ಸರ್ವರಿಗೂ ಹನುಮಜ್ಜಯಂತಿ ಶುಭಾಶಯ
ಕರ್ನಾಟಕ,
ಡಿ. 10 : ವಾನರಸೇನೆಯ ಮುಖಂಡ, ರಾಮಸೇತು ನಿರ್ಮಾತೃ, ಲಂಕಾದಹನದ ರೂವಾರಿ ರಾಮನ ಬಂಟ ಹನುಮಂತನ ಜನ್ಮ ದಿನ ಇವತ್ತು. ತನ್ನ ಸರ್ವಸ್ವವನ್ನೂ ಶ್ರೀರಾಮನಿಗೆ ಅರ್ಪಿಸಿ ಸ್ವಾಮಿಭಕ್ತಿಯನ್ನು ಮೆರೆದ ಮಹಾಪುರುಷನಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಾರತದ ಪುರಾಣಗಳ ಪ್ರಕಾರ ಆಂಜನೇಯನು ಅಖಂಡ ಬ್ರಹ್ಮಚಾರಿ, ನಿಷ್ಕಳಂಕ ಸ್ವಾಮಿಭಕ್ತ. ಆತನ ಶಕ್ತಿ ಯಾವ ಹರ್ಕುಲಿಸ್ಗೂ ಸಮನಾದುದಲ್ಲ. ಜೈ ಹನುಮಾನ್. id="toptextpromo">ಲಭ್ಯವಿರುವ
ಮಾಹಿತಿಗಳ ಪ್ರಕಾರ ಮಾರ್ಗಶಿರ ಶುಕ್ಲಪಕ್ಷ ತ್ರಯೋದಶಿ ಡಿಸೆಂಬರ್ 10ರ ಬುಧವಾರ ಆಂಜನೇಯನ ಹುಟ್ಟುಹಬ್ಬ ಅಥವಾ ಹನುಮಜ್ಜಯಂತಿ. ಇಂದು ಆಂಜನೇಯ ಭಕ್ತ ಸಮುದಾಯಕ್ಕೆ ಭಕ್ತಿಭಾವ ಸ್ಫುರಿಸುವ ಪವಿತ್ರವಾದ ದಿನ. ಹನುಮಂತನ ಭಕ್ತರ ಮನೆಮನೆಗಳಲ್ಲಿ ಇಂದು ವಿಶೇಷ ಪೂಜೆ ಪುನಸ್ಕಾರ. id='are-slot-1' class='oiad oi-axt oiadv'> id='top-searched-articles'>ಕರ್ನಾಟಕದ
ಅನೇಕ ಗುಡಿ ಗುಂಡಾರಗಳಲ್ಲಿ ಹನುಮನ ಮತವೇ ದಿವ್ಯಮತ ಎಂದು ಭಜಿಸಿ ಪೂಜಿಸುವ ದಿವಸವೇ ಇವತ್ತು. ಬೆಂಗಳೂರಿನ ಜಯನಗರ ರಾಗಿಗುಡ್ಡದ ಪ್ರಸನ್ನ ಆಂಜನೇಯ ದೇವಸ್ಥಾನ, ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ವೀರಾ೦ಜನೇಯ ಸ್ವಾಮಿ,ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯಸ್ವಾಮಿ, ಚನ್ನಪಟ್ಟಣದ ಬಳಿ ಇರುವ ಸಂಜೀವರಾಯಸ್ವಾಮಿ, ಉಡುಪಿಯ ಮುಖ್ಯಪ್ರಾಣ, ಮುತ್ತತ್ತಿಯಲ್ಲಿರುವ ಹನುಮಂತರಾಯ ಸ್ವಾಮಿ ಮತ್ತು ನಿಮ್ಮೂರಿನ ಹನುಮನ ಗುಡಿಯಲ್ಲಿ ಇಂದು ಆಂಜನೇಯ ಮೂರ್ತಿಗೆ ಭರ್ಜರಿ ಅಲಂಕಾರ, ಮಂಗಳಾರತಿ ಪ್ರಸಾದ ವಿನಿಯೋಗ.











Click it and Unblock the Notifications