Hanuman Jayanti 2023: ಸಮಸ್ಯೆಗಳ ನಿವಾರಕ ಬಜರಂಗಬಲಿ, ಪೂಜಾ ವಿಧಾನ ಹೇಗೆ?

ಚೈತ್ರ ಮಾಸದ ಹುಣ್ಣಿಮೆಯಂದು ಹನುಮ ಜಯಂತಿಯನ್ನು ಆಚರಿಸಲಾಗುವುದು. ಈ ಬಾರಿ ಹುಣ್ಣಿಮೆ ಏಪ್ರಿಲ್ 6 ರಂದು ಬರುತ್ತದೆ. ಮಹಾಬಲಿ ಹನುಮಂತನ ಜನ್ಮದಿನವಾದ ಇಂದು ಆತನ ಪೂಜೆಗೆ ಬಹಳ ವಿಶೇಷವಾದ ದಿನವಾಗಿದೆ. ಭಜರಂಗಬಲಿ ಹನುಮಾನ್ ಶಿವನ 11 ನೇ ಅವತಾರ ಮತ್ತು ಶ್ರೀರಾಮನ ಕಟ್ಟಾ ಭಕ್ತ. ಹನುಮಾನ್ ಶ್ರೀರಾಮನಿಗೆ ನಿಷ್ಠೆವಂತ ಆರಾಧಕ. ಹಲವಾರು ಬಾರಿ ಶ್ರೀರಾಮ ಮತ್ತು ಆತನ ಕುಟುಂಬವನ್ನು ಕಾಪಾಡುತ್ತಾನೆ. ಹೀಗಾಗಿ ಮಹಾಬಲಿ ಹನುಮಾನ್ ಜಯಂತಿಯ ದಿನದಂದು ಹನುಮಂತನನ್ನು ಆರಾಧನೆ ಮಾಡುವ ಮೂಲಕ ಮುಖ್ಯವಾಗಿ ಶ್ರೀರಾಮನನ್ನು ಪೂಜಿಸುವ ಮೂಲಕ ಎಲ್ಲಾ ಸಂಕಷ್ಟಗಳಿಂದ ಮುಕ್ತಿಯನ್ನು ಪಡೆಯಬಹುದು. ಹಾಗಾದರೆ ಈ ದಿನ ಹನುಮಂತನನ್ನು ಪೂಜಿಸಿ ಆರ್ಥಿಕ, ಆರೋಗ್ಯ, ಪ್ರಗತಿ ಪಡೆಯುವುದು ಹೇಗೆ ತಿಳಿಯಿರಿ.

ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ನೀಡುವ ಅಂಜನಿಪುತ್ರ

ನೀವು ಹಣಕಾಸಿನ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರೆ ಈ ಪರಿಹಾರ ನಿಮಗೆ ಪರಿಣಾಮಕಾರಿಯಾಗಿದೆ. ಹನುಮ ಜಯಂತಿಯ ದಿನದಂದು ಆಲದ ಮರದ 11 ಎಲೆಗಳನ್ನು ತೆಗೆದುಕೊಂಡು ಅದರ ಮೇಲೆ ಶ್ರೀರಾಮನನ್ನು ಕೆಂಪು ಚಂದನದಿಂದ ಬರೆದು ಈ ಎಲೆಗಳಿಂದ ಮಾಲೆಯನ್ನು ಮಾಡಿ ಹನುಮಂತನಿಗೆ ಅರ್ಪಿಸಿ. ಇದರಿಂದ ಮನೆಯಲ್ಲಿ ಬರುವ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ.

Hanuman Jayanti 2023: Bajrangbali will remove all suffering

ಉತ್ತಮ ಆರೋಗ್ಯಕ್ಕಾಗಿ ಅಮಿತವಿಕ್ರಮನ ಪೂಜೆ

ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಆರೋಗ್ಯವಾಗಿರದಿದ್ದರೆ, ಈ ಪರಿಹಾರ ನೀವು ಅನುಸರಿಸಲಬಹುದು. ಹನುಮಾನ್ ಜಿಯವರ ಭುಜದ ಮೇಲೆ ಇರುವ ಸಿಂಧೂರವನ್ನು ತಿಲಕ ರೂಪದಲ್ಲಿ ರೋಗಿಯ ಹಣೆಯ ಮೇಲೆ ಹಚ್ಚಿ. ಇದರಿಂದ ಅವರ ಆರೋಗ್ಯ ಸುಧಾರಿಸುತ್ತದೆ ಮತ್ತು ರೋಗಗಳು ದೂರವಾಗುತ್ತವೆ.

ಕೆಲಸದಲ್ಲಿ ಪ್ರಗತಿ ನೀಡುವ ಲಕ್ಷಣಪ್ರಾಣದಾತ

ಸಾಕಷ್ಟು ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮದ ನಂತರವೂ ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯದಿದ್ದರೆ, ಈ ಪರಿಹಾರವು ನಿಮಗೆ ಸಹಾಯ ಮಾಡಬಹುದು. ಹನುಮ ಜಯಂತಿಯ ದಿನದಂದು ಬಜರಂಗಬಲಿಯ ಮುಂದೆ ದೀಪವನ್ನು ಹಚ್ಚಿ 'ಓಂ ನಮೋ ಹನುಮತೇ ರುದ್ರಾವತಾರಾಯ ಸರ್ವಶತ್ರುಸಹರಣಾಯ ಸರ್ವರೋಗ ಹರಾಯ ಸರ್ವವಶೀಕರಣಾಯ ರಾಮದೂತಾಯ ಸ್ವಾಹಾ' ಮಂತ್ರವನ್ನು 108 ಬಾರಿ ರುದ್ರಾಕ್ಷ ಮಾಲೆಯೊಂದಿಗೆ ಜಪಿಸಿ. ಇದು ವ್ಯಾಪಾರ ಮತ್ತು ಉದ್ಯೋಗದಲ್ಲಿ ಬೆಳವಣಿಗೆಯನ್ನು ತರುತ್ತದೆ.

ಸುಂದರಕಾಂಡ ಪಠಿಸಿ

ಹನುಮ ಜಯಂತಿಯ ದಿನದಂದು ಸುಂದರಕಾಂಡವನ್ನು ಪಠಿಸಿ ಬಡವರಿಗೆ ಬೂಂದಿ ಲಡ್ಡುಗಳನ್ನು ಹಂಚಬೇಕು. ಇದರಿಂದ ಶನಿ ದೋಷ ನಿವಾರಣೆಯಾಗುವುದು ಮಾತ್ರವಲ್ಲ, ಮಕ್ಕಳಾಗದವರಿಗೆ ಮಗುವನ್ನು ಹೊಂದುವ ಸಾಧ್ಯತೆಗಳೂ ಇವೆ.

Hanuman Jayanti 2023: Bajrangbali will remove all suffering

ಶತ್ರುಗಳ ಅಡೆತಡೆಗಳನ್ನು ತಪ್ಪಿಸಲು ಇಲ್ಲಿದೆ ಪರಿಹಾರ

ಹನುಮ ಜಯಂತಿಯ ದಿನದಂದು ಮಹಾಬಲಿ ಹನುಮಂತನಿಗೆ ಬಟ್ಟೆ ಮತ್ತು ವೀಳ್ಯದೆಲೆಯನ್ನು ಅರ್ಪಿಸಿ. ಇದರ ನಂತರ ಕಚ್ಚಾ ತೆಂಗಿನ ಎಣ್ಣೆಯ ದೀಪವನ್ನು ಬೆಳಗಿಸಿ, ಅದರಲ್ಲಿ ಲವಂಗವನ್ನು ಹಾಕಿ ಮತ್ತು ಹನುಮಾನಿಗೆ ಆರತಿಯನ್ನು ಮಾಡಿ. ಹೀಗೆ ಮಾಡುವುದರಿಂದ ಶತ್ರುಗಳಿಂದ ಉಂಟಾಗುವ ತೊಂದರೆಗಳಿಂದ ಮುಕ್ತಿ ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+