ಪ್ರೇಮವಿವಾಹ ಬಯಸುವವರಿಗೆ ಸುವರ್ಣಾವಕಾಶ: ಮಹಾಶಿವರಾತ್ರಿಯಂದು ಹೀಗೆ ಮಾಡಿ....
ಒಂದು ಸುಂದರವಾದ ಜೋಡಿಯ ಮಾತು ಬಂದಾಗ ಶಿವ ಮತ್ತು ತಾಯಿ ಪಾರ್ವತಿಯ ಚಿತ್ರ ನೆನಪಿಗೆ ಬರುತ್ತದೆ. ಇಂದಿಗೂ ನಾವು ಶಿವ ಮತ್ತು ಪಾರ್ವತಿಯ ನಡುವಿನ ಪ್ರೀತಿಯನ್ನು ಉದಾಹರಣೆಗಾಗಿ ಹೇಳುತ್ತೇವೆ. ತಾಯಿ ಪಾರ್ವತಿ ಕಠೋರ ತಪಸ್ಸು ಮಾಡಿ 108 ಜನ್ಮಗಳನ್ನು ಪಡೆದು ಮಹಾದೇವನನ್ನು ಪತಿಯನ್ನಾಗಿ ಪಡೆದಳು ಎಂದು ಪುರಾಣಗಳು ಹೇಳುತ್ತವೆ. ಅಲ್ಲದೆ ಶಿವನ ಅರ್ಧನಾರೀಶ್ವರ ರೂಪವು ಪಾರ್ವತಿ ದೇವಿಯ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.
ನೀವು ಕೂಡ ಅವರಂತೆ ನಿಜವಾದ ಪ್ರೀತಿಯನ್ನು ಸಾಧಿಸಲು ಬಯಸಿದರೆ ಮಹಾಶಿವರಾತ್ರಿಯ ದಿನದಂದು ಈ ನಿಯಮಗಳನ್ನು ಅನುಸರಿಸಿ. ಇದರಿಂದ ನೀವೂ ನಿಮ್ಮ ಆಯ್ಕೆಯ ಜೀವನ ಸಂಗಾತಿಯನ್ನು ಮದುವೆಯಾಗಬಹುದು. ಆದರೆ ಅವರ ಬಗ್ಗೆ ಸಂಪೂರ್ಣ ನಂಬಿಕೆ ಇದ್ದಾಗ ಮಾತ್ರ ಈ ಕ್ರಮಗಳು ಫಲಪ್ರದವಾಗುತ್ತವೆ ಎಂಬುದನ್ನು ನೆನಪಿನಲ್ಲಿಡಿ. ವಿಶೇಷವಾಗಿ ಪ್ರೇಮಿಗಳು ಮಹಾಶಿವರಾತ್ರಿಯಂದು ಈ ಕೆಲಸಗಳನ್ನು ಮಾಡುವುದರಿಂದ ಮಹಾದೇವ ಮತ್ತು ಪಾರ್ವತಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. ಜೊತೆಗೆ ಅವರ ಮದುವೆಯಲ್ಲಿನ ಅಡೆತಡೆಗಳು ದೂರವಾಗುತ್ತವೆ. ಹಾಗಾದರೆ ನೆಚ್ಚಿನವರನ್ನು ಜೀವನ ಸಂಗಾತಿಯಾಗಿ ಪಡೆಯಲು ಶಿವರಾತ್ರಿಯಂದು ಅನುಸರಿಸಬೇಕಾದ ನಿಯಮಗಳ ಬಗ್ಗೆ ತಿಳಿಯೋಣ.

ಮಹಾಶಿವರಾತ್ರಿಯಂದು ಪ್ರೇಮ ವಿವಾಹಕ್ಕಾಗಿ ಈ ವಿಧಾನದಿಂದ ಪೂಜಿಸಿ...
1. ಮಹಾಶಿವರಾತ್ರಿಯ ದಿನ ಉಪವಾಸವನ್ನು ಮಾಡಿ ಶ್ರದ್ಧಾ ಭಕ್ತಿಯಿಂದ ಶಿವ ದೇವನನ್ನು ಪೂಜಿಸಿ. ಈ ದಿನ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ ಶಿವನ ದೇವಸ್ಥಾನಕ್ಕೆ ಹೋಗಿ. ಓಂ ನಮಃ ಶಿವಾಯ ಎಂದು ಹೇಳುತ್ತ ಶಿವಲಿಂಗದ ಮೇಲೆ ಪಂಚಾಮೃತವನ್ನು ಅರ್ಪಿಸಿ. ನಂತರ ಇಡೀ ಶಿವ ಕುಟುಂಬವನ್ನು ನೆನೆಯುತ್ತಾ ಆ ನೀರನ್ನು ಮನೆಯಲ್ಲಿ ಚಿಮ್ಮುಕಿಸಿ.
2. ಈ ದಿನ ಪಾರ್ವತಿ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ. ಮಂತ್ರವನ್ನು ಪಠಿಸಿ. ನಿಮ್ಮ ಮದುವೆಗಾಗಿ ಉತ್ತಮ ಮನಸ್ಸಿನಿಂದ ಪಾರ್ವತಿ ದೇವಿಯನ್ನು ಪ್ರಾರ್ಥಿಸಿ. ಪಾರ್ವತಿ ದೇವಿಯ ಆಶೀರ್ವಾದ ನಿಮ್ಮ ಮೇಲಿದ್ದರೆ ಆಕೆ ನಿಮ್ಮನ್ನು ಮೆಚ್ಚಿಕೊಳ್ಳುತ್ತಾಳೆ. ಜೊತೆಗೆ ನಿಮಗೆ ನಿಮ್ಮ ಸಂಗಾತಿಯನ್ನು ಪಡೆಲು ಆಶೀರ್ವಾದ ನೀಡುತ್ತಾಳೆ.
3. ಮಹಾಶಿವರಾತ್ರಿಯಂದು ಪಾರ್ವತಿ ದೇವಿಗೆ ಕೆಂಪು ಬಳೆಗಳು, ಕೆಂಪು ಚುನರಿಗಳು, ಕೆಂಪು ಬಟ್ಟೆಗಳು, ಕೆಂಪು ಹೂವುಗಳು, ಮೆಹಂದಿ, ಕೆಂಪು ರಿಬ್ಬನ್, ಕೆಂಪು ಬಳೆಗಳು ಮುಂತಾದ ಮದುವೆಯ ವಸ್ತುಗಳನ್ನು ಅರ್ಪಿಸಿ. ಇದರೊಂದಿಗೆ "ನಿಮ್ಮ ಪ್ರೀತಿಯನ್ನು ಗೌರವಾನ್ವಿತ ಜೀವನ ಸಂಗಾತಿಯ ರೂಪದಲ್ಲಿ ಪಡೆದಂತೆ, ನಾನು ಕೂಡ ನನ್ನ ಪ್ರೀತಿಯನ್ನು ಗಂಡನ ರೂಪದಲ್ಲಿ ಪಡೆಯಬೇಕು" ಎಂದು ತಾಯಿಯನ್ನು ಪ್ರಾರ್ಥಿಸಿ. ಈ ಪರಿಹಾರದಿಂದ ನೀವು ಖಂಡಿತವಾಗಿಯೂ ಪ್ರಯೋಜನವನ್ನು ಪಡೆಯುತ್ತೀರಿ.
4. ದೊಡ್ಡ ಹಾರವನ್ನು ತೆಗೆದುಕೊಂಡು ಅದನ್ನು ಶಿವ ಪಾರ್ವತಿ ದೇವಿ ಇಬ್ಬರಿಗೂ ಅರ್ಪಿಸಿ, ಅಂದರೆ ಇಬ್ಬರಿಗೂ ಒಟ್ಟಿಗೆ ಒಂದೇ ಮಾಲೆಯನ್ನು ಹಾಕಿ. ಪ್ರತ್ಯೇಕ ಮಾಲೆಗಳನ್ನು ಅರ್ಪಿಸಬೇಡಿ. ಇದರ ನಂತರ ಶಿವನಿಗೆ ತೆಂಗಿನಕಾಯಿಯನ್ನು ಅರ್ಪಿಸಿ ಮತ್ತು 'ಓಂ ಶ್ರೀಂ ವರ ಪ್ರದಾಯ ಶ್ರೀ ನಮಃ' ಎಂಬ ಮಂತ್ರವನ್ನು 108 ಬಾರಿ ಜಪಿಸಿ.
5. ತಾಯಿ ಪಾರ್ವತಿಯ ಮಂತ್ರವನ್ನು 21 ಬಾರಿ ಪಠಿಸಿ. ರಾಮಾಯಣ ಪ್ರಕಾರ ಭಗವಾನ್ ಶ್ರೀರಾಮನನ್ನು ನೋಡಿದ ನಂತರ, ಸೀತಾ ಮಾತೆ ಪಾರ್ವತಿ ದೇವಿಯ ದೇವಸ್ಥಾನಕ್ಕೆ ಹೋಗಿ ಅವನನ್ನು ಮದುವೆಯಾಗಲು ಬಯಸಿದಳು. ಆಗ ತಾಯಿ ಪಾರ್ವತಿಯ ಆಶೀರ್ವಾದಿಂದ ಸೀತಾ ಮಾತೆ ರಾಮನನ್ನು ಪತಿಯಾಗಿ ಪಡೆದಳು. ಹೀಗಾಗಿ ನೀವು ಕೂಡ ಈ ದಿನ ಪಾರ್ವತಿ ದೇವಿಯ ಆಶೀರ್ವಾದ ಪಡೆದು ಅಂದುಕೊಂಡ ಸಂಗಾತಿಯನ್ನು ಜೀವನದಲ್ಲಿ ಪಡೆಯಬಹುದು.
6. ಪೂಜೆ ಮುಗಿದ ನಂತರ ಈ ಪೂಜೆಯಲ್ಲಿ ನಾನು ಏನಾದರೂ ತಪ್ಪು ಮಾಡಿದ್ದರೆ, ದಯವಿಟ್ಟು ನನ್ನನ್ನು ಕ್ಷಮಿಸಿ ಮತ್ತು ನನ್ನ ಇಷ್ಟಾರ್ಥವನ್ನು ಪೂರೈಸಿ ಎಂದು ಮಹಾದೇವ ಮತ್ತು ತಾಯಿ ಪಾರ್ವತಿಯನ್ನು ಕ್ಷಮೆಗಾಗಿ ಪ್ರಾರ್ಥಿಸಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications