ಉಡ್ತಾ ಪಂಜಾಬ್ 'ಕರೀನಾ ಕಪೂರ್' ಇನ್ನು ಬದುಕಿದ್ದಾರೆ!

Written By:
Subscribe to Oneindia Kannada

ನವದೆಹಲಿ, ಜುಲೈ, 01: ಉಡ್ತಾ ಪಂಜಾಬ್ ಚಿತ್ರ ನೋಡಿದವರಿಗೆ ಕರೀನಾ ಕಪೂರ್ ಪಾತ್ರ ನೆನಪಿನಲ್ಲಿ ಇದ್ದೇ ಇರುತ್ತದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಹೋರಾಟ ಮಾಡುತ್ತಲೇ ವೈದ್ಯೆ ಕರೀನಾ ಪ್ರಾಣ ತ್ಯಾಗ ಮಾಡುತ್ತಾರೆ.

ಆದರೆ ಅದೇ ಪಂಜಾಬ್ ನಲ್ಲಿ 87 ವರ್ಷದ ವೈದ್ಯೆಯೊಬ್ಬರೂ ಇಂದಿಗೂ ಡ್ರಗ್ಸ್ ವಿರುದ್ಧ ಹೋರಾಟ ಮಾಡುತ್ತಲೇ ಇದ್ದಾರೆ. ದಶಕಗಳ ಕಾಲದಿಂದ ಇವರ ಹೋರಾಟ ನಿರಂತರ.[ಆರೋಗ್ಯ ಕಾಪಾಡುವ ವೈದ್ಯರಿಗೆ ಥ್ಯಾಂಕ್ಸ್ ಹೇಳಿದ ಟ್ವೀಟ್ ಲೋಕ]

ಇಂದಿಗೂ ಹೋರಾಟ ಮಾಡಿಕೊಂಡು ಬಂದಿರುವ ಮಾದರಿ ವೈದ್ಯೆಯ ಹೆಸರು ಡಾ. ಸರೋಜ್ ಸನನ್. 1995 ರಲ್ಲಿ ರೇಡ್ ಕ್ರಾಸ್ ಸಂಸ್ಥೆಯೊಂದಿಗೆ ಕೈ ಜೋಡಿಸಿದ ಸರೋಜ್ 2012 ರ ವರೆಗೂ ಕೆಲಸ ಮಾಡಿಕೊಂಡು ಬಂದರು. ಹಣಕಾಸು ಮುಗ್ಗಟ್ಟು ಎದುರಿಸಿದ ಸಂಸ್ಥೆ 2012ರಲ್ಲಿ ಸೇವೆಯನ್ನು ಸ್ಥಗಿತಮಾಡಬೇಕಾಗಿ ಬಂತು.[ಖಾಸಗಿ ಆಸ್ಪತ್ರೆಗಳ ಈ ವಿಚಾರ ತಿಳಿದರೆ ನಿಜಕ್ಕೂ ಬೆಚ್ಚಿ ಬೀಳುತ್ತೀರಿ!]

ಇದೀಗ ವೈದ್ಯೆ ಸರೋಜ್ " ಡ್ರಗ್ಸ್ ಬಲಿಯಾಗಿದ್ದವರ ಪುನರ್ವಸತಿ" ಎಂಬ ಪುಸ್ತಕವನ್ನು ಬರೆಯುತ್ತಿದ್ದಾರೆ. ಡ್ರಗ್ಸ್ ಬಲಿಯಾಗಿದ್ದವರನ್ನು ಹೇಗೆ ನಡೆಸಿಕೊಳ್ಳಬೇಕು, ಕುಟುಂಬ ಸ್ನೆಹಿರ ಜತೆ ಬೆರೆಯಲು ಬಿಡಬೇಕೆ? ಅವರ ಮೇಲೆ ನಿಗಾ ಇಡಬೇಕಾದ ಅಂಶಗಳು ಯಾವವು? ಎಂಬ ವಿಚಾರಗಳನ್ನು ವೈದ್ಯೆ ಪುಸ್ತಕದಲ್ಲಿ ದಾಖಲು ಮಾಡುತ್ತಿದ್ದಾರೆ.[ಚಾಮರಾಜನಗರ ಮಹಿಳೆ ತಲೆಯಿಂದ ಕೊಂಬು ಬೇರ್ಪಡಿಸಿದ ವೈದ್ಯರು]

ಮಾದಕ ವಸ್ತು ಚಟಕ್ಕೆ ಬಲಿಯಾಗಿದ್ದ ಸುಮಾರು 3 ಸಾವಿರಕ್ಕೂ ಅಧಿಕ ಜನರನ್ನು ಕೂಪದಿಂದ ಹೊರಕ್ಕೆ ತಂದಿದ್ದಾರೆ. ಚಟಕ್ಕೆ ಬಲಿಯಾದವರನ್ನು ಅದರಿಂದ ಬಿಡಿಸುವುದು ತುಂಬಾ ಕಷ್ಟದ ಕೆಲಸ . ಆತನಿಗೆ ವಸ್ತು ಯಾವ ಕಾರಣಕ್ಕೂ ಸಿಗದಂತೆ ನೋಡಿಕೊಳ್ಳಬೇಕಾಗುತ್ತದೆ. ಅವರ ಸ್ನೇಹಿತರ ಮೂಲಕವೇ ಪ್ರಭಾವ ಬಳಸಬೇಕಾಗುತ್ತದೆ ಎಂದು ವೈದ್ಯೆ ವಿವರಣೆ ನೀಡುತ್ತಾರೆ.

ತಾವು ಬರೆಯುತ್ತಿರುವ ಪುಸ್ತಕದಲ್ಲಿ ಈ ಎಲ್ಲ ವಿವರಣೆಗಳನ್ನು ನೀಡಿದ್ದು, ಯುವಜನತೆಗೆ ಸಲಹೆಗಳನ್ನು ನೀಡಿದ್ದಾರೆ, ಒಂದು ವೇಳೆ ಡ್ರಗ್ಸ್ ನಿಮ್ಮನ್ನು ಆವರಿಸಿಕೊಂಡರೆ ಅದು ಇಡೀ ಪೀಳಿಗೆಯ ಸಮಸ್ಯೆಯಾಗಿ ಪರಿಣಮಿಸಬಹುದು ಎಂಬ ಎಚ್ಚರಿಕೆಯನ್ನು ನೀಡಲು ಮರೆಯುವುದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
As the censorship storm kicked up by Udta Punjab settles down and the film releases today, many of us will head to the theatres to watch the story about the drug addiction menace in Punjab. What we bring to you is the story of a real-life hero, who has been helping people to fight addiction for more than a decade. Dr Saroj Sanan joined hands with the Red Cross Society in Amritsar in 1995, when the problem of heroin abuse had just begun in the state.
Please Wait while comments are loading...