Get Updates
Get notified of breaking news, exclusive insights, and must-see stories!

Raksha Bandhan 2023: ರಕ್ಷಾ ಬಂಧನ ಆಚರಿಸುವಾಗ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು

ರಕ್ಷಾ ಬಂಧನ ಒಡಹುಟ್ಟಿದವರ, ವಿಶೇಷವಾಗಿ ಸಹೋದರಿ ಮತ್ತು ಸಹೋದರರ ನಡುವಿನ ಪ್ರೀತಿಯ ಅಲಿಖಿತ ಬಂಧವನ್ನು ನವೀಕರಿಸುವ ದಿನವಾಗಿದೆ. ಈ ಸುಂದರವಾದ ಬಂಧವನ್ನು ಶ್ರಾವಣ ಮಾಸದ ಕೊನೆಯ ದಿನ ಅಥವಾ ಈ ತಿಂಗಳ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. 2023 ರಲ್ಲಿ ರಕ್ಷಾ ಬಂಧನ ಅಥವಾ ರಾಖಿ ಎರಡು ದಿನಗಳವರೆಗೆ ಇರುತ್ತದೆ. ಅಂದರೆ ಆಗಸ್ಟ್ 30 ಮತ್ತು ಆಗಸ್ಟ್ 31.

ರಾಖಿ ಕಟ್ಟಲು ಶುಭ ಮುಹೂರ್ತವೆಂದರೆ ಆಗಸ್ಟ್ 30 ಬುಧವಾರದಂದು ಬೆಳಿಗ್ಗೆ 10:58 ರಿಂದ ಆಗಸ್ಟ್ 31ರ ಗುರುವಾರದಂದು ಬೆಳಿಗ್ಗೆ 7:05ವರೆಗೆ ಎಂದು ಹೇಳಲಾಗುತ್ತದೆ. ರಕ್ಷಾ ಬಂಧನ ಭಾರತದಲ್ಲಿನ ಒಡಹುಟ್ಟಿದವರಿಗಾಗಿ ಇರುವ ಹಬ್ಬವಾಗಿದೆ. ಸಹೋದರಿಯರು ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರೆ, ಸಹೋದರ ಸಹೋದರಿಯನ್ನು ಜೀವನಪರ್ಯಂತ ರಕ್ಷಿಸುವ ಭರವಸೆ ನೀಡುತ್ತಾನೆ.

Raksha Bandhan 2023: Dos and Donts while celebrating Raksha Bandhan

ಹಬ್ಬದ ಸಮಯದಲ್ಲಿ ಹುಡುಗಿಯರು ತಮ್ಮ ಅಂಗೈಯಲ್ಲಿ ಮೆಹಂದಿ ಅಥವಾ ಗೋರಂಟಿ ವಿನ್ಯಾಸವನ್ನು ಬಿಡಿಸಿಕೊಳ್ಳುವುದನ್ನು ನೋಡುವುದು ಸಾಮಾನ್ಯವಾಗಿದೆ. ರಕ್ಷಾ ಬಂಧನದ ಸುಂದರ ಹಬ್ಬವನ್ನು ಆಚರಿಸುವಾಗ ಮಾಡಬೇಕಾದ ಮತ್ತು ದೂರವಿಡಬೇಕಾದ ವಿಷಯಗಳ ಕುರಿತು ಇನ್ನಷ್ಟು ತಿಳಿದುಕೊಳ್ಳೋಣ.

ರಕ್ಷಾ ಬಂಧನಕ್ಕೆ ಮಾಡಬೇಕಾದದ್ದು

*ಸಹೋದರಿಯರು ಮುಂಜಾನೆ ಬೇಗ ಎದ್ದು, ಸ್ನಾನ ಮಾಡಿ ಶುಭ ಸೂಚನೆಯ ಮೇಲೆ ದಿನವನ್ನು ಪ್ರಾರಂಭಿಸಬೇಕು

*ಅಕ್ಷತೆ, ಚಂದನ, ಸಿಹಿತಿಂಡಿಗಳು, ರಾಖಿಗಳು, ಒಂದು ದೀಪ ಮತ್ತು ಕಲಶದಂತಹ ಎಲ್ಲಾ ಅಗತ್ಯ ವಸ್ತುಗಳನ್ನು ಹೊಂದಿರುವ ಪೂಜೆ ಪಾತ್ರೆಯಲ್ಲಿ ಇರಿಸಬೇಕು.

*ಈ ದಿನದಂದು ದೀಪವನ್ನು ಬೆಳಗಿಸಲಾಗುತ್ತದೆ ಮತ್ತು ಸಹೋದರಿಯರು ತಮ್ಮ ಸಹೋದರರ ಮನೆಗೆ ಭೇಟಿ ನೀಡುತ್ತಾರೆ ಅಥವಾ ರಾಖಿ ಆಚರಣೆಗಾಗಿ ಸಹೋದರ ಸಹೋದರಿಯನ್ನು ಭೇಟಿ ಮಾಡುತ್ತಾರೆ.

Raksha Bandhan 2023: Dos and Donts while celebrating Raksha Bandhan

*ಆಚರಣೆಗಳನ್ನು ಪ್ರಾರಂಭಿಸಲು, ಪೂರ್ವ ಅಥವಾ ಪಶ್ಚಿಮಕ್ಕೆ ಎದುರಾಗಿ ಮರದ ಹಲಗೆಯ ಮೇಲೆ ಸಹೋದರನು ಕುಳಿತುಕೊಳ್ಳಬೇಕು.

*ಸಹೋದರನ ಹಣೆಯ ಮೇಲೆ ತಿಲಕವನ್ನು ಹಚ್ಚಿ, ನಂತರ ನಿಮ್ಮ ಸಹೋದರನಿಗೆ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಗಣಪತಿಗೆ ಪ್ರಾರ್ಥಿಸಿ ನಂತದ ಅದನ್ನು ಸಹೋದರನ ಕೈಗೆ ಕಟ್ಟಬೇಕು.

*ಈ ದಿನ ಅವರಿಗೆ ಶುಭ ಹಾರೈಸಬೇಕು. ಸಹೋದರನ ಕೈಗೆ ರಾಖಿ ಕಟ್ಟುವಾಗ ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಬೇಕು. ರಾಖಿ ಕಟ್ಟುವಾಗ ಅಣ್ಣ-ತಂಗಿಯರಿಬ್ಬರೂ ತಲೆಗೆ ದೊಡ್ಡ ಕರವಸ್ತ್ರ ಅಥವಾ ಅದೇ ಗಾತ್ರದ ಬಟ್ಟೆ ಅಥವಾ ಹೆಣ್ಣುಮಕ್ಕಳಿಗೆ ದುಪಟ್ಟಾ ಅಥವಾ ಪಲ್ಲು ಹಾಕುವುದು ಮುಖ್ಯ.

*ಆಧ್ಯಾತ್ಮಿಕತೆಗೆ ಸೇರಿಸಲು ಸ್ವಸ್ತಿಕ ಅಥವಾ ಓಂ ನಂತಹ ಮಂಗಳಕರ ಚಿಹ್ನೆಗಳನ್ನು ಹೊಂದಿರುವ ರಾಖಿಗಳನ್ನು ನೀವು ಆರಿಸಿಕೊಳ್ಳಿ.

*ನಿಮ್ಮ ಸಹೋದರನ ಬಲಕೈಗೆ ರಾಖಿ ಕಟ್ಟಿ, ಅವರಿಗೆ ದೀರ್ಘಾಯುಷ್ಯ ಸಿಗಲಿ ಎಂದು ಪ್ರಾರ್ಥಸಿ. ಅದರ ನಂತರ ಸಹೋದರಿ ಚಿಕ್ಕವರಾಗಿದ್ದರೆ ಸಹೋದರನ ಆಶೀರ್ವಾದವನ್ನು ಪಡೆಯಬೇಕು. ನೀವು ಅಕ್ಕನಾಗಿದ್ದರೆ, ಅವರ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಅವರನ್ನು ಪೂರ್ಣ ಹೃದಯದಿಂದ ಆಶೀರ್ವದಿಸಬೇಕು.

*ಒಡಹುಟ್ಟಿದವರು ಪರಸ್ಪರ ಥಾಲಿಯಿಂದ ಸಿಹಿ ತಿನ್ನುತ್ತಾರೆ. ಸಹೋದರರು ತಮ್ಮ ಸಹೋದರಿಯರಿಗೆ ಏನನ್ನಾದರೂ ಉಡುಗೊರೆಯಾಗಿ ನೀಡುವುದು ವಾಡಿಕೆ ಇದೆ.

*ಈ ದಿನಗಳಲ್ಲಿ ಸಹೋದರಿಯರು ಸಹ ತಮ್ಮ ಸಹೋದರರಿಗೆ ಉಡುಗೊರೆಯಾಗಿ ನೀಡುತ್ತಾರೆ.

ರಕ್ಷಾ ಬಂಧನಕ್ಕೆ ಇವುಗಳನ್ನು ಮಾಡಬಾರದು

*ನಿಮ್ಮ ಉದ್ದೇಶ ಎಷ್ಟೇ ಪರಿಶುದ್ಧವಾಗಿದ್ದರೂ ಸಹೋದರ ಹರಿತವಾದ ವಸ್ತುವನ್ನು ಉಡುಗೊರೆಯಾಗಿ ನೀಡಬೇಡಿ. ಇದನ್ನು ಕಟ್ಟುನಿಟ್ಟಾಗಿ ನಿಷೇಧವೆಂದು ಪರಿಗಣಿಸಲಾಗುತ್ತದೆ ಅಥವಾ ಅಂತಹ ವಸ್ತುಗಳನ್ನು ಉಡುಗೊರೆಯಾಗಿ ನೀಡದಿರುವುದು ರಾಖಿ ಹಬ್ಬ ಅರ್ಥಪೂರ್ಣವಾಗುವುದಿಲ್ಲ.

*ರಾಖಿ ದಾರವನ್ನು ಕಟ್ಟುವ ಮೊದಲು ಅದು ಹರಿದಿರಬಾರದು. ರಾಖಿ ಕಟ್ಟಲು ಭದ್ರ ಕಾಲ ಅಥವಾ ರಾಹುಕಾಲ ಅಶುಭವಾಗಿದೆ.

*ಈ ಮಹೂರ್ತದಲ್ಲಿ ಸಾಮಾನ್ಯವಾಗಿ ಎಲ್ಲಾ ಮಂಗಳಕರ ಘಟನೆಗಳನ್ನು ತಪ್ಪಿಸಲಾಗುತ್ತದೆ. ರಾಖಿ ಆಚರಣೆಗಳನ್ನು ಗೌರವದಿಂದ ಪರಿಗಣಿಸಬೇಕು ಮತ್ತು ಸಂಪ್ರದಾಯವನ್ನು ಅನುಸರಿಸಬೇಕು.

*ರಾಖಿ ಒಂದು ಮಂಗಳಕರ ಆಚರಣೆ ಎಂದು ಒಡಹುಟ್ಟಿದವರಿಗೆ ತಿಳಿದಿರಬೇಕು. ಆದ್ದರಿಂದ ಸಹೋದರನನ್ನು ಸಾಧ್ಯವಾದರೆ ಮರದ ಮಣಿ ಮೇಲೆ ಮಾತ್ರ ಕುಳಿತುಕೊಳ್ಳಬೇಕು. ಮಂಚದ ಮೇಲೆ ಕುಳಿತುಕೊಳ್ಳಬಾರದು

*ರಾಖಿ ಕಟ್ಟುವಾಗ ಇಬ್ಬರ ಮನಸ್ಸು ಸಂತೋಷದಿಂದ ಇರಬೇಕು. ಆಗಲೇ ಎರಡು ಮನೆಗೆ ಒಳ್ಳೆದಾಗುತ್ತದೆ. ಟೀಕೆಗಳನ್ನು ಅನುಮತಿಸುವ ಘಟನೆಯಾಗಬಾರದು.

ಈ ಬಂಧವನ್ನು ಪ್ರೀತಿ ಮತ್ತು ಉಲ್ಲಾಸದಿಂದ ಆಚರಿಸಿ! ರಕ್ಷಾ ಬಂಧನದ ಶುಭಾಶಯಗಳು

(ಗಮನಿಸಿ: ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ತಲುಪಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+