Vishwakarma Puja 2023: ವಿಶ್ವಕರ್ಮ ಯಾರು? ಜಗತ್ತಿನ ಶ್ರೇಷ್ಠ ಇಂಜಿನಿಯರ್ ಬಗ್ಗೆ ನಿಮಗೆಷ್ಟು ಗೊತ್ತು?
ವಿಶ್ವಕರ್ಮ ಪೂಜೆಯನ್ನು ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತದೆ. ಈ ದಿನ ಸೂರ್ಯನು ಸಿಂಹರಾಶಿಯಿಂದ ಹೊರಬಂದು ಕನ್ಯಾರಾಶಿಗೆ ಸಾಗುತ್ತಾನೆ. ಪ್ರತಿ ವರ್ಷ ಕನ್ಯಾ ಸಂಕ್ರಾಂತಿಯಂದು ವಿಶ್ವಕರ್ಮ ಪೂಜೆ ನಡೆಯುತ್ತದೆ. ಇದನ್ನು ವಿಶ್ವಕರ್ಮ ಜಯಂತಿ ಎಂದೂ ಕರೆಯುತ್ತಾರೆ.
ಈ ದಿನದಂದು ಜನರು ಕಬ್ಬಿಣ, ಮರ, ಮನೆಯ ಇನ್ನಿತರ ವಸ್ತುಗಳು ಮತ್ತು ಯಂತ್ರೋಪಕರಣಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಅವುಗಳನ್ನು ಪೂಜಿಸುತ್ತಾರೆ. ಅಷ್ಟಕ್ಕೂ ವಿಶ್ವಕರ್ಮ ಯಾರು? ಇವರನ್ನು ಯಾಕೆ ಪೂಜಿಸಲಾಗುತ್ತದೆ? ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

ಶುಭ ಸಮಯ
ಈ ಬಾರಿ ವಿಶ್ವಕರ್ಮ ಜಯಂತಿ ಸೆ.17ರ ಭಾನುವಾರದಂದು ಆಚರಿಸಲಾಗುತ್ತದೆ. ಶುಭ ಮುಹೂರ್ತವು ಬೆಳಿಗ್ಗೆ 07:50 ರಿಂದ ಮಧ್ಯಾಹ್ನ 12:26 ರವರೆಗೆ ಇರುತ್ತದೆ. ಜೊತೆಗೆ ಭಗವಂತ ವಿಶ್ವಕರ್ಮನನ್ನು ಮಧ್ಯಾಹ್ನ 1:58 ರಿಂದ 3:30 ರವರೆಗೆ ಪೂಜಿಸಬಹುದು.
ವಿಶ್ವಕರ್ಮ ಜಯಂತಿ
ವಿಶ್ವಕರ್ಮನು ದೇವತೆಗಳಿಗೆ ಅರಮನೆಗಳು, ಆಯುಧಗಳು ಮತ್ತು ಕಟ್ಟಡಗಳನ್ನು ನಿರ್ಮಿಸಿದನೆಂದು ನಂಬಲಾಗಿದೆ. ಅದಕ್ಕಾಗಿಯೇ ವಿಶ್ವಕರ್ಮ ಜಯಂತಿಯ ದಿನದಂದು ಉಪಕರಣಗಳು, ಯಂತ್ರಗಳು, ಆಯುಧಗಳು ಮತ್ತು ಕಬ್ಬಿಣವನ್ನು ಪೂಜಿಸಲಾಗುತ್ತದೆ.
ಸೃಷ್ಟಿಯ ದೇವರು ವಿಶ್ವಕರ್ಮ
ಭಗವಂತ ವಿಶ್ವಕರ್ಮ ಬ್ರಹ್ಮಾಂಡದ ಸೃಷ್ಟಿಕರ್ತ ಬ್ರಹ್ಮನ ಏಳನೇ ಮಗ ಎಂದು ನಂಬಲಾಗಿದೆ. ವಿಶ್ವಕರ್ಮರನ್ನು ನಿರ್ಮಾಣದ ದೇವರು ಎಂದು ಪರಿಗಣಿಸಲಾಗಿದೆ. ರಾವಣನಿಗಾಗಿ ಲಂಕೆಯನ್ನು, ಪಾಂಡವರಿಗೆ ಇಂದ್ರಪ್ರಸ್ಥವನ್ನು ಮತ್ತು ಶ್ರೀಕೃಷ್ಣನಿಗೆ ದ್ವಾರಕವನ್ನು ವಿಶ್ವಕರ್ಮನು ನಿರ್ಮಿಸಿದನು ಎಂದು ಹೇಳಲಾಗುತ್ತದೆ.
ಸುದರ್ಶನ ಚಕ್ರ ರಚನೆ
ಇದರೊಂದಿಗೆ ಯಮರಾಜನ ಕಾಲದಂಡ, ವಿಷ್ಣುವಿನ ಸುದರ್ಶನ ಚಕ್ರ, ಶಿವನ ತ್ರಿಶೂಲ, ಪುಷ್ಪಕ ವಿಮಾನ ಸೇರಿದಂತೆ ಹಲವು ಆಯುಧಗಳು ಹಾಗೂ ಪರಿಕರಗಳನ್ನು ವಿಶ್ವಕರ್ಮ ಸೃಷ್ಟಿಸಿದ.
ಉಪಕರಣಗಳ ದೇವರು
ಭಗವಂತ ವಿಶ್ವಕರ್ಮನನ್ನು ವಾದ್ಯಗಳು, ಉಪಕರಣಗಳು ಮತ್ತು ಸಲಕರಣೆಗಳ ದೇವರು ಎಂದು ಪರಿಗಣಿಸಲಾಗುತ್ತದೆ. ಅವನ ಐದು ಜನ ಮಕ್ಕಳು ಮನು, ಮೇ, ತ್ವಷ್ಟ, ಶಿಲ್ಪಿ ಮತ್ತು ದೈವಜ್ಞರಾಗಿದ್ದಾರೆ. ಈ ದಿನದಂದು ವಿಶ್ವಕರ್ಮ ದೇವರನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಜೊತೆಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ.
ವ್ಯಾಪಾರ ಅಥವಾ ನಿರ್ಮಾಣ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ಯಾವುದೇ ಅಡೆತಡೆಗಳಿರುವುದಿಲ್ಲ ಮತ್ತು ಎಲ್ಲಾ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ. ಈ ದಿನ ಸಲ್ಲಿಸುವ ಪೂಜೆ ಯಂತ್ರೋಪಕರಣಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಕೆಲಸವನ್ನು ಪೂರ್ಣಗೊಳಿಸುತ್ತದೆ.












Click it and Unblock the Notifications