Get Updates
Get notified of breaking news, exclusive insights, and must-see stories!

Pitru Paksha 2023: ಪಿತೃ ಪಕ್ಷ ಸಮಯದಲ್ಲಿ ಈ ವಸ್ತುಗಳನ್ನು ದಾನ ಮಾಡಿ.. ಪೂರ್ವಜರ ಆಶೀರ್ವಾದ ಪಡೆಯಿರಿ

ಹಿಂದೂ ಧರ್ಮದಲ್ಲಿ ಪಿತೃ ಪಕ್ಷವನ್ನು ಅತ್ಯಂತ ಪ್ರಮುಖ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಜನರು ತಮ್ಮ ಪೂರ್ವಜರಿಗೆ ಪಿಂಡ ದಾನವನ್ನು ಅರ್ಪಿಸುತ್ತಾರೆ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತಾರೆ.

ಪಿತೃ ಪಕ್ಷದಲ್ಲಿ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಪೂರ್ವಿಕರಿಗಾಗಿ ದಾನ ಮಾಡುವವನು ಮೋಕ್ಷವನ್ನು ಪಡೆಯುತ್ತಾನೆ. ಹೀಗಾಗಿ ಈ ಸಮಯದಲ್ಲಿ ಅನೇಕ ವಸ್ತುಗಳನ್ನು ದಾನ ಮಾಡಲಾಗುತ್ತದೆ. ಆದರೆ ಕೆಲ ವಸ್ತುಗಳನ್ನು ದಾನ ಮಾಡುವುದರಿಂದ ಜೀವನದಲ್ಲಿ ಸುಖ: ಶಾಂತಿ ನೆಮ್ಮದಿಯನ್ನು ಕಾಣುವುದು ಮಾತ್ರವಲ್ಲದೆ ಪೂರ್ವಜರ ಆಶೀರ್ವಾದ ಪಡೆಯುತ್ತಾರೆನ್ನುವ ನಂಬಿಕೆ ಇದೆ.

Pitru Paksha 2023: donating these things during mahalaya paksha gives money benefits in Kannada

ದೀಪಾವಳಿ, ದುರ್ಗಾಪೂಜೆ ಮುಂತಾದವು ನಮಗೆ ಹೇಗೆ ಇರುತ್ತದೋ, ಅದೇ ರೀತಿ ಪಿತೃ ಪಕ್ಷ ಪೂರ್ವಜರ ಹಬ್ಬ ಎಂದು ಹೇಳಲಾಗುತ್ತದೆ. ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 30 ರಂದು ಪ್ರಾರಂಭವಾಗಿ ಅಕ್ಟೋಬರ್ 14 ರಂದು ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಪೂಜೆ ಮಾಡಲಾಗುತ್ತದೆ ಮತ್ತು ತರ್ಪಣವನ್ನು ಅರ್ಪಿಸಲಾಗುತ್ತದೆ. ಪಿತೃಪಕ್ಷದ ಸಮಯದಲ್ಲಿ ದಾನವನ್ನು ನೀಡುವುದು ಅತ್ಯಂತ ಮಂಗಳಕರವಾಗಿದ್ದು ಯಾವೆಲ್ಲಾ ವಸ್ತುಗಳನ್ನು ದಾನವಾಗಿ ನೀಡಬಹುದು ಎಂದು ತಿಳಿಯೋಣ.

ಇಂತಹ ದಾನಗಳನ್ನು ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಮತ್ತು ಮನೆಯು ಸುಖ-ಸಂಪತ್ತಿನಿಂದ ಕೂಡಿರುತ್ತದೆ. ಈಗ ಪಿತೃ ಪಕ್ಷದ ಸಮಯದಲ್ಲಿ ಯಾವ ವಸ್ತುಗಳನ್ನು ದಾನ ಮಾಡಬಹುದು ಎಂದು ನೋಡೋಣ.

1. ಕಪ್ಪು ಎಳ್ಳು

ಪಿತೃ ಪಕ್ಷದ ಸಮಯದಲ್ಲಿ ಪೂರ್ವಜರನ್ನು ಪೂಜಿಸಲು ಬಳಸುವ ವಸ್ತುಗಳಲ್ಲಿ ಕಪ್ಪು ಎಳ್ಳು ಒಂದು. ವಿಷ್ಣುವಿಗೆ ಈ ಕಪ್ಪು ಎಳ್ಳು ಎಂದರೆ ತುಂಬಾ ಇಷ್ಟ. ಪಿತೃಪಕ್ಷದ ಸಮಯದಲ್ಲಿ ಯಾರಿಗಾದರೂ ದಾನ ಮಾಡುವಾಗ ಕೈಯಲ್ಲಿ ಕಪ್ಪು ಎಳ್ಳು ಇರಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ಹೀಗೆ ಮಾಡುವಾಗ ಈ ದಾನದ ಲಾಭ ಪೂರ್ವಜರಿಗೆ ಲಭಿಸುತ್ತದೆ ಎಂಬ ನಂಬಿಕೆ ಇದೆ.

ನೀವು ಬೇರೆ ಯಾವುದೇ ವಸ್ತುಗಳನ್ನು ದಾನ ಮಾಡದಿದ್ದರೂ ಪರವಾಗಿಲ್ಲ ಆದರೆ ಕಪ್ಪು ಎಳ್ಳನ್ನು ದಾನ ಮಾಡಬಹುದು. ಕಪ್ಪು ಎಳ್ಳನ್ನು ಈ ರೀತಿ ದಾನ ಮಾಡಿದರೆ, ಸತ್ತ ಪೂರ್ವಜರನ್ನು ದುಃಖದಿಂದ ರಕ್ಷಿಸಿದಂತೆ ಎಂದು ನಂಬಲಾಗಿದೆ. ನಮ್ಮ ಪೂರ್ವಜರು ಸಂಕಟವಿಲ್ಲದೆ ಸುಖವಾಗಿದ್ದರೆ ಅವರ ಆಶೀರ್ವಾದದಿಂದ ನಮ್ಮ ಜೀವನ ಸುಖಮಯವಾಗಿರುತ್ತದೆ.


2. ಭೂಮಿ ದಾನ

ಪಿತೃಪಕ್ಷದ ಸಮಯದಲ್ಲಿ ಮಾಡುವ ದೊಡ್ಡ ದಾನವೆಂದರೆ ಭೂದಾನ ಎಂದು ಹೇಳಲಾಗುತ್ತದೆ. ಹೀಗೆ ಯಾರಿಗಾದರೂ ಭೂಮಿಯನ್ನು ದಾನ ಮಾಡಿದಾಗ ತಿಳಿಯದೆ ಮಾಡಿದ ಪಾಪಗಳಿಂದ ಮುಕ್ತಿ ಹೊಂದಿ, ನಮ್ಮ ಪೂರ್ವಜರ ಪುಣ್ಯ ಲಭಿಸುತ್ತದೆ.

3. ಚಿನ್ನ ಮತ್ತು ಬೆಳ್ಳಿಯ ದಾನ

ಶಾಸ್ತ್ರಗಳಲ್ಲಿ ನಮ್ಮ ಪೂರ್ವಜರ ವಾಸಸ್ಥಾನವು ಚಂದ್ರನ ಮೇಲ್ಭಾಗದಲ್ಲಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ನೀವು ಸತ್ತ ಪೂರ್ವಜರ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಬೆಳ್ಳಿಯಿಂದ ಮಾಡಿದ ವಸ್ತುಗಳನ್ನು ದಾನ ಮಾಡಿ. ಇದಲ್ಲದೇ ಅನ್ನ, ಹಾಲು ಇತ್ಯಾದಿಗಳನ್ನು ದಾನ ಮಾಡಬಹುದು. ಇದರಿಂದ ಅದೃಷ್ಟ ಕೂಡಿಬರುತ್ತವೆ ಮತ್ತು ಜೀವನವು ಸಂತೋಷ ಮತ್ತು ಸಮೃದ್ಧವಾಗಿರುತ್ತದೆ.

4. ಬಟ್ಟೆ ದಾನ

ಪಿತೃ ಪಕ್ಷದಲ್ಲಿ ಪೂರ್ವಜರನ್ನು ಪೂಜಿಸುವುದರೊಂದಿಗೆ ವಸ್ತ್ರದಾನ ಮಾಡುವುದು ತುಂಬಾ ಮುಖ್ಯ. ವಸ್ತ್ರ ದಾನ ಮಾಡುವುದರಿಂದ ರಾಹು-ಕೇತು ದೋಷ ನಿವಾರಣೆಯಾಗುತ್ತದೆ. ಅದು ಕೂಡ ಕಪ್ಪು ಛತ್ರಿಗಳನ್ನು ದಾನ ಮಾಡಿದರೆ ಪೂರ್ವಜರಿಗೆ ಸಂತೋಷವಾಗುತ್ತದೆ. ಇವೆಲ್ಲವನ್ನೂ ದಾನ ಮಾಡುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.

5. ಬೆಲ್ಲ ಮತ್ತು ಉಪ್ಪು

ಪಿತೃ ಪಕ್ಷದ ಸಮಯದಲ್ಲಿ ಬೆಲ್ಲ ಮತ್ತು ಉಪ್ಪನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿನ ಎಲ್ಲಾ ಸಣ್ಣ ವಿಷಯಗಳು ದೊಡ್ಡ ಜಗಳಗಳಿಗೆ ಕಾರಣವಾಗುತ್ತವೆ ಎಂದು ನಿಮಗೆ ಅನಿಸುತ್ತಿದ್ದರೆ ಪಿತೃ ಪಕ್ಷದ ಸಮಯದಲ್ಲಿ ಪೂರ್ವಜರಿಗೆ ಬೆಲ್ಲ ಮತ್ತು ಉಪ್ಪನ್ನು ಪೂಜಿಸಿ ದಾನ ಮಾಡಿ. ಇದರಿಂದ ಮನೆಯಲ್ಲಿ ಸಂತಸ ಹೆಚ್ಚಾಗುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ.)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+