ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹಕೆ ಯಾವ ತಡೆಆಸ್ತಿ ಅಂತಸ್ತು ಧನಕನಕ.

By Super
|
Google Oneindia Kannada News

ಪ್ರೇಮ ಕತೆಗಳಿಗೆ ಕೊನೆಯುಂಟೆರಾಧಾಮಾಧವರಿರೋ ತನಕಪ್ರೇಮ ಪ್ರವಾಹಕೆ ಯಾವ ತಡೆಆಸ್ತಿ ಅಂತಸ್ತು ಧನಕನಕ...ಹಾಗಂತ ಬಿ. ಆರ್‌. ಲಕ್ಷ್ಮಣ ರಾವ್‌ ಬರೆಯುವ ಹೊತ್ತಿಗಾಗಲೇ ಸಾವಿರಾರು ಪ್ರೇಮಗೀತೆಗಳ ಮಲ್ಲಿಗೆ ಕಂಪು ಎಲ್ಲ ಮನವನಗಳನ್ನು ಹಬ್ಬಿಯಾಗಿತ್ತು. ಇವತ್ತಿಗೂ ಎಲ್ಲರೂ ನೆನಪಿಸಿಕೊಳ್ಳುವ ಪ್ರೇಮಗೀತೆಗಳ ಸಂಖ್ಯೆ ನೂರಕ್ಕೂ ಹೆಚ್ಚಿದೆ.

ಬಿ. ಎಂ. ಶ್ರೀಯವರಿಂದ ಮೊದಲುಗೊಂಡು ಜಯಂತ ಕಾಯ್ಕಿಣಿಯವರ ತನಕ ಎಲ್ಲರೂ ಪ್ರೇಮ ಗೀತೆಗಳಿಗೆ ಮನಸೋತವರೇ.ಅಂಥ ಪ್ರೇಮ ಗೀತೆಗಳ ಮಂದಾರ, ಪ್ರಣಯದ ಮಲ್ಲಿಗೆ, ಪ್ರೀತಿಯ ಕನಕಾಂಬರವನ್ನು ಅಚ್ಚ ಕನ್ನಡದ ಅಕ್ಷರ ಮಾಲೆಯಲ್ಲಿ ಕಟ್ಟಿ ನಿಮ್ಮ ಮುಂದಿರಿಸುತ್ತಿದ್ದೇವೆ. ಅಕಾರಣ ಪ್ರೀತಿಗೆ ಜಯವಾಗಲಿ. ನುಡಿಯ ಮುಡಿಯೇರಿದ ಈ ಒಲವ ಪುಷ್ಪ ಮಾಲಿಕೆ ಎಲ್ಲ ಜೀವಗಳ ಕಾಯಲಿ.

ವ್ಯಾಲಂಟೈನ್‌ ಕವಿತೆಗಳು *ಅನ್ರಕ್ತ ಅದೃಷ್ಟ ಎಷ್ಟೋ ಹೊತ್ತು ಬರೀ ಸೂರ್ಯಕಾಂತಿ ಹೂವನೇ ನೋಡಿದ ಬಳಿಕ ಕಂಡ ಹಳದಿ ಚಿಟ್ಟೆ ಯಾತಕ್ಕೋ ಸರಕ್ಕನೆ ನೀನು ತಿರುಗಿದಾಗ ಕಂಡ ನುಣುಪು ಬಿಳಿ ಹೊಟ್ಟೆ . ಚಡಪಡಿಕೆ ಮುಸ್ಸಂಜೆ ಹೊತ್ತಲ್ಲಿ ಕಣ್ಣಿಂದ ಒಳತೂರಿದ ಚಿಟ್ಟೆ ನೀನು ಈ ನಡು ರಾತ್ರಿ ವೇಳೆ ಮೈತುಂಬಿ ಘಡಘಡಿಸುವೆ ಏನು ? ಕೂಡು ಮಾತು, ಕತೆ ಏನೂ ಬೇಡ ಸುಮ್ಮನೆ ಬಂದು ಕೂಡು ಚಲನೆ ಇಲ್ಲದೆಯೂ ಮಕರಂದ ಹೀರೊ ಚಿಟ್ಟೆಯನೊಮ್ಮೆ ನೋಡು. ದಣಿವು ಆಗಷ್ಟೆ ಮುಗಿದ ಕೂಟದ ದಣಿವಿಗೆ ಬೆವೆತು ಅಂಗಾತ ನೀನು ಒದ್ದೆ ಮೊಲೆತೊಟ್ಟಿನ ಮೇಲೆ ಕುಳಿತ ಧ್ಯಾನಸ್ಥ ಚಿಟ್ಟೆ ನಾನು. (ವಿಜಯ ಕರ್ನಾಟಕ)

English summary
Valentine Poems in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X