Masik Durgashtami 2024: ತಪ್ಪಾಗಿಯೂ ಈ ದಿನ ಮಾರ್ಗಶೀರ್ಷ ಮಾಸಿಕ ದುರ್ಗಾಷ್ಟಮಿ ಆಚರಿಸಬೇಡಿ: ತೊಂದರೆ ಗ್ಯಾರಂಟಿ

ಹಿಂದೂ ಧರ್ಮದಲ್ಲಿ ದುರ್ಗಾಮಾತೆಗೆ ವಿಶೇಷವಾದ ಸ್ಥಾನವಿದೆ. ಭಕ್ತಿಯಿಂದ ದುರ್ಗಾದೇವಿಯನ್ನು ಪೂಜಿಸುವುದರಿಂದ ಬೇಡಿದ ವರ ಸಿಗಲಿದೆ ಎನ್ನುವ ನಂಬಿಕೆ ಇದೆ. ಹೀಗಾಗಿ ದುರ್ಗಾ ದೇವಿಗೆ ಮೀಸಲಾದ ಕೆಲವು ವಿಶೇಷ ದಿನದಂದು ಆಕೆಯನ್ನು ಪೂಜಿಸುವುದು ತುಂಬಾ ಮಂಗಳಕರ ಎಂದು ನಂಬಲಾಗುತ್ತದೆ. ಪೂಜಾ ಫಲವಾಗಿ ಸಂತೋಷ, ಸಂಪತ್ತು ಮತ್ತು ಸಮೃದ್ಧಿಯನ್ನು ಭಕ್ತರು ಪಡೆಯುತ್ತಾರೆ. ಅಷ್ಟೇ ಅಲ್ಲದೆ ದುಷ್ಟಶಕ್ತಿಗಳಿಂದ ಮುಕ್ತಿ ಕೂಡ ಸಿಗಲಿದೆ. ಧನಾತ್ಮಕ ಶಕ್ತಿ ಜೀವನದಲ್ಲಿ ತುಂಬಿರಲಿದೆ. ಹೀಗಾಗಿ ಪ್ರತೀ ತಿಂಗಳು ಬರುವ ಮಾರ್ಗಶೀರ್ಷ ಮಾಸಿಕ ದುರ್ಗಾಷ್ಟಮಿಯನ್ನು ಆಚರಿಸಲಾಗುತ್ತದೆ. ಹಾಗಾದರೆ ಈ ತಿಂಗಳು ದುರ್ಗಾಷ್ಟಮಿಯನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ? ಶುಭ ಸಮಯ, ಪೂಜಾ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಪ್ರತಿ ತಿಂಗಳ ಶುಕ್ಲ ಪಕ್ಷದ ಅಷ್ಟಮಿ ತಿಥಿಯಂದು ಮಾಸಿಕ ದುರ್ಗಾಷ್ಟಮಿ ಉಪವಾಸವನ್ನು ಆಚರಿಸಲಾಗುತ್ತದೆ. ಆ ದಿನ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ. ದುರ್ಗಾ ಮಾತೆ ಶಕ್ತಿ ದೇವತೆಯಾಗಿದ್ದು ಅಶುಭ ಸಮಯದಲ್ಲಿ ಆಕೆಯನ್ನು ಪೂಜಿಸುವುದು ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಾಗಾದರೆ 2024ರ ಡಿಸೆಂಬರ್ ತಿಂಗಳಿನಲ್ಲಿ ಮಾಸಿಕ ದುರ್ಗಾಷ್ಟಮಿ ವ್ರತವನ್ನು ಯಾವ ದಿನದಂದು ಆಚರಿಸಲಾಗುತ್ತದೆ ಎಂದು ತಿಳಿಯೋಣ. ಇದರೊಂದಿಗೆ ದುರ್ಗಾ ದೇವಿಯನ್ನು ಪೂಜಿಸುವ ಮಂಗಳಕರ ಸಮಯ ಮತ್ತು ಪೂಜಾ ವಿಧಾನದ ಬಗ್ಗೆಯೂ ತಿಳಿಯೋಣ.

Margashirsha masik durgashtami december 7 or 8 date shubha muhurta pooja vidhi

ಮಾಸಿಕ ದುರ್ಗಾಷ್ಟಮಿ ಡಿಸೆಂಬರ್ ದಿನಾಂಕ

ಈ ವರ್ಷ ಡಿಸೆಂಬರ್ 08ರ ಭಾನುವಾರ ಬೆಳಿಗ್ಗೆ 09.44ರಿಂದ ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯು ಪ್ರಾರಂಭವಾಗುತ್ತದೆ. ಇದು ಡಿಸೆಂಬರ್ 09ರ ಸೋಮವಾರ ಬೆಳಿಗ್ಗೆ 08.02ಕ್ಕೆ ಕೊನೆಗೊಳ್ಳುತ್ತದೆ. ಉದಯತಿಥಿಯ ಆಧಾರದ ಮೇಲೆ ಈ ಬಾರಿ ಮಾಸಿಕ ದುರ್ಗಾಷ್ಟಮಿ ಉಪವಾಸವನ್ನು ಡಿಸೆಂಬರ್ 8ರಂದು ಆಚರಿಸಲಾಗುತ್ತದೆ. ಹೀಗಾಗಿ ಭಕ್ತರು ಸರಿಯಾದ ದಿನಾಂಕದಂದು ವಿಶೇಷವಾಗಿ ಶುಭ ಮುಹೂರ್ತದಲ್ಲಿ ದುರ್ಗಾದೇವಿಯನ್ನು ಪೂಜಿಸಿ ಉಪವಾಸ ವ್ರತ ಮಾಡುವುದು ತುಂಬಾ ಮುಖ್ಯವಾಗಿದೆ.

ಮಾಸಿಕ ದುರ್ಗಾಷ್ಟಮಿ ಶುಭ ಸಮಯ

ಸೂರ್ಯೋದಯ- ಡಿಸೆಂಬರ್ 8 ಬೆಳಿಗ್ಗೆ 07:02 ಕ್ಕೆ

ಬ್ರಹ್ಮ ಮುಹೂರ್ತ - 05:13 ರಿಂದ 06:07 ರವರೆಗೆ

ವಿಜಯ ಮುಹೂರ್ತ - ಮಧ್ಯಾಹ್ನ 01:57 ರಿಂದ 02:38 ರವರೆಗೆ

ಟ್ವಿಲೈಟ್ ಸಮಯ - ಸಂಜೆ 05:22 ರಿಂದ 05:49 ರವರೆಗೆ

ನಿಶಿತಾ ಮುಹೂರ್ತ - ಡಿಸೆಂಬರ್ 9 ರಂದು ತಡರಾತ್ರಿ 11:46 ರಿಂದ 12:41 ರವರೆಗೆ

ಮಾಸಿಕ ದುರ್ಗಾಷ್ಟಮಿ ಪೂಜಾ ವಿಧಾನ ಹೀಗಿದೆ...

*ಮಾರ್ಗಶೀರ್ಷ ಮಾಸಿಕ ದುರ್ಗಾಷ್ಟಮಿಯಂದು ಉಪವಾಸ ವ್ರತ ಮಾಡುವವರು ಬ್ರಹ್ಮ ಮುಹೂರ್ತದಲ್ಲಿ ಏಳಬೇಕು.

* ಸ್ನಾನ ಇತ್ಯಾದಿ ಕಾರ್ಯಗಳ ನಂತರ ಶುದ್ಧ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು.

*ಮನೆಯಲ್ಲಿ ಇರುವ ಪೂಜಾ ಕೋಣೆಯನ್ನು ಸ್ವಚ್ಚಗೊಳಿಸಿ ಗಂಗಾಜಲವನ್ನು ಸಿಂಪಡಿಸಬೇಕು.

*ಮನೆಯ ಪೂಜಾ ಕೋಣೆಯನ್ನು ದುರ್ಗಾ ದೇವಿಯ ಫೋಟೋ, ಮೂರ್ತಿ ಅಥವಾ ವಿಗ್ರಹವನ್ನು ಇರಿಸಿ. ಅದರ ಮೇಲೆ ಹಳದಿ ಬಟ್ಟೆಯನ್ನು ಹರಡಿ.

*ದೇವಿಯ ಮುಂದೆ ದೇಸಿ ತುಪ್ಪದ ದೀಪವನ್ನು ಹಚ್ಚಿ.

Margashirsha masik durgashtami december 7 or 8 date shubha muhurta pooja vidhi

*ದುರ್ಗೆ ದೇವಿಗೆ ಹೂವಿನ ಹಾರ ಹಾಕಿ, ಅರಿಶಿಣ ಕುಂಕುಮ ಹಚ್ಚಿ ಶ್ರೀಗಂಧ ಇಟ್ಟು, ಸಿಹಿ ತಿಂಡಿ ಹಾಗೂ ಹಣ್ಣುಗಳನ್ನು ಇಡಿ. ನಂತರ ಪೂಜಾ ಕೋಣೆ ಬಾಗಿಲಿಗೆ ರಂಗೋಲಿ ಹಾಕಿ.

* ದುರ್ಗಾದೇವಿ ಮುಂದೆ ಸೀರೆ, ಬಳೆ, ಅಕ್ಕಿ, ಬೆಲ್ಲ ಇತರ ಅಲಂಕಾರಿಕ ವಸ್ತುಗಳನ್ನು ಇಡುವುದನ್ನು ಮರೆಯಬೇಡಿ.

* ಒಂದು ಬಿಂದಿಗೆಯಲ್ಲಿ ನೀರನ್ನು ತುಂಬಿಸಿ ಅದರ ಮೇಲೆ ತೆಂಗಿನ ಕಾಯಿ ಇಡಿ. ಅದಕ್ಕೆ ವಿಬೂತಿ, ಕುಂಕುಮ, ಅರಿಶಿಣ ಹಚ್ಚಿ ಹೂವಿನ ಹಾರ ಹಾಕಿ.

* ಬಳಿಕ ಆರತಿಯನ್ನು ಮಾಡಿ ಧೂಪವನ್ನು ಹಕ್ಕಿ ದುರ್ಗಾ ದೇವಿಯ ಮಂತ್ರಗಳನ್ನು ಪಠಿಸಿ.

*ಉಪವಾಸ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ.

*ಸಂಜೆ ಆರತಿ ಮಾಡುವ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+