Ganesh Chaturthi 2023: ಗಣಪತಿ ಬಪ್ಪನನ್ನು ಮನೆಗೆ ಸ್ವಾಗತಿಸುವಾಗ ಅನುಸರಿಸಬೇಕಾದ ಮತ್ತು ಮಾಡಬಾರದ ಸಂಗತಿಗಳು
ಹಿಂದೂ ಹಬ್ಬಗಳಲ್ಲಿ ತುಂಬಾ ವಿಶೇಷವಾದ ಹಬ್ಬ ಅಂದರೆ ಅದು ಗಣೇಶ ಚತುರ್ಥಿ. ಈ ದಿನ ಭೇದಭಾವ ಮರೆತು ಗಣೇಶನನ್ನು ಪೂಜಿಸಲಾಗುತ್ತದೆ. ಗಣೇಶ ಮೂರ್ತಿಯನ್ನು ಇಟ್ಟು ಹತ್ತು ದಿನಗಳವರೆಗೆ ಪೂಜಿಸಿ ನಂತರ ವಿಸರ್ಜನೆ ಮಾಡಲಾಗುತ್ತದೆ. ಈ ವೇಳೆ ಕುಟುಂಬ ಸದಸ್ಯರು ಮಾತ್ರವಲ್ಲದೆ ನೆರೆ ಹೊರೆಯವರು, ಸ್ನೇಹಿತರು ಸೇರಿದಂತೆ ಪ್ರತಿಯೊಬ್ಬರೂ ಪಾಲ್ಗೊಳ್ಳುತ್ತಾರೆ.
ಹೀಗಾಗಿ ಈ ಹಬ್ಬದ ಸಡಗರದಲ್ಲಿರುವ ಸಂತೋಷ ಬೇರೆ ಹಬ್ಬದಲ್ಲಿ ಇರಲು ಸಾಧ್ಯವಿಲ್ಲ ಎಂಬುದು ಸತ್ಯ. ದೇಶದಾದ್ಯಂತ ಭಕ್ತರು ಗಣೇಶ ಚತುರ್ಥಿಯನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ವಿಶೇಷವಾಗಿ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ ರಾಜ್ಯಗಳು ಮತ್ತು ಮುಂಬೈ, ಪುಣೆ ಮತ್ತು ಹೈದರಾಬಾದ್ ನಗರಗಳಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಅಡೆತಡೆಗಳನ್ನು ನಿವಾರಿಸುವ ವಿನಾಯಕನ 10 ದಿನಗಳ ಗಣೇಶ ಉತ್ಸವವು ಸೆಪ್ಟೆಂಬರ್ 18 ರಂದು ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 28 ರಂದು ಮುಕ್ತಾಯಗೊಳ್ಳುತ್ತದೆ. ನೀವು ಗಣಪತಿ ಬಪ್ಪನನ್ನು ಮನೆಗೆ ಕರೆತರಲು ಯೋಜಿಸುತ್ತಿದ್ದರೆ, ಇಲ್ಲಿ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಮತ್ತು ಮಾಡಬಾರದಂತಹ ಕೆಲಸಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಹಾಗಾದರೆ ಗಣೇಶ ಚತುರ್ಥಿಯಂದು ಮಾಡಬೇಕಾದ ಮಾಡಬಾರದ ಕೆಲಸಗಳ ಬಗ್ಗೆ ತಿಳೀಯಿರಿ.
ಗಣೇಶನ ಹಬ್ಬ ಆಚರಿಸುವಾಗ ನೆನಪಿನಲ್ಲಿಡಿ:-
*ಅನೇಕ ಗಣೇಶ ಭಕ್ತರು ತಮ್ಮ ಸ್ವಂತ ಮೂರ್ತಿಗಳನ್ನು ಬಹಳ ಪ್ರೀತಿಯಿಂದ ತಯಾರಿಸಲು ಇಷ್ಟಪಡುತ್ತಾರೆ. ಆದರೆ ಗಣಪತಿ ವಿಗ್ರಹವನ್ನು ಮಾಡುವಾಗ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಗಣೇಶನ ವಿಗ್ರಹ ಕಿರೀಟವಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಆದ್ದರಿಂದಕಿರಿಟವಿರುವ ವಿಗ್ರಹವನ್ನು ಮಾತ್ರ ಪೂಜಿಸಿ. ಮೂರ್ತಿ ಖರೀದಿಸುವಾಗಲೂ ಈ ಬಗ್ಗೆ ತಿಳಿದಿರುವುದು ಉತ್ತಮ.

