Diwali 2024 Calendar: ದೀಪಾವಳಿ ಹಬ್ಬದ ಪ್ರಮುಖ ದಿನಾಂಕಗಳು, ಮಹತ್ವದ ಕುರಿತ ಮಾಹಿತಿ
ದೀಪಗಳ ಹಬ್ಬ ದೀಪಾವಳಿ ಬಂದೇ ಬಿಡ್ತು. ದೀಪಾವಳಿಯು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ದೇಶದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಈ ಬಾರಿ ದೀಪಾವಳಿಯನ್ನು ಯಾವಾಗ ಆಚರಿಸಲಾಗುತ್ತದೆ ಎನ್ನುವ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ದೀಪಾವಳಿಯ ನಿಖರವಾದ ದಿನಾಂಕ ಯಾವುದು ಎಂಬ ಬಗ್ಗೆ ಒಮ್ಮತದ ಅಭಿಪ್ರಾಯವಿಲ್ಲ. ಹಾಗಾದರೆ ದೀಪಾವಳಿ ಹಬ್ಬದ ಆಚರಣೆಯ ದಿನಾಂಕ ಅಕ್ಟೋಬರ್ 31? ಅಥವಾ ನವೆಂಬರ್ 1ರಂದು ಆಚರಿಸಲಾಗುತ್ತಾ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ ಎಂದು ಕೆಲವರು ನಂಬುತ್ತಾರೆ. ಇನ್ನೂ ಕೆಲವರು ನವೆಂಬರ್ 1ರಂದು ದೀಪಾವಳಿ ಆಚರಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಜೈಪುರದಲ್ಲಿ ದೇಶಾದ್ಯಂತದ ಮಹಾನ್ ಜ್ಯೋತಿಷಿಗಳು ಮತ್ತು ವಿದ್ವಾಂಸರ ಇಡೀ ತಂಡ ಒಟ್ಟುಗೂಡಿ ದೀಪಾವಳಿಯನ್ನು ಯಾವಾಗ ಆಚರಿಸುವುದು ಸೂಕ್ತ ಎಂಬ ಬಗ್ಗೆ ಚಿಂತನ-ಮಂಥನ ನಡೆಸಿದ್ದಾರೆ.

ದೀಪಾವಳಿ ಹಬ್ಬವನ್ನು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ಕೆಲವು ಸ್ಥಳಗಳಲ್ಲಿ ಈ ದಿನ ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ. ಹಾಗಾದರೆ ಪಂಚಾಂಗದ ಪ್ರಕಾರ, ದೀಪಾವಳಿಯ ಸರಿಯಾದ ದಿನಾಂಕ ಮತ್ತು ಮಂಗಳಕರ ಸಮಯ ಯಾವುದು? ಎಂದು ತಿಳಿಯೋಣ.
ದೀಪಾವಳಿ ದಿನಾಂಕ ಮತ್ತು ಸಮಯ:-
ಈ ವರ್ಷ ದೀಪಾವಳಿ ಹಬ್ಬವನ್ನು ಅಕ್ಟೋಬರ್ 31, 2024 ರಂದು ಆಚರಿಸಲಾಗುವುದು.
ಅಮಾವಾಸ್ಯೆ ತಿಥಿ ಅಕ್ಟೋಬರ್ 31, 2024 ರಂದು ಮಧ್ಯಾಹ್ನ 03:52 ಕ್ಕೆ ಪ್ರಾರಂಭವಾಗುತ್ತದೆ
ಅಮವಾಸ್ಯೆಯ ತಿಥಿಯು ನವೆಂಬರ್ 01, 2024 ರಂದು ಸಂಜೆ 06:16ಕ್ಕೆ ಕೊನೆಗೊಳ್ಳುತ್ತದೆ
ಪ್ರದೋಷ ಕಾಲ ಮಧ್ಯಾಹ್ನ 05:12 ರಿಂದ ಸಂಜೆ 07:43
ಲಕ್ಷ್ಮಿ ಪೂಜೆ ಮುಹೂರ್ತ ಸಂಜೆ 05:12 ರಿಂದ ಸಂಜೆ 06:16
ವೃಷಭ ಮುಹೂರ್ತದಿಂದ ಸಂಜೆ 06:00 ರಿಂದ ಸಂಜೆ 07:59
ವೈದೇಹಿ, ಋಷಿಕೇಶ ಮತ್ತು ವಿಶ್ವವಿದ್ಯಾನಿಲಯದ ಪಂಚಾಂಗದಲ್ಲಿ ನಮೂದಿಸಲಾದ ಸಮಯ ಮತ್ತು ದಿನಾಂಕದ ಪ್ರಕಾರ, ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 31ರಂದು ಆಚರಿಸಲಾಗುತ್ತದೆ. ದೀಪಾವಳಿಯನ್ನು ಯಾವಾಗಲೂ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ಬಾರಿಯ ಅಮವಾಸ್ಯೆಯ ತಿಥಿ ಅಕ್ಟೋಬರ್ 31ರಂದು ಮಧ್ಯಾಹ್ನ 3.52ಕ್ಕೆ ಆರಂಭವಾಗಲಿದೆ. ಈ ದಿನಾಂಕವು ಮರುದಿನ ಅಂದರೆ ನವೆಂಬರ್ 1 ರಂದು ಸಂಜೆ 6:16 ರವರೆಗೆ ಇರುತ್ತದೆ. ಆದ್ದರಿಂದ, ದೀಪಾವಳಿಯನ್ನು ಅಕ್ಟೋಬರ್ 31ರ ಸಂಜೆ ಆಚರಿಸಲಾಗುತ್ತದೆ. ಪ್ರದೋಷ ಕಾಲದ ನಂತರ ದೀಪಾವಳಿ ಪೂಜೆಯನ್ನು ಮಾಡಲಾಗುತ್ತದೆ.

ಹಾಗಾಗಿ ಈ ಬಾರಿ ಅಕ್ಟೋಬರ್ 31ರ ರಾತ್ರಿ ಲಕ್ಷ್ಮೀ ಪೂಜೆ, ಕಾಳಿ ಪೂಜೆ ಹಾಗೂ ನಿಶಿತ ಕಾಲದ ಪೂಜೆ ನಡೆಯಲಿದೆ. ಮಧ್ಯರಾತ್ರಿಯ ಪೂಜೆ ಕೂಡ ಅಕ್ಟೋಬರ್ 31 ರಂದು ಮಾತ್ರ ನಡೆಯುತ್ತದೆ. ನವೆಂಬರ್ 1 ರಂದು ಅಮವಾಸ್ಯೆಗೆ ಸಂಬಂಧಿಸಿದ ಕೆಲವು ಆಚರಣೆಗಳನ್ನು ಮಾಡಲಾಗುತ್ತದೆ. ನವೆಂಬರ್ 1ರಂದು ಬೆಳಿಗ್ಗೆ ದಾನ ಮತ್ತು ಪೂರ್ವಜರ ಕೆಲಸವನ್ನು ಮಾಡುವುದು ಸೂಕ್ತವಾಗಿರುತ್ತದೆ.
ಐದು ದಿನಗಳ ಹಬ್ಬ ದೀಪಾವಳಿ
ದೀಪಾವಳಿ ಐದು ದಿನಗಳ ಹಬ್ಬವಾಗಿದೆ. ಹಾಗಾದರೆ ಐದು ದಿನ ಹಬ್ಬದ ಮಾಹಿತಿ ಹಾಗೂ ದಿನಾಂಕ, ಶುಭ ಸಮಯದ ಬಗ್ಗೆ ತಿಳಿಯೋಣ..
*ಅಕ್ಟೋಬರ್ 29ರಂದು ಸಂಜೆ 06:31 ರಿಂದ ರಾತ್ರಿ 08:13ರವರೆಗೆ ತ್ರಯೋದಶಿ ತಿಥಿ ಇದ್ದು ಧನ್ತೇರಸ್ ಆಚರಿಸಲಾಗುತ್ತದೆ. ಇದೇ ದಿನ ಸಂಜೆ 05:14 ರಿಂದ 06:29 ರವರೆಗೆ ಯಮ ದೀಪ ಹಚ್ಚಲಾಗುತ್ತದೆ.
*ಅಕ್ಟೋಬರ್ 31ರಂದು ರಾತ್ರಿ 11:39ರಿಂದ ಬೆಳಗ್ಗೆ 12:31ರವರೆಗೆ ಚತುರ್ದಶಿ ತಿಥಿ ಇದ್ದು ಚೋಟಿ ದೀಪಾವಳಿ ಆಚರಿಸಲಾಗುತ್ತದೆ.
*ಅಕ್ಟೋಬರ್ 31ರಂದು ಸಂಜೆ05:12ರಿಂದ ಸಂಜೆ 06:16 ರವರೆಗೆ ಅಮವಾಸ್ಯೆ ತಿಥಿ ಇದ್ದು ಲಕ್ಷ್ಮಿ ಪೂಜೆ ನಡೆಯಲಿದೆ.
*ನವೆಂಬರ್ 2ರಂದು ಸಂಜೆ 06:34 ರಿಂದ ಬೆಳಗ್ಗೆ08:46ರವರೆಗೆ ಪ್ರತಿಪದ ತಿಥಿ ಇದ್ದು ಗೋವರ್ಧನ ಪೂಜೆ ಮಾಡಲಾಗುತ್ತದೆ.
*ನವೆಂಬರ್ 3ರಂದು ಮಧ್ಯಾಹ್ನ 12:38 ರಿಂದ ಮಧ್ಯಾಹ್ನ 02:55 ರವರೆಗೆ ದ್ವಿತೀಯ ತಿಥಿ ಇದ್ದು ಭಾಯಿ ದೂಜ್ ಆಚರಿಸಲಾಗುತ್ತದೆ.
ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನ್ತೇರಸ್, ಚೋಟಿ ದೀಪಾವಳಿ, ಗೋವರ್ಧನ ಪೂಜೆ ಮತ್ತು ಭಾಯಿ ದೂಜ್ ಆಚರಿಸಲಾಗುತ್ತದೆ. ಈ ವರ್ಷ ಧನ್ತೇರಸ್ ಅನ್ನು ಅಕ್ಟೋಬರ್ 29 ಮಂಗಳವಾರ ಆಚರಿಸಲಾಗುತ್ತದೆ. ಈ ದಿನ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಖರೀದಿಸಲಾಗುತ್ತದೆ. ಮನೆಗೆ ಹೊಸ ಪಾತ್ರೆಗಳನ್ನು ತರಲಾಗುತ್ತದೆ. ಇದಾದ ನಂತರ ಚೋಟಿ ದೀಪಾವಳಿಯನ್ನು ಕಾರ್ತಿಕ ಮಾಸದ ಕೃಷ್ಣ ಪಕ್ಷ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ಬಾರಿಯ ಚೋಟಿ ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಇದನ್ನು ನರಕ ಚತುರ್ದಶಿ ಎಂದೂ ಕರೆಯುತ್ತಾರೆ. ಈ ದಿನ ಹನುಮ ಜಯಂತಿಯನ್ನೂ ಆಚರಿಸಲಾಗುವುದು. ಈ ದಿನ ಹನುಮಂತನ ಪೂಜೆಯನ್ನು ಸಹ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ದೀಪಾವಳಿಯನ್ನು ಅಕ್ಟೋಬರ್ 31 ರಂದು ಗುರುವಾರ ಆಚರಿಸಲಾಗುತ್ತದೆ.
ದೀಪಾವಳಿಯ ಮರುದಿನ ಗೋವರ್ಧನ ಪೂಜೆ ನಡೆಯುತ್ತದೆ. ಇದನ್ನು ಅನ್ನಕೂಟ ಹಬ್ಬ ಎಂದೂ ಕರೆಯುತ್ತಾರೆ. ನವೆಂಬರ್ 2 ರಂದು ಗೋವರ್ಧನ ಪೂಜೆ ನಡೆಯಲಿದೆ. ಭಾಯಿ ದೂಜ್ ಹಬ್ಬವನ್ನು ಕಾರ್ತಿಕ ಮಾಸದ ಶಕ್ಲ ಪಕ್ಷದ ಎರಡನೇ ದಿನದಂದು ಅಂದರೆ ನವೆಂಬರ್ 3 ರಂದು ಆಚರಿಸಲಾಗುತ್ತದೆ.












Click it and Unblock the Notifications