ಆಷಾಢ ಏಕಾದಶಿ ದಿನ ಉಪವಾಸ ಏಕೆ ಮಾಡಬೇಕು?
Recommended Video
ಆಷಾಢ ಮಾಸವೆಂದರೆ ಒಂದರ್ಥದಲ್ಲಿ ನೀರಸ ಮಾಸ. ಎಲ್ಲ ವ್ಯಾಪಾರ-ವಹಿವಾಟಿಗೂ ಈ ಮಾಸದಲ್ಲಿ ಲಾಭ ಕಡಿಮೆ, ಶುಭ ಕಾರ್ಯಗಳಿಗೂ ಇದು ಒಳ್ಳೆಯ ಮಾಸವಲ್ಲ. ಇದರೊಂದಿಗೆ ಸತ-ಪತಿಯರಿಗೆ ವಿರಹ ವೇದನೆ ಬೇರೆ. ಇಷ್ಟೆಲ್ಲ ನೀರಸ ಸಮಯವನ್ನು ಹೊತ್ತು ತಂದರೂ ಆಷಾಢ ಮಾಸಕ್ಕೆ ಹಿಂದೂ ಮತದಲ್ಲಿ ತನ್ನದೇ ಆದ ಮಹತ್ವವಿದೆ. ಅದಕ್ಕೆ ಕಾರಣ ಆಷಾಢ ಏಕಾದಶಿ ಉಪವಾಸ!
ಹೌದು, ಆಷಾಢ ಏಕಾದಶಿಯಂದು ಉಪವಾಸ ವ್ರತ ಕೈಗೊಂಡರೆ ವ್ಯಕ್ತಿ ಮಾಡಿದ ಪಾಪಗಳೆಲ್ಲ ನಾಶವಾಗುತ್ತವೆ ಎಂಬ ನಂಬಿಕೆ ನಮ್ಮಲ್ಲಿದೆ.
"ಯಾರು ಏಕಾದಶಿಯಂದು ಉಪವಾಸ ಮಾಡುತ್ತಾರೋ, ನಾನು ಅಂಥವರ ಪಾಪವನ್ನೆಲ್ಲ ಸುಟ್ಟುಬಿಡುತ್ತೇನೆ, ಅಷ್ಟೇ ಅಲ್ಲ, ಅಂಥವರ ಹೃದಯದಲ್ಲಿ ನಾನು ವಾಸಿಸುತ್ತೇನೆ" ಎಂದು ಭಗವಾನ್ ಶ್ರೀಕೃಷ್ಣನ ಅರ್ಜುನನಿಗೆ ಹೇಳುತ್ತಾನೆ(ಭಗವದ್ಗೀತೆ, ಅಧ್ಯಾಯ 1). ಪ್ರತಿ ಮಾಸದಲ್ಲೂ ಬರುವ ಎರಡು ಏಕಾದಶಿ ಅಂದರೆ ವರ್ಷಕ್ಕೆ ಬರುವ ಎಲ್ಲಾ 24 ಏಕಾದಶಿಗಳಲ್ಲೂ ಉಪವಾಸ ವ್ರತ ಕೈಗೊಳ್ಳುವವರಿದ್ದಾರೆ. ಮಾಡಿದ ತಪ್ಪನ್ನೆಲ್ಲ ಮನ್ನಿಸುವಂತೆ ದೇವರನ್ನು ಬೇಡಿ, ಸಚ್ಚಾರಿತ್ರ್ಯದಿಂದ ಬದುಕುವುದಕ್ಕೆ ಸಂಕಲ್ಪ ತೊಡುವ ದಿನವೇ ಏಕಾದಶಿ.
ಎಲ್ಲ ಏಕಾದಶಿಗಿಂತ ಆಷಾಢ ಏಕಾದಶಿಯಂದು ಉಪವಾಸ ಮಾಡಿದರೆ ಅದಕ್ಕೆ ಭಗವಂತನು ಪ್ರಸನ್ನನಾಗುತ್ತಾನೆ ಎಂಬುದು ನಂಬಿಕೆ. ಅದಕ್ಕೆಂದೇ ಆಷಾಢ ಏಕಾದಶಿ(ಈ ವರ್ಷ ಜುಲೈ 4)ಯನ್ನು ಹಲವರು ಹಬ್ಬವೆಂಬಂತೆ ಆಚರಿಸಿ, ಕಟ್ಟುನಿಟ್ಟಿನ ಉಪವಾಸ ವ್ರತ ಕೈಗೊಳ್ಳುತ್ತಾರೆ.

ವಿಷ್ಣು ನಿದ್ರೆಗೆ ತೆರಳುವ ದಿನ
ಆಷಾಢ ಶುದ್ಧ ಏಕಾದಶಿಯಂದು ಭಗವಾನ್ ವಿಷ್ಣುವು ನಿದ್ರಿಸಲು ತೆರಳುತ್ತಾನೆಂಬ ನಂಬಿಕೆಯಿದೆ. ನಂತರ ಕಾರ್ತಿಕ ಮಾಸದ ಶುದ್ಧ ಏಕಾದಶಿಯವರೆಗೂ ಆತನಿಗೆ ನಿದ್ದೆಯ ಕಾಲ. ಆಷಾಢ ದಿಂದ ಕಾರ್ತಿಕದವರೆಗಿನ ನಾಲ್ಕು ತಿಂಗಳ ಕಾಲಾವಧಿಯನ್ನೇ ಚಾತುರ್ಮಾಸ ಎಂದು ಕರೆಯಲಾಗುತ್ತದೆ.
ವಿಷ್ಣು ನಿದ್ರೆಗೆ ತೆರಳುವ ದಿನವಾದ್ದರಿಂದ ಈ ದಿನಕ್ಕೆ ಎಲ್ಲಿಲ್ಲದ ಮಹತ್ವವಿದೆ. ಈ ದಿನ ವಿಷ್ಣು ದೇವನನ್ನು ಮೆಚ್ಚಿಸುವುದಕ್ಕಾಗಿ ಭಕ್ತರು ಉಪವಾಸ, ಪ್ರಾರ್ಥನೆ, ಪೂಜೆ-ಪುನಸ್ಕಾರ ಮಾಡುವುದು ವಾಡಿಕೆ.

ಯಾವ ಆಹಾರ ಸೇವಿಸಬಹುದು?
ಉಪವಾಸವೆಂದರೆ ನೀರನ್ನೂ ಸೇವಿಸದಷ್ಟು ಕಠಿಣ ಉಪವಾಸವಲ್ಲ. ಈ ದಿನದಂದು ಹಣ್ಣು, ಹಂಪಲು, ಒಣಹಣ್ಣುಗಳು, ಗೆಡ್ಡೆ ಗೆಣಸು, ತೆಂಗಿನ ಕಾಯಿ, ಹಾಲು, ತುಪ್ಪಗಳನ್ನು ಸೇವಿಸಿದರೆ ತಪ್ಪಿಲ್ಲ. ಒಟ್ಟಿನಲ್ಲಿ ಸನ್ಯಾಸಿಗಳು ಸೇವಿಸುವಂಥ ಆಹಅರವನ್ನು ಮಾತ್ರ ಆ ದಿನ ಸೇವಿಸುವುದಕ್ಕೆ ಅಡ್ಡಿಯಿಲ್ಲ.

ಯಾವುದನ್ನು ಸೇವಿಸಬಾರದು?
ಈ ದಿನ ಬೇಳೆ-ಕಾಳುಗಳು ಅಥವಾ ಬೇಯಿಸಿದ ಖಾದ್ಯಗಳನ್ನು ತಿನ್ನುವುದು ವರ್ಜ್ಯ. ಅಂದರೆ ಉಪವಾಸ ವ್ರತ ಕೈಗೊಳ್ಳುವವರು ಇಂಥ ಆಹಾರ ಸೇವಿಸುವಂತಿಲ್ಲ.

ಉಪವಾಸದ ಮಹತ್ವ
ಉಪವಾಸ ಮಾಡುವುದು ಅಂದ್ರೆ ಹಲವಾರು ಪುಣ್ಯಕ್ಷೇತ್ರಗಳನ್ನು ಸಂಧಿಸಿದಷ್ಟು ಪುಣ್ಯ ನೀಡುತ್ತದೆ ಎಂಬುದು ನಂಬಿಕೆ. ಪ್ರಾಪಂಚಿಕ ವ್ಯಾಮೋಹಗಳನ್ನೆಲ್ಲ ದೂರಮಾಡಿ, ಅಲೌಕಿಕ ಆನಂದವನ್ನು ಪಡೆಯುವ ಹಾದಿ ಇದು. ಕೇವಲ ಉಪವಾಸ ಮಾತ್ರವಲ್ಲದೆ, ಮನಸ್ಸು ಸಹ ಸದ್ವಿಚಾರ, ಪ್ರಾರ್ಥನೆ, ಧ್ಯಾನನಿರತವಾಗಿದ್ದರೆ ಮಾನಸಿಕ ನೆಮ್ಮದಿಯೂ ಸಾಧ್ಯ. ದೇಹ ಮತ್ತು ಮನಸ್ಸು ಎರಡರ ಆರೋಗ್ಯದಲ್ಲೂ ಏಕಾದಶಿ ಉಪವಾಸ ಮಹತ್ವದ ಪಾತ್ರ ವಹಿಸಿದೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಜೀರ್ಣಶಕ್ತಿ ವೃದ್ಧಿ
ದೇಹದ ಪ್ರತಿಯೊಂದು ಕ್ರಿಯೆಯೂ ನಾವು ಸೇವಿಸುವ ಆಹಾರದ ಜೀರ್ಣಶಕ್ತಿಯ ಮೇಲೆ ನಿಂತಿದೆ. ಅದು ಸುಲಲಿತವಾಗಿ ಆದರೆ ದೀರ್ಘ ಕಾಲ ಆರೋಗ್ಯ ಚೆನ್ನಾಗಿರುತ್ತದೆ. ವಾರಕ್ಕೊಮ್ಮೆಯೋ, ಹದಿನೈದು ದಿನಕ್ಕೊಮ್ಮೆಯೂ ಉಪವಾಸ ಮಾಡುವುದರಿಂದ ಜೀರ್ಣಶಕ್ತಿ ವೃದ್ಧಿಸುತ್ತದೆ ಎಂಬುದು ತಜ್ಞರ ಮಾತು. ಅದಕ್ಕೆಂದೇ ಏಕಾದಶಿಯಂದು ಅಂದ್ರೆ ಹದಿನೈದು ದಿನಕ್ಕೊಮ್ಮೆ ಉಪವಾಸ ಮಾಡುವ ಕ್ರಮ ಚಾಲ್ತಿಯಲ್ಲಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications