Ganesha Chaturthi 2023: ಈ ವಸ್ತುಗಳಿಂದ ಗಣೇಶನಿಗೆ ಪೂಜಿಸಿದರೆ ನಿಮ್ಮ ದಾರಿದ್ರ್ಯ ನಿಮ್ಮನ್ನು ಬಿಡುವುದಿಲ್ಲ...!
ಗಣೇಶ ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಒಬ್ಬರು. ಗಣೇಶನನ್ನು ಪೂಜಿಸುವ ಮೂಲಕ ಪ್ರಾರಂಭಿಸುವ ಯಾವುದೇ ಕೆಲಸವು ಯಶಸ್ವಿಯಾಗುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಗಣೇಶನನ್ನು ಆದಿದೇವತೆ ಎಂದು ಕರೆಯಲಾಗುತ್ತದೆ.
ಯಾವುದೇ ಶುಭ ಕಾರ್ಯ ಗಣೇಶನನ್ನು ಪೂಜಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ವಾರದ ದಿನಗಳಲ್ಲಿ ಬುಧವಾರವನ್ನು ಗಣೇಶನ ದಿನವೆಂದು ಪೂಜಿಸಲಾಗುತ್ತದೆ.
ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾದ ವಿನಾಯಕ ಚತುರ್ಥಿ ಈ ವರ್ಷ ಸೆಪ್ಟೆಂಬರ್ 18 ರಂದು ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯನ್ನು ಆಚರಿಸಲು ಭಾರತ ಸಜ್ಜಾಗಿದೆ. ಈ ದಿನ ಗಣೇಶನಿಗೆ ಇಷ್ಟವಾದ ವಸ್ತುಗಳಿಂದ ಪೂಜೆ ಮಾಡುವುದು ಎಷ್ಟು ಮುಖ್ಯವೋ, ಇಷ್ಟವಿಲ್ಲದ ವಸ್ತುಗಳಿಂದ ದೂರವಿರುವುದು ಅಷ್ಟೇ ಮುಖ್ಯ.

ಗಣೇಶನಿಗೆ ಇಷ್ಟವಿಲ್ಲದ ವಸ್ತುಗಳಿಂದ ಪೂಜಿಸುವುದರಿಂದ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಗಣೇಶನಿಗೆ ಇಷ್ಟವಾಗದ ವಿಷಯಗಳೇನು ಎಂಬುದನ್ನು ತಿಳಿಯೋಣ.
ಒಡೆದ ಅಕ್ಕಿ
ಅಕ್ಷತೆಗಾಗಿ ಬಳಕೆ ಮಾಡುವ ಅಕ್ಕಿಯ ಬಗ್ಗೆ ಹೆಚ್ಚು ಗಮನಹರಿಸಬೇಕು. ಈ ಅಕ್ಕಿಯಿಂದ ಕೆಲವರು ನೈವೇದ್ಯವನ್ನು ಮಾಡಿ ಗಣೇಶನಿಗೆ ಅರ್ಪಿಸುತ್ತಾರೆ. ಆದ್ದರಿಂದ ಅಕ್ಷತೆಯನ್ನು ಅರ್ಪಿಸುವಾಗ, ನೈವೇದ್ಯವನ್ನು ತಯಾರಿಸುವಾಗ ತಿಂಡಾದ ಅಕ್ಕಿಯನ್ನು ಬಳಕೆ ಮಾಡಬೇಡಿ. ಏಕೆಂದರೆ ಗಣೇಶನ ದಂತವೊಂದು ಮುರಿದಿದೆ. ಹಾಗಾಗಿ ಅವರಿಗೆ ಒಡೆದ ಅಕ್ಕಿ ಇಷ್ಟವಾಗುವುದಿಲ್ಲ. ಹೀಗಾಗಿ ಗಣೇಶನಿಗೆ ಅಕ್ಷತೆ ಹಾಗೈ ನೈವೇದ್ಯ ಅರ್ಪಿಸುವಾಗ ಜಾಗರೂಕರಾಗಿರಿ.
ತುಳಸಿ
ಗಣೇಶನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಬಳಸಬಾರದು. ದಂತಕಥೆಯ ಪ್ರಕಾರ, ಗಣೇಶನು ತುಳಸಿಯ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದನು. ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ತುಳಸಿ ಕೋಪಗೊಂಡಳು ಮತ್ತು ವಿನಾಯಕನನ್ನು ಒಂದಲ್ಲ ಎರಡು ಬಾರಿ ಮದುವೆಯಾಗುವಂತೆ ಶಪಿಸಿದಳು. ಇದರ ವಿರುದ್ಧ ಗಣೇಶನೂ ತುಳಸಿಗೆ ನೀನು ರಾಕ್ಷಸನನ್ನು ಮದುವೆಯಾಗು ಎಂದು ಶಾಪ ಕೊಟ್ಟ. ಆದ್ದರಿಂದ ತುಳಸಿಯೊಂದಿಗೆ ಗಣೇಶನನ್ನು ಪೂಜಿಸುವುದು ನಿಷಿದ್ಧವೆಂದು ಪರಿಗಣಿಸಲಾಗಿದೆ.

ಕೇತಕಿ ಹೂವುಗಳು
ಗಣೇಶನಿಗೆ ಬಿಳಿ ಹೂವುಗಳು ಅಥವಾ ಕೇತಕಿ ಹೂವುಗಳನ್ನು (ಡೇಲಿಯಾ ಹೂವು)ಎಂದಿಗೂ ಅರ್ಪಿಸಬೇಡಿ. ಪುರಾಣಗಳ ಪ್ರಕಾರ, ಶಿವನಿಗೆ ಕೇತಕಿ ಹೂವುಗಳು ಇಷ್ಟವಿಲ್ಲ. ಆದುದರಿಂದಲೇ ಗಣಪತಿಯನ್ನು ಕೇತಕಿ ಪುಷ್ಪಗಳಿಂದ ಪೂಜಿಸಬಾರದು ಎಂಬ ನಂಬಿಕೆಯಿದೆ.
ಒಣಗಿದ ಹೂವುಗಳು
ಒಣಗಿದ ಹೂವುಗಳನ್ನು ಗಣೇಶನ ಪೂಜೆಯಲ್ಲಿ ಅರ್ಪಿಸಬಾರದು. ಒಣಗಿದ ಹೂವುಗಳನ್ನು ಬಳಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ಕುಟುಂಬದಲ್ಲಿ ಬಡತನ ಉಂಟಾಗುತ್ತದೆ. ಆದ್ದರಿಂದ ಪೂಜೆಯ ಸಮಯದಲ್ಲಿ ಗಣೇಶನಿಗೆ ತಾಜಾ ಹೂವುಗಳನ್ನು ಮಾತ್ರ ಅರ್ಪಿಸಿ.
ಬಿಳಿ ವಸ್ತುಗಳು
ಗಣೇಶನನ್ನು ಬಿಳಿ ಬಟ್ಟೆ, ಬಿಳಿ ದಾರ ಮತ್ತು ಬಿಳಿ ಚಂದನದಿಂದ ಪೂಜಿಸಬಾರದು. ದಂತಕಥೆಯ ಪ್ರಕಾರ, ಚಂದ್ರನು ವಿನಾಯಕನನ್ನು ಅಪಹಾಸ್ಯ ಮಾಡಿದ ಕಾರಣ ವಿನಾಯಕನು ಚಂದ್ರನಿಗೆ ಶಾಪ ನೀಡಿದನು. ಬಿಳಿ ಹೂವುಗಳು ಚಂದ್ರನಿಗೆ ಸಂಬಂಧಿಸಿರುವುದರಿಂದ ಗಣೇಶನಿಗೆ ಅರ್ಪಿಸಲಾಗುವುದಿಲ್ಲ.












Click it and Unblock the Notifications