Get Updates
Get notified of breaking news, exclusive insights, and must-see stories!

2018 - ಶ್ರಾವಣ, ಭಾದ್ರಪದ, ಕಾರ್ತಿಕ ಮಾಸದ ಹಬ್ಬಹರಿದಿನಗಳ ಪಟ್ಟಿ

Recommended Video

      Shravana Month 2018 : ಭಾದ್ರಪ್ರದ ಹಾಗು ಕಾರ್ತಿಕ ಮಾಸದಲ್ಲಿ ಬರುವ ಹಬ್ಬ ಹರಿದಿನಗಳ ಪಟ್ಟಿ | Oneindia Kannada

      ನಾಡಿನ ಸುಂದರ ಸಂಸ್ಕೃತಿ, ಶ್ರೀಮಂತಿಕೆ , ಕೋಮು ಸೌಹಾರ್ದತೆ, ಸಂಪತ್ತು ಹೆಚ್ಚಿಸುವಲ್ಲಿ ಮತ್ತು ಆರೋಗ್ಯವಂತ ಸಮಾಜ ರೂಪಿಸುವಲ್ಲಿ ಹಬ್ಬಹರಿದಿನಗಳ ಪಾತ್ರ ಬಹು ಮುಖ್ಯವಾದದ್ದು.

      ಆಗಸ್ಟ್ ಹನ್ನೊಂದರ ವಿಲಂಬಿ ನಾಮ ಸಂವತ್ಸರದ ಅಮವಾಸ್ಯೆಯ ದಿನದ ನಂತರ ಶ್ರಾವಣ ಮಾಸ ಆರಂಭವಾಗಲಿದೆ, ಇದರ ಜೊತೆಗೆ ಸಾಲುಸಾಲು ಹಬ್ಬಗಳು ಶುರು. ಭೀಮನ ಅಮವಾಸ್ಯೆಯ ದಿನದಿಂದ ಬಲಿಪಾಡ್ಯಮಿಯವರೆಗೆ ಹಬ್ಬಹರಿದಿನಗಳ ಸರಮಾಲೆಯೇ ಒಂದಾದ ನಂತರ ಇನ್ನೊಂದು ಬರುತ್ತದೆ.

      ಶ್ರಾವಣ ಬಂತು ನಾಡಿಗೆ, ಬಂತು ಬೀಡಿಗೆ ಎನ್ನುವಂತೆ ಹಬ್ಬದ ಸಂಭ್ರಮದ ಸಿರಿಯನ್ನು ಹೊತ್ತು ಬಡವ ಬಲ್ಲಿದ ಎನ್ನದೇ ತಮ್ಮ ತಮ್ಮ ಶಕ್ತ್ಯಾನುಸಾರ ಬರುವ ಹಬ್ಬಗಳನ್ನು ಸ್ವಾಗತಿಸಿ, ಆಚರಿಸಿ, ಸಂಭ್ರಮಿಸುವ ಮಾಸ.

      Season of festivals in Shravanam Bhadrapada and Karthika Masa during 2018

      ಹಿಂದೂ ಪಂಚಾಂಗದ ಪ್ರಕಾರ ಚಾಂದ್ರಮಾನದ ಐದನೆಯ ತಿಂಗಳಲ್ಲಿ ಬರುವ ಶ್ರಾವಣ ಮಾಸದಲ್ಲಿ ದಿನವೂ ಏನಾದರೂ ಹಬ್ಬ, ಭೋಜನ ಪ್ರಿಯರಿಗಂತೂ ನಿತ್ಯವೂ ಫುಲ್ ಮೀಲ್ಸ್. ಒನ್ ಇಂಡಿಯಾ ಕನ್ನಡ 2018ರಲ್ಲಿನ ಶ್ರಾವಣ, ಭಾದ್ರಪದ, ಕಾರ್ತಿಕ ಮಾಸಗಳಲ್ಲಿ ಬರುವ ಹಬ್ಬಹರಿದಿನಗಳ ಪಟ್ಟಿಯನ್ನು ನಿಮಗಾಗಿ ನೀಡುತ್ತಿದೆ. ಪುಟವನ್ನು ಬುಕ್ ಮಾರ್ಕ್ ಮಾಡಿಕೊಳ್ಳಿ..

      ಶಾಲಿವಾಹನ ಶಕ 1941 ವಿಲಂಬಿ ನಾಮ ಸಂವತ್ಸರ, ದಕ್ಷಿಣಾಯಣ
      ಕ್ರ,ಸಂ ದಿನಾಂಕ ದಿನ ಹಬ್ಬ
      1 ಆಗಸ್ಟ್ 11 ಶನಿವಾರ ಭೀಮನ ಅಮಾವಾಸ್ಯೆ, ದೀವಿಗೆ ಅಮವಾಸ್ಯೆ
      2 ಆಗಸ್ಟ್ 14 ಮಂಗಳವಾರ ಮಂಗಲಗೌರೀ ವ್ರತ
      3 ಆಗಸ್ಟ್ 15 ಬುಧವಾರ ಸ್ವಾತಂತ್ರ್ಯ ದಿನಾಚರಣೆ, ನಾಗರಪಂಚಮಿ, ಸಾರ್ವತ್ರಿಕ ರಜೆ
      4 ಆಗಸ್ಟ್ 17 ಶುಕ್ರವಾರ ಸಂಪತ್ ಶುಕ್ರವಾರ, ತುಳಸೀದಾಸ ಜಯಂತಿ
      5 ಆಗಸ್ಟ್-18,25,
      ಸೆ.-1, 8.
      ಶನಿವಾರ ಶ್ರಾವಣ ಶನಿವಾರ
      6 ಆಗಸ್ಟ್ 22 ಬುಧವಾರ ಬಕ್ರೀದ್, ಸರಕಾರೀ ರಜೆ
      7 ಆಗಸ್ಟ್ 24 ಶುಕ್ರವಾರ ವರಮಹಾಲಕ್ಷ್ಮೀ ವ್ರತ, ನಿರ್ಬಂಧಿತ ರಜೆ
      8 ಆಗಸ್ಟ್ 25 ಶನಿವಾರ ಸರ್ವಖುಗುಪಾಕರ್ಮ, ತಿರು ಓಳಂ
      9 ಆಗಸ್ಟ್ 26 ಭಾನುವಾರ ರಕ್ಷಾಬಂಧನ, ಯಜುರುಪಾಕರ್ಮ, ಭಾನುವಾರ
      10 ಆಗಸ್ಟ್ 27 ಸೋಮವಾರ ಗುರುರಾಘವೇಂದ್ರರ ಪೂರ್ವಾರಾಧನೆ
      11 ಆಗಸ್ಟ್ 28 ಮಂಗಳವಾರ ಗುರುರಾಘವೇಂದ್ರರ ಮಧ್ಯಾರಾಧನೆ
      12 ಆಗಸ್ಟ್ 29 ಬುಧವಾರ ಗುರುರಾಘವೇಂದ್ರರ ಉತ್ತರಾಧನೆ
      13 ಸೆಪ್ಟೆಂಬರ್ 2 ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿ
      14 ಸೆಪ್ಟೆಂಬರ್ 3 ಸೋಮವಾರ ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ
      15
      ಸೆಪ್ಟೆಂಬರ್ 5 ಬುಧವಾರ ಶಿಕ್ಷಕರ ದಿನಾಚರಣೆ, ಸರ್ವೇಪಲ್ಲಿ ರಾಧಾಕೃಷ್ಣನ್ ಜನ್ಮದಿನ
      16 ಸೆಪ್ಟೆಂಬರ್ 8 ಶನಿವಾರ ನೇಟಿವಿಟಿ ಹಬ್ಬ
      17 ಸೆಪ್ಟೆಂಬರ್ 11 ಮಂಗಳವಾರ ಸಾಮೋಪಕರ್ಮ
      18 ಸೆಪ್ಟೆಂಬರ್ 12 ಬುಧವಾರ ಗೌರೀ ತೃತೀಯಾ, ನಿರ್ಬಂಧಿತ ರಜೆ
      19 ಸೆಪ್ಟೆಂಬರ್ 13 ಗುರುವಾರ ಗಣೇಶ ಚತುರ್ಥಿ, ಸರಕಾರೀ ರಜಾ
      20 ಸೆಪ್ಟೆಂಬರ್ 21 ಶುಕ್ರವಾರ ವಾಮನ ಜಯಂತಿ, ಮೊಹರಂ, ನಾರಾಯಣಗುರು ಪುಣ್ಯದಿನ, ಸರಕಾರೀ ರಜೆ
      21 ಸೆಪ್ಟೆಂಬರ್ 23 ಭಾನುವಾರ ಅನಂತ ಚತುರ್ದಶಿ, ನೋಂಪು
      22 ಅಕ್ಟೋಬರ್ 2 ಮಂಗಳವಾರ ಗಾಂಧಿ ಜಯಂತೀ, ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನ, ಸಾರ್ವತ್ರಿಕ ರಜೆ
      23 ಅಕ್ಟೋಬರ್ 9 ಮಂಗಳವಾರ ಮಹಾಲಯ ಅಮವಾಸ್ಯೆ, ಸರ್ವಪಿತೃ ಅಮವಾಸ್ಯೆ, ಸರಕಾರೀ ರಜೆ
      24 ಅಕ್ಟೋಬರ್ 13 ಶನಿವಾರ ಲಲಿತ ಪಂಚಮಿ
      25 ಅಕ್ಟೋಬರ್ 15 ಸೋಮವಾರ ಶಾರದ ಪೂಜೆ
      26 ಅಕ್ಟೋಬರ್ 17 ಬುಧವಾರ ದುರ್ಗಾಷ್ಟಮಿ, ತಲಕಾವೇರಿ ತೀರ್ಥೋದ್ಭವ
      27 ಅಕ್ಟೋಬರ್ 18 ಗುರುವಾರ ಮಹಾನವಮಿ, ಆಯುಧಪೂಜೆ, ಸರಕಾರೀ ರಜೆ
      28 ಅಕ್ಟೋಬರ್ 19 ಶುಕ್ರವಾರ ವಿಜಯದಶಮಿ, ಸರಕಾರೀ ರಜೆ
      29 ನವೆಂಬರ್ 1 ಗುರುವಾರ ಕರ್ನಾಟಕ ರಾಜ್ಯೋತ್ಸವ, ಸಾರ್ವತ್ರಿಕ ರಜೆ
      30 ನವೆಂಬರ್ 6 ಮಂಗಳವಾರ ನರಕ ಚತುರ್ದಶಿ, ಸರಕಾರೀ ರಜೆ
      31 ನವೆಂಬರ್ 7 ಬುಧವಾರ ದೀಪಾವಳಿ
      32 ನವೆಂಬರ್ 8 ಗುರುವಾರ ಬಲಿಪಾಡ್ಯ, ಸರಕಾರೀ ರಜೆ

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+