Margashirsha Amavasya 2024: ಮಾರ್ಗಶೀರ್ಷ ಅಮಾವಾಸ್ಯೆ ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಾನ
ಹಿಂದೂ ಧರ್ಮದಲ್ಲಿ ವರ್ಷದ ಪ್ರತೀ ಅಮವಾಸ್ಯೆಯ ದಿನಾಂಕ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದಿನದಂದು ಭಕ್ತರು ಆರಾಧನೆ ಮತ್ತು ಉಪವಾಸವನ್ನು ಆಚರಿಸುವ ಮೂಲಕ ವಿಶೇಷ ಫಲಿತಾಂಶಗಳನ್ನು ಪಡೆಯುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಭಗವಾನ್ ಕೃಷ್ಣನಿಗೆ ಅರ್ಪಿತವಾದ ಮಾರ್ಗಶೀರ್ಷ ಮಾಸ ಪ್ರಸ್ತುತ ನಡೆಯುತ್ತಿದೆ. ಕೃಷ್ಣ ಪಕ್ಷದ ಅಮವಾಸ್ಯೆ ದಿನಾಂಕ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಬರುತ್ತದೆ. ಈ ದಿನ ಮಾರ್ಗಶೀರ್ಷ ಅಮಾವಾಸ್ಯೆ ವ್ರತವನ್ನು ಆಚರಿಸಲಾಗುವುದು.
ಹಾಗಾದರೆ ಮಾರ್ಗಶೀರ್ಷ ಅಮಾವಾಸ್ಯೆಯ ವ್ರತವನ್ನು 2024ರಲ್ಲಿ ಯಾವ ದಿನ ಆಚರಿಸಲಾಗುತ್ತದೆ ಎಂದು ತಿಳಿಯೋಣ. ಇದರೊಂದಿಗೆ ಅಮವಾಸ್ಯೆ ತಿಥಿಯಂದು ದೇವಾನುದೇವತೆಗಳನ್ನು ಪೂಜಿಸುವ ಮಂಗಳಕರ ಸಮಯ ಮತ್ತು ಪೂಜಾ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.

ಮಾರ್ಗಶೀರ್ಷ ಅಮಾವಾಸ್ಯೆಯ ಮಹತ್ವ
ಮಾರ್ಗಶೀರ್ಷ ಅಮಾವಾಸ್ಯೆಯ ದಿನದಂದು ಭಗವಾನ್ ವಿಷ್ಣು, ಶಿವ ಮತ್ತು ಗಂಗಾ ಮಾತೆಯನ್ನು ಪೂಜಿಸುವುದರಿಂದ ಭಕ್ತರು ವಿಶೇಷ ಫಲಿತಾಂಶಗಳನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಇದಲ್ಲದೆ ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಮತ್ತು ಪೂರ್ವಜರ ಆತ್ಮಕ್ಕೆ ಅರ್ಪಣೆ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಮಹಿಳೆಯರು ಅಮವಾಸ್ಯೆಯ ತಿಥಿಯಂದು ಶ್ರದ್ಧೆ ಹಾಗೂ ಭಕ್ತಿಯಿಂದ ಉಪವಾಸವನ್ನು ಆಚರಿಸಿದರೆ ದೇವತೆಗಳ ವಿಶೇಷ ಅನುಗ್ರಹವನ್ನು ಪಡೆಯುತ್ತಾರೆ. ಅಲ್ಲದೆ ಗಂಡನ ದೀರ್ಘಾಯುಷ್ಯದ ಆಶೀರ್ವಾದವೂ ಸಿಗುತ್ತದೆ.
2024ರಲ್ಲಿ ಮಾರ್ಗಶೀರ್ಷ ಅಮಾವಾಸ್ಯೆ ದಿನಾಂಕ
ವೈದಿಕ ಪಂಚಾಂಗದ ಪ್ರಕಾರ ಈ ಬಾರಿ ಮಾರ್ಗಶೀರ್ಷ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿಯು 30 ನವೆಂಬರ್ 2024 ರಂದು ಬೆಳಿಗ್ಗೆ 10.29ಕ್ಕೆ ಪ್ರಾರಂಭವಾಗುತ್ತದೆ. ಅದು ಮರುದಿನ 1 ಡಿಸೆಂಬರ್ 2024ರಂದು ಬೆಳಿಗ್ಗೆ 11.50ಕ್ಕೆ ಕೊನೆಗೊಳ್ಳುತ್ತದೆ. ಉದಯತಿಥಿಯ ಆಧಾರದ ಮೇಲೆ ಈ ಬಾರಿಯ ಮಾರ್ಗಶಿರ ಅಮಾವಾಸ್ಯೆಯ ವ್ರತವನ್ನು 1ನೇ ಡಿಸೆಂಬರ್ 2024 ರಂದು ಆಚರಿಸಲಾಗುತ್ತದೆ.

1 ಡಿಸೆಂಬರ್ 2024 ರ ಶುಭ ಸಮಯ
ಬ್ರಹ್ಮ ಮುಹೂರ್ತ- ಬೆಳಿಗ್ಗೆ 05:08 ರಿಂದ 06:02 ರವರೆಗೆ
ಅಭಿಜಿತ್ ಮುಹೂರ್ತ- ಬೆಳಿಗ್ಗೆ 11:49 ರಿಂದ ಮಧ್ಯಾಹ್ನ 12:31 ರವರೆಗೆ
ವಿಜಯ ಮುಹೂರ್ತ- ಮಧ್ಯಾಹ್ನ 01:55 ರಿಂದ 02:37 ರವರೆಗೆ
ಟ್ವಿಲೈಟ್ ಸಮಯ - ಸಂಜೆ 05:21 ರಿಂದ 05:48 ರವರೆಗೆ
ನಿಶಿತಾ ಮುಹೂರ್ತ - ಡಿಸೆಂಬರ್ 2 ರಂದು ತಡರಾತ್ರಿ 11:43 ರಿಂದ 12:38 ರವರೆಗೆ
ಮಾರ್ಗಶೀರ್ಷ ಅಮಾವಾಸ್ಯೆಯ ಪೂಜೆಯ ವಿಧಾನ
*ಉಪವಾಸದ ದಿನ ಬ್ರಹ್ಮ ಮುಹೂರ್ತದಲ್ಲಿ ಏಳಬೇಕು.
*ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು.
*ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ. ಭಕ್ತಿಯಿಂದ ಪೂಜಿಸಬೇಕು.
*ಉಪವಾಸ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುವುದು ತುಂಬಾ ಮಂಗಳಕರ
*ವಿಷ್ಣು ಮತ್ತು ಶಿವನನ್ನು ಆರಾಧಿಸಿ.
*ನಿಮ್ಮ ಪೂರ್ವಜರ ಆತ್ಮಗಳ ಶಾಂತಿಗಾಗಿ ಕಾಣಿಕೆಗಳನ್ನು ಸಲ್ಲಿಸಿ. ದಾನ ಮಾಡಿ, ಪೂಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ.
*ಮನೆಯಲ್ಲಿ ಪೂಜೆ ಮಾಡುವವರು- ಹೂವು, ಹಣ್ಣು, ನೈವೇದ್ಯ ಇಟ್ಟು ತುಪ್ಪದ ದೀಪ ಬೆಳಗಿಸಿ ಪೂಜೆ ಮಾಡಿ.












Click it and Unblock the Notifications