ಡಿ. 23 ವೈಕುಂಠ ಏಕಾದಶಿ: ವಿಷ್ಣುವಿನ ಕೃಪೆಗೆ ಪಾತ್ರರಾಗಲು ವೃತಾಚರಣೆ ಮಾಡುವುದು ಹೇಗೆ?
ವೈಕುಂಠ ಏಕಾದಶಿಯು ಹಿಂದೂ ಆಚರಣೆಯಲ್ಲಿ ಪವಿತ್ರವಾದ ದಿನವಾಗಿದೆ. ಈ ದಿನದಂದದು ಭಗವಾನ್ ಶ್ರೀವಿಷ್ಣುವನ್ನು ಪೂಜಿಸಲು ಮೀಸಲಾಗಿದೆ. ಈ ದಿನ ಭಕ್ತರು ಉಪವಾಸ ಮಾಡಿ, ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಅಲ್ಲಿಸಿ ದೇವರ ಆಶೀರ್ವಾದವನ್ನು ಪಡೆಯುತ್ತಾರೆ. ದಕ್ಷಿಣ ಭಾರತದ ಎಲ್ಲಾ ವಿಷ್ಣುವಿನ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯನ್ನು ಪ್ರಮುಖ ದಿನವಾಗಿ ಆಚರಿಸಲಾಗುತ್ತದೆ.
ಈ ಬಾರಿ ಡಿಸೆಂಬರ್ 23 ರಂದು ಶನಿವಾರದಂದು ವೈಕುಂಠ ಏಕಾದಶಿಯ ಉಪವಾಸ ಮಾಡಲಾಗುತ್ತಿದೆ. ಡಿಸೆಂಬರ್ 22ರಂದು ಆರಂಭವಾಗುವ ವೈಕುಂಠ ಏಕಾದಶಿಯ ಮೂಹರ್ತ ಡಿಸೆಂಬರ್ 23 ರಂದು ಅಂತ್ಯವಾಗುತ್ತದೆ. ಈ ಸಮಯದಲ್ಲಿ ಉಪವಾಸ ಆಚರಿಸಿ ಶ್ರೀವಿಷ್ಣುವಿನ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ.

ವೈಕುಂಠ ಏಕಾದಶಿಯ ಮಹತ್ವ
ಮಹತ್ವ ವೈಕುಂಠ ಏಕಾದಶಿಯು ಹಿಂದೂ ಧರ್ಮದಲ್ಲಿ ದೊಡ್ಡ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ದಿನವು ಸಂಪೂರ್ಣವಾಗಿ ವಿಷ್ಣುವಿಗೆ ಸಮರ್ಪಿತವಾಗಿರುತ್ತದೆ. ಈ ಏಕಾದಶಿಯನ್ನು ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ವಿಶೇಷವಾಗಿ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಅತ್ಯಂತ ವೈಭವದಿಂದ ಆಚರಿಸುತ್ತಾರೆ. ಅಂದು ಹೆಚ್ಚಿನ ಸಂಖ್ಯೆಯ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ವೆಂಕಟೇಶ್ವರನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಅದೃಷ್ಟ, ಸಮೃದ್ಧಿ ಹಾಗೂ ಸಂತೋಷದ ಸಂಕೇತನಾಗಿರುವ ವಿಷ್ಣುವನ್ನು ಆರಾಧಿಸಲು ವೈಕುಂಠ ಏಕಾದಶಿಯು ಮಹತ್ವದ ದಿನವಾಗಿದೆ. ಭಕ್ತರು ಈ ದಿನದಂದು ವಿಷ್ಣು ಸಹಸ್ರನಾಮ, ಶ್ರೀ ಹರಿ ಸ್ತೋತ್ರವನ್ನು ಪಠಿಸುತ್ತಾರೆ. ಅಲ್ಲದೇ ಶ್ರದ್ಧೆ ಹಾಗೂ ಭಕ್ತಯಿಂದ ಉಪವಾಸ ನಡೆಸುತ್ತಾರೆ. ಈ ದಿನ ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಪಡೆದವರು ನೇರವಾಗಿ ವೈಕುಂಠ ಧಾಮಕ್ಕೆ ಹೋಗುತ್ತಾರೆ ಎಂದು ನಂಬಲಾಗುತ್ತದೆ. ಅಲ್ಲದೇ ಅವರು ಜನನ ಮತ್ತು ಮರಣದ ಚಕ್ರದಿಂದ ವಿಮೋಚನೆಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

ವೈಕುಂಠ ಏಕಾದಶಿಯ ದಿನ ಏನು ಮಾಡಬೇಕು..?
1. ವೈಕುಂಠ ಏಕಾದಶಿಯ ದಿನ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಶುಭ್ರವಾದ ಬಟ್ಟೆಯನ್ನು ಧರಿಸಿಬೇಕು
2. ಬಳಿಕ ಮನೆ ಹಾಗೂ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿ ಮರದ ಹಲಗೆಯ ಮೇಲೆ ವಿಷ್ಣುವಿನ ವಿಗ್ರಹವನ್ನು ಇರಿಸಿ, ಅಲಂಕರಿಸಬೇಕು.
3. ವಿಷ್ಣುವಿನ ವಿಗ್ರಹದ ಬಳಿಕ ದೀಪವನ್ನು ಬೆಳಗಿಸಿ, ಹಳದಿ ಚಂದನ ಮತ್ತು ಕುಂಕುಮದೊಂದಿಗೆ ತಿಲಕವನ್ನು ಹಾಕಬೇಕು.
4. ವಿಷ್ಣು ಸಹಸ್ರನಾಮ ಮತ್ತು ಶ್ರೀ ಹರಿ ಸ್ತೋತ್ರಂ ಪಠಿಸಬೇಕು. ಓಂ ನಮೋ ಭಗವತೇ ವಾಸುದೇವಯೇ ಎಂದು 108 ಬಾರಿ ಜಪಿಸಬೇಕು.
5. ಭಕ್ತರು ಶ್ರೀ ಕೃಷ್ಣ ಮಹಾ ಮಂತ್ರವನ್ನು ಸಹ ಪಠಿಸಬಹುದು.
6. ಇನ್ನು ಸಂಜೆ ವೇಳೆ ಪ್ರಾರ್ಥನೆ ಸಲ್ಲಿಸಿ ವಿಷ್ಣು ಸಹಸ್ರನಾಮವನ್ನು ಪರಿಸಬೇಕು.
7. ಪೂಜಾ ಕೈ-ಕಾರ್ಯಗಳು ಮುಗಿದ ನಂತರ ಹಣ್ಣುಗಳನ್ನು ಸೇವಿಸಿ ಉಪವಾಸವನ್ನು ಮುಗಿಸಬಹುದು. ಅಲ್ಲದೇ ವೈಕುಂಠ ಏಕಾದಶಿಯ ದಿನ ಮನೆಯಲ್ಲಿ ಖೀರ್, ಹಲ್ವಾದಂತಹ ಸಿಹಿ ತಿಂಡಿಗಳನ್ನು ಮಾಡಿ ಹಂಚಬಹುದು.












Click it and Unblock the Notifications