Ram Navami 2025 Remedies: ರಾಮ ನವಮಿಯಂದು ಈ ಕೆಲಸ ಮಾಡಿದರೆ ಹನುಮನ ಆಶೀರ್ವಾದ ಖಚಿತ
ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನವನ್ನು ಶ್ರೀ ರಾಮನ ಜನ್ಮ ದಿನವೆಂದು ಆಚರಿಸಲಾಗುವುದು. ಈ ದಿನದಂದು ರಾಮ ಮತ್ತು ಅವನ ಪರಮ ಭಕ್ತ ಹನುಮಂತನನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಅಲ್ಲದೆ ನಕಾರಾತ್ಮಕತೆ ನಾಶವಾಗುತ್ತದೆ ಎಂದು ನಂಬಲಾಗುತ್ತದೆ.
ಭಾರತದಲ್ಲಿ ಎಲ್ಲಾ ಹಬ್ಬಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ರಾಮನವಮಿಗೆ ವಿಶೇಷ ಮಹತ್ವವಿದೆ. ಈ ವರ್ಷ ರಾಮನವಮಿಯನ್ನು ಏಪ್ರಿಲ್ 6 ಭಾನುವಾರ ಆಚರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ರಾಶಿಯ ಪ್ರಕಾರ ರಾಮನವಮಿಯಂದು ಕೆಲ ಕಾರ್ಯಗಳನ್ನು ಮಾಡಿದರೆ ಶ್ರೀರಾಮನ ಕೃಪೆಗೆ ಪಾತ್ರನಾಗುತ್ತಾನೆ. ಹಾಗಾದರೆ ಈ ದಿನದಂದು ವಿವಿಧ ರಾಶಿಗಳ ಜನರು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಈಗ ತಿಳಿಯೋಣ.
ರಾಶಿ ಪ್ರಕಾರ ರಾಮನವಮಿ ಪರಿಹಾರಗಳು:-

ಮೇಷ ರಾಶಿ
ಮೇಷ ರಾಶಿಯವರು ರಾಮ ನವಮಿಯ ದಿನದಂದು ರಾಮ ರಕ್ಷಾ ಸ್ತೋತ್ರವನ್ನು ಪಠಿಸಿ. ದಾಳಿಂಬೆಯನ್ನು ಭಗವಾನ್ ಶ್ರೀ ರಾಮನಿಗೆ ಅರ್ಪಿಸಿ. ಇದು ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ.

ವೃಷಭ ರಾಶಿ
ಈ ದಿನ ವೃಷಭ ರಾಶಿಯವರು ರಾಮ ಸ್ತುತಿಯನ್ನು ಪಠಿಸಿ ಮತ್ತು ಸೀತಾ ದೇವಿಗೆ ಸೀರೆಯನ್ನು ನೀಡಿ. ಈ ಪರಿಹಾರ ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುವಲ್ಲಿ ಸಹಾಯಕವಾಗಿರುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯವರು ರಾಮನವಮಿಯಂದು "ಓಂ ರಾಮಾಯ ನಮಃ" ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಗೋಡಂಬಿ ಬರ್ಫಿ ಅಥವಾ ಇತರ ಸಿಹಿತಿಂಡಿಗಳನ್ನು ಅರ್ಪಿಸಿ. ಇದು ಬುದ್ಧಿವಂತಿಕೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.

ಕರ್ಕಾಟಕ ರಾಶಿ
ಕಟಕ ರಾಶಿಯವರು ಈ ದಿನ ರಾಮ ನವಮಿಯಂದು ಹಳದಿ ಬಟ್ಟೆಗಳನ್ನು ಧರಿಸಿ. ಶ್ರೀ ರಾಮ ಅಷ್ಟಕವನ್ನು ಪಠಿಸಿ. ಶ್ರೀರಾಮನಿಗೆ ತೆಂಗಿನಕಾಯಿ ಅರ್ಪಿಸಿ ಪೂಜಿಸಿ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸಿಂಹ ರಾಶಿ
ಸಿಂಹ ರಾಶಿಯವರು ರಾಮ ನವಮಿಯಂದು ಸುಂದರಕಾಂಡವನ್ನು ಪಠಿಸಿ. ಸೇಬು ಹಣ್ಣಿನ ಪ್ರಸಾದವನ್ನು ಜನರಿಗೆ ಹಂಚಬೇಕು. ಈ ಪರಿಹಾರ ಕೆಲಸದ ಸ್ಥಳದಲ್ಲಿ ಯಶಸ್ಸನ್ನು ತರುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ರಾಮನವಮಿಯಂದು ರಾಮ ಮಂಗಳಶಾಸನ ಸ್ತೋತ್ರವನ್ನು ಪಠಿಸಿ ಮತ್ತು ಶ್ರೀರಾಮನಿಗೆ ತುಳಸಿ ಮತ್ತು ಸಿಹಿ ಖಾದ್ಯಗಳನ್ನು ಅರ್ಪಿಸಿ ಪ್ರಸಾದವಾಗಿ ಜನರಿಗೆ ಹಂಚಬೇಕು. ಇದು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ತುಲಾ ರಾಶಿ
ತುಲಾ ರಾಶಿಯವರು ರಾಮನವಮಿಯಂದು ಬೆಳಗ್ಗೆ ಸೂರ್ಯೋದಕ್ಕಿಂತ ಮುಂಚೆ ಎದ್ದು ಸ್ನಾನ ಮಾಡಿ ಶ್ರೀರಾಮನಿಗೆ ಪೂಜೆ ಮಾಡಿ ಸಾಧ್ಯವಾದರೆ ರಾಮನ ದೇವಸ್ಥಾನಕ್ಕೆ ತೆರಳಿ ದೀಪವನ್ನು ಬೆಳಗಿಸಿ. ಈ ಸಮಯದಲ್ಲಿ ಶ್ರೀ ಪ್ರೇಮಾಷ್ಟಕವನ್ನು ಪಠಿಸಿ. ಐದು ಬಗೆಯ ಹಣ್ಣುಗಳನ್ನು ಅರ್ಪಿಸಿ. ಇದು ಪ್ರೇಮ ಸಂಬಂಧಗಳಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶೀಯವರು ಈ ದಿನ ಹನುಮಾನ್ ಚಾಲೀಸಾವನ್ನು ಪಠಿಸಿ. ಅಕ್ಕಿ ಅಥವಾ ಅವಲಕ್ಕಿಯಿಂದ ಮಾಡಿದ ಪ್ರಸಾದವನ್ನು ದೇವರಿಗೆ ಅರ್ಪಿಸಿ ಭಕ್ತರಿಗೆ ನೀಡಿ. ಇದು ನಕಾರಾತ್ಮಕ ಶಕ್ತಿಗಳನ್ನು ನಾಶಪಡಿಸುತ್ತದೆ. ಈ ದಿನ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡುವುದು ತುಂಬಾ ಒಳ್ಳೆಯ ಫಲ ನಿಡಲಿದೆ.
ಧನು ರಾಶಿ
ಧನು ರಾಶಿಯವರು ರಾಮನವಮಿಯಂದು ಸುಂದರಕಾಂಡ ಪಠಿಸಿ. ಕಡಲೆ ಹಿಟ್ಟಿನ ಲಡ್ಡುಗಳನ್ನು ಶ್ರೀರಾಮನಿಗೆ ಅರ್ಪಿಸಿ. ಈ ಪರಿಹಾರ ಜೀವನದಲ್ಲಿ ಯಶಸ್ಸನ್ನು ತರುವಲ್ಲಿ ಸಹಾಯಕವಾಗಿರುತ್ತದೆ. ರಾಮನವಮಿಯಂದು ಸೀತಾ ಮಾತೆಯನ್ನು ಪೂಜಿಸುವುದು ಧನು ರಾಶಿಯವರಿಗೆ ಶುಭ ಫಲ ನೀಡುತ್ತದೆ.
ಮಕರ ರಾಶಿ
ಮಕರ ರಾಶಿಯವರು ರಾಮನವಮಿಯಂದು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ ಮತ್ತು ಶ್ರೀರಾಮನಿಗೆ ದ್ರಾಕ್ಷಿಯನ್ನು ಅರ್ಪಿಸಿ. ಇದರಿಂದ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರುತ್ತದೆ. ಸಾಧ್ಯವಾದರೆ ಇಂದು ಬಡವರಿಗೆ ದಾನ ಮಾಡಿ ಇದು ರಾಮನ ಆರ್ಶೀವಾದ ಪಡೆಯಲು ಸುಲಭ ದಾರಿ.
ಕುಂಭ ರಾಶಿ
ಕುಂಭ ರಾಶಿಯವರು ರಾಮನವಮಿಯಂದು ಹನುಮಾನ್ ಚಾಲೀಸವನ್ನು ಪಠಿಸಿ ಮತ್ತು ರಾಮನಿಗೆ ಹಲ್ವಾವನ್ನು ತಯಾರಿಸಿ ಅರ್ಪಿಸಿ. ಈ ಪ್ರಸಾದವನ್ನು ಮನೆಯಲ್ಲೇ ತಯಾರಿಸುವುದು ಉತ್ತಮ. ಇದು ಕುಟುಂಬ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಪರಸ್ಪರ ಪ್ರೀತಿ ಹಾಗೂ ನಂಬಿಕೆಯನ್ನು ಹೆಚ್ಚಿಸುತ್ತದೆ.
ಮೀನ ರಾಶಿ
ಮೀನ ರಾಶಿಯವರು ರಾಮನವಮಿಯಂದು ಶ್ರೀರಾಮನ ಸ್ತೋತ್ರವನ್ನು ಪಠಿಸಿ ಮತ್ತು ಹಳದಿ ಬಣ್ಣದ ಜಿಲೇಬಿಯನ್ನು ಪ್ರಸಾದವಾಗಿ ಅರ್ಪಿಸಿ. ಇದನ್ನು ದೇವಸ್ಥಾನಕ್ಕೆ ಬರುವ ಭಕ್ತರಿಗೆ, ಬಡವರಿಗೆ ನೀಡುವುದು ತುಂಬಾ ಶುಭ ಫಲವನ್ನು ನೀಡುತ್ತದೆ. ಈ ಪರಿಹಾರವು ಜೀವನದಲ್ಲಿ ಮಂಗಳಕರ ಮತ್ತು ಸಮೃದ್ಧಿಯನ್ನು ತರುತ್ತದೆ.
ರಾಮನವಮಿ ಕೇವಲ ರಾಮನ ಜನ್ಮ ದಿನಾಚರಣೆಯಲ್ಲ, ಆಧ್ಯಾತ್ಮಿಕವಾಗಿಯೂ ಬಹಳ ಮುಖ್ಯವಾದ ದಿನ. ಈ ದಿನದಂದು ಸರಿಯಾಗಿ ಪೂಜೆ ಮಾಡುವುದರಿಂದ ಮತ್ತು ರಾಶಿಯ ಪ್ರಕಾರ ಕೆಲ ಕಾರ್ಯಗಳನ್ನು ಮಾಡುವುದರಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಹೆಚ್ಚಾಗುತ್ತವೆ. ಎಲ್ಲಾ ತೊಂದರೆಗಳು ಪರಿಹಾರವಾಗುತ್ತವೆ.












Click it and Unblock the Notifications