• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೃಷ್ಣ ಜನ್ಮಾಷ್ಟಮಿಗೂ ಮುನ್ನ ಮುರಾರಿಯ ಧ್ಯಾನ

By ವಿಶ್ವಾಸ. ಸೋಹೋನಿ.
|

ಕೃಷ್ಣನಿಗೆ ಅಷ್ಟಭಾರ್ಯ - ರುಕ್ಮಿಣಿ, ಸತ್ಯಭಾಮ, ಜಾಂಬವತಿ, ಕಾಲಿಂದಿ, ಮಿತ್ರವಿಂದ, ನಾಗ್ನಜಿತಿ, ಭದ್ರ ಮತ್ತು ಲಕ್ಷ್ಮಣ ಎಂದು ಹೇಳುತ್ತಾರೆ. ನರಕಾಸುರನನ್ನು ಕೊಂದು ಅವನ ಸೆರೆಮನೆಯಲ್ಲಿರುವ 16100 ರಾಣಿಯರನ್ನು ಮುಕ್ತಗೊಳಿಸಿದನು ಎಂದೂ ಸಹ ಹೇಳುತ್ತಾರೆ.

ಕೃಷ್ಣನು ಮುಖ್ಯವಾಗಿ ಕಂಸ, ಪೂನತಿ, ತ್ರಿನರ್ವತ, ಧೆನುಕಾಸುರ, ವತ್ಸಸುರ, ಕೇಶಿ, ಅಘಸುರ, ಅರಿಷ್ಟಸುರ, ಬಕಾಸುರ, ವ್ಯೋಮಸುರ, ಪ್ರಲಂಬಾಸುರ, ಶಕತಸುರ, ನರಕಾಸುರ, ಬಾಣಸುರ ಮುಂತಾದ ಅನೇಕ ಅಸುರರನ್ನು ಸಂಹಾರ ಮಾಡಿದನು.

ಕೃಷ್ಣನ ಬಗ್ಗೆ ಭಾಗವತ ಪುರಾಣ, ವಿಷ್ಣು ಪುರಾಣ, ಮಹಾಭಾರತ ಹಾಗೂ ಭಗವದ್ಗೀತೆ, ಬೌದ್ಧ ಧರ್ಮ, ಜೈನ ಧರ್ಮದಲ್ಲಿ ಉಲ್ಲೇಖವಿದೆ. ವಿಶೇಷವಾಗಿ ಅವನ ಬಾಲಲೀಲೆಯ ಬಗ್ಗೆ ಭಾಗವತದಲ್ಲಿ ವರ್ಣನೆ ಇದ್ದರೆ ಮಹಾಭಾರತದಲ್ಲಿ ಉಪದೇಶವಿದೆ.

ಸೂರದಾಸರು, ಪುರಂದರದಾಸರು, ಕನಕದಾಸರು, ಮೀರಾಬಾಯಿ ಇವರೆಲ್ಲರೂ ಈ ಕತೆಗಳನ್ನು ಆಧರಿಸಿ ಭಜನೆಗಳನ್ನು ರಚಿಸಿದ ಮಹಾನ ಕವಿಗಳಾಗಿದ್ದಾರೆ.

ಶ್ರೀಕೃಷ್ಣನ ನೆಲೆಯನ್ನು ಗೋಲಕ ವೃಂದಾವನ, ಗೋಕುಲ, ದ್ವಾರಕಾ, ಮಥುರ ಎಂದು ಬರೆಯಲಾಗಿದೆ. ಅವನ ವಿಶೇಷ ಪೂಜೆ ದ್ವಾರಕಾಧೀಶ-ಗುಜರಾತ್, ಜಗನ್ನಾಥ-ಒರಿಸ್ಸಾ, ವಿಠೋಬಾ-ಮಹಾರಾಷ್ತ್ರ, ಬಾಲಾಜಿ-ತಿರುಪತಿಯ ಮಂದಿರಗಳಲ್ಲಿ ನಡೆಯತ್ತದೆ.

ಶ್ರೀಕೃಷ್ಣನಿಗೆ ಭಕ್ತರು ಸುಂದರ, ಮನಮೋಹನ, ಚಿತ್ತಚೋರ ಎಂದು ಕರೆಯುತ್ತಾರೆ. ಶ್ರೀಕೃಷ್ಣನನ್ನು ಸೌಂದರ್ಯದ ಗಣಿ ಎಂದು ಹೇಳಬಹುದು. ಶ್ರೀಕೃಷ್ಣ' ಶಬ್ದದ ಅರ್ಥ ಆಕರ್ಷಣೆ ಮಾಡುವವನು' ಆನಂದ ಸ್ವರೂಪ' ದುರ್ನಡತೆಯಿಂದ ಬಿಡಿಸುವವನು' ಎಂಬುದಾಗಿದೆ. ಶ್ರೀಕೃಷ್ಣಜನ್ಮಾಷ್ಟಮಿಯ ದಿನ ಚಿಕ್ಕಮಕ್ಕಳಿಗೆ ಮುದ್ದು ಕೃಷ್ಣನಂತೆ ವೇಷಭೂಷಣ ತೊಡಿಸಿ ಕಿರೀಟ, ಕೊಳಲುನ್ನು ನೀಡಿ ಶೃಂಗರಿಸಿದಾಗ, ಜನರು ಮಂತ್ರಮುಗ್ಧರಾಗಿ, ಮಕ್ಕಳನ್ನು ಮರೆತು ಅವರಲ್ಲಿ ಶ್ರೀಕೃಷ್ಣನನ್ನು ಕಾಣುತ್ತಾರೆ.

ಇಂದಿನ ಜಗತ್ತಿನಲ್ಲಿ ರೂಪವಂತರು ಬಹಳ ಜನರಿದ್ದಾರೆ. ಆದರೆ ಶ್ರೀಕೃಷ್ಣನ ಸಮಾನ ಸರ್ವಾಂಗ ಸುಂದರ, ಸರ್ವಗುಣಸಂಪನ್ನ, 16 ಕಲಾಸಂಪನ್ನ, ಸಂಪೂರ್ಣ ನಿರ್ವಿಕಾರಿ, ಮರ್ಯಾದ ಪುರುಷೋತ್ತಮ ಮತ್ತಾರೂ ಇರಲಾರರು. ಈ ಕಲಿಯುಗದಲ್ಲಿ ದೃಷ್ಟಿ-ವೃತ್ತಿಯನ್ನು ಕಲುಷಿತಗೊಳಿಸಿಕೊಳ್ಳದಿರುವವರು, ಕ್ರೋಧಕ್ಕೆ ವಶವಾಗದೇ ಇರುವವರು, ಮೋಹದ ಪಾಶಕ್ಕೆ ಬಲಿಯಾಗದೇ ಇರುವವರು, ಅಹಂಕಾರಕ್ಕೆ ಸಿಲುಕದೇ ಇರುವವರು ಯಾರೂ ಸಿಗುವುದಿಲ್ಲ. ಆದರೆ ಶ್ರೀಕೃಷ್ಣನು ನಿರ್ಮೋಹಿ, ನಿರಹಂಕಾರಿ, ಮಹಾಯೋಗಿ ಆಗಿದ್ದನು.

ಶ್ರೀಕೃಷ್ಣನ ಮೂರ್ತಿಯನ್ನು ಇವತ್ತಿಗೂ ಮಂದಿರಗಳಲ್ಲಿ ಶೃಂಗಾರ ಮಾಡಿ ಪೂಜಿಸಲಾಗುತ್ತದೆ. ಅವನ ಮನಸ್ಸು ಮಂದಿರಕ್ಕೆ ಸಮಾನವಾಗಿತ್ತು. ಶ್ರೀಕೃಷ್ಣನ ಚಿತ್ರಗಳನ್ನು ನೋಡಿದಾಗ ನಯನಗಳಲ್ಲಿ ಶೀತಲತೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಕೃಷ್ಣನನ್ನು ಪಿತಾಂಬರಧಾರಿಯಾಗಿ ಕೊಳಲನ್ನು ನುಡಿಸುತ್ತಿರುವಂತೆ ತೋರಿಸುತ್ತಾರೆ. ಅವನ ಸುತ್ತಮುತ್ತಲೂ ಹಸುಗಳು ಮತ್ತು ಸಂಗಡಿಗರನ್ನು ತೋರಿಸುತ್ತಾರೆ. ಭಕ್ತರು ಕೃಷ್ಣನಮೂರ್ತಿಯ ಚರಣಕಮಲಗಳನ್ನು ತೊಳೆದು ಚರಣಾಮೃತವನ್ನು ಸ್ವೀಕರಿಸಿ ತಾವು ಧನ್ಯರಾದೆವು ಎಂದು ಭಾವಿಸುತ್ತಾರೆ.

ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ತತ್ವಜ್ಞಾನದ ಪ್ರಕಾರ ಶ್ರೀಕೃಷ್ಣನ ಆಗಮನ ಭವಿಷ್ಯದಲ್ಲಿ ಆಗಲಿದೆ.'' ಸಂಸ್ಥೆಯ ಸಂಸ್ಥಾಪಕ ದಾದಾ ಲೇಖರಾಜ (ಪಿತಾಶ್ರೀ ಬ್ರಹ್ಮಾ) ರವರನ್ನು ಸಾಕಾರದಲ್ಲಿ ಕಂಡಾಗ ಸಾವಿರಾರು ಸಾಧಕರಿಗೆ ಕೃಷ್ಣನ ಸಾಕ್ಷತ್ಕಾರವಾಗಿದೆ. ಇಲ್ಲಿಯ ಲಕ್ಷಾಂತರ ಅನುಯಾಯಿಗಳು ಪರಮಾತ್ಮನ ಸತ್ಯ ಪರಿಚಯ ತಿಳಿದುಕೊಂಡು ತಮ್ಮ ಜೀವನವನ್ನು ರಾಜಯೋಗದ ಮೂಲಕ ಸಾರ್ಥಕ ಮಾಡಿಕೊಂಡಿದ್ದಾರೆ.

ಇದು ಕಲಿಯುಗದ ಅಂತಿಮ ಸಮಯವಾಗಿದೆ. ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆರಂಭದ ಸಂದಿಗ್ಧ ಕಾಲವೇ ಸಂಗಮಯುಗ. ಅದು ಈಗ ನಡೆಯುತ್ತಿದೆ. ಪ್ರತಿಯೊಬ್ಬ ಮಾನವನು ಸತ್ಯಯುಗದ ದೈವಿ-ಪದವಿಯನ್ನು ಪಡೆಯುವುದು ಅವನ ಜನ್ಮಸಿದ್ಧ ಅಧಿಕಾರವಾಗಿದೆ. ಆ ಅಧಿಕಾರವನ್ನು ಸ್ವಯಂ ನಿರಾಕಾರ ಪರಮಾತ್ಮನಿಂದ, ರಾಜಯೋಗದ ಅಭ್ಯಾಸದಿಂದ ಪಡೆಯಬಹುದು. ಪವಿತ್ರತೆ ಹಾಗೂ ದೈವಿಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರ ಮುಂತಾದ ಅಸುರಿ ಗುಣಗಳ ತ್ಯಾಗದಿಂದ ದೇವಿ-ದೇವತಾ ಪದವಿಯು ಪ್ರಾಪ್ತವಾಗುವುದು.

ಆಗ ಮಾನವನು ದೇವಮಾನವನಾಗಿ ಸರ್ವಗುಣ ಸಂಪನ್ನ, 16 ಕಲಾಸಂಪೂರ್ಣ, ಮರ್ಯಾದ ಪುರುಷೋತ್ತಮ, ಅಹಿಂಸಾ ಪರಮೋಧರ್ಮ, ಸಂಪೂರ್ಣ ನಿರ್ವಿಕಾರಿ ಆಗುವನು. ಕಂಸ, ಜರಾಸಂಧ ಮುಂತಾದ ರಾಕ್ಷಸರ ರಾಜ್ಯವಾದ ನರಕವೆಂಬ ಕಲಿಯುಗವು ಈಗ ನಡೆಯುತ್ತಿದೆ. ಸತ್ಯಯುಗವು ಈ ನರಕದ ಮಹಾವಿನಾಶದ ನಂತರ ಬರುವುದು. ಆ ಸ್ವರ್ಗದಲ್ಲಿ ಶ್ರೀರಾಧೆ ಮತ್ತು ಶ್ರೀಕೃಷ್ಣರ ರಾಜ್ಯವಿರುತ್ತದೆ.

ಸತ್ಯಯುಗಲ್ಲಿ ಮೊದಲನೆಯ ರಾಜಕುಮಾರ ಶ್ರೀಕೃಷ್ಣ. ಕೃಷ್ಣನನ್ನು ಸಮುದ್ರದ ಮಧ್ಯದಲ್ಲಿ ಆಲದ ಎಲೆಯಲ್ಲಿ ಬರುವಂತೆ ತೋರಿಸುತ್ತಾರೆ. ಅದರ ಅರ್ಥವೇನೆಂದರೆ - ಭವಿಷ್ಯದಲ್ಲಿ ಸಂಭವಿಸುವ ಮಹಾವಿನಾಶದ ನಂತರ ಭೂಮಿಯು ಜಲಮಯವಾಗುತ್ತದೆ. ಯಾವ ವಿದೇಶಗಳು ಇರುವುದಿಲ್ಲ. ನಾವು ಇತಿಹಾಸದಲ್ಲಿ ಓದಿದಂತೆ ಅಮೆರಿಕಾ ಹಾಗೂ ಇತರೆ ರಾಷ್ಟ್ರಗಳನ್ನು ಕೊಲಂಬಸ್ ನಂತಹ ಯಾತ್ರಿಕರು ಕಂಡು ಹಿಡಿದಿದ್ದಾರೆ. ವಿದೇಶಗಳು ಸತ್ಯಯುಗದಲ್ಲಿ ಇರುವುದಿಲ್ಲ.

ಕೇವಲ ಭಾರತ ದೇಶ ಮಾತ್ರವು ಇರುತ್ತದೆ. ಅಂತರಿಕ್ಷದಿಂದ ನೋಡಿದಾಗ ಭಾರತವು ಆಲದ ಎಲೆಯಂತೆ ಕಾಣುತ್ತದೆ. ಸತ್ಯಯುಗದಲ್ಲಿ ಆತ್ಮವು 8 ಜನ್ಮಗಳನ್ನು ತೆಗೆದುಕೊಳ್ಳುತ್ತದೆ. ರಾಧಾಕೃಷ್ಣರು ತಮ್ಮ 35ನೇ ವಯಸ್ಸಿನಲ್ಲಿ ಸಿಂಹಾಸನಾಧೀಶರಾಗಿ ತಮ್ಮ ಹೆಸರನ್ನು ಲಕ್ಷ್ಮೀ-ನಾರಾಯಣರಾಗಿ ಪರಿವರ್ತನೆ ಮಾಡಿಕೊಂಡು ರಾಜ್ಯವನ್ನು ಆಳುತ್ತಾರೆ. ಅವರ ರಾಜ್ಯವಂಶದಲ್ಲಿ ಹತ್ತಿರದ ಸಂಬಂಧಿಕರು 16108 ಜನ ಇರುತ್ತಾರೆ.

ಒಟ್ಟು 9 ಲಕ್ಷ ಪ್ರಜೆಗಳೂ ಇರುತ್ತಾರೆ. ಅಲ್ಲಿ ಒಂದೇ ರಾಜ್ಯ, ಒಂದೇ ಭಾಷೆ ಇರುತ್ತದೆ. ಎಲ್ಲರೂ ಯೋಗಶಕ್ತಿಯಿಂದ ಜನ್ಮ ಪಡೆಯುತ್ತಾರೆ. ಲಕ್ಷ್ಮೀ-ನಾರಾಯಣರಿಗೆ ಯೋಗಬಲದಿಂದ ಒಂದು ಮಗು ಆಗುತ್ತದೆ. ಆ ಮಗುವಿಗೆ 35 ವರ್ಷಗಳಾದ ನಂತರ ಪಟ್ಟಭಿಷೇಕ ಮಾಡಿ ರಾಜ್ಯ ಅಧಿಕಾರವನ್ನು ಕೊಡುತ್ತಾರೆ. ಈ ರೀತಿಯಲ್ಲಿ 8 ಜನ ರಾಜಕುಮಾರರು ವಂಶಪಾರಂಪರ್ಯವಾಗಿ ರಾಜ್ಯಭಾರ ಮಾಡುತ್ತಾರೆ. ಆದ್ದರಿಂದ ಕೃಷ್ಣ ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
This time to be at the birth of Krishna Janmashtami (August 25, 2016) with special circumstances will be fruitful. Here are Different Names of Sri Krishna with meaning. Lord Krishna, one of the most revered Gods of Hindu religion is known by many names. He was named Lord Sri Krishna because of his dark complexion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X