284023happinessಆದಿಶಂಕರ ಪ್ರಣೀತ ಜೀವನತತ್ತ್ವ/festivals/shivaratri/2009/0223-adi-shankaracharya-philisophy-on-happiness.htmlಉಪಭೋಗವನ್ನೇ ಆನಂದವೆಂದು ಭ್ರಮಿಸಿ ಬಾಳು ವ್ಯರ್ಥ ಮಾಡಿಕೊಳ್ಳುವುದು ಬೇಡ. ಜೀವನಾನಂದದ ಹಿಮಾಲಯವೇರಿದ ಆದಿಶಂಕರರ ನುಡಿಗಳನ್ನು ಮನನ ಮಾಡಿಕೊಳ್ಳೋಣ. ಭಗವದ್ ಗೀತೆಯಲ್ಲಿ ಹೇಳಿದಂತೆ ದುಃಖದ ಸಂದರ್ಭಗಳಲ್ಲಿ ಉದ್ವೇಗಕ್ಕೊಳಗಾಗದೆ ಮತ್ತು ಸುಖದ ಸನ್ನಿವೇಶಗಳಲ್ಲಿ ನಿಷ್ಪೃಹರಾಗುವ ಸಂಕಲ್ಪವನ್ನೂ ಮಹಾಶಿವರಾತ್ರಿಯ ಈ ದಿನ ನಾವು ಮಾಡೋಣ.* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರುಮಹಾಶಿವರಾತ್ರಿಯ ಸಂದರ್ಭದಲ್ಲಿ ಆದಿಶಂಕರರ ಕೆಲವು ನುಡಿಗಳನ್ನು ಮನನ ಮಾಡಿಕೊಳ್ಳಲೆತ್ನಿಸೋಣ. ಜಾಗತೀಕರಣದ ನೆರವಿನಿಂದ 34821http://kannada.oneindia.com/img/2009/02/23-adi-shankaracharya.jpg284023happinessದುಡ್ಡಿನಿಂದ ಸುಖ ನೆಮ್ಮದಿ ಖರೀದಿಸಬಹುದೆ?/column/bhat/2009/0312-where-is-happiness.htmlಬಚ್ಚಲಿನ ಟೈಲ್ಸ್ ಕೆಳಗೆ, ಮಂಚದ ಅಡಿಯಲ್ಲಿ, ಬೀರುವಿನಲ್ಲಿ, ಬ್ಯಾಂಕುಗಳಲ್ಲಿ ಕಾಂಚಾಣವನ್ನು ತುಂಬಿಕೊಂಡವರು ಮಹಾ ಸುಖಿಗಳೆಂದು ಭಾವಿಸಿರುತ್ತಾರೆ. ಅಂಥವರಿಗೆ ಕಂತೆ ಕಂತೆ ಕಾಪಾಡಿಕೊಳ್ಳುವುದೇ ಚಿಂತೆ. ಸುಂದರ ಹೆಂಡತಿಯಿದ್ದರೆ ಬೇರೆಯವರು ನೋಡಿಯಾರೆಂಬ ಚಿಂತೆ. ಇನ್ನು ಸಂತಸ ಎಂಬುದು ಸಂತೆಯಲ್ಲಿ ಸೂಜಿ ಹುಡುಕಿದಂತೆ. ಸಂತೋಷ, ಖುಷಿ, ನೆಮ್ಮದಿ ಇರುವುದಾದರೂ ಎಲ್ಲಿ? ಹುಡುಕಿಕೊಳ್ಳಿ. ಸಿಗದಿದ್ದರೆ ಚಿಂತೆ ಮಾಡಬೇಡಿ, ದುಃಖಪಡಬೇಡಿ.* ವಿಶ್ವೇಶ್ವರ ಭಟ್ಇತ್ತೀಚೆಗೆ ಪತ್ರಿಕೆಯಲ್ಲೊಂದು 35179http://kannada.oneindia.com/img/2009/03/12-happiness1.jpg284023happinessಉಗಾದಿಯ ಉಲ್ಲಾಸ/festivals/ugadi/2009/0325-ugadi-ullasa-poem-by-krs-murthy.html* ಕೆ.ಆರ್.ಎಸ್. ಮೂರ್ತಿ, ಅಮೆರಿಕನೋಡೋಣ ಬನ್ನಿ, ಬೇವು ಬೆಲ್ಲವ ತನ್ನಿ, ನಮ್ನಿಮ್ಮ ಒಡನಾಟದ ಮಾಯವಿದುಕಹಿಯೆಲ್ಲ ಸಿಹಿಯಾಯ್ತು, ಮನಸೆಲ್ಲ ಹಗುರಾಯ್ತು, ನಮ್ಮೆಲ್ಲರ ಊರಿದುಉಗಾದಿಯ ಉಲ್ಲಾಸಕೆ ಎನ್ನ ಬುಟ್ಟಿಯ ಫುಲ್ಲ ಕುಸುಮವೂ ನಗೆ ಬೀರುತಿದೆಬನ್ನಿರಿ ನೀವೆಲ್ಲಾ ನೋಡೋಣ ಹೆಮ್ಮೆಯಲಿ ನಮ್ಮೂರ ಸಂತಸದ ಹಬ್ಬವಿದುಹಸಿರು ತೋರಣ, ಚಿಗುರು ಮಾವಿನ ಎಲೆ, ಹಸಿರು ಗೊಂಚಲು ಕೈ ಬೀಸಿ ಕರೆಯುತಿದೆರಂಗು ರಂಗಿನ ರಂಗವಲ್ಲಿಯೂ ಸಂಭ್ರಮವ 35507http://kannada.oneindia.com/img/2009/03/25-krs-murthy1.jpg284023happinessದೀಪದಿಂದ ದೀಪ ಹಚ್ಚಿ, ಪ್ರೀತಿಯಿಂದ ಪ್ರೀತಿ ಹಂಚಿ/festivals/diwali/2009/1014-deepavali-festival-of-lights-across-the-world.htmlದೀಪಾವಳಿಯೆಂದರೆ ಅಜ್ಞಾನದ ಗಾಢಾಂಧಕಾರವನ್ನು ಕಳೆದು ಜ್ಞಾನದ ಜ್ಯೋತಿ ಬೆಳಗಿಸುವ ಬೆಳಕಿನ ಹಬ್ಬ. ಮನೆ, ಮನ ಬೆಳಗಿ ಹರುಷದ ಹೊನಲು ಉಕ್ಕಿದರೆ ಜಗವೂ ಬೆಳಗಿದಂತೆ. ಈ ಬೆಳಕಿನ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಅನೇಕ ರಾಷ್ಟ್ರಗಳಲ್ಲಿ ವಿಶಿಷ್ಟಮಯವಾಗಿ ಆಚರಿಸಲಾಗುತ್ತದೆ. ಯಾವ ದೇಶದಲ್ಲಿ ಬೆಳಕಿನ ಹಬ್ಬವನ್ನು ಹೇಗೆ ಆಚರಿಸಲಾಗುತ್ತದೆ, ಸಿಂಗಪುರದ ವಾಣಿ ರಾಮದಾಸ್ ತಿಳಿಸಿಕೊಟ್ಟಿದ್ದಾರೆ.ಬೆಳಕಿನ ಹಬ್ಬದ ಸಂಭ್ರಮ ಹುರುಪು ಎಲ್ಲೆಲ್ಲೂ. 39682http://kannada.oneindia.com/img/2009/10/14-deepavali1.jpg284023happinessಸಮಾನತೆಯ ಬೆಳಕು/festivals/diwali/2009/1016-good-bye-to-darkness-welcome-lights.htmlಕತ್ತಲೆ ಮಾಯೆ ಅಳಿಸಲು ಬಂದ ಜ್ಞಾನದ ಬೆಳಕುಅಜ್ಞಾನದಾಗರವ ತೊಳೆಯಲು ಬಂದ ಸುಜ್ಞಾನದ ಬೆಳಕುಮನಸ್ಸಿನ ಮೂಲೆಯ ಆವರಿಸಲು ಬಂದ ನೆಮ್ಮದಿಯ ಬೆಳಕುಶತಶತಮಾನದ ಬೆಳಕು, ಹೊಸಹೊಸ ಕನಸ ಹಚ್ಚಿದ ಬೆಳಕುಬಾನ ಬಯಲ ಸೀಮೆಯಲ್ಲಿ ಕುಣಿಯುವ ಬಣ್ಣಗಳ ಬೆಳಕುಬೇಧ ಭಾವ ಮಾಡದೇ ಚೆಲ್ಲುವ ಸಮಾನತೆಯ ಬೆಳಕುಮನೆಮಂದಿಗೆಲ್ಲ ನಗುವ ಹಂಚಲು ಬರುವ ಬೆಳಕುಊರೆಲ್ಲಾ ಬೆಳಗಲು ಮುಂದಾಗುವ ಆಕಾಶದ ಬೆಳಕುಕಹಿಯ ಸುಟ್ಟು , ಕಷ್ಟ 39730http://kannada.oneindia.com/img/2009/10/16-raghavendra-udupi1.jpg284028ಭಗವದ್ ಗೀತೆಶ್ರೀಮದ್ ಭಗವದ್ಗೀತೆಯಲ್ಲಿ ಆರೋಗ್ಯ ಸೂತ್ರಗಳು/column/gv/2008/1116-karma-yoga-dhyana-yoga-in-bhagavad-gita.htmlಭಗವದ್ಗೀತೆಯಲ್ಲಿ ಬರುವ ಹದಿನೆಂಟು ಯೋಗಶಾಸ್ತ್ರಗಳಲ್ಲಿ ಆರೋಗ್ಯ ಕಾಪಾಡಲು ಸೂತ್ರಗಳನ್ನು ಅಳವಡಿಸಲಾಗಿದೆ. ಮಹತ್ವದ ಯೋಗಗಳಾದ ಕರ್ಮಯೋಗ ಮತ್ತು ಧ್ಯಾನಯೋಗ ರೋಗಗಳನ್ನು ವಾಸಿಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಅನಾರೋಗ್ಯವೆಂಬುದು ಹತ್ತಿರ ಕೂಡ ಸುಳಿಯಲಾರದು. * ಡಾ. 'ಜೀವಿ' ಕುಲಕರ್ಣಿ, ಮುಂಬಯಿ ಶ್ರೀಮದ್ ಭಗವದ್ಗೀತೆ ಒಂದು ಯೋಗಶಾಸ್ತ್ರ. ಭವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಕೊನೆಗೆ ಓಂತತ್ಸತ್ ಇತಿ 32800http://kannada.oneindia.com/img/2008/11/bhagavadgita1.jpg284028ಭಗವದ್ ಗೀತೆಗೀತೆಯಲ್ಲಿ ಆರೋಗ್ಯ ಸೂತ್ರಗಳು (ಭಾಗ 2)/column/gv/2008/1122-health-tips-in-bhagavad-gita-part2.htmlಮನ ಒಂದು ದೈತ್ಯ ಇದ್ದಹಾಗೆ. ಅದಕ್ಕೆ ಸದಾ ಕೆಲಸ ಇರಬೇಕು. ಇಲ್ಲದಿದ್ದರೆ ಅದು ನಿಮ್ಮ ತಲೆ ತಿನ್ನುತ್ತದೆ. ಎಲ್ಲ ರೋಗಗಳಿಗೂ ಮನವೇ ಕಾರಣವಾಗುತ್ತದೆ. ಕೈಯಲ್ಲಿ ಒಂದು ಜಪಮಾಲೆ ಕೊಡಬೇಕು. ಕೆಲಸವಿಲ್ಲದೇ ಇದ್ದಾಗ ಜಪಮಾಲೆ ಎಣಿಸುತ್ತಿರಬೇಕು. ಕೆಲಸ ಬಂದಾಗ ಜಪ ಬದಿಗಿಟ್ಟು ಕೆಲಸ ಮಾಡಬೇಕು. * ಡಾ. 'ಜೀವಿ' ಕುಲಕರ್ಣಿ, ಮುಂಬಯಿ ನಮ್ಮ ಜೀವನದಲ್ಲಿಯ ಅಧ್ಯಾತ್ಮಿಕ ಹಾಗೂ ಆರೋಗ್ಯದ 32918http://kannada.oneindia.com/img/2008/11/bhagavadgita2.jpg284028ಭಗವದ್ ಗೀತೆಆದಿಶಂಕರ ಪ್ರಣೀತ ಜೀವನತತ್ತ್ವ/festivals/shivaratri/2009/0223-adi-shankaracharya-philisophy-on-happiness.htmlಉಪಭೋಗವನ್ನೇ ಆನಂದವೆಂದು ಭ್ರಮಿಸಿ ಬಾಳು ವ್ಯರ್ಥ ಮಾಡಿಕೊಳ್ಳುವುದು ಬೇಡ. ಜೀವನಾನಂದದ ಹಿಮಾಲಯವೇರಿದ ಆದಿಶಂಕರರ ನುಡಿಗಳನ್ನು ಮನನ ಮಾಡಿಕೊಳ್ಳೋಣ. ಭಗವದ್ ಗೀತೆಯಲ್ಲಿ ಹೇಳಿದಂತೆ ದುಃಖದ ಸಂದರ್ಭಗಳಲ್ಲಿ ಉದ್ವೇಗಕ್ಕೊಳಗಾಗದೆ ಮತ್ತು ಸುಖದ ಸನ್ನಿವೇಶಗಳಲ್ಲಿ ನಿಷ್ಪೃಹರಾಗುವ ಸಂಕಲ್ಪವನ್ನೂ ಮಹಾಶಿವರಾತ್ರಿಯ ಈ ದಿನ ನಾವು ಮಾಡೋಣ.* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರುಮಹಾಶಿವರಾತ್ರಿಯ ಸಂದರ್ಭದಲ್ಲಿ ಆದಿಶಂಕರರ ಕೆಲವು ನುಡಿಗಳನ್ನು ಮನನ ಮಾಡಿಕೊಳ್ಳಲೆತ್ನಿಸೋಣ. ಜಾಗತೀಕರಣದ ನೆರವಿನಿಂದ 34821http://kannada.oneindia.com/img/2009/02/23-adi-shankaracharya.jpg284028ಭಗವದ್ ಗೀತೆಸಿಲಿಕಾನ್ ವೇಫರ್ ಮೇಲೆ ಭಗವದ್ಗೀತೆ!/nri/article/2009/0505-bhagavad-gita-on-silicon-wafer-pr-mukund.htmlಖಿಲವಾಗುತ್ತಿರುವ ಪುರಾತನ ಕಾಲದ ಅಮೂಲ್ಯವಾದ ಗ್ರಂಥಗಳನ್ನು ಸಿಲಿಕಾನ್ ವೇಫರ್ ಮೇಲೆ ಮೂಡಿಸಿ ಅಖಿಲವಾಗಿಸುವ ನಿಟ್ಟಿನಲ್ಲಿ ಅಮೆರಿಕದಲ್ಲಿರುವ ಬಸವನಗುಡಿಯ ಪಿಆರ್ ಮುಕುಂದ್ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇದಕ್ಕಾಗಿಯೇ ಪ್ರೋಫೆಸರ್ ಗಿರಿಯನ್ನು ತ್ಯಜಿಸಿರುವ ಅವರು ನ್ಯಾನೋಆರ್ಕ್ ಎಂಬ ಕಂಪನಿಯನ್ನು ಹುಟ್ಟುಹಾಕಿದ್ದಾರೆ. ಮುಟ್ಟಿದರೆ ಮುರಿಯುವ ಸ್ಥಿತಿಯಲ್ಲಿರುವ ಪುರಾತನ ಕನ್ನಡ ಗ್ರಂಥಗಳೂ ಎಂದೂ ಅಳಿಯದ ಸಿಲಿಕಾನ್ ವೇಫರ್ಸ್ ಮೇಲೆ ಸಿಗುವಂತಾಗಲಿ.* ಟಿ. ಮಹದೇವ ರಾವ್, 36412http://kannada.oneindia.com/img/2009/05/05-silicon-wafers1.jpg284028ಭಗವದ್ ಗೀತೆಈ ಜೀವನವೇ ಒಂದು ಯುದ್ಧ : ಭಗವದ್ ಗೀತೆ/column/gv/2009/0711-life-is-like-a-war-bhagavad-gita.htmlಭಗದ್ಗೀತೆಯು ನಮ್ಮ ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ನಮ್ಮ ಜೀವನವೇ ಒಂದು ಯುದ್ಧದಂತೆ ಇದೆ. ಹೆಜ್ಜೆಹೆಜ್ಜೆಗೂ ನಾವು ಸಮಸ್ಯೆಗಳನ್ನು ಎದುರಿಸುತ್ತೇವೆ. ಜೀವನದ ಯುದ್ಧದಲ್ಲಿ ನಾವು ವಿಜಯವನ್ನು ಸಂಪಾದಿಸಬೇಕಾದರೆ ನಾವು ಸಮಸ್ಯೆಗಳನ್ನು ಎದುರಿಸಬೇಕು.700 ಶ್ಲೋಕಗಳಿರುವ ಈ ವಾಮನ ಗಾತ್ರದ ಧರ್ಮಸಂಹಿತೆಯ ಬಗ್ಗೆ ಟೀಕೆ-ಟಿಪ್ಪಣಿ-ವ್ಯಾಖ್ಯಾನ-ಪ್ರವಚನಗಳ ಗಾತ್ರ ಲಕ್ಷಾವಧಿಯಾಗಿದೆ, ತ್ರಿವಿಕ್ರಮಾಕಾರದಲ್ಲಿ ಬೆಳೆದುನಿಂತಿದೆ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಜಗತ್ತಿನ ಯಾವ ಧರ್ಮಗ್ರಂಥಕ್ಕೂ 37922http://kannada.oneindia.com/img/2009/07/11-bhagavadgita1.jpg284029ಆನಂದರಾಮ್ ಶಾಸ್ತ್ರೀಆದಿಶಂಕರ ಪ್ರಣೀತ ಜೀವನತತ್ತ್ವ/festivals/shivaratri/2009/0223-adi-shankaracharya-philisophy-on-happiness.htmlಉಪಭೋಗವನ್ನೇ ಆನಂದವೆಂದು ಭ್ರಮಿಸಿ ಬಾಳು ವ್ಯರ್ಥ ಮಾಡಿಕೊಳ್ಳುವುದು ಬೇಡ. ಜೀವನಾನಂದದ ಹಿಮಾಲಯವೇರಿದ ಆದಿಶಂಕರರ ನುಡಿಗಳನ್ನು ಮನನ ಮಾಡಿಕೊಳ್ಳೋಣ. ಭಗವದ್ ಗೀತೆಯಲ್ಲಿ ಹೇಳಿದಂತೆ ದುಃಖದ ಸಂದರ್ಭಗಳಲ್ಲಿ ಉದ್ವೇಗಕ್ಕೊಳಗಾಗದೆ ಮತ್ತು ಸುಖದ ಸನ್ನಿವೇಶಗಳಲ್ಲಿ ನಿಷ್ಪೃಹರಾಗುವ ಸಂಕಲ್ಪವನ್ನೂ ಮಹಾಶಿವರಾತ್ರಿಯ ಈ ದಿನ ನಾವು ಮಾಡೋಣ.* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರುಮಹಾಶಿವರಾತ್ರಿಯ ಸಂದರ್ಭದಲ್ಲಿ ಆದಿಶಂಕರರ ಕೆಲವು ನುಡಿಗಳನ್ನು ಮನನ ಮಾಡಿಕೊಳ್ಳಲೆತ್ನಿಸೋಣ. ಜಾಗತೀಕರಣದ ನೆರವಿನಿಂದ 34821http://kannada.oneindia.com/img/2009/02/23-adi-shankaracharya.jpg284029ಆನಂದರಾಮ್ ಶಾಸ್ತ್ರೀ'ಸ್ಲಂಡಾಗ್..': ನೋ ಆಸ್ಕರ್, ನೋ ಟೆಲ್ಲರ್!/movies/review/2009/03/10-slum-dog-millionaire-review-anandram-sastri.htmlಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕಾಗಿ ರೆಹಮಾನ್ ಮತ್ತಿತರರಿಗೆ ಆಸ್ಕರ್ ಬಂದಿದ್ದು ಸಂತೋಷವೆ. ಆದರೆ, ಆ ಚಿತ್ರ ಅಷ್ಟು ಹೊಗಳಿಕೆಗೆ ಅರ್ಹವೆ? ಖಂಡಿತ ಇಲ್ಲ. ನಮ್ಮ ಭಾರತೀಯ ಚಿತ್ರರಂಗ ಅದಕ್ಕಿಂತಲೂ ಅತ್ಯದ್ಭುತ ಸಾಧನೆ ಮಾಡಿದೆ. ಅಜರಾಮರ ಅನ್ನಿಸುವಂಥ ಸಂಗೀತ ನೀಡಿದವರಿದ್ದಾರೆ. ಆದರೆ ನಮ್ಮ ಮಾಧ್ಯಮಗಳು ಒಂದು ಹೆಜ್ಜೆ ಮುಂದೇ ಹೋಗಿ ಸ್ಲಂಡಾಗ್ ಭಾರತೀಯ ಸಂಸ್ಕೃತಿಗೆ ಹಿಡಿದ ಕನ್ನಡಿ ಎಂಬಂತೆ ಬಿಂಬಿಸುತ್ತಿವೆ. 35136http://kannada.oneindia.com/img/2009/03/10-slum-dog-millionaire1.jpg284029ಆನಂದರಾಮ್ ಶಾಸ್ತ್ರೀಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg284029ಆನಂದರಾಮ್ ಶಾಸ್ತ್ರೀಇವರಿಗೆ ಕೊಳೆಗೇರಿ ನೋಡುವ ತವಕವಂತೆ!/literature/articles/2009/0331-slum-dog-millionaire-effect-on-foreigners.html'ಸ್ಲಂಡಾಗ್ ಮಿಲಿಯನೇರ್' ಚಿತ್ರದ ಬಗ್ಗೆ ಫ್ರಾಂಕ್ವಾ ಗೋತಿಯೆ ಅವರು ಬರೆದು ಡಾ. ಮೈ.ಶ್ರೀ.ನಟರಾಜರು ಅನುವಾದಿಸಿದ ಲೇಖನವನ್ನು ಈ ಜಾಲತರಂಗದಲ್ಲಿ ಈಚೆಗಷ್ಟೇ ಓದಿದಿರಿ. ಸದರಿ ಚಿತ್ರದ ಬಗ್ಗೆ ನಟರಾಜರ ಇನ್ನೊಂದು ಬರಹವನ್ನೂ 'ಜಾಲತರಂಗ'ದಲ್ಲಿ ಹಾಗೂ ನನ್ನ ಲೇಖನವನ್ನೂ ಕೂಡ ನೀವೆಲ್ಲ ಓದಿದ್ದೀರಿ. ಇದೀಗ ನನ್ನ ಅನುಭವವೊಂದನ್ನು ಇಲ್ಲಿ ದಾಖಲಿಸಲಿಚ್ಛಿಸುತ್ತೇನೆ.'ಸ್ಲಂಡಾಗ್ ಮಿಲಿಯನೇರ್' ಬಗ್ಗೆ ನನ್ನ ಬರಹವು ಈ ಜಾಲತರಂಗದಲ್ಲಿ ಪ್ರಕಟವಾದ 35631http://kannada.oneindia.com/img/2009/03/31-slum-dog-millionaire2.jpgnews"> ಆದಿಶಂಕರ ಪ್ರಣೀತ ಜೀವನತತ್ತ್ವ | Mahashivaratri | Adi Shankaracharya | Happiness - ಆದಿಶಂಕರ ಪ್ರಣೀತ ಜೀವನತತ್ತ್ವ - Kannada Oneindia

ಆದಿಶಂಕರ ಪ್ರಣೀತ ಜೀವನತತ್ತ್ವ

Adi Shankaracharyas philisophy of attaining happiness
ಉಪಭೋಗವನ್ನೇ ಆನಂದವೆಂದು ಭ್ರಮಿಸಿ ಬಾಳು ವ್ಯರ್ಥ ಮಾಡಿಕೊಳ್ಳುವುದು ಬೇಡ. ಜೀವನಾನಂದದ ಹಿಮಾಲಯವೇರಿದ ಆದಿಶಂಕರರ ನುಡಿಗಳನ್ನು ಮನನ ಮಾಡಿಕೊಳ್ಳೋಣ. ಭಗವದ್ ಗೀತೆಯಲ್ಲಿ ಹೇಳಿದಂತೆ ದುಃಖದ ಸಂದರ್ಭಗಳಲ್ಲಿ ಉದ್ವೇಗಕ್ಕೊಳಗಾಗದೆ ಮತ್ತು ಸುಖದ ಸನ್ನಿವೇಶಗಳಲ್ಲಿ ನಿಷ್ಪೃಹರಾಗುವ ಸಂಕಲ್ಪವನ್ನೂ ಮಹಾಶಿವರಾತ್ರಿಯ ಈ ದಿನ ನಾವು ಮಾಡೋಣ.

* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಮಹಾಶಿವರಾತ್ರಿಯ ಸಂದರ್ಭದಲ್ಲಿ ಆದಿಶಂಕರರ ಕೆಲವು ನುಡಿಗಳನ್ನು ಮನನ ಮಾಡಿಕೊಳ್ಳಲೆತ್ನಿಸೋಣ. ಜಾಗತೀಕರಣದ ನೆರವಿನಿಂದ ನಮ್ಮ ಉಪಭೋಗ ಸಂಸ್ಕೃತಿಯು ವರ್ಧಿಸುತ್ತಿದೆಯಷ್ಟೆ. ಅದೇವೇಳೆ, ನಮ್ಮ ಆಯುಷ್ಯ ಕ್ಷಯಿಸುತ್ತಲೇ ಇದೆ. ಉಪಭೋಗಗಳ ಅನುಭವಕ್ಕಾಗಿಯೇ ನಮ್ಮ ಸಂಪೂರ್ಣ ಜೀವನವನ್ನು ವ್ಯಯಿಸಿಬಿಡುತ್ತೇವಲ್ಲಾ, ಜೀವನದ ಅರ್ಥ, ಉದ್ದೇಶ ಇಷ್ಟೇಯೇ?

'ದಿನಮಪಿ ರಜನೀ ಸಾಯಂ ಪ್ರಾತಃ
ಶಿಶಿರವಸಂತೌ ಪುನರಾಯಾತಃ
ಕಾಲಃ ಕ್ರೀಡತಿ ಗಚ್ಛತ್ಯಾಯುಃ
ತದಪಿ ನ ಮುಂಚತ್ಯಾಶಾವಾಯುಃ' ('ಚರ್ಪಟ ಪಂಜರಿಕಾ')

'ಹಗಲು-ರಾತ್ರಿ, ಸಂಜೆ-ಬೆಳಗು, ಚಳಿಗಾಲ-ವಸಂತಕಾಲ ಇವೆಲ್ಲ ಪುನಃಪುನಃ ಬರುತ್ತ ಹೋಗುತ್ತ ಇರುತ್ತವೆ. ಇದು ಕಾಲನ ಆಟ. ಪರಿಣಾಮ, ನಮ್ಮ ಆಯುಷ್ಯದ ಕ್ಷಯ. ಆದರೆ, ಆಯುಷ್ಯ ಕುಂದುತ್ತಿದ್ದರೂ ಆಶೆ ಮಾತ್ರ ಬೆಳೆಯುತ್ತಲೇ ಇರುತ್ತದಲ್ಲ!' ಈ ಆಶೆಯ ಬೆಂಬತ್ತಿ, ಉಪಭೋಗವನ್ನೇ ಆನಂದವೆಂದು ಭ್ರಮಿಸಿ, ಜೀವನವನ್ನು ಅರಿಯಲಾರದವರಾಗಿ, ಕೊನೆಗೊಮ್ಮೆ ಭ್ರಮನಿರಸನ ಹೊಂದಿ, ಅಷ್ಟರಲ್ಲಿ ಕಾಲ ಮಿಂಚಿಹೋಗಿರುವುದರಿಂದಾಗಿ ಬಾಳನ್ನು ವ್ಯರ್ಥಮಾಡಿಕೊಳ್ಳುತ್ತೇವಲ್ಲಾ, ಅದರ ಬದಲು, ವೇದಾಂತವೆಂದು ನಾವು ಉಪೇಕ್ಷಿಸುವ ಜೀವನತತ್ತ್ವವನ್ನೊಂದಿಷ್ಟು ಅರಿಯಲು ಯತ್ನಿಸಬಾರದೇಕೆ?

'ನ ಭೂಮಿರ್ನ ತೋಯಂ, ನತೇಜೋ ನ ವಾಯುರ್
ನ ಖಂ ನೇಂದ್ರಿಯಂ ವಾ, ನ ತೇಷಾಂ ಸಮೂಹಃ
ಅನೈಕಾಂತಿಕತ್ವಾತ್ ಸುಷುಪ್ತೈಕ ಸಿದ್ಧಃ
ತದೇಕೋವಶಿಷ್ಟಃ ಶಿವಃ ಕೇವಲೋಹಂ' ('ದಶಶ್ಲೋಕೀ')

'ನಾನು ಭೂಮಿಯಲ್ಲ, ನೀರಲ್ಲ, ತೇಜಸ್ಸಲ್ಲ, ವಾಯುವಲ್ಲ, ಆಕಾಶವಲ್ಲ, ಇಂದ್ರಿಯವೂ ಅಲ್ಲ. ಇವೆಲ್ಲವುಗಳ ಸಮೂಹವೂ ನಾನಲ್ಲ. ಏಕೆಂದರೆ, ಇವುಗಳಿಗೆ ಏಕೀಭಾವ ಸ್ಥಿರವಾಗಿಲ್ಲ. ಆದ್ದರಿಂದ, ಗಾಢನಿದ್ರಾವಸ್ಥೆಯಲ್ಲಿ ಪ್ರತ್ಯೇಕವಾಗಿ ಇವುಗಳಿಂದಾಚೆ ಎದ್ದು ಉಳಿಯುವ ಶಿವ(ದೈವ)ತತ್ತ್ವವೇ ನಾನು.' ಇಂಥದೊಂದು ಅರಿವನ್ನು ಬೆಳೆಸಿಕೊಂಡಾಗ ನಾವು ಹೊಂದುವ ಆನಂದ ಅದುವೇ ನಿಜವಾದ ಜೀವನಾನಂದ. ಅಂಥ ಆನಂದವು ನಮಗೆ ಉಪಭೋಗವಸ್ತುಗಳಿಂದ ದೊರಕಲು ಸಾಧ್ಯವೆ? ಜೀವನದ ಈ ಆನಂದಘಟ್ಟವನ್ನು ತಲುಪಿದ ಆದಿಶಂಕರರು ಹಿಮಾಲಯದಲ್ಲಿ ಲೀನವಾಗುವ ಮುನ್ನಾ ರಾತ್ರಿ ಹೇಳಿಕೊಳ್ಳುತ್ತಿದ್ದರು,

'ಮನೋಬುದ್ಧ್ಯಹಂಕಾರಚಿತ್ತಾನಿ ನಾಹಂ
ನಚಶ್ರೋತ್ರಜಿಹ್ವೇನ ಚ ಘ್ರಾಣ ನೇತ್ರೇ
ನಚ ವ್ಯೋಮ ಭೂಮಿರ್ನತೇಜೋನವಾಯುಃ
ಚಿದಾನಂದರೂಪಃ ಶಿವೋಹಂ ಶಿವೋಹಂ'

'ಅಂತಃಕರಣಗಳಾದ ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇವು ನಾನಲ್ಲ. ಜ್ಞಾನೇಂದ್ರಿಯಗಳಾದ ಕಿವಿ, ನಾಲಗೆ, ಮೂಗು, ಕಣ್ಣು, ಚರ್ಮ ಇವು ನಾನಲ್ಲ. ಪಂಚಭೂತಗಳಾದ ಆಕಾಶ, ಭೂಮಿ, ತೇಜಸ್ಸು, ವಾಯು, ಜಲ ಇವು ನಾನಲ್ಲ. ಚಿದಾನಂದರೂಪನಾದ ಶಿವನೇ ನಾನು, ಶಿವನೇ ನಾನು, ಶಿವನೇ ನಾನು.'

ಇಂಥ ಜೀವನದೃಷ್ಟಿಯನ್ನು ರೂಢಿಸಿಕೊಂಡರೆ ನಮಗೆ ಈ ಜೀವಿತದಲ್ಲಿ ಮೋಹಜನ್ಯ ಕಳವಳವೆಂಬುದಿಲ್ಲ. 'ದುಃಖೇಷು ಅನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ' ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವಂತೆ ನಾವು ದುಃಖದ ಸಂದರ್ಭಗಳಲ್ಲಿ ಉದ್ವೇಗಕ್ಕೊಳಗಾಗದೆ ಮತ್ತು ಸುಖದ ಸನ್ನಿವೇಶಗಳಲ್ಲಿ ನಿಷ್ಪೃಹರಾಗಿ ಮುನ್ನಡೆಯಬಹುದಲ್ಲವೆ? ಇದಕ್ಕಿಂತ ಸೌಭಾಗ್ಯ ನಮಗೆ ಈ ಜೀವನದಲ್ಲಿ ಇನ್ನೊಂದುಂಟೆ? ಈ ನಿಟ್ಟಿನಲ್ಲಿ ಪ್ರಯತ್ನಶೀಲರಾಗುವ ಸಂಕಲ್ಪವನ್ನು ಮಹಾಶಿವರಾತ್ರಿಯ ಈ ದಿನ ನಾವು ಮಾಡೋಣವಲ್ಲವೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+