ದೇವಿ ಸರಸ್ವತಿ ಆರಾಧನೆಯ ವಸಂತ ಪಂಚಮಿಗೆ ಶುಭ ಹಾರೈಕೆ

ಮಾಘ ಮಾಸದ ಐದನೇ ದಿನವಾದ ಈ ದಿನ(ಜ.22)ವನ್ನು ಹಿಂದುಗಳು ವಸಂತ ಪಂಚಮಿ ಎಂದು ಆಚರಿಸಿ ದೇವಿ ಸರಸ್ವತಿಗೆ ಪೂಜೆ ಸಲ್ಲಿಸುತ್ತಾರೆ.

ದೇಶದ ವಿವಿಧ ಕಡೆಗಳಲ್ಲಿ ಇಂದು ಆಚರಣೆಗೊಳ್ಳುತ್ತಿರುವ ಈ ಹಬ್ಬದಲ್ಲಿ ದೇವಿ ಸರಸ್ವತಿ, ಸರ್ವರಿಗೂ ವಿದ್ಯೆ-ಬುದ್ಧಿ ನೀಡಲಿ ಎಂದು ಬೇಡಲಾಗುತ್ತದೆ. ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸಲ್ಪಡುವ ಈ ಹಬ್ಬವನ್ನು ಬಾಲಿಯಲ್ಲಿ ಮತ್ತು ಇಂಡೋನೇಶ್ಯಾದಲ್ಲಿ ಹಿಂದುಗಳು ಆಚರಿಸುತ್ತಾರೆ.

ಚಳಿಗಾಲ ಮುಗಿದು,ಬೇಸಿಗೆಯ ಆರಂಭವನ್ನು ಇದು ಸೂಚಿಸುತ್ತದೆ. ವಿದ್ಯೆ, ಬುದ್ಧಿಯನ್ನು ದಯಪಾಲಿಸುವ ಸರಸ್ವತಿಗೆ ವಂದನೆ ಅರ್ಪಿಸುವ ಈ ಹಬ್ಬದಂದು, ಸರಸ್ವತಿಯ ದೇವಾಲಯಗಳಿಗೆ ತೆರಳಲಿ ಪೂಜೆ ಸಲ್ಲಿಸಲಾಗುತ್ತದೆ.

ಈ ಸಂಭ್ರಮದ ಸಾಂಪ್ರದಾಯಿಕ ಬಸಂತ ಪಂಚಮಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ. ವಸಂತ ಪಂಚಮಿಗೆ ಸಂಬಂಧಿಸಿದ ಕೆಲವು ಟ್ವೀಟ್ ಗಳು ಇಲ್ಲಿವೆ.

ನರೇಂದ್ರ ಮೋದಿ ಶುಭಹಾರೈಕೆ

ವಸಂತ ಪಂಚಮಿಯ ಶುಭಾಶಯಗಳು. ನಮ್ಮ ಸಮಾಜ ಮತ್ತಷ್ಟು ನೆಮ್ಮದಿಯಿಂದ, ಶಾಂತಿಯಿಂದ ಇರಲಿ ಎಂದು ಈ ಹಬ್ಬದಂದು ಹಾರೈಸುತ್ತೇನೆ. ದೇವಿ ಸರಸ್ವತಿಯು ನಮಗೆ ಜ್ಞಾನವನ್ನು ನೀಡಿ ಆಶಿರ್ವದಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

Array

ಜ್ಞಾನ ಮತ್ತು ಪಾಂಡಿತ್ಯ ನೀಡಲಿ

ದೇವಿ ಸರಸ್ವತಿ ಎಲ್ಲರಿಗೂ ಜ್ಞಾನ ಮತ್ತು ಪಾಂಡಿತ್ಯವನ್ನು ನೀಡಲಿ. ವಸಂತ ಪಂಚಮಿಯ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್.

Array

ಮರಳಲ್ಲಿ ವಸಂತ ಪಂಚಮಿಯ ಶುಭಾಶಯ

ಮರಳಿನ ಮೂಲಕ ತಾಯಿ ಸರಸ್ವತಿಯ ಚಿತ್ರವನ್ನು ನಿರ್ಮಿಸಿ, ವಸಂತ ಪಂಚಮಿಗೆ ತಮ್ಮದೇ ಆದ ರೀತಿಯಲ್ಲಿ ಶುಭಹಾರೈಸಿದ್ದಾರೆ ಮರಳು ಶಿಲ್ಪಿ ಮಾನಸ್ ಸಾಹೂ. ಈ ಚಿತ್ರವನ್ನು ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ ದೇವಾಶಿಶ್ ಕುಮಾರ್.

Array

ವಸಂತನ ಬಣ್ಣಗಳಂತೆ ಬದುಕು ಕಂಗೊಳಿಸಲಿ

ವಸಂತನ ಸುಂದರ ಬಣ್ಣಗಳೊಂದಿಗೆ ನಿಮ್ಮ ಬದುಕೂ ಕಂಗೊಳಿಸಲಿ. ದೇವಿ ಸರಸ್ವತಿ ನಿಮಗೆ ಸದಾ ಜ್ಞಾನ ಮತ್ತು ಪಾಂಡಿತ್ಯಗಳಿಂದ ಆಶೀರ್ವದಿಸಲಿ. ವಸಂತ ಪಂಚಮಿಯ ಶುಭಾಶಯಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+