Raksha Bandhan 2024 Bhadra Kala: ರಕ್ಷಾ ಬಂಧನ ಹಬ್ಬದಂದು ಈ ಸಮಯದಲ್ಲಿ ರಾಖಿ ಕಟ್ಟಲೇ ಬೇಡಿ...
ರಕ್ಷಾ ಬಂಧನ ಮಂಗಳಕರ ಹಿಂದೂ ಹಬ್ಬ. ಈ ವರ್ಷ ಆಗಸ್ಟ್ 19ರಂದು ರಕ್ಷಾ ಬಂಧನ ಆಚರಿಸಲಾಗುತ್ತಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಈ ಹಬ್ಬಕ್ಕೆ ಭದ್ರಕಾಲ ಅಡ್ಡಿಯಾಗುತ್ತಿದೆ. ಅಂದರೆ ಈ ವರ್ಷವೂ ರಕ್ಷಾಬಂಧನದಂದು ಭದ್ರನ ನೆರಳು ಇರಲಿದ್ದು, ಸಹೋದರಿಯರು ಕೆಲ ಗಂಟೆಗಳ ಕಾಲ ರಾಖಿ ಕಟ್ಟುವಂತಿಲ್ಲ.
ಆಗಸ್ಟ್ 19ರಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುತ್ತಾರೆ. ಅವನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಈ ಸಮಯದಲ್ಲಿ ಸಹೋದರ ಸಹೋದರಿಯರನ್ನು ರಕ್ಷಿಸುವ ಭರವಸೆ ನೀಡಿ ಉಡುಗೊರೆಗಳನ್ನು ನೀಡುತ್ತಾರೆ. ಸಹೋದರ ಸಹೋದರಿಯರ ನಡುವಿನ ಪವಿತ್ರ ಸಂಬಂಧವನ್ನು ಗೌರವಿಸುವ ಈ ಹಬ್ಬವನ್ನು ಶ್ರಾವಣ ಮಾಸದ ಕೊನೆಯ ದಿನದಂದು ಅಂದರೆ ಶ್ರಾವಣ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ.

ಈ ವರ್ಷ ಶ್ರಾವಣ ಮಾಸದ ಹುಣ್ಣಿಮೆ ಆಗಸ್ಟ್ 19 ರಂದು ಬರಲಿದೆ. ಹಾಗಾದರೆ ರಕ್ಷಾ ಬಂಧನದ ದಿನ ಯಾವ ಸಮಯ ಶುಭವಾಗಿದೆ. ಭದ್ರನ ನೆರಳು ಎಷ್ಟು ಗಂಟೆಗಳ ಕಾಲ ಉಳಿಯುತ್ತದೆ ಎಂಬುದನ್ನು ಈಗ ತಿಳಿಯೋಣ.
ರಕ್ಷಾಬಂಧನ ದಿನಾಂಕ:-
ಶ್ರಾವಣ ಪೂರ್ಣಿಮೆಯಂದು ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಈ ಬಾರಿ ಶ್ರಾವಣ ಪೂರ್ಣಿಮೆಯು ಆಗಸ್ಟ್ 19 ರಂದು ಬೆಳಗಿನ ಜಾವ 2:05 ರಿಂದ ಪ್ರಾರಂಭವಾಗಿ ರಾತ್ರಿ 11:56ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ ಉದಯ ತಿಥಿಯನ್ನು ಪರಿಗಣಿಸಿ ರಕ್ಷಾಬಂಧನ ಹಬ್ಬವನ್ನು ಆಗಸ್ಟ್ 19ರಂದು ದೇಶದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು.
ರಕ್ಷಾಬಂಧನದಂದು ಭದ್ರಾಕಾಲ ಸಮಯ
ರಕ್ಷಾಬಂಧನ ಎಂದಾಕ್ಷಣ ಎಲ್ಲರ ಮನಸ್ಸಿಗೆ ಮೊದಲು ಬರುವುದು ಭದ್ರಾ ಕಾಲ. ಈ ವರ್ಷ ರಕ್ಷಾಬಂಧನದ ದಿನದಂದು ಬೆಳಿಗ್ಗೆ 5.53 ರಿಂದ ಮಧ್ಯಾಹ್ನ 1.31 ರವರೆಗೆ ಭದ್ರಾಕಾಲ ಇರುತ್ತದೆ. ಈ ವರ್ಷ ಭದ್ರನು ಪಾತಾಳದಲ್ಲಿ ನೆಲೆಸುತ್ತಾನೆ ಎಂದು ಜ್ಯೋತಿಷಿಗಳು ನಂಬುತ್ತಾರೆ. ಆದ್ದರಿಂದ ಇದನ್ನು ತುಂಬಾ ಅಶುಭವೆಂದು ಪರಿಗಣಿಸಲಾಗುವುದಿಲ್ಲ.

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಭದ್ರನು ಭೂಗತ ಅಥವಾ ಸ್ವರ್ಗದಲ್ಲಿ ನೆಲೆಸಿದಾಗ, ಭೂಮಿಯ ಜನರಿಗೆ ಹೆಚ್ಚಿನ ಹಾನಿ ಮಾಡುವುದಿಲ್ಲ. ಆದರೆ ಭದ್ರಾ ಅವಧಿ ಮುಗಿದ ನಂತರವೇ ರಕ್ಷಾಬಂಧನದ ಹಬ್ಬವನ್ನು ಆಚರಿಸುವುದು ಉತ್ತಮ ಎಂದು ಸಹೋದರ ಸಹೋದರಿಯರಿಗೆ ಸಲಹೆ ನೀಡಲಾಗುತ್ತದೆ.
ರಕ್ಷಾಬಂಧನದಂದು ರಾಖಿ ಕಟ್ಟಲು ಅತ್ಯಂತ ಮಂಗಳಕರ ಸಮಯವೆಂದರೆ ಮಧ್ಯಾಹ್ನ 1:32 ರಿಂದ ರಾತ್ರಿ 9:08 ರವರೆಗೆ. ಅಂದರೆ ಸಹೋದರಿಯರಿಗೆ ರಾಖಿ ಕಟ್ಟಲು ಒಟ್ಟು 7 ಗಂಟೆ 38 ನಿಮಿಷ ಸಿಗಲಿದೆ. ಈ ವರ್ಷ ರಕ್ಷಾಬಂಧನದಂದು ಸರ್ವಾರ್ಥ ಸಿದ್ಧಿ ಯೋಗ, ಶೋಭನ ಯೋಗ ಮತ್ತು ರವಿ ಯೋಗದ ಶುಭ ಸಂಯೋಗವಿದೆ. ಈ ಮಂಗಳಕರ ದಿನದಂದು ರಾಖಿ ಕಟ್ಟುವುದರಿಂದ ಸಹೋದರ ಮತ್ತು ಸಹೋದರಿಯರ ನಡುವಿನ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಇಬ್ಬರ ಮನೆಗಳಿಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.












Click it and Unblock the Notifications