Get Updates
Get notified of breaking news, exclusive insights, and must-see stories!

Ugadi 2023: ಯುಗಾದಿ ಹಬ್ಬದ ಶುಭ ಮುಹೂರ್ತ, ಪೂಜೆ ವಿಧಿ ವಿಧಾನ, ಮಹತ್ವ ಮತ್ತು ಆಚರಣೆ ತಿಳಿಯಿರಿ

ಯುಗಾದಿ ಎಂಬ ಹೆಸರು ಯುಗ (ಹೊಸ ವರ್ಷ) ಮತ್ತು ಆದಿ (ಪ್ರಾರಂಭ) ಎಂಬ ಎರಡು ಶಬ್ದಗಳಿಂದ ಕೂಡಿದೆ. ಯುಗಾದಿ ಎಂಬ ಶಬ್ದವು "ಹೊಸ ಯುಗದ ಆರಂಭ" ಎಂಬ ಸಂಸ್ಕೃತ ಪದದಿಂದ ಬಂದಿದೆ.

ಬೆಂಗಳೂರು, ಮಾರ್ಚ್. 21: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತ್ತಿದೆ...ಹೌದು ಯುಗಾದಿ ಹಿಂದೂಗಳ ಪ್ರಮುಖ ಆಚರಣೆ. ದಕ್ಷಿಣ ಭಾರತದಾದ್ಯಂತ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಇದು ಒಂದು. ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ ಸೇರಿದಂತೆ ಇನ್ನಿತರ ದಕ್ಷಿಣ ಭಾರತದ ರಾಜ್ಯಗಳಲ್ಲಿ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.

ವಸಂತ ಕಾಲದ ಮೊದಲ ಮಳೆ ನಂತರ ಹೊಸತ ಮೈಗೂಡಿಸಿಕೊಳ್ಳು ಈ ಸಮಯದಲ್ಲಿ ಯುಗಾದಿ ಮನೆ ಮನಕ್ಕೆ ಆವರಿಸಲಿದೆ. ಕೊರೊನಾ ಸಾಂಕ್ರಾಮಿಕದಿಂದ ಚೇತರಿಸಿಕೊಂಡಿರುವ ಜನರು ಈ ಬಾರಿ 'ಉಗಾದಿ'ಯನ್ನು ವಿಜೃಂಭಣೆಯಿಂದ ಆಚರಿಸಲಿದ್ದಾರೆ. ಯುಗಾದಿ ಹಬ್ಬವನ್ನು ಹಲವೆಡೆ ಉಗಾದಿ ಎಂತಲೂ ಕರೆಯುತ್ತಾರೆ.

Ugadi 2023: Date, Time, Puja Vidhi, Rituals, History, Story, Significance and Why it is celebrated

ಯುಗ ಮತ್ತು ಆದಿ ಎನ್ನುವ ಎರಡು ಸಂಸ್ಕೃತ ಪದಗಳಿಂದ ರೂಪುಗೊಂಡ ಈ ಯುಗಾದಿಯು ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ಈ ವರ್ಷ ಯುಗಾದಿಯನ್ನು ಮಾರ್ಚ್‌ 22 ರ ಬುಧವಾರ ಆಚರಿಸಲಾಗುವುದು. ಹಾಗಾದರೆ 2023ರ ಯುಗಾದಿ ಹಬ್ಬದ ದಿನಾಂಕ, ಸಮಯ, ಹಾಗೆಯೇ ಯುಗಾದಿಯ ಇತಿಹಾಸ, ಆಚರಣೆಗಳು ಮತ್ತು ಮಹತ್ವವನ್ನು ತಿಳಿಯೋಣ.

ಯುಗಾದಿ ಎಂಬ ಹೆಸರು ಯುಗ (ಹೊಸ ವರ್ಷ) ಮತ್ತು ಆದಿ (ಪ್ರಾರಂಭ) ಎಂಬ ಎರಡು ಶಬ್ದಗಳಿಂದ ಕೂಡಿದೆ. ಯುಗಾದಿ ಎಂಬ ಶಬ್ದವು "ಹೊಸ ಯುಗದ ಆರಂಭ" ಎಂಬ ಸಂಸ್ಕೃತ ಪದದಿಂದ ಬಂದಿದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್ ಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ. ಉತ್ತರಭಾರತದಲ್ಲಿ ಕಾರ್ತಿಕ ಶುದ್ಧ ಪಾಡ್ಯಮಿಯನ್ನು ಯುಗಾದಿಯೆನ್ನುವರು.

ಈ ಹಬ್ಬವನ್ನು ಭಾರತದಲ್ಲಿ ಬೇರೆ-ಬೇರೆ ಹೆಸರಿನಿಂದ ಆಚರಿಸುತ್ತಾರೆ. ಕರ್ನಾಟಕದಲ್ಲಿ 'ಯುಗಾದಿ', ಮಹಾರಾಷ್ಟ್ರದಲ್ಲಿ 'ಗುಢಿಪಾಡವಾ' , ಆಂಧ್ರ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ 'ಹೊಸ ವರ್ಷದ ಹಬ್ಬ'ವೆಂದು, ಉತ್ತರ ಭಾರತದಲ್ಲಿ 'ಬೈಸಾಖಿ' ಎಂದು ಇದು ಆಚರಿಸಲ್ಪಡುತ್ತದೆ. ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೇ ಎಲ್ಲಾ ಹಿಂದೂಗಳೂ ಆಚರಿಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ.

Ugadi 2023: Date, Time, Puja Vidhi, Rituals, History, Story, Significance and Why it is celebrated

*ಯುಗಾದಿ ಹಬ್ಬದ ದಿನಾಂಕ*

ಯುಗಾದಿಯನ್ನು ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಈ ಬಾರಿ ಯುಗಾದಿ ಹಬ್ಬವನ್ನು ವರ್ಷ ಯುಗಾದಿ ಹಬ್ಬವನ್ನು ಮಾರ್ಚ್ 22, 2023ರ ರಂದು ಆಚರಿಸಲಾಗುತ್ತದೆ.

* ಯುಗಾದಿ 2023 ಸಮಯ*

2023 ರ ಮಾರ್ಚ್ 21 ರ ಮಂಗಳವಾರ ರಾತ್ರಿ 10:50 ರಿಂದ ಪ್ರಾರಂಭವಾಗುತ್ತದೆ.

2023 ರ ಮಾರ್ಚ್‌ 22 ರ ಬುಧವಾರ ರಾತ್ರಿ 8:20ಕ್ಕೆ ಕೊನೆಗೊಳ್ಳುತ್ತದೆ.

*ಪೌರಾಣಿಕ ಕಥೆ*

ಹಿಂದೂ ಪುರಾಣಗಳು ಮತ್ತು ದಂತಕಥೆಗಳ ಪ್ರಕಾರ, ಭಗವಾನ್ ಬ್ರಹ್ಮನು ಈ ದಿನದಂದು ವಿಶ್ವವನ್ನು ಸೃಷ್ಟಿಸಿದನು ಎಂದು ನಂಬುಲಾಗುತ್ತದೆ. ಬ್ರಹ್ಮಾಂಡ ವಿಕಾಸದ ಸಮಯದಲ್ಲಿ, ಸೃಷ್ಟಿಕರ್ತ ಬ್ರಹ್ಮ ಈ ದಿನದಂದು ಸೃಷ್ಟಿ ಕಾರ್ಯವನ್ನು ಪ್ರಾರಂಭಿಸಿದನು. ಇನ್ನೂ ಹಿಂದೂಗಳ ನಂಬಿಕೆಯ ಪ್ರಕಾರ, ಬ್ರಹ್ಮ ದೇವರು ಇಡೀ ವಿಶ್ವವನ್ನು ಸೃಷ್ಟಿಸಿದನು ಮತ್ತು ಭೂಮಿಯ ಮೇಲಿನ ನಮ್ಮ ಒಂದು ವರ್ಷವು ಬ್ರಹ್ಮ ದೇವರಿಗೆ ಒಂದು ದಿನಕ್ಕೆ ಸಮಾನವಾಗಿರುತ್ತದೆ. ಆದ್ದರಿಂದ, ನಾವು ಹೊಸ ವರ್ಷದ ಶುಭ ವರ್ಷವನ್ನು ಪ್ರಾರಂಭಿಸಿದಾಗ ಬ್ರಹ್ಮ ದೇವರು ಹೊಸ ದಿನವನ್ನು ಪ್ರಾರಂಭಿಸುತ್ತಾನೆ. ಇಂದಿಗೂ ಆಂಧ್ರಪ್ರದೇಶದಂತಹ ರಾಜ್ಯದಲ್ಲಿ ಯುಗಾದಿಯಂದು ಬ್ರಹ್ಮ ದೇವನನ್ನು ಪೂಜಿಸುತ್ತಾರೆ.

ಯುಗಾದಿಯ ದಿನದ ಹಿಂದೆ ಪೌರಾಣಿಕ ಕಥೆಯೂ ಇದೆ. ಒಂದಾನೊಂದು ಕಾಲದಲ್ಲಿ ಸಂಭಬಕಾಸುರನೆಂಬ ರಾಕ್ಷಸನಿದ್ದ. ಈ ರಾಕ್ಷಸನು ಬ್ರಹ್ಮನ ವೇದಗಳನ್ನು ತೆಗೆದುಕೊಂಡು ಒಂದು ದಿನ ಸಮುದ್ರದಲ್ಲಿ ಬಚ್ಚಿಟ್ಟನು. ಭಗವಾನ್ ವಿಷ್ಣು ರಾಕ್ಷಸ ಬ್ರಹ್ಮನ ವೇದಗಳನ್ನು ತೆಗೆದುಕೊಂಡಿದ್ದಾನೆ ಎಂದು ತಿಳಿಸು, ವಿಷ್ಣುವು ಮತ್ಸ್ಯ ರೂಪವನ್ನು ಧರಿಸಿ ಸಮುದ್ರದ ಕೆಳಗೆ ದೈತ್ಯಾಕಾರದ ರಾಕ್ಷಸನ ವಿರುದ್ಧ ಹೋರಾಡಿದನು.

ಆ ಮೃಗವನ್ನು ತನ್ನ ಚಕ್ರದಿಂದ ಕತ್ತು ಹಿಸುಕಿ ಕೊಂದನು. ವೇದಗಳನ್ನು ಹಿಂದಕ್ಕೆ ತೆಗೆದುಕೊಂಡು ಬಂದನು. ನಂತರ ಅವರು ಬ್ರಹ್ಮ ದೇವರಿಗೆ ಅದನ್ನು ಹಿಂತಿರುಗಿಸಿದನು. ಇದೆಲ್ಲವೂ ಚೈತ್ರ ಮಾಸದ ಮೊದಲ ದಿನದಂದು ಸಂಭವಿಸಿತು. ಪರಿಣಾಮವಾಗಿ, ನಾವು ಈ ದಿನ ಹೊಸ ವರ್ಷದ ಸಂಭ್ರಮವನ್ನು ಆಚರಿಸುತ್ತೇವೆ ಎನ್ನಲಾಗುತ್ತದೆ.

*ಯುಗಾದಿ ಆಚರಣೆ*

* ಜನರು ಬೆಳಗಿನ ಜಾವದಲ್ಲಿ ಕಡಲೆ ಹಿಟ್ಟನ್ನು ಮತ್ತು ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡಿ ನಂತರ ಹೊಸ ಬಟ್ಟೆಗಳನ್ನು ಧರಿಸುವ ಮೂಲಕ ಶುಭ ದಿನವನ್ನು ಪ್ರಾರಂಭಿಸುತ್ತಾರೆ.

* ಕಾರ್ತಿಕೇಯ ಮತ್ತು ಗಣೇಶನನ್ನು ಮೆಚ್ಚಿಸಲು ಮನೆಗಳ ಪ್ರವೇಶದ್ವಾರವನ್ನು ಅಲಂಕರಿಸಲು ಮಾವಿನ ಎಲೆಗಳನ್ನು ಬಳಸಲಾಗುತ್ತದೆ.

* ಈ ಇಬ್ಬರು ಭಗವಂತರು ಮಾವಿನ ಹಣ್ಣನ್ನು ಇಷ್ಟಪಡುತ್ತಾರೆ ಎಂದು ನಂಬಲಾಗಿದೆ. ಇದರಿಂದ ದೇವರು ಅವರಿಗೆ ಸಮೃದ್ಧಿ ಮತ್ತು ಯೋಗಕ್ಷೇಮವನ್ನು ನೀಡುತ್ತಾನೆ.

* ಹೊಸ ಮಾವಿನ ಎಲೆಗಳು ಬಾಗಿಲಿಗೆ ಉತ್ತಮ ಇಳುವರಿಯನ್ನು ಸಂಕೇತಿಸುತ್ತವೆ.

* ಯುಗಾದಿಯಂದು ಜನರು ತಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಹಸುವಿನ ಸಗಣಿಯಿಂದ ಶುದ್ಧೀಕರಿಸುತ್ತಾರೆ. ಇದನ್ನು ಹಿಂದೂ ಪದ್ಧತಿಗಳ ಪ್ರಕಾರ ಶುಭವೆಂದು ಪರಿಗಣಿಸಲಾಗುತ್ತದೆ.

* ಮನೆಗಳ ಹೊರಗೆ ರಂಗೋಲಿಗಳನ್ನು (ಸ್ವಸ್ತಿಕ ಚಿಹ್ನೆ) ಹಾಕುವುದು ಯುಗಾದಿ ಹಬ್ಬದ ಪ್ರಮುಖ ಮತ್ತು ಮಹತ್ವದ ಚಟುವಟಿಕೆಗಳಲ್ಲಿ ಒಂದಾಗಿದೆ.

* ಸ್ನಾನದ ಸಮಯದಲ್ಲಿ ಕೈಯಲ್ಲಿ ಶ್ರೀಗಂಧ, ಅಕ್ಷತೆ, ಹೂವುಗಳು ಮತ್ತು ನೀರನ್ನು ತೆಗೆದುಕೊಂಡು ಬ್ರಹ್ಮದೇವನ ಮಂತ್ರಗಳನ್ನು ಪಠಿಸುತ್ತಾ ಬ್ರಹ್ಮದೇವನ ಪೂಜೆಯನ್ನು ಮಾಡಬೇಕು.

* ವಿಶೇಷ ಪಾನೀಯ ಪಚಡಿ ತಯಾರಿಸುವುದು ಸಹ ವಾಡಿಕೆ. ಪಚಡಿ ಎಂಬ ಈ ಪಾನೀಯವನ್ನು ಹೊಸ ಹುಣಸೆಹಣ್ಣು, ಮಾವು, ತೆಂಗಿನಕಾಯಿ, ಬೇವಿನ ಹೂವುಗಳು, ಬೆಲ್ಲದಂತಹ ವಸ್ತುಗಳನ್ನು ಬೆರೆಸಿ ಮಡಕೆಯಲ್ಲಿ ತಯಾರಿಸಲಾಗುತ್ತದೆ. ಈ ಪಾನೀಯವನ್ನು ಕುಟುಂಬದ ಸದಸ್ಯರು ಕುಡಿಯುವುದು ಮಾತ್ರವಲ್ಲದೇ, ಎಲ್ಲರಿಗೂ ಹಂಚಲಾಗುತ್ತದೆ.

* ಈ ದಿನ ನೀವು ಬ್ರಹ್ಮ ದೇವನ ಬದಲು ನಿಮ್ಮ ನೆಚ್ಚಿನ ದೇವರು ಅಥವಾ ಮನೆ ದೇವರನ್ನು ಪೂಜಿಸಬಹುದು

* ಯುಗಾದಿ ಹಬ್ಬದಲ್ಲಿ ಜನರು ಸಾಹಿತ್ಯಿಕ ಚರ್ಚೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಮತ್ತು ಕವಿತೆಗಳನ್ನು ಓದುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+