• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರಾವಣ, ಭಾದ್ರಪದ ಬಂತು, ಹಬ್ಬಗಳ ಸಡಗರ ತಂತು

|

ಹಿಂದೂ ಚಾಂದ್ರಮಾನ ಪಂಚಾಂಗದ ಐದನೇ ಮಾಸದಿಂದ ಶ್ರಾವಣ ಮಾಸ ಆರಂಭ. ಆಷಾಡ ಮಾಸದ ತಣ್ಣನೇ ಗಾಳಿಯಿಂದ ಕಾಲಚಕ್ರ ಇದೇ ಭಾನುವಾರ ( ಜು 27) ಶ್ರಾವಣ ಮಾಸದತ್ತ ತಿರುಗುತ್ತದೆ.

ಆಷಾಡ ಮಾಸದ ಕೊನೆಯ ದಿನ (ಜು 26) ಭೀಮನ ಅಮವಾಸ್ಯೆ. ಇದನ್ನು ಆಟಿ ಅಮವಾಸ್ಯೆ ಅಥವಾ ದೀವಿಗೆ ಅಮವಾಸ್ಯೆ ಎಂದೂ ಕರೆಯುವುದುಂಟು. (2014ರ ಸರ್ಕಾರಿ ರಜಾ ಪಟ್ಟಿ, ಮೂರು ರಜೆ ನಷ್ಟ)

ಈ ಬಾರಿ ಎಲ್ಲಾ ಹಬ್ಬಗಳು ಕೊಂಚ ಮುಂಚಿತವಾಗಿಯೇ ಬರುತ್ತಿದ್ದು, ಹೆಚ್ಚಿನ ಹಬ್ಬಗಳು ವಾರಾಂತ್ಯಕ್ಕೆ ಹೊಂದಿಕೊಂಡು ಬರುತ್ತಿರುವುದರಿಂದ ಸಾಲು ಸಾಲು ರಜೆ ಎದುರು ನೋಡುತ್ತಿರುವವರಿಗೆ ಸುಗ್ಗಿಯೋ ಸುಗ್ಗಿ. (ಶ್ರೀ ವರಮಹಾಲಕ್ಷ್ಮಿ ಪೂಜಾವಿಧಾನ)

ಹಬ್ಬ ಹಾಗೂ ರಜೆಯನ್ನು ನಿಮ್ಮ ಶಾಲೆ, ಕಚೇರಿ, ವ್ಯಾಪಾರಕ್ಕೆ ಹೊಂದಿಸಿಕೊಳ್ಳಲು ನೆರವಾಗುವ 2014ನೇ ಸಾಲಿನ ಹಬ್ಬ-ರಜಾ ಪಟ್ಟಿಯನ್ನು ಕೊಡುತ್ತಿದ್ದೇವೆ. ಪುಟವನ್ನು ಬುಕ್ ಮಾರ್ಕ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ಔಟ್ ತೆಗೆಯಿರಿ. ಅಡುಗೆ ಮನೆಯ ಗೋಡೆಯ ಮೇಲೆ ಅಂಟಿಸಿರಿ.

ಶಾಲಿವಾಹನಶಕ 1937, ಜಯನಾಮ ಸಂವತ್ಸರ, ದಕ್ಷಿಣಾಯನಂ, ಶ್ರಾವಣ ಮಾಸ 2014
ದಿನಾಂಕ ದಿನ ಹಬ್ಬ ರಜಾದಿನ
ಜುಲೈ 29, ಆಗಸ್ಟ್ 5, 12, 19, ಮಂಗಳವಾರ ಮಂಗಳಗೌರೀ ವ್ರತ -
ಜುಲೈ 29 ಮಂಗಳವಾರ ರಮ್ಜಾನ್ ಸರಕಾರೀ ರಜಾದಿನ
ಜುಲೈ 30 ಬುಧವಾರ ಸಂಪದ್ ಗೌರೀ ವ್ರತ -
ಆಗಸ್ಟ್ 1 ಶುಕ್ರವಾರ ನಾಗರಪಂಚಮಿ, ಬಸವ ಲಿಂಗೈಕ್ಯ ದಿನ, ನಿರ್ಭಂದಿತ ರಜೆ
ಆಗಸ್ಟ್ 2, 9, 16, 23, ಶನಿವಾರ ಶ್ರಾವಣ ಶನಿವಾರ -
ಆಗಸ್ಟ್ 3 ಭಾನುವಾರ ತುಳಸೀದಾಸ ಜಯಂತಿ, ಅಂತರಾಷ್ಟ್ರೀಯ ಸ್ನೇಹ ದಿನ
- ಆಗಸ್ಟ್ 8 ಶುಕ್ರವಾರ ವರಮಹಾಲಕ್ಷ್ಮೀ ವ್ರತ ನಿರ್ಭಂದಿತ ರಜೆ ಆಗಸ್ಟ್ 10 ಶನಿವಾರ ಚಾಂದ್ರಖುಗಾಪಾಕರ್ಮ, ಯಜುರುಪಾಕರ್ಮ, ರಕ್ಷಾಬಂಧನ, ನಿರ್ಭಂದಿತ ರಜೆ ಆಗಸ್ಟ್ 12 ಮಂಗಳವಾರ ಶ್ರೀರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ - ಆಗಸ್ಟ್ 15 ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ ಸಾರ್ವತ್ರಿಕ ರಜೆ ಆಗಸ್ಟ್ 17 ಭಾನುವಾರ ಶ್ರೀಕೃಷ್ಣ ಜನ್ಮಾಷ್ಠಮಿ - ಆಗಸ್ಟ್ 18 ಸೋಮವಾರ ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ, ಮೊಸರುಕುಡಿಕೆ - ಆಗಸ್ಟ್ 25 ಸೋಮವಾರ ಬೆನಕನ ಅಮವಾಸ್ಯೆ - ಶಾಲಿವಾಹನಶಕ 1937, ಜಯನಾಮ ಸಂವತ್ಸರ, ದಕ್ಷಿಣಾಯನಂ, ಭಾದ್ರಪದ ಮಾಸ 2014 ಆಗಸ್ಟ್ 28 ಗುರುವಾರ ಗೌರೀ ತೃತೀಯಾ ನಿರ್ಭಂದಿತ ರಜೆ ಆಗಸ್ಟ್ 29 ಶುಕ್ರವಾರ ಗಣೇಶ ಚತುರ್ಥೀ, ಸಾಮೋಪಕರ್ಮ ಸರಕಾರೀ ರಜಾದಿನ ಆಗಸ್ಟ್ 30 ಶನಿವಾರ ಭೂವರಾಹ ಜಯಂತಿ, ಖುಷಿ ಪಂಚಮಿ - ಸೆಪ್ಟಂಬರ್ 5 ಶುಕ್ರವಾರ ಶಿಕ್ಷಕರ ದಿನಾಚಾರಣೆ, ಡಾ. ರಾಧಾಕೃಷ್ಣನ್ ಜನ್ಮದಿನ - ಸೆಪ್ಟಂಬರ್ 7 ಭಾನುವಾರ ಸೌರಖುಗುಪಾರ್ಕಮ, ತಿರು ಓಣಂ, ಆನಂದದಾಸರ ಆರಾಧನೆ - ಸೆಪ್ಟಂಬರ್ 8 ಸೋಮವಾರ ಅನಂತ ಚತುರ್ದಶಿ, ನೋಂಪು - ಸೆಪ್ಟಂಬರ್ 9 ಮಂಗಳವಾರ ಅನಂತನ ಹುಣ್ಣಿಮೆ, ಪಿತೃಪಕ್ಷಾರಂಭ - ಸೆಪ್ಟಂಬರ್ 15 ಸೋಮವಾರ ಇಂಜಿನಿಯರ್ಸ್ ಡೇ, ಸರ್ ಎಂ ವಿಶ್ವೇಶ್ವರಯ್ಯ ಜನ್ಮದಿನ - ಸೆಪ್ಟಂಬರ್ 17 ಬುಧವಾರ ವಿಶ್ವಕರ್ಮ ಜಯಂತಿ - ಸೆಪ್ಟಂಬರ್ 24 ಬುಧವಾರ ಸರ್ವಪಿತೃ ಅಮವಾಸ್ಯೆ, ಮಹಾಲಯ ಅಮವಾಸ್ಯೆ ಸರಕಾರೀ ರಜಾದಿನ ಸೆಪ್ಟಂಬರ್ 25 ಗುರುವಾರ ನವರಾತ್ರಿ ದಸರಾ ಆರಂಭ -

English summary
Hindu, Muslim festival and Holidyas from July to September 2014
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X