Navratri 2023: ನವರಾತ್ರಿಯ ದಿನಗಳಲ್ಲಿ ಕಾಣುವ ಕೆಲವು ಕನಸುಗಳು ತುಂಬಾ ಮಂಗಳಕರ: ಈ ಕನಸು ನಿಮಗೆ ಬಿದ್ದಿದ್ದಿಯೇ...?
ಈ ವರ್ಷ ನವರಾತ್ರಿ ಅಕ್ಟೋಬರ್ 15 ರಂದು ಪ್ರಾರಂಭವಾಗಿದೆ. ಅಕ್ಟೋಬರ್ 24 ವಿಜಯದಶಮಿಯೊಂದಿಗೆ ಇದು ಪೂರ್ಣಗೊಳ್ಳುತ್ತದೆ. ಈ ಒಂಬತ್ತು ದಿನಗಳಲ್ಲಿ ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.
ನವರಾತ್ರಿಯ ದಿನಗಳಲ್ಲಿ ದುರ್ಗಾದೇವಿಯನ್ನು ಪೂಜಿಸಿದಾಗ ದುರ್ಗಾ ದೇವಿಯು ತನ್ನ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂದು ನಂಬಿಕೆ ಇದೆ. ಹೀಗಾಗಿ ದುರ್ಗಾದೇವಿಯನ್ನು ಪ್ರಸನ್ನಗೊಳಿಸಲು ಪ್ರತಿದಿನ ವಿಶೇಷ ಪೂಜೆ, ನೈವೇದ್ಯಗಳನ್ನು ಮಾಡಿ ಪೂಜಿಸುವುದು ವಾಡಿಕೆ.
ನವರಾತ್ರಿಯ ದಿನಗಳಲ್ಲಿ ಕಾಣುವ ಕೆಲವು ಕನಸುಗಳು ತುಂಬಾ ಮಂಗಳಕರವೆಂದು ಹೇಳಲಾಗುತ್ತದೆ. ಅಂತಹ ಕನಸುಗಳು ನಿಮಗೆ ದುರ್ಗಾ ಮಾತೆಯ ಅನುಗ್ರಹವನ್ನು ಪಡೆದಿದೆ ಎಂದು ಸೂಚಿಸುತ್ತವೆ. ಈ ಕನಸುಗಳು ಒಳ್ಳೆಯ ಸುದ್ದಿ ಮತ್ತು ಹಣ ಬರುವುದನ್ನು ಸೂಚಿಸುತ್ತವೆ. ಹಾಗಾದರೆ ನವರಾತ್ರಿಯ ದಿನಗಳಲ್ಲಿ ಯಾವ ಕನಸುಗಳು ಶುಭಕರವೆಂದು ಈಗ ನೋಡೋಣ.

ಸಿಂಹದ ಮೇಲೆ ದುರ್ಗಾದೇವಿ
ನವರಾತ್ರಿಯ ದಿನಗಳಲ್ಲಿ ದುರ್ಗಾ ದೇವಿಯು ಸಿಂಹದ ಮೇಲೆ ಸವಾರಿ ಮಾಡುತ್ತಿರುವುದನ್ನು ನೀವು ಕನಸಿನಲ್ಲಿ ನೋಡಿದರೆ ಅದು ತುಂಬಾ ಶುಭ ಸಂಕೇತವಾಗಿದೆ. ಅಂತಹ ಕನಸು ಬಿದ್ದರೇ ನೀವೇ ಪುಣ್ಯವಂತರು. ಇದು ಶುಭ ಸಂಕೇತವನ್ನು ನೀಡುತ್ತದೆ. ಅಪೂರ್ಣ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಬಹುಕಾಲದಿಂದ ನಿಮ್ಮನ್ನು ಕಾಡುತ್ತಿರುವ ಶತ್ರುಗಳನ್ನು ಸೋಲಿಸಿ ನೀವು ಗೆಲ್ಲುತ್ತೀರಿ ಎಂದು ಸೂಚಿಸುತ್ತದೆ.
ಕೇಸರಿ.. ಕೆಂಪು ಬಳೆ..
ಸ್ವಪ್ನಶಾಸ್ತ್ರದ ಪ್ರಕಾರ ಸಾಮಾನ್ಯವಾಗಿ ಬಳೆ ಮತ್ತು ಕುಂಕುಮವನ್ನು ಕನಸಿನಲ್ಲಿ ಕಾಣುವುದು ಒಳ್ಳೆಯ ಸಂಕೇತವಾಗಿದೆ. ನವರಾತ್ರಿಯ ದಿನಗಳಲ್ಲಿ ಇಂತಹ ಕನಸು ಕಂಡರೆ, ನಿಮ್ಮ ಬಹುಕಾಲದ ಆಸೆಗಳು ಈಡೇರುತ್ತವೆ ಮತ್ತು ನಿಮ್ಮ ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ ಎಂದರ್ಥ.

ಆನೆಯನ್ನು ನೋಡಿದರೆ....
ಕನಸಿನಲ್ಲಿ ಆನೆಯನ್ನು ನೋಡುವುದು ಸಾಮಾನ್ಯವಾಗಿ ಒಳ್ಳೆಯದು. ಅದೂ ನವರಾತ್ರಿಯ ಸಮಯದಲ್ಲಿ ಕನಸಿನಲ್ಲಿ ಆನೆ ಕಾಣಿಸಿಕೊಂಡರೆ ಅಥವಾ ದುರ್ಗಾ ದೇವಿಯು ಆನೆಯ ಮೇಲೆ ಸವಾರಿ ಮಾಡಿದರೆ ಅದು ಶುಭ ಸಂಕೇತವಾಗಿದೆ. ಅಂತಹ ಕನಸು ಕನಸುಗಾರನ ದೊಡ್ಡ ಯೋಜನೆಗಳಲ್ಲಿ ಒಂದನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತದೆ ಎಂದು ಸೂಚಿಸುತ್ತದೆ. ಮತ್ತು ಕಷ್ಟಕರವಾದ ಕೆಲಸವೂ ಯಶಸ್ವಿಯಾಗಬಹುದು. ಹೀಗಾಗಿ ನವರಾತ್ರಿಯ ಸಮಯದಲ್ಲಿ ಕನಸಿನಲ್ಲಿ ಆನೆ ಕಂಡರೆ ತುಂಬಾ ಒಳ್ಳೆಯದು.
ಹಾಲು ಅಥವಾ ಸಿಹಿತಿಂಡಿಗಳನ್ನು ನೋಡುವುದು
ನವರಾತ್ರಿಯ ಸಮಯದಲ್ಲಿ ನಿಮ್ಮ ಕನಸಿನಲ್ಲಿ ಹಾಲು ಅಥವಾ ಸಿಹಿತಿಂಡಿಗಳು ಕಂಡರೆ ನಿಮಗೆ ಅದು ತುಂಬಾ ಒಳ್ಳೆಯದಾಗುತ್ತದೆ ಎಂದರ್ಥ. ಈ ಕನಸು ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ ಎಂದು ಸೂಚಿಸುತ್ತದೆ. ನಿಮ್ಮ ದೊಡ್ಡ ಆಸೆಗಳು ಸಹ ನನಸಾಗುತ್ತವೆ ಎಂದು ಇದು ಸೂಚಿಸುತ್ತದೆ.

ದುರ್ಗಾ ಪ್ರತಿಮೆ
ಕನಸಿನಲ್ಲಿ ದೇವರುಗಳನ್ನು ನೋಡುವುದು ಶುಭ ಶಕುನ. ವಿಶೇಷವಾಗಿ ನವರಾತ್ರಿಯ ದಿನಗಳಲ್ಲಿ ನೀವು ದುರ್ಗಾದೇವಿಯನ್ನು ನೋಡಿದರೆ, ನಿಮಗೆ ದುರ್ಗಾ ದೇವಿಯ ಪರಿಪೂರ್ಣ ಅನುಗ್ರಹವಿದೆ ಎಂದರ್ಥ. ಈ ಕನಸು ದುರ್ಗಾ ದೇವಿಯು ನಿಮ್ಮ ಪೂಜೆಯಿಂದ ಸಂತೋಷವಾಗಿರುವುದನ್ನು ಸೂಚಿಸುತ್ತದೆ. ಈ ಕನಸು ನೀವು ಬಹಳಷ್ಟು ಹಣವನ್ನು ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸಲಿದ್ದೀರಿ ಎಂದು ಸೂಚಿಸುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications