Makar Sankranti 2024: ಮಕರ ಸಂಕ್ರಾಂತಿ ಆಚರಣೆ ಜನವರಿ 14? 15? ಗೊಂದಲಗಳಿಗೆ ಪರಿಹಾರ ಇಲ್ಲಿದೆ
ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಈ ಹಬ್ಬದಂದು ಗಂಗಾ ಸ್ನಾನ ಮತ್ತು ದಾನ ಮಾಡುವುದು ವಿಶೇಷತೆಯನ್ನು ಹೊಂದಿದೆ. ಈ ದಿನ ಸೂರ್ಯನು ಉತ್ತರಾಯಣನಾಗುತ್ತಾನೆ. ಉತ್ತರಾರ್ಧಗೋಳವು ಸೂರ್ಯನ ಕಡೆಗೆ ತಿರುಗುತ್ತದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಈ ದಿನ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.
ಈ ಹಬ್ಬವನ್ನು ಭಾರತದ ವಿವಿಧ ಪ್ರದೇಶಗಳಲ್ಲಿ ಸ್ಥಳೀಯ ನಂಬಿಕೆಗಳ ಪ್ರಕಾರ ಆಚರಿಸಲಾಗುತ್ತದೆ. ಆದರೆ ಈ ಬಾರಿ ಮಕರ ಸಂಕ್ರಾಂತಿ ಹಬ್ಬವನ್ನು ಯಾವಾಗ ಆಚರಿಸಬೇಕು ಎನ್ನುವ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಹಾಗಾದರೆ ಮಕರ ಸಂಕ್ರಾಂತಿ ಹಬ್ಬ ಜನವರಿ 14 ಅಥವಾ 15 ಎನ್ನುವ ಬಗ್ಗೆ ತಿಳಿಯೋಣ.

ಋತುವಿನಲ್ಲಿ ಬದಲಾವಣೆ
ಮಕರ ಸಂಕ್ರಾಂತಿ ಹಬ್ಬವನ್ನು ಸೂರ್ಯನ ಆಧಾರದ ಮೇಲೆ ಲೆಕ್ಕಹಾಕುವ ಮೂಲಕ ಆಚರಿಸಲಾಗುತ್ತದೆ. ಈ ದಿನದಿಂದಲೇ ಋತುಗಳು ಬದಲಾಗತೊಡಗುತ್ತವೆ. ದಿನಗಳು ಉದ್ದವಾಗಲು ಪ್ರಾರಂಭಿಸುತ್ತವೆ. ಅಂದರೆ ರಾತ್ರಿಗಳು ಕಡಿಮೆಯಾಗುತ್ತವೆ. ಹಗಲು ಅಧಿಕವಾಗುತ್ತವೆ. ಅಂದರೆ ತಡವಾಗಿ ರಾತ್ರಿಯಾಗುತ್ತದೆ.
2024 ರಲ್ಲಿ ಮಕರ ಸಂಕ್ರಾಂತಿ ಯಾವಾಗ?
2024 ರಲ್ಲಿ ಮಕರ ಸಂಕ್ರಾಂತಿಯನ್ನು ಜನವರಿ 15ರಂದು ಆಚರಿಸಲಾಗುತ್ತದೆ. ಈ ದಿನ ಸೂರ್ಯ ದೇವ ಧನು ರಾಶಿಯಿಂದ ಹೊರಟು ಮಧ್ಯರಾತ್ರಿ 02:54ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂದರ್ಭದ ಶುಭ ಮುಹೂರ್ತವು ಈ ಕೆಳಗಿನಂತಿದೆ. ಈ ಶುಭ ಮುಹೂರ್ತಗಳಲ್ಲಿ ಪೂಜೆ ಮತ್ತು ದಾನಗಳನ್ನು ಮಾಡುವುದು ಅತ್ಯಂತ ಮಂಗಳಕರವಾಗಿರುತ್ತದೆ.

ಮಕರ ಸಂಕ್ರಾಂತಿ ಪುಣ್ಯಕಾಲ
ಜನವರಿ 15ರಂದು ಬೆಳಿಗ್ಗೆ 07:15 ರಿಂದ ಸಂಜೆ 06:21 ರವರೆಗೆ
ಮಕರ ಸಂಕ್ರಾಂತಿ ಮಹಾ ಪುಣ್ಯಕಾಲ
ಜನವರಿ 15ರಂದು ಬೆಳಿಗ್ಗೆ 07:15 ರಿಂದ ಬೆಳಿಗ್ಗೆ 09:06 ರವರೆಗೆ ಇರುತ್ತದೆ.
ಮಕರ ಸಂಕ್ರಾಂತಿಯ ಮಹತ್ವ
ಹಿಂದೂ ವೇದಗಳಲ್ಲಿ ಮಕರ ಸಂಕ್ರಾಂತಿಯನ್ನು ಮಹಾಪರ್ವ ಎಂದೂ ಕರೆಯುತ್ತಾರೆ. ಈ ದಿನ ಗಂಗಾಸ್ನಾನ ಮಾಡುವುದರಿಂದ ಸಕಲ ಪಾಪಗಳಿಂದ ಮುಕ್ತಿ ದೊರೆಯುತ್ತದೆ ಹಾಗೂ ಜೀವನದ ಸಂಕಷ್ಟಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಸಂಕ್ರಾಂತಿಯ ದಿನದಂದು ದಾನ, ತಪಸ್ಸು ಮತ್ತು ಜಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ.
ಮಕರ ಸಂಕ್ರಾಂತಿಯ ದಿನದಂದು ಕಪ್ಪು ಎಳ್ಳು ಮತ್ತು ಗಂಗಾಜಲವನ್ನು ನೀರಿನಲ್ಲಿ ಸೇರಿಸಿ ಸ್ನಾನ ಮಾಡುವುದರಿಂದ ಜಾತಕದ ಗ್ರಹದೋಷಗಳು ದೂರವಾಗುತ್ತವೆ ಎಂಬ ಧಾರ್ಮಿಕ ನಂಬಿಕೆಯಿದೆ. ಇದಲ್ಲದೇ ಸೂರ್ಯದೇವನ ಆಶೀರ್ವಾದವೂ ಸಿಗುತ್ತದೆ. ಮಕರ ಸಂಕ್ರಾಂತಿಯ ದಿನ ಸೂರ್ಯನು ಉತ್ತರದ ಕಡೆಗೆ ಚಲಿಸುತ್ತಾನೆ.
ವಿಶೇಷವಾಗಿ ಈ ದಿನ ಸೂರ್ಯನನ್ನು ಪೂಜಿಸುವುದರಿಂದ ಗೌರವ, ಸಂಪತ್ತು ಮತ್ತು ಆರೋಗ್ಯ ಸಿಗುತ್ತದೆ. ಜೊತೆಗೆ ಬೆಲ್ಲ, ಅನ್ನ, ವಸ್ತ್ರ, ಕಪ್ಪು ಎಳ್ಳು, ಖಿಚಡಿ ಇತ್ಯಾದಿಗಳನ್ನು ದಾನ ಮಾಡುವವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಮಂಗಳಕರ ಸಮಯದಲ್ಲಿ ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ.
ವಿಶೇಷತೆ
ಮಕರ ಸಂಕ್ರಾಂತಿಯ ಹಬ್ಬವು ಬ್ರಹ್ಮ, ವಿಷ್ಣು, ಮಹೇಶ್ವರ, ಗಣೇಶ, ಆದಿಶಕ್ತಿ ಮತ್ತು ಸೂರ್ಯನ ಪೂಜೆ ಮತ್ತು ಆರಾಧನೆಯ ಪವಿತ್ರ ದಿನವಾಗಿದೆ ಎನ್ನುವ ಉಲ್ಲೇಖವಿದೆ. ಇದು ದೇಹ, ಮನಸ್ಸು ಮತ್ತು ಆತ್ಮಕ್ಕೆ ಶಕ್ತಿಯನ್ನು ನೀಡುತ್ತದೆ. ಸಂತರು ಮತ್ತು ಋಷಿಗಳ ಪ್ರಕಾರ, ಜೀವಿಗಳ ಆತ್ಮವು ಮಕರ ಸಂಕ್ರಾಂತಿಯ ಪರಿಣಾಮದಿಂದ ಶುದ್ಧವಾಗುತ್ತದೆ. ಪರಿಹರಿಸುವ ಶಕ್ತಿ ಹೆಚ್ಚಾಗುತ್ತದೆ. ಜ್ಞಾನದ ನರಗಳು ಅಭಿವೃದ್ಧಿಗೊಳ್ಳುತ್ತವೆ. ಹೀಗೆ ಜೀವಿಗಳಲ್ಲಿ ಪ್ರಜ್ಞೆಯನ್ನು ಬೆಳೆಸುವ ಹಬ್ಬವೇ ಮಕರ ಸಂಕ್ರಾಂತಿಯಾಗಿದೆ.
ಆಚರಣೆ
ಹಾಗೆಯೇ ಮಕರ ಸಂಕ್ರಾಂತಿಯ ಹಬ್ಬಕ್ಕೆ ಕರ್ನಾಟಕ ರಾಜ್ಯವು ಈಗಿನಿಂದಲೇ ಸಜ್ಜುಗೊಳ್ಳುತ್ತಿದೆ. ಜೊತೆಗೆ "ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ" ಎಂಬುದು ಪ್ರಚಲಿತದಲ್ಲಿರುವ ಕನ್ನಡದ ಮಾತಾಗಿದೆ. ಇದರ ಅರ್ಥ ಒಬ್ಬರು ಎಳ್ಳು ಮತ್ತು ಬೆಲ್ಲದ ಮಿಶ್ರಣವನ್ನು ತಿನ್ನಬೇಕು. ಮತ್ತು ಒಳ್ಳೆಯ ಮಾತುಗಳನ್ನು ಹೇಳಬೇಕು. ಅಲ್ಲದೇ ಈ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಮನೆ-ಮನೆಗೆ ತೆರಳಿ ಕಬ್ಬಿನ ತುಂಡು, ಎಳ್ಳು ಮತ್ತು ಬೆಲ್ಲದ ಮಿಶ್ರಣ, ಸಕ್ಕರೆ ಅಚ್ಚನ್ನು ಒಳಗೊಂಡಿರುವ ತಟ್ಟೆಗಳನ್ನು ಬದಲಿಸಿಕೊಳ್ಳುತ್ತಾರೆ. ಈ ಸಂಪ್ರದಾಯದಲ್ಲಿ ಸಂತೋಷವನ್ನು ಹಂಚಿಕೊಳ್ಳುವ ಗುಣಗಳನ್ನು ಕಾಣಬಹುದಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications