Navratri Fasting- ನವರಾತ್ರಿಗಳಂದು ಉಪವಾಸ; ನಿಯಮಗಳೇನು?
ದಸರಾ ಅಥವಾ ನವರಾತ್ರಿಗೆ ದಿನಗಣನೆ ನಡೆಯುತ್ತಿದೆ. ಮಹಾಲಯ ಅಮಾವಾಸ್ಯೆಯ ನಂತರ ಶುರುವಾಗುವ ನವರಾತ್ರಿ ಒಂಬತ್ತು ದಿನಗಳ ಕಾಲ ಇರಲಿದೆ. ಈ ವರ್ಷ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೆ ನವರಾತ್ರಿ ಆಚರಿಸಲಾಗುತ್ತಿದೆ.
ನವರಾತ್ರಿಗೆ ಇನ್ನೊಂದು ಹೆಸರು ದಸರಾ. ನವರಾತ್ರಿಯಲ್ಲಿ ಎರಡು ವಿಧ ಇದೆ. ಚೈತ್ರ ನವರಾತ್ರಿ ಮತ್ತು ಶರನ್ನವರಾತ್ರಿ. ಚೈತ್ರ ನವರಾತ್ರಿಯು ಚೈತ್ರ ಮಾಸದಲ್ಲಿ, ಅಂದರೆ ಮಾರ್ಚ್-ಏಪ್ರಿಲ್ ವೇಳೆಯಲ್ಲಿ ಬರುತ್ತದೆ. ಇದು ಋತು ಮತ್ತು ಬೇಸಿಗೆಯ ನಡುವಿನ ಕಾಲ. ಇನ್ನು ಶರದಿಯ ನವರಾತ್ರಿಯು ಶರದ್ ಋತುವಿನಲ್ಲಿ ಬರುತ್ತದೆ.
ನವರಾತ್ರಿಯಂದು ದೇವಿ ದುರ್ಗೆಯ ಆರಾಧನೆ ಮಾಡಲಾಗುತ್ತದೆ. ಮಹಾಲಯ ಅಮಾವಾಸ್ಯೆಯಂದು ಭೂಮಿಗೆ ಬರುವ ದುರ್ಗೆಗೆ ಒಂಬತ್ತು ದಿನಗಳ ಕಾಲ ಪೂಜೆ ಪುನಸ್ಕಾರ ಮಾಡಲಾಗುತ್ತದೆ.

ಈ ನವರಾತ್ರಿಗಳಂದು ಉಪವಾಸ ಇರುವುದು ಶ್ರೇಷ್ಠ ಎಂಬ ನಂಬಿಕೆ ಇದೆ. ಕೆಲವರು ಎಲ್ಲಾ 9 ದಿನವೂ ಉಪವಾಸ ಇದ್ದು ದೇವಿಯ ಪೂಜೆ ಮಾಡುತ್ತಾರೆ. ಅಷ್ಟು ದಿನ ಇರಲಾಗದವರು ಯಾವುದಾದರೂ ಒಂದು ದಿನ ಉಪವಾಸ ಇದ್ದರೂ ಸಾಕು.
ಏನು ಮಾಡಬೇಕು, ಏನು ಮಾಡಬಾರದು?
ನವರಾತ್ರಿಯ ಎಲ್ಲಾ 9 ದಿನಗಳಂದು ದೇವಿಯ ಪೂಜೆ ನಡೆಯುತ್ತದೆ. ಆ ಎಲ್ಲಾ ದಿನವೂ ಶ್ರೇಷ್ಠವೇ. ಈ ವೇಳೆ, ಮಡಿಯಲ್ಲಿರುವುದು ಉತ್ತಮ.
* ಉಪವಾಸ ಮಾಡುವವರು ದಿನದಲ್ಲಿ ಒಮ್ಮೆ ಮಾತ್ರ ಸಾತ್ವಿತ ಆಹಾರ ಸೇವಿಸಬಹುದು. ಉಪ್ಪು ಹಾಗೂ ಮಸಾಲೆ ಇಲ್ಲದ ಸಾತ್ವಿಕ ಆಹಾರ ತಿನ್ನಬಹುದು. ರುಚಿಗೆ ಬೇಕಾದರೆ ಕಲ್ಲುಪ್ಪು ಹಾಕಿಕೊಂಡು ಆಹಾರ ತಯಾರಿಸಬಹುದು.
* ಸೂರ್ಯಾಸ್ತದ ಬಳಿಕ ಊಟ ಮಾಡುವುದು ಒಳ್ಳೆಯದು.
* ಅನ್ನಾಹಾರವೂ ಬೇಡ. ಹಣ್ಣು ಹಂಪಲು, ಹಾಲು, ಹಣ್ಣಿನ ರಸ, ಪಾಯಸ ಇತ್ಯಾದಿಗಳನ್ನು ಸೇವಿಸಬಹುದು.
* ಮಾಂಸಾಹಾರ ಹಾಗೂ ತಾಮಸಿಕ ಆಹಾರಗಳನ್ನು ಸೇವಿಸಬೇಡಿ. ಈರುಳ್ಳಿ, ಬೆಳ್ಳುಳ್ಳಿ ಇತ್ಯಾದಿಯನ್ನೂ ತಾಮಸಿಕ ಅಹಾರವೆಂದು ಪರಿಭಾವಿಸಲಾಗುತ್ತದೆ.
* ಮದ್ಯ ಸೇವನೆ ಮಾಡಬಾರದು.
* ಹೇರ್ ಕಟಿಂಗ್ ಮತ್ತು ಶೇವಿಂಗ್ ಬೇಡ, ಉಗುರು ಕತ್ತರಿಸುವುದೂ ಬೇಡ.
* ಆಹಾರಕ್ಕಾಗಿ ಅಕ್ಕಿ ಮತ್ತು ಗೋಧಿ ಬಳಕೆ ಬೇಡ. ಹುರುಳಿ ಹಿಟ್ಟು ಇತ್ಯಾದಿಯನ್ನು ಬಳಸಬಹುದು.
* ಅಡುಗೆಗೆ ಕಡಲೆಕಾಯಿ ಎಣ್ಣೆ ಅಥವಾ ತುಪ್ಪ ಬಳಸುವುದು ಉತ್ತಮ.

ಉಪವಾಸ ಇರುವವರು ನವರಾತ್ರಿಯ ಎಲ್ಲಾ 9 ದಿನಗಳಂದು ಬೆಳಗ್ಗೆಯೇ ಎದ್ದು ಮನೆ ಮತ್ತು ಅಂಗಳವನ್ನು ಸ್ವಚ್ಛಗೊಳಿಸಬೇಕು. ಸ್ನಾನ ಮಾಡಿ ಶುಚಿಗೊಂಡು ಶುಭ್ರ ವಸ್ತ್ರ ಧರಿಸಬೇಕು. ಪ್ರಸಾದ ತಯಾರಿಸಿ ದೇವರಿಗೆ ನೈವೇದ್ಯ ಇಡಬೇಕು.
ನವರಾತ್ರಿಯ ಮೊದಲ ದಿನದಂದು ಕಳಶ ಸ್ಥಾಪನೆ ಮಾಡುವುದು ಮುಖ್ಯ. ದುರ್ಗಾರತಿ, ದೇವಿ ಶ್ಲೋಕ ಮತ್ತು ಮಂತ್ರಗಳನ್ನು ಪಠಿಸುವುದನ್ನು ಮರೆಯಬಾರದು. ದೇವರು ಸಂಪ್ರೀತಗೊಳ್ಳಲು ಮಂತ್ರೋಚ್ಛಾರ ಬಹಳ ಮುಖ್ಯ. ದೇವರಿಗೆ ದೀಪ ಹಚ್ಚಿ ಉರಿಸುವುದನ್ನೂ ಮರೆಯಬಾರದು. ನವರಾತ್ರಿಯ ಕೊನೆಯ ದಿನದಂದು ಹುಡುಗಿಯರಿಗೆ ಆಹಾರ ನೀಡಿ ಪೂಜಿಸುವ ಪರಿಪಾಠವೂ ಇದೆ. ಹುಡುಗಿಯರನ್ನು ನವದುರ್ಗೆ ಎಂದು ಭಾವಿಸಿ ಪೂಜಿಸಲಾಗುತ್ತದೆ.
ನವರಾತ್ರಿ ಯಾಕೆ?
ಪುರಾಣಗಳ ಪ್ರಕಾರ ಇಡೀ ವಿಶ್ವಕ್ಕೆ ಕಂಟಕನಾಗಿದ್ದ ಮಹಿಷಾಸುರನನ್ನು ವಧಿಸಲು ಪಾರ್ವತಿಯು ದುರ್ಗೆಯ ಅವತಾರ ತಾಳಿ ಭೂಮಿಗೆ ಬಂದರೆಂದು ಹೇಳಲಾಗುತ್ತದೆ. ಅದಕ್ಕೆ ದುರ್ಗೆಗೆ ಮಹಿಷಾಸುರ ಮರ್ಧಿನಿ ಎಂದು ಕರೆಯಲಾಗುತ್ತದೆ.
ದುರ್ಗೆಯ ಗೆಲುವಿನ ಸಂಕೇತವಾಗಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಈ 9 ದಿನಗಳಂದು ದೇವಿಯ 9 ಅವತಾರಗಳನ್ನು ಪೂಜಿಸಲಾಗುತ್ತದೆ. ಶೈಲಪುತ್ರಿಯಿಂದ ಆರಂಭಗೊಂಡು ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಹೀಗೆ ನವದುರ್ಗೆಯರನ್ನು ಪೂಜಿಸಲಾಗುತ್ತದೆ.
ನವರಾತ್ರಿ ವ್ರತ
ನವರಾತ್ರಿಯಂದು ಯಾರು ಉಪವಸ ವ್ರತ ಕೈಗೊಳ್ಳುತ್ತಾರೋ ಅವರಿಗೆ ಎಲ್ಲಾ ಸಂಕೋಲೆಗಳಿಂದ ಬಂಧಮುಕ್ತಿ ಸಿಗುತ್ತದೆ ಎಂಬನಂಬಿಕೆ ಇದೆ. ರಾಮಾಯಣದಲ್ಲಿ ರಾವಣನನ್ನು ವಧಿಸಲು ರಾಮ ಪ್ರಯತ್ನಿಸುತ್ತಿದ್ದಾಗ ನಾಗದರು ಶರನ್ನವರಾತ್ರಿಯ 9 ದಿನಗಳಂದು ಉಪವಾಸ ವ್ರತ ಕೈಗೊಳ್ಳಬೇಕೆಂದು ಸಲಹೆ ನೀಡುತ್ತಾರೆ. ವಿಜಯದಶಮಿ ದಿನದಂದು ಶ್ರೀರಾಮನಿಂದ ರಾವಣನ ಸಂಹಾರ ಆಗುತ್ತದೆ.
(ಒನ್ಇಂಡಿಯಾ ಸುದ್ದಿ)
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications