Ram Navami 2025: ರಾಮ ನವಮಿ ಯಾವಾಗ? ಸರಿಯಾದ ದಿನಾಂಕ, ಶುಭ ಸಮಯ, ಮಹತ್ವ, ಪೂಜಾ ವಿಧಿ

ಪ್ರತಿ ವರ್ಷ ರಾಮ ನವಮಿಯ ಹಬ್ಬವನ್ನು ಭಾರತದಾದ್ಯಂತ ಸಡಗರ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಪವಿತ್ರ ಹಬ್ಬವನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮ ವಾರ್ಷಿಕೋತ್ಸವವಾಗಿ ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ ಶ್ರೀರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಜನಿಸಿದನು. ಆದ್ದರಿಂದ ಈ ದಿನವನ್ನು ರಾಮ ನವಮಿ ಎಂದು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನದಂದು ಸಿದ್ಧಿದಾತ್ರಿ ದೇವಿಯನ್ನು ಪೂಜಿಸುವುದಕ್ಕೆ ವಿಶೇಷ ಮಹತ್ವವಿದೆ.

ಶ್ರೀರಾಮನ ಜನ್ಮದಿನದಂದು ಆತನನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸುವುದರಿಂದ ಎಲ್ಲಾ ರೀತಿಯ ಸಂತೋಷ ಮತ್ತು ಜೀವನದಲ್ಲಿ ಸಮೃದ್ಧಿ ಸಿಗಲಿದೆ. ಈ ಬಾರಿ ರಾಮ ನವಮಿಯ ದಿನಾಂಕದ ಬಗ್ಗೆ ಭಕ್ತರಲ್ಲಿ ಸ್ವಲ್ಪ ಗೊಂದಲವಿದೆ. ಆದ್ದರಿಂದ ಈ ವರ್ಷ ರಾಮ ನವಮಿ ಯಾವಾಗ ಮತ್ತು ಅದರ ಶುಭ ಸಮಯ ಯಾವುದು ಎಂದು ಈಗ ತಿಳಿಯೋಣ.

ram navami 2025 when is ram navami date shubha muhurta puja vidhi importance in kannada

ರಾಮ ನವಮಿ 2025 ದಿನಾಂಕ

ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯು 2025 ಏಪ್ರಿಲ್ 5ರಂದು ಸಂಜೆ 07:26ಕ್ಕೆ ಪ್ರಾರಂಭವಾಗುತ್ತದೆ. ತಿಥಿಯು ಏಪ್ರಿಲ್ 6ರಂದು ಸಂಜೆ 07:22ಕ್ಕೆ ಕೊನೆಗೊಳ್ಳುತ್ತದೆ. ಹೀಗಾಗಿ ರಾಮ ನವಮಿ ಹಬ್ಬವನ್ನು ಭಾನುವಾರ ಏಪ್ರಿಲ್ 6ರಂದು ಆಚರಿಸಲಾಗುತ್ತದೆ.

Take a Poll

2025ರ ರಾಮ ನವಮಿಯ ವಿಶೇಷ ಮುಹೂರ್ತ

ಪೂಜೆಗೆ ಶುಭ ಸಮಯ: ಬೆಳಿಗ್ಗೆ 11:08ರಿಂದ ಮಧ್ಯಾಹ್ನ 01:39ರವರೆಗೆ

ಬ್ರಹ್ಮ ಮುಹೂರ್ತ: ಬೆಳಿಗ್ಗೆ 04:34 ರಿಂದ 05:20 ರವರೆಗೆ

ವಿಜಯ್ ಮುಹೂರ್ತ: ಮಧ್ಯಾಹ್ನ 02:30 ರಿಂದ 03:20 ರವರೆಗೆ

ಸಂಧ್ಯಾ ಮುಹೂರ್ತ: ಸಂಜೆ 06:41 ರಿಂದ 07:03 ರವರೆಗೆ

ನಿಶ್ಚಿತ ಮುಹೂರ್ತ: ಮಧ್ಯಾಹ್ನ 12:12 ರಿಂದ 12:46 ರವರೆಗೆ

ram navami 2025 when is ram navami date shubha muhurta puja vidhi importance in kannada

ರಾಮ ನವಮಿಯಂದು ಈ ಕೆಲಸ ಮಾಡಿದರೆ ಒಳ್ಳೆಯದು..

ರಾಮನವಮಿಯ ದಿನದಂದು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಜೀವನದಲ್ಲಿ ಸಕಾರಾತ್ಮಕ ಶಕ್ತಿ ಹರಿದು ಬರುತ್ತದೆ. ಜೊತೆಗೆ ತೊಂದರೆಗಳಿಂದ ಮುಕ್ತಿ ಸಿಗಲಿದೆ. ಹಾಗಾದರೆ ಆ ಕ್ರಮಗಳು ಯಾವುವು ಎಂದು ಈಗ ತಿಳಿಯೋಣ.

* ಶ್ರೀರಾಮನನ್ನು ವಿಧಿವಿಧಾನಗಳ ಪ್ರಕಾರ ಪೂಜಿಸಿ ಮತ್ತು ತುಪ್ಪದ ದೀಪವನ್ನು ಬೆಳಗಿಸುವ ಮೂಲಕ ಆರತಿ ಮಾಡಿ.

* ಶ್ರೀರಾಮನ ಹೆಸರನ್ನು ಜಪಿಸಿ ಮತ್ತು ಶ್ರೀಗಂಧದ ತಿಲಕವನ್ನು ಹಚ್ಚಿಕೊಳ್ಳಿ, ಇದು ಜೀವನದಲ್ಲಿ ಮಂಗಳವನ್ನು ಹೆಚ್ಚಿಸುತ್ತದೆ.

* ಶ್ರೀರಾಮ ಸ್ತುತಿಯನ್ನು ಪಠಿಸಿ, ಇದು ಕೆಲಸದಲ್ಲಿ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

* ಈ ದಿನ ಆಹಾರ ಮತ್ತು ಹಣವನ್ನು ದಾನ ಮಾಡಿ, ಅದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಲಿದೆ.

* ಅಗತ್ಯವಿರುವ ಜನರಿಗೆ ಆಹಾರ ನೀಡಿ, ಹೀಗೆ ಮಾಡುವುದರಿಂದ ಶ್ರೀ ರಾಮನ ವಿಶೇಷ ಆಶೀರ್ವಾದ ಸಿಗುತ್ತದೆ.

ರಾಮ ನವಮಿಯ ಮಹತ್ವ

ರಾಮನವಮಿ ಹಬ್ಬ ಸತ್ಯ, ಧರ್ಮ, ನಿಷ್ಠೆ ಮತ್ತು ಘನತೆಯ ಸಂದೇಶವನ್ನು ನೀಡುತ್ತದೆ. ಶ್ರೀರಾಮನ ಜೀವನ ಆದರ್ಶಗಳು ಮತ್ತು ನೈತಿಕ ಮೌಲ್ಯಗಳನ್ನು ಕಲಿಸುತ್ತದೆ. ಈ ದಿನದಂದು ರಾಮಚರಿತಮಾನಸ ಭಜನೆ-ಕೀರ್ತನೆಗಳನ್ನು ಪಠಿಸುವುದು ಮತ್ತು ರಾಮಾಯಣ ಕಥೆಯನ್ನು ಆಯೋಜಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+