Get Updates
Get notified of breaking news, exclusive insights, and must-see stories!

Navratri 2023 Day 9: ನವರಾತ್ರಿ 9ನೇ ದಿನ ಅ.23, ಸಿದ್ಧಿದಾತ್ರಿ ಪೂಜೆ ಮಹತ್ವ, ಮುಹೂರ್ತ, ಮಂತ್ರ

ಇಂದು ಮಾತಾ ಸಿದ್ಧಿದಾತ್ರಿಗೆ ಸಮರ್ಪಿತವಾದ ಮಹಾನವಮಿ ಹಬ್ಬವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ದಿನದಂದು ದುರ್ಗಾ ದೇವಿಯ ಕೊನೆಯ ಪರಿಪೂರ್ಣ ರೂಪವನ್ನು ಆಚರಣೆಗಳೊಂದಿಗೆ ಪೂಜಿಸಲಾಗುತ್ತದೆ. ಮಾತಾ ಸಿದ್ಧಿದಾತ್ರಿಯನ್ನು ಪೂಜಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಅವರು ಸಂಪತ್ತು, ಜ್ಞಾನ, ಐಶ್ವರ್ಯ ಮತ್ತು ಸಂತೋಷ, ಸಮೃದ್ಧಿಯನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

ನವರಾತ್ರಿಯನ್ನು ದೇಶದಾದ್ಯಂತ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಈ ಮಂಗಳಕರವಾದ ಒಂಬತ್ತು ದಿನಗಳ ಹಬ್ಬವನ್ನು ವೈಭವದಿಂದ ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಭಕ್ತರು ಒಂಬತ್ತು ದಿನಗಳ ಕಾಲ ದುರ್ಗಾದೇವಿಯ ಒಂಬತ್ತು ಅವತಾರಗಳನ್ನು ಪೂಜಿಸುತ್ತಾರೆ. ಒಂಬತ್ತನೇ ದಿನ ಅಂದರೆ ಮಹಾನವಮಿಯ ದಿನ ದುರ್ಗಾ ದೇವಿಯ ಒಂಬತ್ತನೇ ರೂಪವಾದ ದೇವಿ ಸಿದ್ಧಿದಾತ್ರಿಗೆ ಸಮರ್ಪಿತವಾಗಿದೆ.

ದುರ್ಗಾ ದೇವಿಯು ಈ ದಿನದಂದು ರಾಕ್ಷಸ ಮಹಿಷಾಸುರನನ್ನು ಕೊಂದಳು ಎಂದು ಹೇಳಲಾಗುತ್ತದೆ. ಆದ್ದರಿಂದ ಅವಳನ್ನು ಮಹಿಷಾಸುರ ಮರ್ದಿನಿ ಎಂದೂ ಕರೆಯುತ್ತಾರೆ. ಸಿದ್ಧಿದಾತ್ರಿ ದೇವಿಯು ತನ್ನ ಎರಡು ಕೈಗಳಲ್ಲಿ ಗದಾ ಮತ್ತು ಚಕ್ರವನ್ನು ಹೊಂದಿದ್ದಾಳೆ ಮತ್ತು ಇನ್ನೆರಡು ಕೈಗಳಲ್ಲಿ ಕಮಲ ಮತ್ತು ಶಂಕು ಹಿಡಿದಿದ್ದಾಳೆ.

ದುರ್ಗಾ ಪೂಜೆಯ ಸಮಯದ ಮಹಾನವಮಿಯು ಪ್ರಮುಖ ದಿನಗಳಲ್ಲಿ ಒಂದಾಗಿದೆ. ಇದರ ಪೂಜೆ ವಿಧಿವಿಧಾನಗಳು ಮಹಾಸ್ನಾನ ಮತ್ತು ಷೋಡಶೋಪಾಚಾರ ಪೂಜೆಯೊಂದಿಗೆ ಪ್ರಾರಂಭವಾಗಿ ಕನ್ಯಾಪೂಜೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಜನರು ಚಿಕ್ಕ ಹುಡುಗಿಯರನ್ನು ತಮ್ಮ ಮನೆಗೆ ಪೂಜೆ ಮಾಡಲು ಆಹ್ವಾನಿಸುತ್ತಾರೆ. ಜೊತೆಗೆ ಅವರಿಗೆ ಆಹಾರವನ್ನು ನೀಡುತ್ತಾರೆ. ಅವರಿಗೆ ಉಡುಗೊರೆಗಳನ್ನು ಅರ್ಪಿಸಿ ಅವರ ಆಶೀರ್ವಾದವನ್ನೂ ಪಡೆಯುತ್ತಾರೆ.

Navratri 2023 Day 9, Maa Siddhidatri Colour, Puja Vidhi, Aaarti, Timings, Mantra, Muhurat, Vrat Katha

ನವರಾತ್ರಿ 2022 ದಿನ 9 ಮಂತ್ರ

ಮಹಾ ನವಮಿಯಂದು "ಓಂ ದೇವಿ ಸಿದ್ಧಿದತ್ರ್ಯೈ ನಮಃ" ಎಂದು ಪಠಿಸುವ ಮೂಲಕ ಸಿದ್ಧಿದಾತ್ರಿ ದೇವಿಯ ಆಶೀರ್ವಾದವನ್ನು ಪಡೆಯಿರಿ.

ನವರಾತ್ರಿ 2022 ದಿನ 9: ಮಹತ್ವ

ಸಿದ್ಧಿದಾತ್ರಿ ದೇವಿಯು ಎಲ್ಲಾ ಸಿದ್ಧಿಗಳ ಮೂಲವಾಗಿದ್ದಾಳೆ. ಆಕೆ ಎಲ್ಲಾ ಎಂಟು ಅಷ್ಟಸಿದ್ಧಿಗಳನ್ನು ಹೊಂದಿದ್ದಾಳೆ. ಈ ದೇವಿಯ ಆರಾಧನೆಯು ಸಮಸ್ಯೆಗಳನ್ನು ದೂರ ಮಾಡುತ್ತದೆ. ಹಿಂದೂ ಶಾಸನಗಳ ಪ್ರಕಾರ, ಅವಳು ತನ್ನ ಭಕ್ತರಿಗೆ ಅದೃಷ್ಟವನ್ನು ಆಶೀರ್ವದಿಸುತ್ತಾಳೆ ಮತ್ತು ಅವರಿಗೆ ಮೋಕ್ಷವನ್ನು ಒದಗಿಸುತ್ತಾಳೆ. ಹೀಗಾಗಿ ನವರಾತ್ರಿಯ ಒಂಬತ್ತನೇ ದಿನ ಆಕೆಯನ್ನು ಅತ್ಯಂತ ಶ್ರದ್ಧೆಯಿಂದ ಪೂಜಿಸಲಾಗುತ್ತದೆ.

ಪೂಜಾ ವಿಧಿ, ಮಂತ್ರ

ಸಿದ್ಧಿ ಎಂದರೆ ಅಲೌಕಿಕ ಶಕ್ತಿ ಅಥವಾ ಸೃಷ್ಟಿ ಹಾಗೂ ಸಾಧಿಸುವ ಸಾಮರ್ಥ್ಯ ಮತ್ತು ದಾತ್ರಿ ಎಂದರೆ ಕೊಡುವುದು. ಇದರ್ಥದಿಂದ ಸಿದ್ಧಿ ದಾತ್ರಿಯ ಪೂಜೆಯಿಂದ ಸಿಗುವ ಫಲ ಏನು ಎಂಬುದು ತಿಳಿಯುತ್ತದೆ. ತಾಯಿಯನ್ನು ಪೂಜೆ ಮಾಡಿದರೆ ನಿಜವಾದ ಜೀವನವನ್ನು ಅರಿತುಕೊಳ್ಳುವ ಶಕ್ತಿ ಪ್ರಾಪ್ತಿಯಾಗುತ್ತದೆ. ತಾಯಿಯ ಆರಾಧನೆಯು ನಮ್ಮ ಮನಸ್ಸಿನಲ್ಲಿರುವ ಅಜ್ಞಾನವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಪುರಾಣ ಗ್ರಂಥಗಳ ಪ್ರಕಾರ ಜಗತ್ತಿನ ಎಂಟು ಸಿದ್ಧಿಗಳೆಂದರೆ ಅನಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕ್ಯಾಮ್ಯ, ಇನ್ಶಿತ್ವ, ವಶಿತ್ವ. ನವದುರ್ಗೆಗಳಲ್ಲಿ ತಾಯಿ ಸಿದ್ಧಿದಾತ್ರಿಯು ಈ ಎಲ್ಲ ಅದ್ಭುತ ಅಂಶಗಳನ್ನು ಹೊಂದಿದ್ದಾಳೆ.

Navratri 2023 Day 9, Maa Siddhidatri Colour, Puja Vidhi, Aaarti, Timings, Mantra, Muhurat, Vrat Katha

ಸಿದ್ಧಿದಾತ್ರಿಯ ಮೂಲ:

ಪುರಾಣದ ಕತೆಗಳ ಪ್ರಕಾರ ತಾಯಿ ಸಿದ್ಧಿದಾತ್ರಿಯಿಂದ ಆಶೀರ್ವಾದ ಪಡೆದ ಶಿವನು ಆಕೆಯಿಂದ ಎಂಟು ಸಿದ್ಧಿಗಳನ್ನು ಪಡೆದ ಎಂದು ಹೇಳಲಾಗುತ್ತದೆ. ಬ್ರಹ್ಮಾಂಡದ ಸೃಷ್ಟಿಯ ವೇಳೆ ಶಿವನು ಆದಿ ಪರಾಕಾಷ್ಟೆಯನ್ನು ಆರಾಧಿಸಿದನು. ಎಷ್ಟೇ ಆರಾಧಿಸಿದರೂ ಶಕ್ತಿ ದೇವತೆಯು ಪ್ರತ್ಯಕ್ಷಳಾಗಲಿಲ್ಲ. ನಂತರ ಆಕೆಯು ಶಿವನ ಎಡ ಭಾಗದ ಅರ್ಧದಲ್ಲಿ ಕಾಣಿಸಿಕೊಂಡಳು. ಆಗಿನಿಂದ ಪರಶಿವನು ಅರ್ಧನಾರೀಶ್ವರ ಎನ್ನುವ ಇನ್ನೊಂದು ಹೆಸರಿನಿಂದ ಗುರುತಿಸಿಕೊಂಡನು ಎಂದು ಹೇಳಲಾಗುತ್ತದೆ.

ನೈವೇದ್ಯ

ಈ ದಿನ ಭಕ್ತರು ಸಿದ್ಧಿದಾತ್ರಿ ದೇವಿಗೆ ತೆಂಗಿನಕಾಯಿ ಮತ್ತು ಪಂಚಾಮೃತವನ್ನು ಅರ್ಪಿಸುತ್ತಾರೆ. ಕನ್ಯಾ ಪೂಜೆ ಮಾಡುವಾಗ, ಭಕ್ತರು ದೇವಿಗೆ ಪೂರಿ, ಹಲ್ವಾ ಮತ್ತು ಸಿಹಿ ತಿನಿಸುಗಳನ್ನು ಅರ್ಪಿಸುತ್ತಾರೆ. ಸಿದ್ಧಿದಾತ್ರಿಗೆ ಇಷ್ಟವಾದ ಹೂವು ಸಂಪಿಗೆ ಹೂವು. ಇದರಿಂದಾಗಿ ಈ ದಿನ ಸಂಪಿಗೆ ಹೂವು ಇಟ್ಟು ಪೂಜೆ ಮಾಡಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+