ವಿಶೇಷ ಲೇಖನ: ಸ್ವಲ್ಪ ಈ ಕಡೆ ನೋಡಿ... ಸ್ಮೈಲ್ ಪ್ಲೀಸ್...

By: ಬಿ.ಎಂ.ಲವಕುಮಾರ್
Subscribe to Oneindia Kannada

ಒಂದು ಕಾಲವಿತ್ತು. ಕತ್ತಿನಲ್ಲಿ ಪುಟ್ಟ ಪೆಟ್ಟಿಗೆಯಾಕಾರದ ಕ್ಯಾಮೆರಾವನ್ನು ನೇತು ಹಾಕಿಕೊಂಡು ಬರುತ್ತಿದ್ದ ಫೋಟೋಗ್ರಾಫರ್ ನನ್ನು ನೋಡಿದರೆ ಅಚ್ಚರಿ, ಸಂಭ್ರಮದಿಂದ ಕುಣಿದಾಡುವ ಕಾಲ ಅದಾಗಿತ್ತು.

ಆ ದಿನಗಳಲ್ಲಿ ಫೋಟೋ ತೆಗೆಸಿಕೊಳ್ಳುವುದೆಂದರೆ ವರ್ಣಿಸಲಾಗದ ಸಂಭ್ರಮ. ಹೆಚ್ಚಿನ ಮನೆಗಳಲ್ಲಿ ಕ್ಯಾಮೆರಾಗಳೇ ಇರುತ್ತಿರಲಿಲ್ಲ ಹಾಗಾಗಿ ಫೋಟೋಗ್ರಾಫರ್ ಬಳಿಗೆ ಹೋಗಿ ಫೋಟೋ ತೆಗೆಸಿ, ಅದಕ್ಕೊಂದು ಕಟ್ಟು(ಫ್ರೇಮ್) ಹಾಕಿಸಿ ಮನೆಯ ಗೋಡೆಯಲ್ಲಿ ನೇತು ಹಾಕುವುದೆಂದರೆ ಅದರ ಸಂಭ್ರಮವೇ ಬೇರೆಯಾಗಿತ್ತು.[ಪೊಲೀಸರ ಮೇಲೆ ಸಿಟ್ಟಾದ ಪತ್ರಿಕಾ ಛಾಯಾಗ್ರಾಹಕರಿಂದ ಪ್ರತಿಭಟನೆ]

ಸಾಮಾನ್ಯವಾಗಿ ಫೋಟೋಗ್ರಾಫರ್ ಎಂದಾಕ್ಷಣ ಸ್ಟುಡಿಯೋದಲ್ಲಿ ಕುಳಿತು ಪಾಸ್ ಪೋರ್ಟ್, ಫ್ಯಾಮಿಲಿ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಫೋಟೋ ತೆಗೆಯುವ ಫೋಟೋಗ್ರಾಫರ್ ಗಳು ನಮ್ಮ ಕಣ್‍ಮುಂದೆ ಬರುವುದು ಸಹಜ. ಇವರು ವೃತ್ತಿನಿರತ ಫೋಟೋಗ್ರಾಫರ್ ಗಳು; ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಉಳಿದು ಹೋದವರು.

Special article on world photography day

ಪತ್ರಿಕಾ ಫೋಟೋಗ್ರಾಫರ್: ಇನ್ನು ಪತ್ರಿಕಾ ಫೋಟೋಗ್ರಾಫರ್ ಗಳು ಅಂದ್ರೆ ಸದಾ ಕ್ರಿಯಾಶೀಲರಾಗಿರುವವರು. ಯಾವುದೇ ಕಾರ್ಯಕ್ರಮಗಳಿರಲಿ ಇವರು ಇರಲೇ ಬೇಕು. ಇವರು ಬಂದಿಲ್ಲ ಅಂದ್ರೆ ಆ ಕಾರ್ಯಕ್ರಮಕ್ಕೆ ಕಳೆಯೇ ಇರುವುದಿಲ್ಲ. ಸದಾ ಒಂದಲ್ಲಾ ಒಂದು ಕಾರ್ಯಕ್ರಮ, ಘಟನಾವಳಿಗಳನ್ನು ಸೆರೆ ಹಿಡಿಯುತ್ತಾ ಸುದ್ದಿಮನೆಯ ಮೊಗಸಾಲೆಗೆ ತಲುಪಿಸುವ ಇವರಿಲ್ಲವೆಂದರೆ ಪತ್ರಿಕೆ ಹೊರಬರುವುದೇ ಇಲ್ಲ. ಇದಕ್ಕೆ ಕಾರಣವೂ ಇದೆ. ವರದಿಗಾರರು ಹೇಳಲು ಹೊರಡುವ ಒಂದು ಪುಟದ ವಿಚಾರವನ್ನು ಇವರ ಒಂದೇ ಒಂದು ಫೋಟೋ ಹೇಳಿ ಮುಗಿಸಿಬಿಡುತ್ತದೆ.[ಹುಬ್ಬಳ್ಳಿಯ ಕಿರಣ ಬಾಕಳೆಗೆ ರಾಜ್ಯ ಛಾಯಾಗ್ರಾಹಕ ಪ್ರಶಸ್ತಿ]

ಇವತ್ತು ತಂತ್ರಜ್ಞಾನ ಮುಂದುವರೆದಿರುವುದರಿಂದ ಕ್ಯಾಮೆರಾಗಳು ಎಲ್ಲರ ಬಳಿಯೂ ಇವೆ. ಅಷ್ಟೇ ಅಲ್ಲ ಮೊಬೈಲ್ ಗಳು ಕ್ಯಾಮೆರಾದ ಸ್ಥಾನವನ್ನು ಕಸಿದುಕೊಂಡಿವೆ. ಎಲ್ಲಿ ನೋಡಿದರೂ ಫೋಟೋ ತೆಗೆಯುವವರು, ತೆಗೆಸಿಕೊಳ್ಳುವವರೇ ಕಾಣಸಿಗುತ್ತಾರೆ. ಒಂದು ರೀತಿಯಲ್ಲಿ ಎಲ್ಲರೂ ಫೋಟೋಗ್ರಾಫರ್ ಗಳೇ ಆಗಿಹೋಗಿದ್ದಾರೆ. ಫೋಟೋ ತೆಗೆಯುವುದಾ ಅದೇನ್ ಮಹಾ? ಹಾಗೆಂಬ ಪ್ರಶ್ನೆಯನ್ನು ಯಾರು ಬೇಕಾದರೂ ಕೇಳಬಹುದು. ಆದರೆ ತಾವು ತೆಗೆದ ಫೋಟೋಕ್ಕೆ ನ್ಯಾಯ ಒದಗಿಸುವುದಿದೆಯಲ್ಲಾ ಅದು ಸುಲಭದ ಕೆಲಸವಲ್ಲ.

ಒತ್ತಡ-ಕ್ರಿಯಾಶೀಲತೆ: ನಾಗಾಲೋಟದ ಬದುಕಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವಂತಹ ಮಾಧ್ಯಮ ಫೋಟೋಗ್ರಾಫರ್ ಗಳಿಗೆ ಪ್ರತಿ ಕ್ಷಣವೂ ಸವಾಲಿನ ಕೆಲಸ. ಒತ್ತಡದ ನಡುವೆಯೂ ಒಮ್ಮೊಮ್ಮೆ ತಮ್ಮ ಕ್ರಿಯಾಶೀಲತೆಯನ್ನು ಪ್ರದರ್ಶಿಸಬೇಕಾದ ಅನಿವಾರ್ಯ ಇದ್ದೇ ಇದೆ.[ಮುಸ್ಲಿಮರು 'ಫೋಟೋ' ತೆಗಿಸಿಕೊಳ್ಳುವಂತಿಲ್ಲ!]

Special article on world photography day

ಇವತ್ತು ನಮ್ಮ ನಡುವೆ ನೂರಾರು ಮಂದಿ ಫೋಟೋಗ್ರಾಫರ್ ಗಳಿದ್ದರೂ ಅವರನ್ನೆಲ್ಲಾ ಫೋಟೋಗ್ರಾಫರ್ ಎಂದು ಒಪ್ಪಿಕೊಳ್ಳಲಾಗದು. ಏಕೆಂದರೆ ಫೋಟೋ ತೆಗೆದ ತಕ್ಷಣಕ್ಕೆ ಅವರ್ಯಾರೂ ಫೋಟೋಗ್ರಾಫರ್ ಆಗುವುದಿಲ್ಲ. ಉತ್ತಮ ಫೋಟೋಗ್ರಾಫರ್ ಆಗಬೇಕಾದರೆ ಫೋಟೋ ತೆಗೆಯುವುದರಲ್ಲಿಯೂ ಕೌಶಲ್ಯ, ನೈಪುಣ್ಯ ಬೇಕಾಗುತ್ತದೆ. ಹಾಗಾಗಿ ಕೆಲವೇ ಕೆಲವರು ಮಾತ್ರ ಖ್ಯಾತಿಪಡೆಯುತ್ತಾರೆ.

ಹವ್ಯಾಸ-ವೃತ್ತಿ: ಫೋಟೋಗ್ರಫಿ ಕೆಲವರಿಗೆ ಹವ್ಯಾಸವಾದರೆ ಮತ್ತೆ ಕೆಲವರಿಗೆ ವೃತ್ತಿಯಾಗಿದೆ. ಹೀಗಾಗಿ ಇಬ್ಬರೂ ಪ್ರತ್ಯೇಕವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಮದುವೆ ಇನ್ನಿತರೆ ಶುಭ ಸಮಾರಂಭದಲ್ಲಿ ಪಾಲ್ಗೊಂಡು ಫೋಟೋ ತೆಗೆಯುವ ಫೋಟೋಗ್ರಾಫರ್ ಗೂ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವ ಫೋಟೋಗ್ರಾಫರ್ ಗೂ ಅಜಗಜಾಂತರ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವ ಫೋಟೋಗ್ರಾಫರ್ ಸದಾ ಕ್ರಿಯಾಶೀಲನಾಗಿರಬೇಕು. ಅಷ್ಟೇ ಅಲ್ಲ, ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸುವ ಮತ್ತು ಸಮಯದೊಂದಿಗೆ ಓಡುವ ಗುಣವನ್ನು ಹಾಗೂ ಧೈರ್ಯವನ್ನು ಹೊಂದಿರಬೇಕಾಗಿರುತ್ತದೆ.[ವಿಶ್ವ ಫೋಟೋಗ್ರಫಿ ದಿನಕ್ಕೊಂದಿಷ್ಟು ವಿಶಿಷ್ಟ ಚಿತ್ರಗಳು]

ಸಾಮಾನ್ಯವಾಗಿ ನಮ್ಮ ಕಣ್ಣಿಗೆ ಹತ್ತಾರು ಅಪರೂಪದ ದೃಶ್ಯಗಳು ಕಾಣಸಿಗುತ್ತವೆ. ಆದರೆ ಅದು ನಮಗೆ ವಿಶೇಷ ಎನಿಸುವುದಿಲ್ಲ. ಆದರೆ ಅದೇ ದೃಶ್ಯವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದು ಅದಕ್ಕೊಂದು ಜೀವ ತುಂಬುವಲ್ಲಿ ಫೋಟೋಗ್ರಾಫರ್ ಸಫಲನಾಗಿಬಿಡುತ್ತಾನೆ. ಕೆಲವೊಮ್ಮೆ ಅಪರೂಪದ ಚಿತ್ರಗಳಿಗಾಗಿ ಫೋಟೋಗ್ರಾಫರ್ ದಿನ, ವಾರ, ತಿಂಗಳಾನುಗಟ್ಟಲೆ ಕಾಯಬೇಕಾಗುತ್ತದೆ. ಇನ್ನು ಕೆಲವು ಆ ಕ್ಷಣದ ಘಟನೆಗಳಷ್ಟೆ. ಆ ಸಂದರ್ಭ ತಪ್ಪಿ ಹೋದರೆ ಮತ್ತೆ ಸಿಗಲಾರದು. ಹೀಗಾಗಿ ಅಂತಹ ಸಂದರ್ಭಗಳನ್ನು ತನ್ನ ಚಾಕಚಕ್ಯತೆಯಿಂದ ಸೆರೆಹಿಡಿಯುವ ಗಟ್ಟಿತನ, ತಾಳ್ಮೆ, ಆಸಕ್ತಿ ಹೀಗೆ ಎಲ್ಲವೂ ಇರಬೇಕು.

ತಂತ್ರಜ್ಞಾನ, ಅಭಿವೃದ್ಧಿ: ಛಾಯಾಗ್ರಹಣ ಕ್ಷೇತ್ರ ಎಲ್ಲಾ ವಿಧದ ತಂತ್ರಜ್ಞಾನದೊಂದಿಗೆ ಇವತ್ತು ಅಭಿವೃದ್ಧಿಯಾಗಿದೆ. ಆದರೆ ಇಷ್ಟೊಂದು ಅಭಿವೃದ್ಧಿ ಹಂತಹಂತವಾಗಿ ಅಭಿವೃದ್ಧಿಯಾಗಿರುವುದನ್ನು ನಾವು ಒಪ್ಪಲೇ ಬೇಕಾಗುತ್ತದೆ. ಛಾಯಾಗ್ರಹಣ ಕ್ಷೇತ್ರದ ಅಭಿವೃದ್ಧಿಯಾಗಲು ಹಲವರು ತಮ್ಮದೇ ಆದ ತಂತ್ರಜ್ಞಾನವನ್ನು ಬಳಸಿ ಹೊಸ ಪ್ರಯೋಗಗಳನ್ನು ಕೂಡ ಮಾಡಿದ್ದಾರೆ. ಅವರ ಆವಿಷ್ಕಾರ, ಸಂಶೋಧನೆ ಇವತ್ತು ಯಾರು ಬೇಕಾದರೂ ಸುಲಭವಾಗಿ ತಮಗೆ ಬೇಕಾದ ದೃಶ್ಯಗಳನ್ನು ಸೆರೆಹಿಡಿಯಲು ಅನುಕೂಲವಾಗುವಂತಹ ಕ್ಯಾಮೆರಾಗಳನ್ನು ಸೃಷ್ಟಿಸಿಕೊಟ್ಟಿದೆ.

ಇತಿಹಾಸದ ಪುಟಗಳನ್ನು ತಿರುವಿದರೆ ಫೋಟೋಗ್ರಫಿ ಹಂತಹಂತವಾಗಿ ಬೆಳೆದು ಬಂದ ಹಾದಿಯ ಚಿತ್ರಣಗಳು ಸಿಗುತ್ತವೆ. ಹಾಗೆಯೇ ನೂರಾರು, ಸಾವಿರಾರು ಸಾಧನೆಗೈದ ಫೋಟೋಗ್ರಾಫರ್ ಗಳು ಕೂಡ ಕಾಣಸಿಗುತ್ತಾರೆ.

ಇವರ ಪೈಕಿ ಫ್ರಾನ್ಸ್ ದೇಶದ ನಿಕ್ಕೆಫೋರೆ ನೈಪ್ಸೆ(1765-1833) ವಿಶ್ವದ ಪ್ರಥಮ ಫೋಟೋಗ್ರಾಫರ್ ಅಂತೆ. ಇನ್ನು ಗುಜರಾತ್ ನ ವಡೋದರದಲ್ಲಿ ಜನಿಸಿದ ವೆರವಾಲ್ ಭಾರತದ ಪ್ರಥಮ ಮಹಿಳಾ ಫೋಟೋಗ್ರಾಫರ್ ಆಗಿದ್ದಾರೆ. ನಾವು ಇವತ್ತು ನೋಡುವ ಗಾಂಧೀಜಿ, ನೆಹರೂ, ಶಾಸ್ತ್ರಿ, ಇಂದಿರಾಗಾಂಧಿ ಅವರ ಚಿತ್ರಗಳು ಇವರೇ ಕ್ಲಿಕ್ಕಿಸಿದ ಕಪ್ಪು ಬಿಳುಪು ಚಿತ್ರಗಳಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
August 19th is world photography day. It is time to remember old days of photo studios and photographers.
Please Wait while comments are loading...