ತುಳಸಿ ಹಬ್ಬದಂದು ಸಂಭ್ರಮದಿ ದೀಪ ಬೆಳಗಿಸಿ

ಶ್ರೀ ತುಳಸಿ ಹಾಗೂ ಕೃಷ್ಣ ತುಳಸಿಗೆ ಹೋಲಿಸಬಲ್ಲ ಸಸ್ಯ ಬೇರೊಂದಿಲ್ಲ. ಭಕ್ತಿ ಹಾಗೂ ಆರೋಗ್ಯ ಎರಡೂ ದೃಷ್ಟಿಯಿಂದಲೂ ತುಳಸಿ ಬೆಳೆಸುವುದು ಉತ್ತಮ. ಮನೆ ಮುಂದೆ ತುಳಸಿ ಇದ್ದರೆ ಶ್ರೇಯಸ್ಕರ.

ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಈ ಪವಿತ್ರದಿನವನ್ನು ತುಳಸಿ ಮದುವೆ ತುಳಸಿ ಹಬ್ಬವಾಗಿ ಆಚರಿಸಲಾಗುತ್ತದೆ.

ಈ ಕಿರು ದೀಪಾವಳಿಯಂದು ನಿದ್ದೆಯಿಂದ ಎದ್ದು ಬರುವ ಶ್ರೀಮನ್ನಾನಾರಾಯಣ/ಶ್ರೀಕೃಷ್ಣನನ್ನು ಸ್ವಾಗತಿಸಲು ತುಳಸಿ ಕಟ್ಟೆ /ಬೃಂದಾವನವನ್ನು ಅಲಂಕಾರ ಮಾಡಲಾಗುತ್ತದೆ. ತುಳಸಿಯ ಗಿಡದ ಜೊತೆ ದೊಡ್ಡ ನೆಲ್ಲಿಕಾಯಿ ಗಿಡವನ್ನು ಇಟ್ಟು ಪೂಜೆ ಮಾಡುವುದುಂಟು.

ದೀಪಾವಳಿ ಹಬ್ಬದಿಂದ ಆರಂಭಗೊಂಡ ಮನೆಯೆಲ್ಲಾ ದೀಪ ಬೆಳಗುವ ಕಾಯಕಕ್ಕೆ ಇಂದು ಹೆಚ್ಚಿನ ಮೆರಗು ಬರುತ್ತದೆ. ತುಳಸಿಯು ಶ್ರೀ ಕೃಷ್ಣನನ್ನು ಈ ದಿನ ವಿವಾಹ ಆದಳು ಎಂಬ ನಂಬಿಕೆ ಇದೆ. [ವಿಷ್ಣುಪ್ರಿಯೆ, ಶುಭದಾಯಿನಿ ಮಾತೆ 'ತುಳಸಿ' ನಮೋ ನಮಃ]

tulasi habba

ಆದ್ದರಿಂದ ತುಳಸಿಯ ಜೊತೆ ಕೃಷ್ಣನ ಪಟ ಇಟ್ಟು, ಇಬ್ಬರಿಗೂ ಪೂಜೆ ಮಾಡುತ್ತಾರೆ. ನೆಲ್ಲಿಕಾಯಿಯಲ್ಲಿ ತುಪ್ಪದ ಆರತಿ ಮಾಡುತ್ತಾರೆ. ಹಿಂದೂ ಸಂಪ್ರದಾಯದ ಮೊದಲಿಗೆ ಗಣಪತಿ ಪೂಜೆ ಸಲ್ಲಿಸಿ ನಂತರ ತುಳಸಿ ದೇವಿಗೆ ಅಷ್ಟೋತ್ತರ, ಅರ್ಚನೆ, ನೈವೇದ್ಯ, ಆರತಿ ಬೆಳಗಿ ಭಕ್ತಿಯಿಂದ ಬೇಡಿಕೊಳ್ಳಲಾಗುತ್ತದೆ.

ಶ್ರೀ ತುಳಸಿ ಹಾಗೂ ಕೃಷ್ಣ ತುಳಸಿಗೆ ಹೋಲಿಸಬಲ್ಲ ಸಸ್ಯ ಬೇರೊಂದಿಲ್ಲ. ಭಕ್ತಿ ಹಾಗೂ ಆರೋಗ್ಯ ಎರಡೂ ದೃಷ್ಟಿಯಿಂದಲೂ ತುಳಸಿ ಬೆಳೆಸುವುದು ಉತ್ತಮ. ಮನೆ ಮುಂದೆ ತುಳಸಿ ಇದ್ದರೆ ಶ್ರೇಯಸ್ಕರ. ತುಳಸಿಯಂತೆ ಔಷಧೀಯ ಗುಣಗಳನ್ನುಳ್ಳ ನೆಲ್ಲಿಕಾಯಿ ಗಿಡದ ಕೊನೆಯನ್ನು ತುಳಸಿ ಬೃಂದಾವನದಲ್ಲಿರಿಸಲಾಗುತ್ತದೆ. [ಬೆಟ್ಟದ ನೆಲ್ಲಿಕಾಯಿಯ ಸ್ಪೆಷಾಲಿಟಿ ಒಂದೇ ಎರಡೇ]

ಶ್ರೀಕೃಷ್ಣದೇವರಿಗೆ ಇಷ್ಟವಾದ ಬಗೆ ಬಗೆ ಸಿಹಿ ತಿನಿಸುಗಳನ್ನು ಭುಜಿಸಿ ಸಂತಸ ಪಡುವ ಈ ಹಬ್ಬ ಮಲೆನಾಡು, ಕರಾವಳಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಬೆಂಗಳೂರಿನಲ್ಲಿ ತುಳಸಿ ಗಿಡ ಕಾಣುವುದೇ ಅಪರೂಪ. ಆದರೂ ಕೆಲವೆಡೆ ಇಸ್ಕಾನ್ ಪ್ರಭಾವದಿಂದ ಪೂಜೆ ಪುನಸ್ಕಾರ ಪುನರಾಂಭಗೊಂಡಿದೆ ಎನ್ನಬಹುದು. [ತುಳಸಮ್ಮ ಯಾರು? ಅವಳಿಗಾದ ಅನ್ಯಾಯವೇನು?]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+