ಚಿತ್ರಗಳಲ್ಲಿ: ದೇಶಾದ್ಯಂತ ಭಕ್ತಿ, ಪ್ರೀತಿಯ ಶಿವರಾತ್ರಿ ಆಚರಣೆ
ನವದೆಹಲಿ, ಮಾರ್ಚ್ 4: ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ಶಿವನಿಗೆ ಶಿವರಾತ್ರಿಯಂದು ದೇಶಾದ್ಯಂತ ವಿಶೇಷ ಪೂಜೆ ನೆರವೇರಿತು.
ಇಡೀ ಭಾರತದಾದ್ಯಂತ ಬಹುತೇಕ ಎಲ್ಲಾ ಭಾಗಗಳಲ್ಲೂ ಆಚರಿಸುವ ಹಬ್ಬ ಇದು. ಈ ಹಬ್ಬದಂದು ದಿನವಿಡೀ ಪೂಜೆ, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಸಂಪ್ರದಾಯವಿದೆ.
ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ.
ಈ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುತ್ತಾರೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಶಂಭೋ ಶಂಕರನನ್ನು ನೆನೆದು, ಪುನೀತರಾಗುತ್ತಾರೆ. ಎಲ್ಲೆಲ್ಲಿ ಯಾವ್ಯಾವರೀತಿ ಶಿವರಾತ್ರಿ ಆಚರಿಸಲಾಯಿತು ಚಿತ್ರಗಳಲ್ಲಿ ವೀಕ್ಷಿಸಿ.

ಗುರುಗ್ರಾಮದಲ್ಲಿರುವ ಶಿವಮೂರ್ತಿ
ಗುರುಗ್ರಾದಲ್ಲಿರುವ ಶಿವ ದೇವಾಲಯದಲ್ಲಿ ಶಿವರಾತ್ರಿಯನ್ನು ಭಕ್ತಿ, ಸಡಗರದಿಂದ ಆಚರಿಸಲಾಯಿತು. ಬೆಳಗ್ಗೆ ಇಂದಲೇ ದೇವಾಲಯದಲ್ಲಿ ನೂರಾರು ಭಕ್ತರು ನೆರೆದು ಧ್ಯಾನದಲ್ಲಿ ತಲ್ಲೀನರಾಗಿದ್ದರು.

ಶಿವ, ಪಾರ್ವತಿ ವೇಷತೊಟ್ಟು ಗಮನ ಸೆಳೆದ ಕಲಾವಿದರು
ಅಮೃತಸರದಲ್ಲಿ ಎಲ್ಲಾ ಶಿವನ ದೇವಾಲಯಗಳಲ್ಲಿ ಒಂದೆಡೆ ಶಿವನ ಪೂಜೆ ನಡೆಯುತ್ತಿದ್ದರೆ ಇನ್ನೊಂದೆಡೆ ಕಲಾವಿದರಿಬ್ಬರು ಶಿವ, ಪಾರ್ವತಿ ವೇಷ ತೊಟ್ಟು ರಸ್ತೆಗಳಲ್ಲಿ ಸಂಚರಿಸುವ ಮೂಲಕ ಗಮನ ಸೆಳೆದರು.

ಶಿವಲಿಂಗಕ್ಕೆ ಭಕ್ತಿಯ ಅಭಿಷೇಕ
ಗುರುಗ್ರಾಮದಲ್ಲಿ ಶಿವ ದೇವಾಲಯದಲ್ಲಿ ಭಕ್ತರು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವುದು.

ಗುರುಗ್ರಾಮದಲ್ಲಿ ಬಾಲ ಶಿವ
ಪುಟ್ಟ ಬಾಲಕನೊಬ್ಬ ಶಿವಭಕ್ತಿ ಮೆರೆದ ಚಿತ್ರವಿದು, ಬೆಳ್ಳಂಬೆಳಗ್ಗೆ ಎದ್ದು ಸ್ನಾನ ಮಾಡಿ, ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಬಳಿಕ ಶಿವನ ವೇಷ ತೊಟ್ಟು ಇಡೀ ರಸ್ತೆಯ ತುಂಬೆಲ್ಲಾ ಮೆರವಣಿಗೆ ಹೊರಟಿರುವ ಪುಟ್ಟ ಬಾಲಕ.












Click it and Unblock the Notifications