*ನೀವು ನಿಮ್ಮ ಗಣೇಶನ ಮೂರ್ತಿಯನ್ನು ಮಾರುಕಟ್ಟೆಯಿಂದಲೇ ಖರೀದಿಸಿ ಅಥವಾ ಅದನ್ನು ಮನೆಯಲ್ಲಿಯೇ ತಯಾರಿಸಿ ಗಣಪತಿಯು ಕುಳಿತ ಭಂಗಿಯಲ್ಲಿ ಇರುವಂತೆ ನೋಡಿಕೊಳ್ಳಿ. ಅಲ್ಲದೆ, ಗಣೇಶನ ವಿಗ್ರಹವು ಅವನ ಜೊತೆಗಾರ ಇಲಿಯನ್ನು ಮತ್ತು ಕೆಲವು 'ಮೋದಕಗಳನ್ನು' ಒಳಗೊಂಡಿರಬೇಕು. ಏಕೆಂದರೆ ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ.
*ಬಪ್ಪನನ್ನು ಮನೆಗೆ ಸ್ವಾಗತಿಸುವಾಗ ನಿಮ್ಮ ಗಣೇಶನ ವಿಗ್ರಹವನ್ನು ಕೆಂಪು ಚುನರಿ ಅಥವಾ ಬಟ್ಟೆಯಿಂದ ಮುಚ್ಚಿ.
*ಗಣೇಶನ ಮೂರ್ತಿಯ 'ಸ್ಥಾಪನೆ' ಮಾಡುವಾಗ, ಮಂಗಳಕರ ದಿಕ್ಕುಗಳು ಪೂರ್ವ, ಪಶ್ಚಿಮ ಅಥವಾ ಈಶಾನ್ಯ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಿ.
*ಗಣಪತಿ ಬಪ್ಪಾನನ್ನು ಶಂಖ, ಘಂಟೆಗಳು ಮತ್ತು ಹಬ್ಬದಂತಹ ನಾದಗಳಿಮದ ಸ್ವಾಗತಿಸಬೇಕು.
*1,5, 3, 5, 7, 10, 11 ದಿನಗಳ ಕಾಲ ಗಣೇಶ ಮೂರ್ತಿಯನ್ನು ಪೂಜಿಸಬೇಕು. ನಂತರ ವೀಸರ್ಜನೆ ಮಾಡಬೇಕು.
ಗಣೇಶನ ಹಬ್ಬ ಆಚರಿಸುವಾಗ ಇದನ್ನು ಮಾಡಬೇಡಿ:-
*ಗಣೇಶನ ಸೊಂಡಿಲು ಬಲಕ್ಕೆ ತೋರಿಸಬಾರದು ಏಕೆಂದರೆ ಅದು ಅವನ ಮೊಂಡುತನದ ಮನೋಭಾವವನ್ನು ಪ್ರತಿನಿಧಿಸುತ್ತದೆ ಅಥವಾ ಕಷ್ಟದ ಸಮಯವನ್ನು ಸೂಚಿಸುತ್ತದೆ.
*ಗಣೇಶನ ವಿಗ್ರಹ ಯಶಸ್ಸು ಮತ್ತು ಸಕಾರಾತ್ಮಕತೆಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಗಣೇಶನ ವಿಗ್ರಹವನ್ನು ಗಮನಿಸದೆ ತರಬಾರದು. ಕುಟುಂಬದ ಸದಸ್ಯರು ಒಬ್ಬರೇ ಹೋಗಿ ಗಣೇಶನ ಮೂರ್ತಿ ತರಬೇಡಿ. ಕನಿಷ್ಠ ಇನ್ನೊಬ್ಬರು ಭಗವಂತನ ಜೊತೆಯಲ್ಲಿ ಬರಬೇಕು.
*ಆರತಿ ಮತ್ತು ಪೂಜೆ ಇಲ್ಲದೆ ಗಣೇಶ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಬೇಡಿ. ಗಣೇಶನನ್ನು ಕೂಡಿಸಿದ ನಂತರ ಈರುಳ್ಳಿ, ಬೆಳ್ಳುಳ್ಳಿ ಮತ್ತು ಇತರ ಆಹಾರವನ್ನು ಸೇವಿಸಬೇಡಿ. ಸಾತ್ವಿಕ ಆಹಾರವನ್ನು ಮಾತ್ರ ಬೇಯಿಸಿ ಮತ್ತು ಅವುಗಳನ್ನು ಮೊದಲು ಗಣೇಶನಿಗೆ ಅರ್ಪಿಸಿ.











Click it and Unblock the Notifications