ಸಿಲಿಕಾನ್ ವ್ಯಾಲಿ ವಚನಗಳು
ತಂದೆ ನೀನು, ತಾಯಿ ನೀನು
ಬಂಧು ನೀನು, ಬಳಗ ನೀನು
ನೀನಲ್ಲದೆ ನನಗೆ ಮತ್ತಾರು ಇಲ್ಲವಯ್ಯ
ಬೆಂಗಳೂರು ಗಣಕ ಯಂತ್ರಯ್ಯ
ನೀರಿಗೆ ನೈದಿಲೆಯೇ ಶೃಂಗಾರ
ಸಮುದ್ರಕೆ ತೆರೆಯೆ ಶೃಂಗಾರ
ನಾರಿಗೆ ಗುಣವೇ ಶೃಂಗಾರ
ಗಗನಕೆ ಚಂದ್ರಮನೆ ಶೃಂಗಾರ
ನಮ್ಮ ಬೆಂಗಳೂರು ಐಟಿ ಹುಡುಗಿಯರಿಗೆ ಈ-ಮೇಯ್ಲ್ ಗಳೇ ಶೃಂಗಾರ...
ಪ್ರೊಜೆಕ್ಟ್ ಡೆಡ್ ಲೈನ್ ಎಕ್ಸ್ಟೆಂಡ್ ಮಾಡದ ಪಿಯಮ್ಮೂ
ಹಗಲೆಲ್ಲಾ ಕಾಡುವ ಕ್ಲೈಂಟೂ
ಈ-ಮೇಯ್ಲಿಗೆ ರಿಪ್ಲೈ ಮಾಡದ ಗೆಳೆಯರು ಶುದ್ಧ ವೈರಿಗಳು ಸರ್ವಜ್ಞ
ಎಲ್ಲ ಬಲ್ಲವರಿಲ್ಲ , ಬಲ್ಲವರು ಬಹಳಿಲ್ಲ
ಬಲವಿಲ್ಲ ಬಲ್ಲವರಿದ್ದು, ಐಟಿ ಫೀಲ್ಡು
ಎಲ್ಲರಿಗಲ್ಲ ಸರ್ವಜ್ಞ
ಈ ಮೇಯ್ಲ್ಗಳು ಸೆಂಡ್ ರಿಸೀವ್ ಮಾಡಿದರೆ ಫಲವೇನು
ಎತ್ತು ಗಾಣವನು ಹೊತ್ತು ತಾ
ನಿತ್ಯದಲ್ಲಿ ಸುತ್ತಿ ಬಂದಂತೆ ಸರ್ವಜ್ಞ
ಬೆಂಗಳೂರಿನ ಐಟಿ ಕಂಪೆನಿಯಲ್ಲಿ , ಸಾಫ್ಟ್ವೇರ್ ಇಂಜಿನಿಯರಾಗಿ ಕೆಲಸವಿರಲು
ಕುಡಿದು ತಿಂದು ಮಜಾ ಮಾಡುವಷ್ಟು ಸಂಬಳವಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ
ಕುಡಿದದ್ದು ತನಗೆ, ಕುಡಿಸಿದ್ದು ಪರರಿಗೆ
ಕುಡಿಸಿದ್ದು ಕೆಡಿಸಿತೆನಬೇಡ
ಕುಡಿದವರು, ಒಮ್ಮೆ ನಿನಗೂ ಕುಡಿಸುವರು ಸರ್ವಜ್ಞ
ಸಾಫ್ಟ್ವೇರ್ ಇಂಜಿನಿಯರ್ ಎನ್ನುವವನು ಗರ್ವದಿಂದಾದವನೆ...?
ಸರ್ವರೊಳಗೊಂದಾಗು ಪ್ರೋಗ್ರಾಂ ಕಲಿತು
ಸಾಫ್ಟ್ವೇರ್ ಪರ್ವತವೇ ಆದ ಸರ್ವಜ್ಞ
ಕೋಡಿಂಗ್ ಮಾಡಿದರೆ ಮುತ್ತಿನ ಹಾರದಂತಿರಬೇಕು
ಕೋಡಿಂಗ್ ಮಾಡಿದರೆ, ಪ್ರೊಜೆಕ್ಟ್ ಬಗ್ ಫ್ರೀ ಇರಬೇಕು
ಕೋಡಿಂಗ್ ಮಾಡಿದರೆ ಕ್ಲೈಂಟ್ ಮೆಚ್ಚಿ ಅಹುದಹುದೆನಬೇಕು
ಹೀಗೆ ಕೋಡಿಂಗ್ ಮಾಡದಿದ್ದರೆ ಮೆಚ್ಚ ನಮ್ಮ ಬಾಗಲಕೋಟೆ ಗಣಕ ಯಂತ್ರಯ್ಯ...
ಆಡದೆಲೆ ಕೋಡಿಂಗ್ ಮಾಡುವವನು ರೂಢಿಯಾಳಗುತ್ತಮನು
ಆಡಿ ಕೋಡಿಂಗ್ ಮಾಡುವವನು ಮಧ್ಯಮನು
ಅಧಮ ತಾನಾಡಿ ಕೋಡಿಂಗ್ ಮಾಡದವನು ಸರ್ವಜ್ಞ
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications