ಮಹಾಲಯ ಅಮಾವಾಸ್ಯೆ 2021: ಪೂಜಾ ವಿಧಿ, ತರ್ಪಣ ಹಾಗೂ ಮಹತ್ವ
ಬೆಂಗಳೂರು, ಅಕ್ಟೋಬರ್ 05: ಮಹಾಲಯ ಅಮಾವಾಸ್ಯೆ ಎಂದರೆ ನಮ್ಮ ಪೂರ್ವಜರನ್ನು ನೆನೆದು ಅವರಿಗೆ ತರ್ಪಣ ಬಿಡುವ ಪದ್ಧತಿ.
ಪಿತೃಪಕ್ಷದ ಕೊನೆಯ ದಿನ ಈ ಅವಧಿಯಲ್ಲಿ ನಮ್ಮನ್ನು ಅಗಲಿದ ಹಿರಿಕರಿಗೆ ಪಿಂಡ ಇಡುವ ಪದ್ಧತಿ ಹಿಂದೂಗಳಲ್ಲಿ ನಡೆದುಕೊಂಡು ಬಂದಿದೆ. ಪಿತೃಪಕ್ಷ ಅಥವಾ ಶ್ರಾದ್ಧ ಪಕ್ಷವು 16 ದಿನಗಳನ್ನು ಸೂಚಿಸುತ್ತದೆ. ಅವಧಿಯಲ್ಲಿ ಪಿಂಡ ಪ್ರಧಾನ ಮಾಡಿದರೆ ಅಗಲಿದ ಹಿರಿಕರು ನಮಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಇದರಿಂದ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ ಎಂಬುದು ಜನರ ನಂಬಿಕೆ.
ಮುಂಜಾನೆಯೇ ಎದ್ದು ಸ್ನಾನ ಮಾಡಬೇಕು. ಅಲ್ಲದೆ ಮನೆಯಲ್ಲಿ ಸಾತ್ವಿಕ ಆಹಾರ ಸೇವನೆ ಮಾಡಬೇಕು. ಮಧ್ಯಾಹ್ನ ಪಿಂಡ ಬಿಡುವ ಕೆಲಸ ಮಾಡಿದರೆ, ಸಂಜೆ ಮನೆಯ ಹೊರ ಭಾಗದಲ್ಲಿ ಸಾಸಿವೆ ದೀಪ ಹಚ್ಚಬೇಕು. ಈ ದಿನ ಕಾಗೆ ಹಾಗೂ ಹಸುಗಳಿಗೆ ಆಹಾರ ನೀಡಬೇಕು. ಈ ಬಾರಿ ಅಕ್ಟೋಬರ್ 6 ರಂದು ಪಿತೃಪಕ್ಷದ ಕೊನೆಯ ದಿನ ಅಂದೇ ಮಹಾಲಯ ಅಮಾವಾಸ್ಯೆ.

ಅಶ್ವಿನಿ ತಿಂಗಳ ಕೃಷ್ಣ ಅಮಾವಾಸ್ಯೆಯನ್ನು ಸರ್ವ ಪಿತೃ ಅಮಾವಾಸ್ಯೆ ಎಂದು ಕರೆಯುತ್ತಾರೆ, ಈ ಅಮಾವಾಸ್ಯೆ ಈ ಬಾರಿ ಅಕ್ಟೋಬರ್ 6 ರಂದು ಅಂದರೆ ಬುಧವಾರ ಬಂದಿದೆ. ಈ ದಿನ ಪಿತೃ ಪಕ್ಷ ಕೊನೆಗೊಳ್ಳುತ್ತದೆ. ಇದನ್ನು ವಿಸರ್ಜನಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಈ ದಿನ ಪೂರ್ವಜರಿಗೆ ಶ್ರಾದ್ಧ ಮಾಡುವ ಮೂಲಕ ಪಿತೃ ದೋಷವನ್ನು ತೆಗೆದುಹಾಕಬಹುದು.
ಈ ವರ್ಷ ಗಜಛಾಯ ಯೋಗವು ಸರ್ವ ಪಿತೃ ಅಮಾವಾಸ್ಯೆಯಂದು ರೂಪುಗೊಳ್ಳುತ್ತಿದೆ. ಮೊದಲು ಈ ಯೋಗವು 2010 ರಲ್ಲಿ ರೂಪುಗೊಂಡಿತು, ಅಂದರೆ ಈ ಯೋಗ ನಡೆದು 11 ವರ್ಷಗಳಾಗಿವೆ. ಜ್ಯೋತಿಷ್ಯದಲ್ಲಿ, ಗಜಛಾಯ ಯೋಗವನ್ನು ಅತ್ಯಂತ ಶುಭ ಯೋಗವೆಂದು ಪರಿಗಣಿಸಲಾಗಿದೆ.
ಈ ಶುಭ ಯೋಗದಲ್ಲಿ ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರ ಆತ್ಮಗಳು ತೃಪ್ತಿ ಹೊಂದುತ್ತವೆ ಮತ್ತು ಪೂರ್ವಜರಲ್ಲಿ ನಂಬಿಕೆ ಇಟ್ಟಿರುವವರು ಸಂತೋಷ, ಶಾಂತಿ ಮತ್ತು ಸಮೃದ್ಧಿಯಿಂದ ಆಶೀರ್ವದಿಸಲ್ಪಡುತ್ತಾರೆ.
ಈ ಯೋಗದಲ್ಲಿ ಮಾಡಿದ ತರ್ಪಣ ಮತ್ತು ಶ್ರಾದ್ಧವು ಐದು ಪಟ್ಟು ಫಲಿತಾಂಶವನ್ನು ನೀಡುತ್ತದೆ. ಈ ಶುಭ ಯೋಗದಲ್ಲಿ ಪೂರ್ವಜರ ಹೆಸರಿನಲ್ಲಿ ದಾನ ಮಾಡಬೇಕು. ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿದೆ
ಮಹಾಲಯ ಅಮಾವಾಸ್ಯೆಯ ಮಹತ್ವವೇನು?
ಹಿಂದೂ ಧರ್ಮಗ್ರಂಥಗಳಲ್ಲಿ ಮಹಾಲಯ ಅಮಾವಾಸ್ಯೆಯು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪಿತೃಗಳ ಮರಣ ದಿನಾಂಕ ನೆನಪಿಲ್ಲದಿದ್ದರೆ ಎಲ್ಲಾ ಪಿತೃಗಳಿಗೂ ನಾವು ಈ ದಿನ ಗೌರವವನ್ನು ಸಲ್ಲಿಸಬಹುದು. ದಾನ ಮಾಡಲು ಕೂಡ ಈ ದಿನ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪಿತೃಗಳು ಮಹಾಲಯ ಅಮಾವಾಸ್ಯೆಯಂದು ತಮ್ಮ ಕುಟುಂಬ ವರ್ಗದವರನ್ನು ಕೊನೆಯದಾಗಿ ಆಶೀರ್ವದಿಸಿ ಹೋಗುತ್ತಾರೆ. ಹಾಗೂ ನಾವು ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಗೌರವ ಪಿತೃ ಪಕ್ಷದ ನಂತರ ಅಂದರೆ ಮಹಾಲಯ ಅಮಾವಾಸ್ಯೆಯ ನಂತರ ನಮ್ಮ ಕುಟುಂಬದಲ್ಲಿ ಬದಲಾವಣೆಗಳು ಕಂಡು ಬರುತ್ತವೆ. ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ. ಮತ್ತು ವಾಸ್ತು ದೋಷವಿದ್ದರೆ ಅದು ಕೂಡ ದೂರವಾಗಿ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ ಎಂಬ ನಂಬಿಕೆಯಿದೆ.
ಪೂರ್ವಜರು ಭೂಮಿಯಿಂದ ನಿರ್ಗಮಿಸುತ್ತಾರೆ
ಅಶ್ವಿನಿ ತಿಂಗಳ ಕೃಷ್ಣ ಅಮಾವಾಸ್ಯೆಯು ಶ್ರಾದ್ಧದ ಕೊನೆಯ ದಿನ. ಈ ಅಮವಾಸ್ಯೆಯನ್ನು ಸರ್ವ ಪಿತೃ ಅಮಾವಾಸ್ಯೆ, ಪಿತೃ ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆ ಎಂದೂ ಕರೆಯುತ್ತಾರೆ.
ಸರ್ವಪಿತೃ ಅಮಾವಾಸ್ಯೆಯ ದಿನ, ಪೂರ್ವಜರಿಗೆ ಶ್ರಾದ್ಧ ಮತ್ತು ಪಿಂಡ ದಾನವನ್ನು ಮಾಡಲಾಗುತ್ತದೆ. ಈ ದಿನ ಪೂರ್ವಜರು ಭೂಮಿಯನ್ನು ತೊರೆಯುತ್ತಾರೆ, ಆದ್ದರಿಂದ ಈ ದಿನ ಪೂರ್ವಜರನ್ನು ಸ್ಮರಿಸುವ ಮೂಲಕ ನೀರನ್ನು ನೀಡಬೇಕು. ಮರಣ ದಿನಾಂಕ ತಿಳಿದಿಲ್ಲದ ಪೂರ್ವಜರಿಗೆ, ಸರ್ವ ಪಿತೃ ಅಮಾವಾಸ್ಯೆಯಂದು ಶ್ರಾದ್ಧವನ್ನು ಮಾಡಬೇಕು. ಶ್ರಾದ್ಧದ ನಂತರ ಬ್ರಾಹ್ಮಣರಿಗೆ ಆಹಾರವನ್ನು ನೀಡಬೇಕು. ಇದರಿಂದ ಅದೃಷ್ಟ ಒಲಿಯುವುದು.
ಶ್ರಾದ್ಧಕರ್ಮ ಮತ್ತು ತರ್ಪಣ:
ಪಿತೃ ಪಕ್ಷದಲ್ಲಿನ ಕೊನೆಯ ಶ್ರಾದ್ಧ ದಿನವನ್ನು ಸರ್ವಪಿತೃ ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆಯೆಂದು ಕರೆಯಲಾಗುತ್ತದೆ. ಪಿತೃ ಪಕ್ಷದ ಕೊನೆಯ ಶ್ರಾದ್ಧವು ಅತ್ಯಂತ ಮಹತ್ವದ್ದಾಗಿದೆ. ಇನ್ನು ಈ ದಿನದ ಮತ್ತೊಂದು ವಿಶೇಷವೆಂದರೆ ನಮ್ಮ ಪಿತೃಗಳ ಮರಣ ದಿನಾಂಕ ನೆನಪಿಲ್ಲದಿದ್ದಾಗ ನಾವು ಪಿತೃ ಪಕ್ಷದ ಕೊನೆಯ ದಿನವಾದ ಇಂದು ಶ್ರಾದ್ಧವನ್ನು ಮತ್ತು ದಾನವನ್ನು ಅರ್ಪಿಸಬಹುದು.












Click it and Unblock the Notifications