೆ ಆಗದಂತೆ ಸರತಿ ಸಾಲಿನಲ್ಲಿ ಬರಲು ಬ್ಯಾರೀಕೇಡ್‌ಗಳನ್ನು ನಿರ್ಮಿಲಾಗಿದ್ದು, ಶೀಘ್ರ ದರ್ಶನಕ್ಕಾಗಿ 300 ರೂ. ಮತ್ತು 1000 ರೂ.ಗಳ ಟಿಕೆಟ್ ವ್ಯವಸ್ಥೆಯನ್ನು ಮಾಡಲಾಗಿದೆ. ದರ್ಶನಕ್ಕೆ ಬರುವ ಭಕ್ತರಿಗೆ ಕೋವಿಡ್ ವ್ಯಾಕ್ಸಿನ್ ಕಡ್ಡಾಯಗೊಳಿಸಿರುವ ಜಿಲ್ಲಾಡಳಿತ ವ್ಯಾಕ್ಸಿನ್ ಪಡೆದ ದೃಢೀಕರಣ ಪತ್ರವನ್ನು ಮತ್ತು ಗುರುತಿನ ಚೀಟಿಯನ್ನು ತಂದರೆ ಮಾತ್ರ ಪ್ರವೇಶವೆಂದು ಆದೇಶಿಸಿದೆ.

ಗುರುವಾರ 12 ಗಂಟೆ ಸುಮಾರಿಗೆ ದೇವಾಲಯದ ಬಾಗಿಲನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಜಿಲ್ಲಾಧಿಕಾರಿ ಆರ್. ಗಿರೀಶ್ ಮತ್ತಿತರ ಗಣ್ಯರ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಇದಕ್ಕೆ ಹಾಸನ ಜಿಲ್ಲಾಡಳಿತ ಸಕಲ‌ ಸಿದ್ಧತೆ ಮಾಡಿಕೊಂಡಿದೆ. ಇಂದಿನಿಂದ ನವೆಂಬರ್ ೬ ರವರೆಗೂ ಹಾಸನಾಂಬ ಜಾತ್ರಾ ಮಹೋತ್ಸವ ಹತ್ತು ದಿನಗಳು ನಡೆಯಲಿದ್ದು, ಇಂದು ಮತ್ತು ಕೊನೆಯ ದಿನ ಪೂಜಾ ಕೈಂಕರ್ಯಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಭಕ್ತರಿಗೆ ದರ್ಶನದ ಅವಕಾಶವಿರುವುದಿಲ್ಲ.

 ಮುಂದಿನ ಬಾರಿ ದರ್ಶನದ ವೇಳೆಗೆ ಹರಕೆ ಈಡೇರಿಕೆ

ಮುಂದಿನ ಬಾರಿ ದರ್ಶನದ ವೇಳೆಗೆ ಹರಕೆ ಈಡೇರಿಕೆ

ಇನ್ನು ಇಷ್ಟಾರ್ಥ ಈಡೇರಿಕೆಗಾಗಿ ದೇವಿ ಮೊರೆ ಹೋಗುವ ಭಕ್ತರು ಇಲ್ಲಿ ಬಂದು ಹರಕೆ ಮಾಡಿಕೊಂಡು ಹೋದರೆ ಮುಂದಿನ ಬಾರಿ ದರ್ಶನದ ವೇಳೆಗೆ ಖಂಡಿತಾ ಕೆಲಸ ನೆರವೇರುತ್ತದೆ ಎಂಬ ನಂಬಿಕೆಯಿಂದಲೇ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕಾಗಿ ಪ್ರತಿ ವರ್ಷವೂ ನಾನಾ ಭಾಗಗಳಿಂದ ಆಗಮಿಸುತ್ತಾರೆ.

ಕಳೆದ ಬಾರಿ ಕೋವಿಡ್ ಹಿನ್ನಲೆ‌ ದೇವಿ ದರ್ಶನ ಸಾಧ್ಯವಾಗಿರಲಿಲ್ಲ ಈ ಬಾರಿ ದರ್ಶನಕ್ಕೆ ಅವಕಾಶ ಕೊಟ್ಟಿರುವುದು ನಮಗೆ ತುಂಬಾ ಸಂತೋಷವಾಗಿದೆ. ನಾಡಿನೆಲ್ಲೆಡೆಯಿಂದ ಬರುವ ಭಕ್ತರ ಸಂಕಷ್ಟ ಪರಿಹಾರವಾಗಿ ಕೋವಿಡ್ ಸಮಸ್ಯೆ ದೂರವಾಗಲಿ ಎಂದು ಭಕ್ತರೊಬ್ಬರು ಹಾರೈಸಿದ್ದಾರೆ.

 ದೇವಿಯ ಪವಾಡದಿಂದ ಬೆಳಗುತ್ತಲ್ಲೇ ಇರುತ್ತದೆ ದೀಪ

ದೇವಿಯ ಪವಾಡದಿಂದ ಬೆಳಗುತ್ತಲ್ಲೇ ಇರುತ್ತದೆ ದೀಪ

ವರ್ಷಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ದೇವಿ ಸಾಕಷ್ಟು ಪವಾಡಗಳನ್ನು ಸೃಷ್ಟಿಸಿದ್ದಾಳೆ. ಭಕ್ತರ ಬೇಡಿಕೆ ಈಡೇರಿಸುವ ತಾಯಿ, ತನ್ನ ದೇವಾಲಯದಲ್ಲೂ ಪವಾಡ ಸೃಷ್ಟಿಸಿ ಭಕ್ತರನ್ನು ಉಬ್ಬೆರುವಂತೆ ಮಾಡಿದ್ದಾಳೆ. ಬಾಗಿಲು ಹಾಕಿದ ದಿನ ಹಚ್ಚಿದ ದೀಪ ಮುಂದಿನ ವರ್ಷ ಬಾಗಿಲು ತೆರೆಯುವರೆಗೂ ಕೂಡ ದೀಪ ಬೆಳಗುತ್ತಲ್ಲೇ ಇರುತ್ತದೆ. ಇದು ಅಚ್ಚರಿ ಆದರೂ ಸತ್ಯ.

ಇನ್ನು ದೇವಸ್ಥಾನದಲ್ಲಿ ಈ ವರ್ಷ ಇಟ್ಟಿದ್ದ ನೈವೆಧ್ಯ ಬಾಗಿಲು ತೆರೆದಾಗ ಹಾಗೇ ಇರುತ್ತದೆ ಅನ್ನುವುದು ಆಡಳಿತ ಮಂಡಳಿ ಹಾಗೂ ಭಕ್ತರ ನಂಬಿಕೆ ಯಾಗಿದೆ. ಒಟ್ಟಾರೆ ಗುರುವಾರ ಮಧ್ಯಾಹ್ನ ವಿದ್ಯುಕ್ತವಾಗಿ ದೇವಾಲಯ ಬಾಗಿಲು ತೆರೆದು, ಭಕ್ತರಿಗೆ ದೇವಿಯ ದರ್ಶನಕ್ಕೆ ಷರತ್ತು ಬದ್ಧ ಅವಕಾಶವನ್ನು ಹಾಸನ ಜಿಲ್ಲಾಡಳಿತ ನೀಡಿದ್ದು, ಭಕ್ತಗಣ ಸಜ್ಜಾಗಿದೆ. ಎರಡು ವರ್ಷಗಳಿಂದ ಕೊರೊನಾ ನಡುವೆ ದೇವಿ ದರ್ಶನ ಪಡೆಯಲಾಗದೇ ಈ ಬಾರಿಯ ದರ್ಶನಕ್ಕೆ ಕಾತುರರಾಗಿ ಕಾಯುತ್ತಿದ್ದಾರೆ.

English summary
Hasanamba Fair 2021: The doors of the Hasanamba Temple will be opened on Thursday at 12pm (October 28).
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X