• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಚ್ಮಂಡ್‌ನಲ್ಲಿ ಯುಗಾದಿ ‘ರಿಂಗುಣಿತ’

By Staff
|
  • ಶ್ರೀನಾಥ್‌ ಭಲ್ಲೆ

ತವರಿಂದ ದೂರಾಗಿ ಕಡಲಾಚೆ ನೆಲೆಸಿರುವ ರಿಚ್ಮಂಡ್‌ ನಗರದ ಕನ್ನಡಿಗರಿಗೆ ಯುಗಾದಿ ಸಂಭ್ರಮವನ್ನು ಉಣಬಡಿಸಿದ ಕೀರ್ತಿ, ರಿಚ್ಮಂಡ್‌ ಕನ್ನಡ ಸ0ಘಕ್ಕೆ ಸಲ್ಲುತ್ತದೆ. ಸಂಘಕ್ಕೆ ಅಕ್ಷರ ನಮನ ಸಲ್ಲಿಸುತ್ತಲೇ, ಯುಗಾದಿ ಕಾರ್ಯಕ್ರಮದ ವೈಭವವನ್ನು ಮೆಲುಕು ಹಾಕೋಣ.

ಏಪ್ರಿಲ್‌ 23ರ ಶನಿವಾರ ರಿಚ್ಮ0ಡ್‌ ನಗರದ ಕನ್ನಡಿಗರಿಗೆ ಬೆಚ್ಚನೆಯ ಕಾಣಿಕೆಯನ್ನು ನೀಡಿತ್ತು. ವರ್ಜೀನಿಯದ ಹಿಂದೂ ಸೆ0ಟರ್‌ನಲ್ಲಿ ಕನ್ನಡ ಸಂಘ ಆಯೋಜಿಸಿದ್ದ ಯುಗಾದಿ ಸಂಭ್ರಮದ ಕಾರ್ಯಕ್ರಮದತ್ತ ಕನ್ನಡಿಗರು ಪಾದಬೆಳೆಸಿದ್ದರು.

ಮಧ್ಯಾಹ್ನ ಸುಮಾರು ನಾಲ್ಕೂವರೆಗೆ ಸ0ಘದ ಸದಸ್ಯರು ಕುಟುಂಬ ಸಮೇತರಾಗಿ ಆಗಮಿಸಿದರು. ಇದೇನು ಮದುವೆ ಮನೆಯೇನೋ ಎಂಬಂತೆ, ರೇಷ್ಮೆ ಸೀರೆಯನ್ನುಟ್ಟು ನೀರೆಯರು ಸಡಗರದಿಂದ ಓಡಾಡುತ್ತಿದ್ದರು. ಹಾಯ್‌, ಹಲೋಗಳನ್ನು ಪಕ್ಕಕ್ಕಿಟ್ಟು, ನಮಸ್ಕಾರ, ಆರೋಗ್ಯವೇ ಎಂಬ ಉಭಯ ಕುಶಲೋಪರಿಗಳು ಸಮಾರಂಭಕ್ಕೆ ವಿಶೇಷ ಮೆರಗು ತಂದಿತ್ತು.

ಸುಮಾರು 5.15 ನಿಮಿಷಕ್ಕೆ ಗುಡಿಯ ಅರ್ಚಕರರೊಬ್ಬರ ಪೂಜೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಕಾರ್ಯಕ್ರಮ ಶುರುವಾದ ತಕ್ಷಣ ಎಲ್ಲರಿಗೂ ಕೋಸ0ಬರಿ, ಪಾನಕ, ಕೇಕ್‌ಗಳ ಲಘು ಉಪಾಹಾರ ನಡೆಯಿತು. ಸ0ಘದ ಅಧ್ಯಕ್ಷ ಪಾವನಿ ರಾಮ್‌ ತಮ್ಮ ಸ್ವಾಗತ ಭಾಷಣದಲ್ಲಿ ಎಲ್ಲರಿಗೂ ಸ್ವಾಗತ ಕೋರಿದರು. ನಂತರ ಡಾ। ಕುಮಾರ್‌ ಹಾಗು ವೇದಾ ಶೇಖರ್‌ ಅವರ ಆಕರ್ಷಕ ನಿರೂಪಣೆಯಾಂದಿಗೆ ಕಾರ್ಯಕ್ರಮದ ವೈವಿಧ್ಯಗಳು ಬಿಚ್ಚಿಕೊಂಡವು. ಸಾಂಸ್ಕೃತಿಕ ಕಾರ್ಯುಕ್ರಮಗಳು ಅನಾವರಣಗೊಳ್ಳ ತೊಡಗಿದವು.

ಸಾಂಚಿತಾ ಪ್ರಭಾಕರ್‌ ಕಂಠದಿಂದ ಹೊರಹೊಮ್ಮಿದ ‘ಪಾರ್ವತಿ ವರಸುತ ಗಜಾನನ’ ಎ0ಬ ಗಣೇಶ ಸ್ತುತಿ ಸುಶ್ರಾವ್ಯವಾಗಿತ್ತು. ಯುಗಾದಿ ಹಬ್ಬವನ್ನು ಬಣ್ಣಿಸುವ ‘ರಿಷಿ ’ಚಿತ್ರದ ಹಾಡು ಎಲ್ಲರಿಗೂ ಖುಷಿ ತಂದಿತು. ಸ್ನೇಹ ಭಲ್ಲೆ ಹಾಡಿಗೆ ನೃತವನ್ನು ಸಂಯೋಜಿಸಿದ್ದರು. ಪುಟಾಣಿಗಳ ನೃತ್ಯ ಕಣ್ಣಿಗೆ ಹಬ್ಬ ತಂದಿತ್ತು.

ಪುಟಾಣಿ ಸ0ಜನಾ ನಾಯಕ್‌ ‘ಶ್ರೀದೇವಿ ಮಹಕಾಳಿ ಪರಮೇಶ್ವರಿ’ ಹಾಡನ್ನು ಹಾಡಿದ ನ0ತರ ನಮ್ಮನ್ನು ರ0ಜಿಸಿದವರು ಉಮಾ ಇಟ್ಟಿಗಿ ತ0ಡ. ಭರತನಾಟ್ಯ, ತಿಲ್ಲಾನ, ರಾಮಕೃಷ್ಣ ಅವರ ಮಿಮಿಕ್ರಿ ಹಾಗೂ ಯುವಕರ ತ0ಡದ ವೈವಿಧ್ಯಗಳು ಭಲೇ ಎನ್ನುವಂತಿತ್ತು. ಕನ್ನಡಕ್ಕೆ ಅಪರೂಪ ಅನ್ನಬಹುದಾದ ‘ರಿಷಿ’ ಚಿತ್ರದ ಬಾಂಗ್ರಾ ಹಾಡಿಗೆ ಮತ್ತೊಂದು ಕಿರಿಯ ಮಕ್ಕಳತಂಡ ಆಕರ್ಷಕವಾಗಿ ಹೆಜ್ಜೆ ಹಾಕಿತು.

ವಾಣಿ ಪಾವನಿ ರಾಮ್‌ ನೃತ್ಯ ಸಂಯೋಜಿಸಿದ್ದ ‘ಹಚ್ಚೇವು ಕನ್ನಡದ ದೀಪ’ ಹಾಡಿಗೆ ಕೂರ್ಗ್‌ ಶೈಲಿಯ ಉಡುಪನ್ನು ತೊಟ್ಟ ಮಹಿಳೆಯರು ಚೆಂದದ ನೃತ್ಯ ಮಾಡಿದರು. ನಾದಿರ ಶಾ ಅವರ ಸಂಯೋಜನೆಯ ಕಥಕ್‌ ನೃತ್ಯದಲ್ಲಿ ‘ಮೊದಲು ನೆನೆದೇವು ಸ್ವಾಮಿ ನಿನ್ನನು’ ಎಂಬ ಗೀತೆ ಚೆನ್ನಾಗಿ ಮೂಡಿಬ0ತು. ಮಕ್ಕಳನ್ನು ಉತ್ತೇಜಿಸುವ ಸಲುವಾಗಿ ಡಾ.ಕುಮಾರ್‌ ಅವರಿ0ದ Barnes & Nobles - gift card. ಇದಾದ ನಂತರ ಒ0ದು ಕನ್ನಡ ನಾಟಕ ನಡೆಯಿತು.

ಇದೇನಿದು ಮಹಿಳೆಯರ ಮಾತೇ ಆಯಿತಲ್ಲ, ಗ0ಡಸರ ಕಡೆಯಿ0ದ ನರ್ತನ ಇಲ್ಲವೇ ಅ0ದುಕೊ0ಡಿರಾ? ಸತ್ಯ ಹರಿಶ್ಚಂದ್ರ ಚಿತ್ರದ ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ’ ಹಾಡಿಗೆ ದಪ್ಪನೆಯ ಗಿರಿಜಾ ಮೀಸೆ ಹೊತ್ತ ಪುರುಷರ ತಂಡ ಮೈಮರೆತು ಹೆಜ್ಜೆ ಹಾಕಿದರು.

ಕಾರ್ಯಕ್ರಮದ ಕಡೆಯ ಅಂಗವಾದ ಭೋಜನದ ಸವಿಯನ್ನು ವರ್ಣಿಸಲು ಕಷ್ಟ. ಎಲ್ಲರೂ ಒಟ್ಟಿಗೆ ಕುಳಿತು ಹಬ್ಬದ ಊಟ ಮಾಡಿದ್ದು ಮಜವೋ ಮಜ. ವಾ0ಗಿಬಾತ್‌, ಹಪ್ಪಳ, ಪಳಿದ್ಯ, ಆ0ಬೊಡೆ, ಹೋಳಿಗೆ ಇತ್ಯಾದಿ ಭಕ್ಷ ್ಯಗಳನ್ನು ಮಾಡಿ ಎಲ್ಲರ ಹೊಟ್ಟೆಯನ್ನು ತಣಿಸಿದ ವನಿತಾ ಲೋಕಕ್ಕೆ ನಮ್ಮ ವಿಶೇಷ ವ0ದನೆಗಳು.

‘ಆ ಹಾಡು ಚೆನ್ನಾಗಿತ್ತು, ಈ ನೃತ್ಯ ಬೊಂಬಾಟ್‌...’ ಎಂಬ ಹರಟೆಯೊ0ದಿಗೆ ಊಟ ಮುಗಿಯಿತು. ಸಂಘಕ್ಕೆ ಧನ್ಯವಾದ ಹೇಳುತ್ತ, ಸಂಘದ ಸದಸ್ಯರು ಪರಸ್ಪರ ಬೈಬೈ ಹೇಳಿ ಕೊಳ್ಳುತ್ತ ಭಾರದ ಹೃದಯದೊಂದಿಗೆ, ಸವಿ ನೆನಪುಗಳೊಂದಿಗೆ ಮನೆಯ ಹಾದಿ ಹಿಡಿದರು.

ಮುಖಪುಟ / ಯುಗಾದಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more