Get Updates
Get notified of breaking news, exclusive insights, and must-see stories!

ಕನ್ನಡ ರಾಜ್ಯೋತ್ಸವ 2022 : ಇಲ್ಲಿವೆ ಕರುನಾಡಿನ ಹೆಮ್ಮೆಯ ಹಬ್ಬದ ಶುಭಾಶಯಗಳು & ಸಂದೇಶಗಳು

ನವೆಂಬರ್ 1 ಕನ್ನಡ ನಾಡು ಮರು ಹುಟ್ಟು ಪಡೆದ ದಿನವಾಗಿದ್ದು, ಸಮಸ್ತ ನಾಡಿನ ಜನತೆ ಯಾವುದೇ ಜಾತಿ, ಧರ್ಮ, ಪಂಥಗಳ ಭೇದವಿಲ್ಲದೆ ಒಟ್ಟುಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾರೆ.

ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯ ವ್ಯಕ್ತಿಗಳನ್ನು ಸ್ಮರಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ. ಕರ್ನಾಟಕ ಅಷ್ಟೇ ಅಲ್ಲದೆ ದೇಶ ವಿದೇಶಗಳಲ್ಲಿ ಇರುವ ಕನ್ನಡಿಗರು ಸಹ ಆಯಾ ಪ್ರದೇಶಗಳಲ್ಲಿ ಕನ್ನಡ ರಾಜ್ಯೋತ್ಸವನ್ನು ದಿನವವನ್ನು ಆಚರಿಸುತ್ತಾರೆ.

ದಕ್ಷಿಣ ಭಾರತದ ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಈ ದಿನವನ್ನು ಅತ್ಯಂತ ಪ್ರೀತಿ, ಹೆಮ್ಮೆಯಿಂದ ಆಚರಣೆ ಮಾಡುತ್ತಾರೆ.

Happy Kannada Rajyotsava 2021 Wishes, Quotes, Greetings, Images, Messages, WhatsApp and Facebook Status

ಕರುನಾಡು ಎಂಬ ಪದವೇ ಅಮೃತಕ್ಕೆ ಸಮಾನ. ನಮ್ಮ ಹೆಮ್ಮೆ ಸರ್ವ ಜನಾಂಗದ ಈ ಶಾಂತಿಯ ತೋಟ. ಇಂತಹ ಹೆಮ್ಮೆಯ ಕರುನಾಡು ಉದಯಿಸಿದ ಈ ದಿನದಂದು ಕನ್ನಡಾಂಬೆಯ ಭಾವಚಿತ್ರದ ಮೆರವಣಿಗೆ, ಕನ್ನಡ ಬಾವುಟದ ಹಾರಾಟ, ಜೈಕಾರ, ಕರುನಾಡ ಸಂಸ್ಕೃತಿ- ಇತಿಹಾಸ ಸಾರುವ ಹಾಡಿನ ಮೂಲಕ ಕನ್ನಡದ ಸಿರಿವಂತಿಕೆಯ ಸೊಗಡು ಎಲ್ಲೆಲ್ಲೂ ಅನುರಣಿಸುತ್ತಿರುತ್ತದೆ.

ಕನ್ನಡ ರಾಜ್ಯೋತ್ಸವ ಇತಿಹಾಸ: ಕನ್ನಡದ ಕುಲಪುರೋಹಿತ ಎಂದೇ ಹೆಸರಾದ ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವವೆ 1905ರಲ್ಲಿ ಪ್ರಾರಂಭಿಸಿದರು.

1956ರ ನ. 1ರಂದು ರಾಜ್ಯಗಳನ್ನು ವಿಂಗಡಿಸಿದರು. ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶ ವಿಲೀನಗೊಂಡು ಮೈಸೂರು ಉದಯವಾಯಿತು. ಮೈಸೂರು ರಾಜ್ಯಗಳನ್ನು 3 ವಿಭಾಗಗಳಾಗಿ ಉತ್ತರಕರ್ನಾಟಕ, ಹಳೆಯ ಮೈಸೂರು, ಮಲೆನಾಡು ಎಂದು ವಿಂಗಡಿಸಲಾಯಿತು.

ಕನ್ನಡ ರಾಜ್ಯೋತ್ಸವ ಶುಭ ಸಂದೇಶಗಳು:

-ಮನದೊಳಗೆ ಕನ್ನಡ ಮನಸ್ಸೊಳಗೂ ಕನ್ನಡ
ಕನ್ನಡವೇ ಎಲ್ಲಾ ಕನ್ನಡವಿಲ್ಲದೇ ಬೇರೇನೂ ಇಲ್ಲ
ನಮ್ಮ ತಾಯಿ ಭಾಷೆ ಕನ್ನಡ
ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು!!

-ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು

-ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಕನ್ನಡ ಗೋವಿನ ಓ! ಮುದ್ದಿನ ಕರು ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು -ಕುವೆಂಪು ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು

-ಚಿರಕಾಲ ಬೆಳಗಲಿ ಕನ್ನಡದ ದೀಪ ಜನಕೆಲ್ಲ ಬೆಳಕಾಗಿ ಪುಣ್ಯಪ್ರದೀಪ ಭಾರತಕೆ ಬಲವಾಗಿ ಭವ್ಯದೀಪ ಕಳೆಯುತ್ತ ತಾಪ ಬೆಳೆಸುತ್ತು ಸೈಪ ಹೊತ್ತಿತ್ತೋ ಹೊತ್ತಿತ್ತು ಕನ್ನಡದ ದೀಪ -ಡಾ.ಸಿದ್ದಯ್ಯ ಪುರಾಣಿಕ

-ವೈಭವದ ಇತಿಹಾಸವುಳ್ಳ ನಾಡಿದು, ಸಿರಿ ಸಂಸ್ಕೃತಿಯ ಬೀಡಿದು, ಕಲೆ ಸಾಹಿತ್ಯದ ತವರೂರಿದು. ಈ ಪುಣ್ಯ ನೆಲದಲ್ಲಿ ಜನಿಸಿದ ನಾವೇ ಧನ್ಯ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

-ಇದು ಒಂದು ದಿನದ ಹಬ್ಬವಲ್ಲ. ಬದುಕಿನುದ್ದಕ್ಕೂ ಕನ್ನಡ ಪ್ರೀತಿ ಮೆರೆಯೋಣ... ಕನ್ನಡಾಂಬೆಯ ಸೇವೆ ಮಾಡೋಣ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

-ಕನ್ನಡ ಎಂದರೆ ಅಮೃತ... ಕರುನಾಡಿನ ಮಣ್ಣೇ ಸಿರಿಗಂಧ... ಕರ್ನಾಟಕದಲ್ಲಿ ಹುಟ್ಟಿರುವುದೇ ನಮ್ಮ ಪಾಲಿನ ಸೌಭಾಗ್ಯ. ಕನ್ನಡ ಕುಲಕೋಟಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

-ಕನ್ನಡ ನಮ್ಮ ಅಮ್ಮ... ಕನ್ನಡ ನಮ್ಮ ಉಸಿರು... ಕನ್ನಡವೇ ನಮ್ಮ ಬದುಕು... ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಕನ್ನಡ ರಾಜ್ಯೋತ್ಸವ ಮಹತ್ವ:

ಕನ್ನಡದ ಹೋರಾಟಗಾರರು, ಇತಿಹಾಸ, ಮಹತ್ವ ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಧ್ಯೇಯದಿಂದ ಹಾಗೂ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.
ಅಲ್ಲದೇ ನಾಡಿಗಾಗಿ, ಕನ್ನಡಕ್ಕಾಗಿ ದುಡಿದ ಮಹನೀಯರಿಗೆ ಈ ಮಾಸದಲ್ಲಿ ರಾಜ್ಯ ಸರ್ಕಾರ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಗೌರವಿಸುವ ಮೂಲಕ, ನಾಡಿನ ಸೇವೆಯನ್ನು ಮುಂದುವರೆಸಲು ಮತ್ತಷ್ಟು ಪ್ರೇರಣೆ ನೀಡಿದಂತಾಗುತ್ತದೆ. ಕನ್ನಡ ನಾಡಿನ ಮಹತ್ವವನ್ನು ಕನ್ನಡಿಗರು ಅರಿತಾಗ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆ ಸಾರ್ಥಕವೆನಿಸಿಕೊಳ್ಳುತ್ತದೆ.

ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು:

ಕೆ.ಶಿವರಾಮ ಕಾರಂತ, ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾವ್, ಅನಕೃ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಮಂಗಳವೇಡೆ ಶ್ರೀನಿವಾಸರಾಯರು, ಕೆಂಗಲ್ ಹನುಂತಯ್ಯ, ಎಚ್. ಎಸ್. ದೊರೆಸ್ವಾಮಿ, ಕೋ. ಚನ್ನಬಸಪ್ಪ, ಅಲ್ಲಂ ಸುಮಂಗಳಮ್ಮ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಪಾಟೀಲ್ ಪುಟ್ಟಪ್ಪ, ಹಾರನಹಳ್ಳಿ ರಾಮಸ್ವಾಮಿ, ಎ.ಎನ್.ಕೃಷ್ಣರಾವ್, ಬಿ. ಎಂ. ಶ್ರೀಕಂಠಯ್ಯ, ನಾಡಿಗೇರ್, ಹುಯಿಲಗೋಳ ನಾರಾಯಣರಾವ್, ಆಚಾರ್ಯ, ಜಿ. ಬಿ. ಜೋಷಿ, ಕೆ. ವಿ. ಅಯ್ಯರ್, ವಿ. ಬಿ. ನಾಯಕ್, ಕರ್ಣ, ಗಂಗಾಧರ ದೇಶಪಾಂಡೆ, ಡೆಪ್ಯುಟಿ ಚೆನ್ನಪಬಸಪ್ಪ ಸೇರಿದಂತೆ ಹಲವು ಮಂದಿ ಕನ್ನಡಕ್ಕಾಗಿ ಹೋರಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+